For Quick Alerts
ALLOW NOTIFICATIONS  
For Daily Alerts

ಫಿಟ್ನೆಸ್‌ಗಾಗಿ ಚಳಿಗಾಲದಲ್ಲಿ ಈ 5 ಯೋಗಾಸನ ಬೆಸ್ಟ್

|

ಯೋಗ ಎನ್ನುವುದು ಅದ್ಭುತವಾದ ಕಲೆಯಾಗಿದೆ. ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ವೃದ್ಧಿಸುವ ಸಾಮರ್ಥ್ಯ ಯೋಗಕ್ಕಿದೆ. ಯಾರು ಪ್ರತಿದಿನ ಯೋಗಾಭ್ಯಾಸ ಮಾಡುತ್ತಾರೊ ಅವರು ಅದರಿಂದ ಸಾಕಷ್ಟು ಪ್ರಯೋಜನಗಳನ್ನು ಪಡೆಯುತ್ತಾರೆ. ಕೆಲಸದ ಜಾಗದಲ್ಲಿ ತುಂಬಾ ಮಾನಸಿಕ ಒತ್ತಡಕ್ಕೆ ಒಳಗಾಗದೆ ಕೆಲಸವನ್ನು ನಿಭಾಯಿಸುವ ಸಾಮರ್ಥ್ಯ ಅವರಲ್ಲಿರುತ್ತದೆ, ಇನ್ನು ದೈಹಿಕ ಆರೋಗ್ಯವೂ ಉತ್ತಮವಾಗಿರುತ್ತದೆ.

ಚಳಿಗಾಲದಲ್ಲಿ ಬೆಳಗ್ಗೆ ಬೇಗನೆ ಏಳಲು ಮನಸ್ಸಾಗುವುದಿಲ್ಲ, ಬೆಚ್ಚಗಿನ ಹೊದಿಕೆಯನ್ನು ಮೈ ತುಂಬಾ ಹೊದ್ದು ಹಾಗೇ ಮಲಗಬೇಕು ಅನಿಸುವುದು. ಆದರೆ ಈ ರೀತಿ ಮಾಡುತ್ತಿದ್ದರೆ ಚಳಿಗಾಲ ಮುಗಿಯುವಷ್ಟರಲ್ಲಿ ಒಂದು ರೌಂಡ್‌ ದಪ್ಪಗಾಗಿರುತ್ತೀರಿ. ಇಲ್ಲಿ ನಿಮಗೆ ಸಮಯ ಸಿಕ್ಕಾಗ ಮಾಡಬಹುದಾದ ಸರಳವಾದ 5 ಯೋಗಾಸನ ಬಗ್ಗೆ ಹೇಳಿದ್ದೇವೆ. ಈ ಯೋಗಾಸನ ಫಿಟ್ನೆಸ್‌ ಮೈ ಕಟ್ಟು ನೀಡುವುದು ಮಾತ್ರವಲ್ಲ, ಚಳಿಗಾಲದಲ್ಲಿ ಕಾಡುವ ಆರೋಗ್ಯ ಸಮಸ್ಯೆಯಿಂದಲೂ ರಕ್ಷಣೆ ನೀಡುತ್ತದೆ.

ಈ ಯೋಗಾಸನಗಳನ್ನು ಮಾಡುವುದರಿಂದ ಮತ್ತೊಂದು ಪ್ರಯೋಜನವೆಂದರೆ ಬೊಜ್ಜು ಬಾರದ ಕಾರಣ ಆಕರ್ಷಕ ಮೈಕಟ್ಟನ್ನು ಹೊಂದಬಹುದು. ಯೋಗಾಭ್ಯಾಸ ಮಾಡುವುದರಿಂದ ಮುಖದಲ್ಲಿ ಬೇಗನೆ ನೆರಿಗೆ ಮೂಡುವುದಿಲ್ಲ, ಇದರಿಂದ ವಯಸ್ಸಾಗುತ್ತಿದ್ದರೂ ಯೌವನ ಕಳೆಯನ್ನು ಉಳಿಸಿಕೊಳ್ಳಲು ಸಹಾಯವಾಗುತ್ತದೆ.

