For Quick Alerts
ALLOW NOTIFICATIONS  
For Daily Alerts

ದೇಹಕ್ಕೆ ಎಲೆಕ್ಟ್ರೋಲೈಟ್ಸ್ ಸಪ್ಲಿಮೆಂಟ್ ಎಷ್ಟು ಅಗತ್ಯವಿದೆ? ಇದರ ಸೇವನೆ ಯಾವಾಗ ಮತ್ತು ಹೇಗಿರಬೇಕು?

|

ನಮ್ಮ ದೇಹವು ಚಟುವಟಿಕೆಯಿಂದ ಇರಲು ಪ್ರಮುಖ ವಿಟಮಿನ್ ಗಳು ಹಾಗೂ ಖನಿಜಾಂಶಗಳು ಅಗತ್ಯವಾಗಿ ಬೇಕೇಬೇಕು. ಇವೆರಡು ಇಲ್ಲದೆ ಇದ್ದರೆ ದೇಹವು ನಿಶ್ಯಕ್ತಿಯಿಂದ ಬಳಲುವುದು ಅಥವಾ ಏನಾದರೂ ಸಮಸ್ಯೆ ಬರುವುದು. ವಿಟಮಿನ್ ಅಥವಾ ಖನಿಜಾಂಶದ ಕೊರತೆ ಕಾಣಿಸಿಕೊಂಡ ವೇಳೆ ದೇಹವು ಯಾವುದೇ ಚಟುವಟಿಕೆಯಲ್ಲಿ ತೊಡಗಿಕೊಳ್ಳಲು ಆಗಲ್ಲ. ಇದರಲ್ಲಿ ಮುಖ್ಯವಾಗಿ ನಾವು ದೈಹಿಕ ಶ್ರಮ ವಹಿಸಿದ ವೇಳೆ ದೇಹದಿಂದ ಬೆವರು ಹೊರಹೋಗುವುದು. ಬೆವರಿನೊಂದಿಗೆ ಕೆಲವೊಂದು ವಿಟಮಿನ್ ಹಾಗೂ ಖನಿಜಾಂಶಗಳು ಕೂಡ. ಇದಕ್ಕೆ ನಾವು ಆದಷ್ಟು ನೀರು ಕುಡಿಯಬೇಕು.

How Electrolytes Helpfull To our Health? Is it Necessary To our Body

ಅದೇ ರೀತಿ ಅತಿಸಾರದ ಸಂದರ್ಭದಲ್ಲಿ ಕೂಡ ದೇಹದಲ್ಲಿ ನೀರಿನಾಂಶವು ಕಡಿಮೆ ಆಗುವುದು ಮತ್ತು ಎಲೆಕ್ಟ್ರೋಲೈಟ್ಸ್ (ವಿದ್ಯುದ್ವಿಚ್ಛೇದ) ಕೂಡ. ಇದನ್ನು ನೀಗಿಸಲು ವೈದ್ಯರು ಕೆಲವೊಂದು ಔಷಧಿಗಳನ್ನು ನೀಡುವರು. ಅದೇ ಕೆಲವರು ವ್ಯಾಯಾಮ ಮಾಡಿದ ಬಳಿಕ ಖನಿಜಾಂಶಗಳ ಕೊರತೆ ನೀಗಿಸಲು ಎಲೆಕ್ಟ್ರೋಲೈಟ್ಸ್ ಪೌಡರ್ ನ್ನು ನೀರಿನೊಂದಿಗೆ ಅಥವಾ ಅದರ ಮಾತ್ರೆ ತೆಗೆದುಕೊಳ್ಳುವರು. ಆದರೆ ಎಲೆಕ್ಟ್ರೋಲೈಟ್ಸ್ ಸಪ್ಲಿಮೆಂಟ್ ಗಳನ್ನು ಸೇವನೆ ಮಾಡುವುದು ಮುಖ್ಯವೇ ಎನ್ನುವ ಪ್ರಶ್ನೆ ಬರುವುದು. ದೇಹದಲ್ಲಿನ ಖನಿಜಾಂಶ ಕೊರತೆ ನೀಗಿಸಲು ನೀರು ಸಾಕಾಗದೆ ಎನ್ನುವ ಪ್ರಶ್ನೆಯು ನಮ್ಮಮಲ್ಲಿ ಮೂಡುವುದು. ಇದರ ಬಗ್ಗೆ ನಾವು ಇನ್ನಷ್ಟು ಮಾಹಿತಿಯನ್ನು ನಮ್ಮ ಜ್ಞಾನ ಭಂಡಾರಕ್ಕೆ ಸೇರಿಸಿಕೊಳ್ಳುವ....

ಎಲೆಕ್ಟ್ರೋಲೈಟ್ಸ್ಗಳು ಎಂದರೇನು?

ಎಲೆಕ್ಟ್ರೋಲೈಟ್ಸ್ಗಳು ಎಂದರೇನು?

