For Quick Alerts
ALLOW NOTIFICATIONS  
For Daily Alerts

ಎಣ್ಣೆ, ಬೆಣ್ಣೆ, ತುಪ್ಪ ಇವುಗಳಲ್ಲಿ ಅಡುಗೆಗೆ ಯಾವುದು ಒಳ್ಳೆಯದು?

|

ಸಾಮಾನ್ಯವಾಗಿ ನಾವು ಅಡುಗೆ ಮಾಡುವಾಗ ಎಣ್ಣೆ, ಬೆಣ್ಣೆ, ತುಪ್ಪ ಈ ಮೂರು ವಸ್ತುಗಳಲ್ಲಿ ಯಾವುದಾದರೂ ಒಂದನ್ನು ಬಳಸುತ್ತೇವೆ. ಈ ಮೂರು ಸಾಮಗ್ರಿ ರುಚಿಯಲ್ಲಿ ಭಿನ್ನವಾಗಿದ್ದು ಅವುಗಳದ್ದೇ ಆದ ಆರೋಗ್ಯಕರ ಗುಣಗಳನ್ನು ಹೊಂದಿವೆ.

Oil, Butter, Ghee Which One Is Healthier For Cooking

ಇನ್ನು ಅಡುಗೆ ಎಣ್ಣೆ ಬಗ್ಗೆ ಹೇಳುವುದಾದರೆ ಮಾರುಕಟ್ಟೆಯಲ್ಲಿ ಕಡ್ಲೆ ಎಣ್ಣೆ, ಸೂರ್ಯಕಾಂತಿ ಬೀಜದಿಂದ ತಯಾರಿಸಿದ ಎಣ್ಣೆ, ಜೋಳದ ಎಣ್ಣೆ, ಅಕ್ಕಿಯಿಂದ ತಯಾರಿಸಿದ ಎಣ್ಣೆ ಹೀಗೆ ಹಲವಾರು ಬಗೆಯ ಎಣ್ಣೆಗಳು ದೊರೆಯುತ್ತವೆ. ಪ್ರತಿಯೊಂದು ಕಂಪನಿಯೂ ನಮ್ಮದೇ ಎಣ್ಣೆ ಅಡುಗೆಗೆ ಶ್ರೇಷ್ಠವೆಂದು ಹೇಳುವಾಗ ಗ್ರಾಹಕರಿಗೆ ಯಾವುದು ಕೊಳ್ಳಬೇಕು ಎಂಬ ಗೊಂದಲ ಮೂಡುವುದು ಸಹಜ.

ಎಣ್ಣೆ, ಬೆಣ್ಣೆ, ತುಪ್ಪ ಈ ಮೂರು ಸಾಮಗ್ರಿ ಅದರದ್ದೇ ಆದ ರುಚಿ ಹೊಂದಿರುವುದ್ದರಿಂದ ನಾವು ಬಳಸುವ ಅಡುಗೆಗೆ ತಕ್ಕಂತೆ ಅವುಗಳನ್ನು ಬಳಸುತ್ತೇವೆ. ಆದ್ದರಿಂದ ಯಾವುದು
ಹೆಚ್ಚುಆರೋಗ್ಯಕರ ಎನ್ನುವ ಬದಲು ಇವುಗಳ ಗುಣಗಳ ಬಗ್ಗೆ ತಿಳಿದುಕೊಂಡರೆ ಇವುಗಳನ್ನು ಬಳಸುವುದರಿಂದ ದೊರೆಯುವ ಆರೋಗ್ಯಕರ ಗುಣಗಳು ನಿಮಗೆ ತಿಳಿಯುತ್ತದೆ.

1. ಬೆಣ್ಣೆ

1. ಬೆಣ್ಣೆ

ಹಾಲನ್ನು ಮಜ್ಜಿಗೆ ಮಾಡಿ ಅದರಿಂದ ಬೆಣ್ಣೆ ತೆಗೆಯಲಾಗುವುದು. ಇದರಲ್ಲಿ ಹಾಲಿನ ಪ್ರೊಟೀನ್ ಇರುತ್ತದೆ. ಇದರಲ್ಲಿ ಪಾಲಿ ಸ್ಯಾಚುರೇಟಡ್ ಕೊಬ್ಬಿನಂಶ ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಬೆಣ್ಣೆಯನ್ನು ಕಾಯಿಸಿದಾಗ ಅದರಲ್ಲಿದ್ದ ಶೇ.20ರಷ್ಟು ನೀರಿನಂಶ ಆವಿಯಾಗುತ್ತದೆ, ಉಳಿದ ಕೊಬ್ಬಿನಂಶ ಆಹಾರದ ಜೊತೆ ಬೆರೆಯುತ್ತದೆ.

ಬೆಣ್ಣೆ ಮಾಡುವ ವಿಧಾನ:

ಹಾಲನ್ನು ಕಡಿಮೆ ಉರಿಯಲ್ಲಿ ಕಾಯಿಸಿ ಉರಿಯಿಂದ ಇಳಿಸಿ, ನಂತರ ತಣ್ಣಗಾದ ಮೇಲೆ ಕೆನೆ ತೆಗೆದು ಫ್ರಿಡ್ಜ್‌ನಲ್ಲಿಡಿ. ಒಂದು ಕಪ್ ಅಥವಾ ಒಂದು ಲೋಟದಷ್ಟು ಕೆನೆ ಒಟ್ಟಾದ ನಂತರ ಅದನ್ನು ರಾತ್ರಿ ಫ್ರಿಡ್ಜ್‌ನಿಂದ ತೆಗೆದು ಅದಕ್ಕೆ ಒಂದು ಚಮಚ ಮೊಸರು ಹಾಕಿಟ್ಟರೆ ಅದು ಅದು ಕಡಿಯಲು ಯೋಗ್ಯವಾಗಿರುತ್ತದೆ. ಮಜ್ಜಿಗೆ ಕಡಿಯುವ ಕೋಲು ಇಲ್ಲದಿದ್ದರೆ ಗಾಜಿನ ಬಾಟಲಿನಲ್ಲಿ ಆ ಕೆನೆಯನ್ನು ಹಾಕಿ 10 ನಿಮಿಷ ಚೆನ್ನಾಗಿ ಅಲುಗಾಡಿಸಬೇಕು. ಹೀಗೆ ಮಾಡಿದರೆ ಬೆಣ್ಣೆ ಮೇಲ್ಪದರದಲ್ಲಿ ಶೇಖರವಾಗುತ್ತದೆ, ಮಜ್ಜಿಗೆ ಕೆಳಗಡೆ ಇರುತ್ತದೆ. ಈಗ ಆ ಬೆಣ್ಣೆಯನ್ನು ಒಟ್ಟು ಮಾಡಿ ಒಂದು ಪಾತ್ರೆಯಲ್ಲಿ ಹಾಕಿಡಿ. ಇದನ್ನು ತಿನ್ನಲಿ, ಅಡುಗೆಗೆ ಬಳಸಬಹುದು. ಬೆಣ್ಣೆಯನ್ನು ಜಿಪ್ ಇರುವ ಪ್ಲಾಸ್ಟಿಕ್ ಕವರ್‌ನಲ್ಲಿ ಹಾಕಿಡಿ. ಆದರೆ ಬೆಣ್ಣೆ ತುಂಬಾ ಸಮಯ ಇಡಲು ಸಾಧ್ಯವಿಲ್ಲ, ಇದರಿಂದ ತುಪ್ಪ ಮಾಡಿದರೆ ವರ್ಷದವರೆಗೆ ಇಡಬಹುದು.