ಚಳಿಗಾಲದಲ್ಲಿ ಯೋಗ ಮಾಡುವುದರಿಂದ ಮೈ ಬೆಚ್ಚಗಾಗುವುದು, ರೋಗ ನಿರೋಧಕ ಶಕ್ತಿ ಹೆಚ್ಚುವುದು, ಇನ್ನು ಚಳಿಗಾಲದಲ್ಲಿ ತ್ವಚೆಯನ್ನು ರಕ್ಷಣೆ ಮಾಡುತ್ತದೆ.

ಇಲ್ಲಿ ಚಳಿಗಾಲದಲ್ಲಿ ಅಭ್ಯಾಸ ಮಾಡಲು ಸೂಕ್ತವಾದ ಹಾಗೂ ಸರಳವಾದ ಯೋಗ ಭಂಗಿಗಳ ಬಗ್ಗೆ ಹೇಳಿದ್ದೇವೆ ನೋಡಿ:

1. ಬಾಲಾಸನ

1. ಬಾಲಾಸನ

ಬಾಲಾಸನ ಅಂದರೆ ಮಗುವಿನ ರೀತಿ ಮಲಗುವ ಯೋಗ ಭಂಗಿಯಾಗಿದೆ. ಈ ಆಸನ ಮಾಡಲು ಯೋಗ ಮ್ಯಾಟ್ ಮೇಲೆ ಮಂಡಿ ಮಡಚಿ ಕೈಗಳನ್ನು ಮುಂದೆಕ್ಕೆ ಚಾಚಿ ತಲೆಯನ್ನು ಮ್ಯಾಟ್‌ಗೆ ತಾಗಿಸಿ ವಿರಮಿಸಿ. ಉಸಿರಾಟ ಸಾಮಾನ್ಯ ಸ್ಥಿತಿಯಲ್ಲಿ ಇರಲಿ. ಈ ರೀತಿ ಒಂದು ನಿಮಿಷವಿದ್ದು ನಂತರ ಮಕರಾಸನದಲ್ಲಿ ವಿರಮಿಸಿ.

ಪ್ರಯೋಜನಗಳು

* ಈ ಯೋಗಾಸನ ಅಭ್ಯಾಸ ಮಾಡುವುದರಿಂದ ಮಾನಸಿಕ ಒತ್ತಡ ಕಡಿಮೆಯಾಗುವುದು.

* ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು

* ಬೆನ್ನು ಮೂಳೆಯ ಅರೋಗ್ಯಕ್ಕೆ ಒಳ್ಳೆಯದು

* ದಿನಪೂರ್ತಿ ಲವಲವಿಕೆಯಿಂದ ಇರಲು ಸಹಕಾರಿ.

2. ಬೆಕ್ಕು ಹಸುವಿನ ಭಂಗಿ

2. ಬೆಕ್ಕು ಹಸುವಿನ ಭಂಗಿ

ಈ ಯೋಗ ಭಂಗಿ ಮಾಡುವಾಗ ನಿಮ್ಮ ಗಲ್ಲವನ್ನು ಮ್ಯಾಟ್‌ಗೆ ತಾಗಿಸಿ ಹಾಗೂ ಶರೀರವನ್ನು ಮೇಜಿನ ಸ್ಥಿತಿಗೆ ತನ್ನಿ. ಈಗ ಮೊಣಕಾಲುಗಳನ್ನು ಮಡಚಿ, ನಿಮ್ಮ ಮೊಣಕೈ ಮತ್ತು ಭುಜ ಸಮಾನಾಂತರವಾಗಿರವಾಗಿ ಇಟ್ಟು ಕೊಳ್ಳಿ, ಆಗ ನಿಮ್ಮ ಇಡೀ ದೇಹ ನೆಲಕ್ಕೆ ಸಮಾನಾಂತರವಾಗಿರುತ್ತದೆ. ಈಗ ಈ ಭಂಗಿಯಲ್ಲಿ ನಿಧಾನಕ್ಕೆ ಉಸಿರನ್ನು ತೆಗೆದುಕೊಳ್ಳಿ, ಹೀಗೆ ಉಸಿರನ್ನು ತೆಗೆದುಕೊಲ್ಳುವಾಗ ಹೊಟ್ಟೆಯನ್ನು ಒಳಗೆ ಎಳೆದುಕೊಂಡು ತಲೆ ಎತ್ತಬೇಕು. ಇದೇ ಸ್ಥಿತಿಯಲ್ಲಿ ಸ್ವಲ್ಪ ಹೊತ್ತು ಕೂತು ನಂತರ ಬೆಕ್ಕಿನ ಭಂಗಿಗೆ ತನ್ನಿ.

ಬೆಕ್ಕಿನ ಭಂಗಿಯ ಆಸನ ಹಸುವಿನ ಆಸನ ಮಾಡಿದ ನಂತರ ಅದೇ ಸರಣಿಯಲ್ಲಿ ಉಸಿರನ್ನು ಬಿಡುತ್ತಾ ನಿಮ್ಮ ಬೆನ್ನು ಹುರಿಯನ್ನು ಬಗ್ಗಿಸಿ ತಲೆಯನ್ನು ಕೆಳಕ್ಕೆ ತರಬೇಕು, ನಂತರ ಬೆನ್ನು ಮೂಳೆಯನ್ನು ಸಮನಾಂತರ ಮಾಡಿಕೊಂಡು ತಲೆಯನ್ನು ಮೇಲಕ್ಕೆ ಎತ್ತಬೇಕು. ಈ ರೀತಿ 2-3 ಬಾರಿ ಮಾಡಿ. ಈ ಎರಡು ಅಸನಗಳನ್ನು ಸರನಿಯಾಗಿ 5 ನಿಮಿಷ ಅಭ್ಯಾಸ ಮಾಡಿ.

ಪ್ರಯೋಜನಗಳು:

ಬೇಗನೆ ಸುಸ್ತು ಅನಿಸುವುದು, ಬೆನ್ನು ನೋವಿನ ಸಮಸ್ಯೆ ಇರುವವರು ಈ ಯೋಗ ಭಂಗಿ ಅಭ್ಯಾಸ ಮಾಡುವುದು ಒಳ್ಳೆಯದು.

ಈ ಭಂಗಿ ಅಭ್ಯಾಸ ಮಾಡುವ ಪರಿಣಿತರ ಮಾರ್ಗದರ್ಶನ ಪಡೆಯಿರಿ, ಏಕೆಂದರೆ ಈ ಯೋಗ ಭಂಗಿಯಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಅಡ್ಡಪರಿಣಾಮ ಉಂಟಾಗುವುದು.

3. ವೀರಭದ್ರಾಸನ

3. ವೀರಭದ್ರಾಸನ

ವೀರಭದ್ರಾಸನ ಹೆಸರೇ ಸೂಚಿಸಿದಂತೆ ವೀರತ್ವವನ್ನು ತರುವ ಭಂಗಿಯಾಗಿದೆ. ಈ ಯೋಗ ಅಭ್ಯಾಸ ಮಾಡಲು ಮ್ಯಾಟ್‌ ಮೇಲೆ 3-4 ಅಡಿಯಷ್ಟು ಕಾಲುಗಳನ್ನುಅಗಲವಾಗಿ ಮಾಡಿ ನೇರವಾಗಿ ನಿಲ್ಲಿ.ನಿಮ್ಮ ಬಲಪಾದ 90 ಡಿಗ್ರಿಯಷ್ಟು ಹೊರಗಡೆಗೆ ಹಾಗೂ ನಿಮ್ಮ ಎಡ ಪಾದ 15 ಡಿಗ್ರಿಯಷ್ಟು ಒಳಗಡೆ ಇರಿಸಿ. ಎರಡು ಕೈಗಳನ್ನು ನಿಮ್ಮ ಭುಜಕ್ಕೆ ಸಮವಾಗಿ ಚಾಚಿ ನಿಲ್ಲಿ, ಈಗ ಉಸಿರನ್ನು ತೆಗೆದುಕೊಳ್ಳುತ್ತಾ ಒಂದು ಕಾಲನ್ನು ಮುಂದೆಕ್ಕೆ ಚಾಚಿ ಮಂಡಿಯನ್ನು ಮಡಚಿ, ಕೈಗಳನ್ನು ಮುಂದೆಕ್ಕೆ ತಂದು ಆ ಸ್ಥಿತಿಯಲ್ಲಿ ಸ್ವಲ್ಪ ಹೊತ್ತು ಇರಿ, ನಂತರ ಯಥಾ ಸ್ಥಿತಿಗೆ ಬಂದು ಪುನಃ ಎಡಭಾಗದ ಕಾಲನ್ನು ಮಡಚಿ ಆಸನ ಮಾಡಿ. ಈ ರೀತಿ 2-3 ಬಾರಿ ಮಾಡಿ.