ಎಲೆಕ್ಟ್ರೋಲೈಟ್ಸ್ಗಳು ನಮ್ಮ ಎಲ್ಲಾ ಅಂಗಾಂಶಗಳು, ಅಂಗಾಂಗಗಳು ಮತ್ತು ಸಂಪೂರ್ಣ ದೇಹದ ವ್ಯವಸ್ಥೆಗೆ ಅತೀ ಅಗತ್ಯವಾಗಿರುವುದು. ಇದು ವಿದ್ಯುತ್ ತುಂಬಿರುವಂತಹ ಖನಿಜಾಂಶಗಳಾಗಿದ್ದು, ಇದು ದೇಹಕ್ಕೆ ಕೆಲಸ ಮಾಡುವಂತಹ ಶಕ್ತಿಯನ್ನು ನೀಡುವುದು. ಅಂಗಾಂಶಗಳು, ಕೋಶಗಳ ಉತ್ಪಾದನೆಯಲ್ಲಿ ವಿದ್ಯುತ್ ನ ತಟಸ್ಥತೆಯನ್ನು ಕಾಪಾಡುವುದು. ಇದೇ ವೇಳೆ ಹೃದಯ, ಮೆದುಳು, ಕಿಡ್ನಿ, ಸ್ನಾಯುಗಳು ಆರೋಗ್ಯವಾಗಿರಲು ಇದು ಪ್ರಮುಖ ಪಾತ್ರ ವಹಿಸುವುದು. ನಾವು ತಿನ್ನುವ ಮತ್ತು ಕುಡಿಯುವ ಆಹಾರದಿಂದ ನಮಗೆ ಇದು ಲಭ್ಯವಾಗುವುದು. ಆದರೆ ಇದರ ಮಟ್ಟ ತಿಳಿಯಲು ರಕ್ತಪರೀಕ್ಷೆ ಮಾಡಿಕೊಳ್ಳಬೇಕು. ಯಾವುದೇ ಆರೋಗ್ಯ ಸಮಸ್ಯೆ ಬರದೇ ಇರಲು ಇದರ ಮಟ್ಟವನ್ನು ಕಾಪಾಡಿಕೊಳ್ಳುವುದು ಅತೀ ಅಗತ್ಯವಾಗಿ ಇರುತ್ತದೆ.

ಎಲೆಕ್ಟ್ರೋಲೈಟ್ಸ್ ಸಪ್ಲಿಮೆಂಟ್ ಸೇವಿಸುವುದು ಅಗತ್ಯವೇ?

ಎಲೆಕ್ಟ್ರೋಲೈಟ್ಸ್ ಸಪ್ಲಿಮೆಂಟ್ ಸೇವಿಸುವುದು ಅಗತ್ಯವೇ?

ಮನುಷ್ಯನ ದೇಹವು ಶೇ.60ರಷ್ಟು ನೀರಿನಿಂದ ಮಾಡಲ್ಪಟ್ಟಿದೆ. ಇದರಿಂದಾಗಿ ನೀರು ಎನ್ನುವುದು ಅತೀ ಅಗತ್ಯವಾಗಿ ಬೇಕೇಬೇಕು. ಆರೋಗ್ಯವಾಗಿ ಇರಲು ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯಬೇಕು. ಆದರೆ ಕೆಲವೊಂದು ಕ್ರೀಡಾಪಟುಗಳು ಮೈದಾನದಲ್ಲಿ ಎಷ್ಟು ಬೆವರಿಳಿಸಿಕೊಳ್ಳುತ್ತಾರೆ ಎಂದು ಚಿಂತೆ ಮಾಡದೆ ಎಲೆಕ್ಟ್ರೋಲೈಟ್ಸ್ ಸೇವಿಸಲೇಬೇಕು. ಅತಿಯಾಗಿ ಬೆವರು ಹೋದರೆ ಆಗ ಹೊಟ್ಟೆ ಉಬ್ಬರ ಬಂದಂತೆ ಆಗಬಹುದು ಮತ್ತು ಕೆಲವೊಂದು ಸಂದರ್ಭದಲ್ಲಿ ಇದು ಪ್ರಾಣಕ್ಕೆ ಹಾನಿ ಉಂಟು ಮಾಡಬಹುದು. ನೀವು ವೃತ್ತಿಪರ ಕ್ರೀಡಾಳು ಅಲ್ಲದೆ ಇದ್ದರೆ ಆಗ ನೀವು ನೀರಿನೊಂದಿಗೆ ಎಲೆಕ್ಟ್ರೋಲೈಟ್ಸ್ ಸಪ್ಲಿಮೆಂಟ್ ಸೇವಿಸಬಹುದು. ಆದರೆ ಎಷ್ಟು ಪ್ರಮಾಣ ಮತ್ತು ಹೇಗೆ ಸೇವಿಸಬೇಕು ಎನ್ನುವ ