For Quick Alerts
ALLOW NOTIFICATIONS  
For Daily Alerts

ದೀಪಾವಳಿ: ತುಂಬಾ ಸಿಹಿ ತಿಂದು ಹೀಗೆ ಮಾಡಿದರೆ ಮೈ ತೂಕ ಹೆಚ್ಚಲ್ಲ

|

ದೀಪಾವಳಿ ಎಂದ ಮೇಲೆ ಸಿಹಿ ಸವಿಯದಿರಲು ಸಾಧ್ಯನಾ? ಬಗೆಬಗೆಯ ತಿಂಡಿ-ತಿನಿಸುಗಳು ತಟ್ಟೆಯಲ್ಲಿರುವಾಗ ಒಂದರ ನಂತರ ಮತ್ತೊಂದು ಎಂಬಂತೆ ಸಿಹಿ ತಿಂಡಿಗಳು ಹೊಟ್ಟೆ ಸೇರುತ್ತಲೇ ಇರುತ್ತವೆ...ಈ ದಿನ ಯಾವ ಡಯಟ್‌ ಇಲ್ಲ..ಕ್ಯಾಲೋರಿ ಚಿಂತೆಯೂ ಇಲ್ಲ ಸರಿಯಾಗಿ ತಿನ್ನುತ್ತೇವೆ, ಹಾಗೇ ತಿಂದರೆ ಮಾತ್ರ ದೀಪಾವಳಿ ಸಡಗರದ ತೃಪ್ತಿ ಸಿಗುವುದು ಅಲ್ವಾ?

Post Deepavali Detox Tips

ತುಂಬಾ ಚಿಂತೆ ಮಾಡಬೇಡಿ ದೀಪಾವಳಿಯನ್ನು ಚೆನ್ನಾಗೊಯೇ ಸಂಭ್ರಮಿಸಿ, ನಂತರ ಈ ಡಿಟಾಕ್ಸ್ ಟಿಪ್ಸ್ ಪಾಲಿಸಿ, ನಿಮ್ಮ ಫಿಟ್ನೆಸ್‌ಗೆ ಯಾವ ತೊಂದರೆಯೂ ಆಗುವುದಿಲ್ಲ, ಬನ್ನಿ ಹಬ್ಬದ ಅಡುಗೆ ಸವಿದ ಮೇಲೆ ದೇಹವನ್ನು ಡಿಟಾಕ್ಸ್ ಮಾಡುವುದು ಹೇಗೆ ಎಂದು ನೋಡೋಣ:

ಇಂಟರ್‌ಮಿಟೆಂಟ್‌ ಪಾಸ್ಟಿಂಗ್ ಮಾಡಿ:

ಇಂಟರ್‌ಮಿಟೆಂಟ್‌ ಪಾಸ್ಟಿಂಗ್ ಮಾಡಿ:

ದಿನದಲ್ಲಿ 16 ಗಂಟೆ ಉಪವಾಸ ಇರುವುದು. ವಾರದಲ್ಲಿ 2 ದಿನ ಈ ರೀತಿ ಇದ್ದರೆ ದೇಹದಲ್ಲಿರುವ ಕಶ್ಮಲವನ್ನು ಹೊರ ಹಾಕಿ, ಜೀವ ಕಣಗಳಿಗೆ ಹಾನಿಯುಂಟಾಗುವುದನ್ನು ತಡೆಯುವುದು. ಇದು ನಿಮ್ಮ ದೇಹದಲ್ಲಿ ಸಂಗ್ರಹವಾಗಿರುವ ಬೇಡದ ಕೊಬ್ಬನ್ನು ಕರಗಿಸುವಲ್ಲಿ ತುಂಬಾನೇ ಸಹಕಾರಿ.

ಸಕ್ಕರೆಯಂಶ ಸೇವಿಸುವುದನ್ನು ಕಡಿಮೆ ಮಾಡಿ

ಸಕ್ಕರೆಯಂಶ ಸೇವಿಸುವುದನ್ನು ಕಡಿಮೆ ಮಾಡಿ

ಹಬ್ಬದಲ್ಲಿ ಸಿಹಿ ಸವಿದ ಮೇಲೆ ಮತ್ತೆ ತುಂಬಾ ಸಿಹಿ ಸವಿಯಲು ಹೋಗಬೇಡಿ. ಸ್ವಲ್ಪ ದಿನಗಳವರೆಗೆ ಸಿಹಿ ಮುಟ್ಟಬೇಡಿ, ಸಕ್ಕರೆಯಂಶ ತೆಗೆದುಕೊಳ್ಳುವುದನ್ನು ಕಡಿಮೆ ಮಾಡಿ.

ತಂಪು ಪಾನೀಯಗಳನ್ನು ಕೂಡ ಕುಡಿಯಬೇಡಿ.