2. ಬೆಣ್ಣೆಯ ಪ್ರಯೋಜನಗಳು

2. ಬೆಣ್ಣೆಯ ಪ್ರಯೋಜನಗಳು

  • ಬೆಣ್ಣೆ ತಿನ್ನುವುದರಿಂದ ಮೂಡ್ ಚೆನ್ನಾಗಿರುತ್ತದೆ.
  • ಬೆಳಗ್ಗೆ ಬೆಣ್ಣೆ ತಿಂದರೆ ಆಲಸ್ಯ ದೂರವಾಗಿ ದಿನಾಪೂರ್ತಿ ಚೈತನ್ಯದಿಂದ ಇರುವಿರಿ.
  • ಇದರಲ್ಲಿ ವಿಟಮಿನ್ ಎ ಇದ್ದು ಥೈರಾಯ್ಡ್ ಗ್ರಂಥಿ ಸರಿಯಾಗಿ ಕಾರ್ಯನಿರ್ವಹಿಸುವಂತೆ ಮಾಡುತ್ತದೆ. ಬೆಣ್ಣೆ ತಿಂದರೆ ದಪ್ಪಗಾಗುತ್ತೇವೆ ಎಂದು ಇದನ್ನು ದೂರವಿಟ್ಟರೆ ಥೈರಾಯ್ಡ್ ಉತ್ಪತ್ತಿ ಕಡಿಮೆಯಾದರೆ ಹೈಪೋಥೈರಾಯ್ಡ್ ಆಗಿ ದೇಹದ ತೂಕ ತುಂಬಾ ಹೆಚ್ಚಾಗುವುದು.
  • ಮಕ್ಕಳ ಮೆದುಳಿನ ಬೆಳವಣಿಗೆಗೆ ಅಗತ್ಯವಾದ ಕೊಬ್ಬಿನಂಶ ಬೆಣ್ಣೆಯಲ್ಲಿದೆ, ಅಲ್ಲದೆ ಮಕ್ಕಳಲ್ಲಿ ಪೋಷಕಾಂಶದ ಕೊರತೆ ಉಂಟಾಗುವುದಿಲ್ಲ. ಶಕ್ತಿಯನ್ನು ತುಂಬುತ್ತದೆ ಇದು ದೇಹಕ್ಕೆ ಬೇಗನೆ ಶಕ್ತಿಯನ್ನು ತುಂಬುತ್ತದೆ. ಇದರಲ್ಲಿರುವ ಕೊಬ್ಬು, ಶಕ್ತಿಯಾಗಿ ಪರಿವರ್ತನೆಯಾಗುತ್ತದೆ ಹಾಗೂ ಇದರಲ್ಲಿ ಯಾವುದೇ ಟ್ರಾನ್ಸ್ ಫ್ಯಾಟ್ ಇಲ್ಲ.
  • ಪ್ರತ್ಯಾಮ್ಲವಿದೆ ಬೆಣ್ಣೆಯಲ್ಲಿ antioxidants ಅಧಿಕವಿದ್ದು ಇದು ಮೆದುಳಿನಲ್ಲಿ ಗಡ್ಡೆ ಉಂಟಾಗದಂತೆ ತಡೆಯುತ್ತದೆ.
  • ಇದು ಉತ್ತಮವಾದ ನೈಸರ್ಗಿಕ ಮಾಯಿಶ್ಚರೈಸರ್ ಆಗಿದ್ದು ತ್ವಚೆ ನೆರಿಗೆ ಬೀಳುವುದನ್ನು ತಡೆಗಟ್ಟುತ್ತದೆ. ಮೈ ಕಾಂತಿಯೂ ಹೆಚ್ಚುವುದು.
  • ಇನ್ನು ಆಹಾರದಲ್ಲಿ ಇದನ್ನು ಬಳಸುವುದರಿಂದ ನಿದ್ದೆ ಹೀನತೆ ಸಮಸ್ಯೆ ಕಾಡುವುದಿಲ್ಲ.
  • ವಿಟಮಿನ್ ಕೆ ಇದೆ.
  • ಇದು ಪುರುಷ ಹಾಗೂ ಮಹಿಳೆಯರಲ್ಲಿ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚಿಸುತ್ತದೆ.
  • ಬಾಣಂತಿಯರು ಬೆಣ್ಣೆ ತಿನ್ನುವುದು ಒಳ್ಳೆಯದು.
  • 3. ತುಪ್ಪ ಮಾಡುವುದು ಹೇಗೆ?

    3. ತುಪ್ಪ ಮಾಡುವುದು ಹೇಗೆ?

    ನೀವು ಬೆಣ್ಣೆ ಮಾಡಿಟ್ಟರೆ ಅದು ತುಪ್ಪವಾಗಿ ಮಾಡಿದರೆ ತುಂಬಾ ಸಮಯ ಇಡಬಹುದು. ಬೆಣ್ಣೆಯನ್ನು ಫ್ರಿಡ್ಜ್‌ನಿಂದ ತೆಗೆದು ಚಿಟಿಕೆಯಷ್ಟು ಉಪ್ಪು ಹಾಕಿ 2-3 ತೊಳೆಯಿರಿ. ನಂತರ ಉಪ್ಪು ಹಾಕದೆ 3-4 ಬಾರಿ ತೊಳೆಯಬೇಕು. ಈಗ ಕಡಿಮೆ ಉರಿಯಲ್ಲಿ ಬೆಣ್ಣೆಯನ್ನು ಕರಿಗಿಸಿ, ಅದಕ್ಕೆ ಚಿಟಿಕೆಯಷ್ಟು ಬೆಲ್ಲ ಹಾಕಿ ಉರಿಯಿಂದ ಇಳಿಸಿ, ಆರಿದ ಮೇಲೆ ಘಂ ಪರಿಮಳದ ತುಪ್ಪವನ್ನು ಶುದ್ಧವಾದ ಡಬ್ಬದಲ್ಲಿ ತುಂಬಿಡಿ.

    4. ತುಪ್ಪದ ಪ್ರಯೋಜನಗಳು

    4. ತುಪ್ಪದ ಪ್ರಯೋಜನಗಳು

    • ಜೀರ್ಣಕ್ರಿಯೆಗೆ ಸಹಕಾರಿ
    • ತುಪ್ಪದಲ್ಲಿ ಎ,ಡಿ,ಇ,ಕೆ ಮುಂತಾದ ವಿಶೇಷ ವಿಟಮಿನ್‌ಗಳಿದ್ದು ಇವು ಶರೀರಕ್ಕೆ ಅಗತ್ಯವಿರುವ ಪೋಷಕಾಂಶಗಳನ್ನು ಒದಗಿಸುತ್ತದೆ.
    • ತುಪ್ಪ ತಿನ್ನುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುವುದು.
    • ಇದರಲ್ಲಿ ಆರೋಗ್ಯಕರ ಕೊಲೆಸ್ಟ್ರಾಲ್ ಇದೆ.
    • ಸ್ನಾಯುಗಳನ್ನು ಬಲಪಡಿಸುತ್ತದೆ
    • ಹಾಲಿನ ಉತ್ಪನ್ನ ತಿಂದರೆ ಕೆಲವರಿ ಅಲರ್ಜಿ ಉಂಟಾಗುವುದು, ಅಂಥವರು ಕೂಡ ತುಪ್ಪ ಬಳಸಬಹುದು.
    • ಗರ್ಭಿಣಿಯರಿಗೆ ಕಾಡುವ ಎದೆ ಉರಿ ಕಡಿಮೆ ಮಾಡುತ್ತದೆ.
    • 5. ಎಣ್ಣೆ

      5. ಎಣ್ಣೆ

      ಎಣ್ಣೆಯಲ್ಲಿ ಪಾಲ ಸ್ಯಾಚುರೇಟಡ್ ಅಂಶವಿರುವುದರಿಂದ ಇದನ್ನು ಹೆಚ್ಚು ಬಳಸುವುದು ಆರೋಗ್ಯಕರವಲ್ಲ. ಎಣ್ಣೆಯನ್ನು ಅಡುಗೆಗೆ ಮಿತವಾಗಿ ಬಳಸಬೇಕು. ಇನ್ನು ಸಾಮಾನ್ಯವಾಗಿ ಬಜ್ಜಿ, ಕುರುಕಲು ತಿಂಡಿ ಇವುಗಳನ್ನು ಎಣ್ಣೆಯಲ್ಲಿ ಮಾಡುತ್ತೇವೆ. ಆದರೆ ಎಣ್ಣೆಯನ್ನು ತುಂಬಾ ಉಷ್ಣತೆಗೆ ಕುದಿಸುವುದು ಆರೋಗ್ಯಕರವಲ್ಲ. ಇದರ ಬದಲಿಗೆ ತುಪ್ಪದಲ್ಲಿ ಕರಿಯುವುದು ಒಳ್ಳೆಯದು.

      6. ಎಷ್ಟು ಪ್ರಮಾಣ ಆರೋಗ್ಯಕರ

      6. ಎಷ್ಟು ಪ್ರಮಾಣ ಆರೋಗ್ಯಕರ

      ಡಯಟಿಷಿಯನ್ ಪ್ರಕಾರ ಇವುಗಳನ್ನು 2:2:1 ಅನುಪಾತದಲ್ಲಿ ತೆಗೆದುಕೊಳ್ಳುವುದು ಆರೋಗ್ಯಕರ ಅಂತಾರೆ. ಅಂದರೆ 2 ಚಮಚ ತುಪ್ಪ ಅಥವಾ ಬೆಣ್ಣೆ ಒಂದು ದಿನ ನಮ್ಮ ಆಹಾರದಲ್ಲಿ 1 ಚಮಚವಷ್ಟೇ ಎಣ್ಣೆ ಬಳಸುವುದು ಆರೋಗ್ಯಕರ.

English summary

Oil, Butter, Ghee Which One Is Healthier For Cooking

Normaly we use ghee, butter, oil in cooking, But which one is heathiestm choice, each one have its own benefits, lets brief about this...
Story first published: Wednesday, April 22, 2020, 15:12 [IST]
X
Desktop Bottom Promotion