For Quick Alerts
ALLOW NOTIFICATIONS  
For Daily Alerts

ನವಣೆ ಬಳಿಸಿದರೆ ಕ್ಯಾನ್ಸರ್‌ನಿಂದ ಫೈಲ್ಸ್‌ವರೆಗೆ ಕಾಯಿಲೆ ತಡೆಗಟ್ಟಬಹುದು,ಗೊತ್ತಾ?

|

ಹಲವು ವರ್ಷಗಳ ಹಿಂದೆಕ್ಕೆ ಹೋಲಿಸಿದರೆ ನಮ್ಮ ಆಹಾರಶೈಲಿಯಲ್ಲಿ ಬದಲಾವಣೆಯಾಗಿದೆ. ಈಗ ನಾವೆಲ್ಲಾ ಸುಲಭವಾಗಿ ತಯಾರಿಸಬಹುದಾದ ಆಹಾರದ ಕಡೆಗೆ ಹೆಚ್ಚು ಗಮನ ಕೊಡುತ್ತೇವೆ, ಅಂದರೆ ರೆಡಿ ಟು ಕುಕ್ ಫುಡ್‌, ರೆಡಿ ಮಸಾಲೆಗಳು ಇವೆಲ್ಲಾ ನಮ್ಮ ಫೇವರೆಟ್‌.

ಇನ್ನು ಆರೋಗ್ಯಕ್ಕೆ ಒಳ್ಳೆಯದೆಂದು ಗೋಧಿ ಹೆಚ್ಚಾಗಿ ಬಳಸುತ್ತಿದ್ದೇವೆ, ಗೋಧಿ ಬಳಕೆ ಹೆಚ್ಚಾದಂತೆ ನವಣೆ ಬಳಕೆ ಕಡಿಮೆಯಾಗುತ್ತಿದೆ, ಅದರ ಪರಿಣಾಮ ಕಾಯಿಲೆ ಕೂಡ ಹೆಚ್ಚಾಗುತ್ತಿದೆ. ಹೌದು ಕ್ಯಾನ್ಸರ್‌ನಿಂದ ಹಿಡಿದು ಮೂಲವ್ಯಾಧಿಯಂಥ ಸಮಸ್ಯೆ ತಡೆಗಟ್ಟುವಲ್ಲಿ ನವಣೆ ತುಂಬಾನೇ ಪ್ರಯೋಜನಕಾರಿ, ಆದರೆ ಇದರ ಉಪಯೋಗಗಳ ನಾವು ನಿರ್ಲಕ್ಷ್ಯ ಮಾಡುತ್ತಿದ್ದೇವೆ ಅಷ್ಟೇ.

Reasons why you should add millets to your diet in kannada

ನವಣೆಯನ್ನು ನಿಮ್ಮ ಆಹಾರಕ್ರಮದಲ್ಲಿ ಸೇರಿಸಿದರೆ ನೀವು ಈ ಅದ್ಭುತ ಪ್ರಯೋಜನಗಳನ್ನು ಪಡೆಯಬಹುದು ನೋಡಿ:

ನವಣೆಯಲ್ಲಿರುವ ಪೋಷಕಾಂಶಗಳು

ನವಣೆ ಗ್ಲುಟೇನ್ ಫ್ರೀಯಾಗಿದ್ದು ಇದರಲ್ಲಿ ಅನೇಕ ಪೋಷಕಾಂಶಗಳಿವೆ. ಇದರಲ್ಲಿ ವಿಟಮಿನ್ ಬಿ ಹಾಗೂ ಖನಿಜಾಂಶಗಳು ಅಧಿಕವಾಗಿವೆ. ಇದರಲ್ಲಿ ಆರೋಗ್ಯಕರ ಕೊಬ್ಬಿನಾಮ್ಲ, ಪಿಷ್ಠ, ಪ್ರೊಟೀನ್, ನಾರಿನಂಶ, ನಿಯಾಸಿನ್, ಮೆಗ್ನಿಷ್ಯಿಯಂ, ರಂಜಕ, ಮ್ಯಾಂಗನೀಸ್, ಅಮೈನೋ ಆಮ್ಲ ಹೀಗೆ ಅನೇಕ ಪೋಷಕಾಂಶಗಳ ಆಹಾರ ಈ ನವಣೆ.

ರಕ್ತಸ್ರಾವದ ಸಮಸ್ಯೆ ತಡೆಗಟ್ಟುತ್ತೆ

ಕೆಲವರಿಗೆ ವಿಪರೀತ ರಕ್ತಸ್ರಾವ ಉಂಟಾಗಿ ರಕ್ತಹೀನತೆ ಉಂಟಾಗುವುದು. ಮೂಗಿನಲ್ಲಿ ರಕ್ತ ಬರುವುದು ಅಥವಾ ಮುಟ್ಟಿನ ಸಮಯದಲ್ಲಿ ವಿಪರೀತ ರಕ್ತಸ್ರಾವ ಈ ಬಗೆಯ ತೊಂದರೆ ಉಂಟಾಗುವುದು. ನವಣೆ ತಿನ್ನುವುದರಿಂದ ಈ ಬಗೆಯ ರಕ್ತಸ್ರಾವದ ಸಮಸ್ಯೆ ತಡೆಗಟ್ಟಬಹುದು.

ಜಂತುಹುಳ ನಾಶ ಮಾಡುತ್ತೆ

ಹೊಟ್ಟೆಯಲ್ಲಿ ಜಂತುಹುಳವಿದ್ದರೆ ಇದರಿಂದ ಅಂಗಾಂಗಗಳಿಗೆ ಹಾನಿಯುಂಟಾಗುತ್ತದೆ. ಇದರಿಂದ ಗ್ಯಾಸ್ಟ್ರಿಕ್ ಸಮಸ್ಯೆ, ಹೊಟ್ಟೆ ಉಬ್ಬುವುದು, ಇದ್ದಕ್ಕಿದ್ದಂತೆ ತೂಕ ಇಳಿಕೆ, ವಾಂತಿ, ಬೇಧಿ, ಹೊಟ್ಟೆ ನೋವು ಈ ಬಗೆಯ ಸಮಸ್ಯೆ ಕಂಡು ಬರುವುದು. ನವಣೆ ತಿನ್ನವವರಿಗೆ ಈ ಬಗೆಯ ಸಮಸ್ಯೆ ಇರಲ್ಲ.
ಅಲ್ಲದೆ ಮಲಬದ್ಧತೆ, ಲ್ಯಾಕ್ಟೋಸ್‌ ಸಮಸ್ಯೆ, ಪೂಡ್‌ ಪಾಯಿಸನ್, ಫುಡ್‌ ಅಲರ್ಜಿ ಈ ಬಗೆಯ ಸಮಸ್ಯೆ ಉಂಟಾಗದಂತೆ ದೇಹವನ್ನು ರಕ್ಷಣೆ ಮಾಡುತ್ತದೆ.

ಕಿಡ್ನಿಸ್ಟೋನ್, ಉರಿಯೂತ ಈ ಬಗೆಯ ಸಮಸ್ಯೆ ತಡೆಗಟ್ಟುತ್ತದೆ

ಆಹಾರಕ್ರಮ, ಅತ್ಯಧಿಕ ಮೈ ತೂಕ, ಯೂರಿನರಿ ಬ್ಲೇಡರ್ ಇವುಗಳಿಂದ ಕಿಡ್ನಿಸ್ಟೊನ್ ಉಂಟಾಗುವುದು. ಈ ಕಿಡ್ನಿ ಸ್ಟೋನ್‌ ಸಮಸ್ಯೆ ತಡೆಗಟ್ಟಲು ನವಣೆ ಸಹಕಾರಿ. ಇನ್ನು ಮೂತ್ರ ಮಾಡುವಾಗ ಉರಿ ಉಂಟಾಗುತ್ತಿದ್ದರೆ ನವಣೆ ತಿಂದರೆ ಸಾಕು ಉರಿ ಕಡಿಮೆಯಾಗುವುದು.

ಕ್ಯಾನ್ಸರ್ ತಡೆಗಟ್ಟುತ್ತದೆ

ಲುಕೆಮಿಯಾ, ಲಿಂಫೋಮ, ಮೈಲೋಮ ಈ ಬಗೆಯ ಕಾಯಿಲೆ ತಡೆಗಟ್ಟುವಲ್ಲಿ ನವಣೆ ಆಹಾರ ಸಹಕಾರಿ. ಈ ಬಗೆಯ ಕ್ಯಾನ್ಸರ್‌ ದೇಹದಲ್ಲಿ ಅಸಹಜ ರಕ್ತ ಕಣಗಳಿಂದಾಗಿ ಉಂಟಾಗುವುದು. ಈ ರೀತಿಯಾಗುವುದನ್ನು ತಡೆಗಟ್ಟುವಲ್ಲಿ ನವಣೆ ಪ್ರಮುಖ ಪಾತ್ರವಹಿಸುತ್ತದೆ.
ಅಲ್ಲದೆ ಎದೆಹುರಿ, ತುಂಬಾ ಬಿಕ್ಕಳಿಕೆ ಬರುವುದು, ಹೊಟ್ಟೆ ಉಬ್ಬುವುದು ಈ ಬಗೆಯ ಸಮಸ್ಯೆ ತಡೆಗಟ್ಟಲು ಸಹಕಾರಿ.

ಮೈ ತುರಿಕೆ ಕಡಿಮೆ ಮಾಡುವುದು

ಕೆಲವರಿಗೆ ಮೈ ತುಂಬಾ ತುರಿಸುವುದು, ನೀವು ಪ್ರತಿಬಾತಿ ತುರಿಸಿದಾಗ ಇದರಿಂದ ತ್ವಚೆಯಲ್ಲಿ ಕೆಲ ಬೀಳುವುದು ಮಾತ್ರ ತುರಿಕೆ ಹೆಚ್ಚಾಗುವುದು, ಈ ಬಗೆಯ ಸಮಸ್ಯೆ ಇರುವವರು ನವಣೆ ತಿನ್ನುವುದರಿಂದ ಉತ್ತಮ ಪರಿಹಾರ ಕಂಡುಕೊಳ್ಳಬಹುದು.

ಜ್ವರ, ಅಲ್ಸರ್‌ ಕಾಯಿಲೆ, ಗಾಯ ಗುಣಪಡಿಸುತ್ತೆ

ಜ್ವರ ಬಂದಾಗ ನವಣೆ ತಿಂದರೆ ಬೇಗನೆ ಚೇತರಿಸಿಕೊಳ್ಳಬಹುದು. ಅದರಂತೆ ಏನಾದರೂ ಗಾಯವಾಗಿದ್ದರೆ, ಬಾಯಲ್ಲಿ ಹುಣ್ಣಿದ್ದರೆ ಅವುಗಳನ್ನು ಗುಣಪಡಿಸಲು ಕೂಡ ನವಣೆ ಸಹಕಾರಿ.

ಮೂಲವ್ಯಾಧಿ ಸಮಸ್ಯೆ

ಮೂಲವ್ಯಾಧಿ ಸಮಸ್ಯೆ ಬಂದರೆ ಸರಿಯಾಗಿ ಕೂರಲು ಕೂಡ ಸಾಧ್ಯವಾಗದೆ ತುಂಬಾನೇ ಕಷ್ಟಪಡುತ್ತಾರೆ, ಮಲವಿಸರ್ಜನೆಗೆ ಹೋಗುವಾಗ ರಕ್ತಸ್ರಾವವಾಗುವುದು ಅಥವಾ ತುಂಬಾ ಉರಿ ಅನಿಸುವುದು. ನವಣೆ ತಿನ್ನುವುದರಿಂದ ಪೈಲ್ಸ್‌ ಕಡಿಮೆಯಾಗುವುದು.

ಹೀಗೆ ನವಣೆಯಿಂದ ಅನೇಕ ಪ್ರಯೋಜನಗಳನ್ನು ಪಡೆಯಬಹುದು. ಆದ್ದರಿಮದ ಪ್ರತಿನಿತ್ಯ ನಮ್ಮ ಆಹಾರದಲ್ಲಿ ನವಣೆ ಬಳಸುವುದು ಒಳ್ಳೆಯದು.

ನವಣೆಯನ್ನು ಬೇಯಿಸಿ ಇದರಿಂದ ಉಪ್ಪಿಟ್ಟು, ಕಿಚಡಿ, ಇಡ್ಲಿ ಹೀಗೆ ನಿಮಗೆ ಇಷ್ಟವಾದ ಪದಾರ್ಥ ಮಾಡಿದರೆ ತಿನ್ನಲು ರುಚಿಯಾಗಿರುತ್ತದೆ. ಇನ್ನು ತೆಳ್ಳಗಾಗಬೇಕು, ಆರೋಗ್ಯ ತುಂಬಾನೇ ಚೆನ್ನಾಗಿರಬೇಕೆಂದು ಬಯಸುವವರು ತಮ್ಮ ಆಹಾರಕ್ರಮದಲ್ಲಿ ನವಣೆ ಸೇರಿಸುವುದು ಒಳ್ಳೆಯದು. ನಿಮ್ಮ ಆಹಾರಕ್ರಮದಲ್ಲಿ ದಿನಕ್ಕೆ ಒಂದು ನವಣೆ ಸೇರಿಸಿ ನೋಡಿ, ಆರೋಗ್ಯದಲ್ಲಿನ ಬದಲಾವಣೆ ನೀವೇ ಕಾಣಬಹುದು

English summary

Reasons why you should add millets to your diet in kannada

If you eat millets everyday you will get these amazing health benefits:
X
Desktop Bottom Promotion