 ಸಾಕಷ್ಟು ನೀರು ಕುಡಿಯಿರಿ

ಸಾಕಷ್ಟು ನೀರು ಕುಡಿಯಿರಿ

ದಿನದಲ್ಲಿ 3-4 ಲೀಟರ್‌ ನೀರು ಕುಡಿಯಿರಿ. ಇದು ದೇಹದಲ್ಲಿರುವ ಕಶ್ಮಲವನ್ನು ಬೆವರು ಹಾಗೂ ಮೂತ್ರದ ಮೂಲಕ ಹೊರ ಹಾಕುತ್ತದೆ. ಅಲ್ಲದೆ ಜೀರ್ಣಕ್ರಿಯೆಗೆ ಸಹಕಾರಿ.

 ಡಿಟಾಕ್ಸ್ ನೀರು ಬಳಸಿ

ಡಿಟಾಕ್ಸ್ ನೀರು ಬಳಸಿ

ಒಂದು ಲೀಟರ್‌ ನೀರಿಗೆ ಸೌತೆಕಾಯಿಯನ್ನು ಚಿಕ್ಕದಾಗಿ ಕತ್ತರಿಸಿ ಹಾಕಿ, ಅದಕ್ಕೆ ಅರ್ಧ ನಿಂಬೆ ತುಂಡನ್ನು ಎರಡು ಭಾಗ ಮಾಡಿ ಹಾಕಿ, ಒಂದು ಅಥವಾ ಎರಡು ಪುದೀನಾ ಎಲೆ ಹಾಕಿ, ಆ ನೀರನ್ನು ಆಗಾಗ ಸಿಪ್ ಮಾಡುತ್ತಾ ಇರಿ. ಈ ನೀರು ದೇಹವನ್ನು ಡಿಟಾಕ್ಸ್ ಮಾಡಲು ತುಂಬಾನೇ ಸಹಕಾರಿ.

ಮನೆ ಊಟ ಮಾಡಿ

ಮನೆ ಊಟ ಮಾಡಿ

ಹೊರಗಡೆಯ ಊಟ ಮಾಡುವುದಕ್ಕಿಂತ ಮನೆಯಲ್ಲಿ ತಯಾರಿಸಿದ ಆಹಾರ ಸೇವಿಸಿ. ನಿಮ್ಮ ಅಹಾರದಲ್ಲಿ ನಾರಿನಂಶದ ತರಕಾರಿಗಳು ಹೆಚ್ಚಿರಲಿ. ಹಣ್ಣುಗಳನ್ನು ಸೇವಿಸಿ. ಸೊಪ್ಪು, ತರಕಾರಿಗಳು, ಓಟ್ಸ್, ನವಣೆ, ಕೆಂಪಕ್ಕಿ ಇಂಥ ಆರೋಗ್ಯಕರ ಆಹಾರ ಸೇವಿಸಿ.

ವೇಗನ್‌ ಡಯಟ್ ಮಾಡಿ

ವೇಗನ್‌ ಡಯಟ್ ಮಾಡಿ

ಸಂಸ್ಕರಿಸಿದ ಅಹಾರ, ಅದಿಕ ಉಪ್ಪಿನಂಶವಿರುವ ಅಹಾರ ಇವುಗಳನ್ನು ದೂರವಿಡಿ. ಹಣ್ಣು, ತರಕಾರಿಗಳನ್ನಷ್ಟೆ ಸೇವಿಸಿ. ವೇಗನ್ ಡಯಟ್‌ ಮಾಡಿದರೆ ಬೇಗನೆ ಮೈ ತೂಕ ಕರಗಿಸಬಹುದು.

 ವ್ಯಾಯಾಮ ಮಿಸ್‌ ಮಾಡಿದಿರಿ

ವ್ಯಾಯಾಮ ಮಿಸ್‌ ಮಾಡಿದಿರಿ

ಪ್ರತಿನಿತ್ಯ ವ್ಯಾಯಾಮ ಮಾಡಿ. ಇದರಿಂದ ದೇಹದಲ್ಲಿ ಕೊಬ್ಬು ಸಂಗ್ರಹವಾಗುವುದನ್ನು ತಡೆಗಟ್ಟಬಹುದು. ಲಿಫ್ಟ್‌ ಬಳಸುವ ಬದಲಿಗೆ ಸ್ಟೆಪ್ಸ್ ಬಳಸಿ. ಸಮೀಪದ ಅಂಗಡಿಗಳಿಗೆ ಗಾಡಿಯಲ್ಲಿ ಹೋಗುವ ಬದಲಿಗೆ ನಡೆದುಕೊಂಡು ಹೋಗಿ. ಸೈಕ್ಲಿಂಗ್ ಮಾಡಿ. ಇವೆಲ್ಲಾ ಪಿಟ್ನೆಸ್‌ ಕಾಪಾಡಲು ಸಹಕರಿಯಾಗಿದೆ.

English summary

Post Deepavali Detox Tips : Do's And Don'ts after indulging in too many sweets this Diwali in Kannada

Post Deepavali Detox Tips : Do's And Don'ts after indulging in too many sweets this Diwali in Kannada, read on...
X
Desktop Bottom Promotion