ಈ ಆಸನದ ಪ್ರಯೋಜನಗಳು

* ತೋಳುಗಳು, ಕಾಲುಗಳು, ಸೊಂಟ ಬಲವಾಗುತ್ತದೆ

* ದೇಹದಲ್ಲಿ ಶಕ್ತಿ ಹೆಚ್ಚಾಗುವುದು

* ಭುಜಗಳು ಬಲವಾಗುವುದು

4. ಸೇತು ಬಂಧಾಸನ

4. ಸೇತು ಬಂಧಾಸನ

ಈ ಆಸನದ ಹೆಸರೇ ಸೂಚಿಸುವಂತೆ ಸೇತು ಎಂದರೆ ಸೇತುವೆ ಎಂದರ್ಥ. ಶರೀರವನ್ನು ಸೇತುವೆ ರೀತಿ ಬಾಗಿಸಿ ಮಾಡುವ ಯೋಗ ಭಂಗಿ ಇದಾಗಿದೆ.

ಮಾಡುವ ವಿಧಾನ

ಈ ಅಸನ ಮಾಡಲು ಮೊದಲಿಗೆ ಮ್ಯಾಟ್‌ ಮೇಲೆ ಅಂಗಾತ ಮಲಗಿ, ನಂತರ ಎರಡು ಕಾಲುಗಳನ್ನು ಮಡಿಸಬೇಕು. ಎರಡು ಪೃಷ್ಠಗಳ ಹತ್ತಿರ ಎರಡು ಪಾದಗಳು ಬರಬೇಕು. ಈಗ ಬಲಗೈಯಿಂದ ಬಲಗಾಲಿನ ಮಣಿಗಂಟನ್ನು, ಎಡ ಹಸ್ತದಿಂದ ಎಡಗಾಲಿನ ಮಣಿಗಂಟನ್ನು ಹಿಡಿಯಬೇಕು.ಈಗ ನಿಧಾನಕ್ಕೆ ಸೊಂಟವನ್ನು ಮೇಲಕ್ಕೆ ಎತ್ತಿ. ಮಂಡಿಯ ನೇರದಲ್ಲಿ ತೊಡೆಗಳು ಮತ್ತು ಸೊಂಟದ ಭಾಗ ಬರಬೇಕು. ಹೊಟ್ಟೆಯನ್ನು ಒಳಗಡೆ ಎಳೆದು ಎದೆಯನ್ನು ಮೇಲಕ್ಕೆ ಎತ್ತಿ ಹಿಂದಕ್ಕೆ ವಾಲಿ ನೆತ್ತಿಯನ್ನು ನೆಲಕ್ಕೆ ತಾಗಿಸಿ. ನಂತರ ಸೊಂಟವನ್ನು ನಿದಾನಕ್ಕೆ ಕೆಳಗಿಳಿಸಿ ನೆಲಕ್ಕೆ ತಾಗಿಸಿ, ನಂತರ ಕಾಲುಗಳನ್ನು ಮುಂದೆಕ್ಕೆ ಚಾಚಿ ಶವಾಸನ ಸ್ಥಿತಿಗೆ ತನ್ನಿ.

ಪ್ರಯೋಜನಗಳು

* ಈ ಆಸನ ಮಾಡುವುದರಿಂದ ಬೆನ್ನಿನ ಆರೋಗ್ಯಕ್ಕೆ ಒಳ್ಳೆಯದು.

* ಹೊಟ್ಟೆ ಬೊಜ್ಜು ಕರಗಲು ಸಹಕಾರಿ

* ಅಸ್ತಮಾ, ಮಧುಮೇಹ, ಥೈರಾಯ್ಡ್ ಸಮಸ್ಯೆ ಇರುವವರು ಈ ಯೋಗ ಅಭ್ಯಾಸ ಮಾಡುವುದು ಒಳ್ಳೆಯದು.

5. ಶವಾಸನ

5. ಶವಾಸನ

ಮೇಲಿನ ಆಸನಗಳನ್ನು ಮಾಡಿದ ಬಳಿಕ ದೇಹಕ್ಕೆ ವಿಶ್ರಾಂತಿಯನ್ನು ನೀಡಲು ಈ ಆಸನವನ್ನು ಮಾಡಿ. ಈ ಆಸನದಲ್ಲಿ ಮ್ಯಾಟ್‌ ಮೇಲೆ ಅಂಗಾತ ಮಲಗಬೇಕು, ಕೈಗಳು ಪಕ್ಕಕ್ಕೆ, ಆಕಾಶಕ್ಕೆ ಮುಖ ಮಾಡಿರಲಿ, ಕಾಲುಗಳು ಸ್ವಲ್ಪ ಅಗಲವಾಗಿರಲಿ, ಈಗ ಕಣ್ಣುಗಳನ್ನು ಮುಚ್ಚಿಕೊಂಡಿರಲಿ, ಉಸಿರಾಟ ನಿರಂತರವಾಗಿರಲಿ, ಈ ಸ್ಥಿತಿಯಲ್ಲಿ 'ಅ'ಕಾರ ಹಾಗು 'ಉ' ಕಾರವನ್ನು ಉಚ್ಛಾರಣೆ ಮಾಡಿ, ನಂತರ 'ಮ' ಕಾರವನ್ನು ಉಚ್ಛಾರಣೆ ಮಾಡಿದರೆ ಒಳ್ಳೆಯದು. ಈ ರೀತಿ ಮೂರು ಬಾರಿ ನಂತರ ಓಂಕಾರ ಹೇಳಿ, ಮೆಲ್ಲನೆ ಎದ್ದು ಕುಳಿತುಕೊಳ್ಲಿ, ಕಣ್ಣುಗಳು ಮುಚ್ಚಿದ ಸ್ಥಿತಿಯಲ್ಲಿಯೇ ಇರಲಿ, ಈಗ ಕೈಗಳನ್ನು ಉಜ್ಜಿ, ಆ ಬಿಸಿಯನ್ನು ಕಣ್ಣಿಗೆ ಒತ್ತಿ ನಂತರ ನಿಧಾನಕ್ಕೆ ಕಣ್ಣು ತೆಗೆಯಿರಿ.

ಪ್ರಯೋಜನಗಳು

* ಮಾನಸಿಕ ಒತ್ತಡವನ್ನು ಹೊರಹಾಕಿ ಮನಸ್ಸಿಗೆ ವಿಶ್ರಾಂತಿಯನ್ನು ನೀಡುತ್ತದೆ.

* ಶರೀರಕ್ಕೆ ಚೈತನ್ಯ ದೊರೆಯುತ್ತದೆ

* ಚೆನ್ನಾಗಿ ನಿದ್ದೆ ಬರುವುದು

English summary

Top 5 Easiest Yoga To Fit In Winter

When winter comes freezing temperatures,snow, if you feel lazy outside to go gym or walking no worry, still you can maintain your fitness by following simple yoga pose. Here are few yoga pose help you to loose weight in winter.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X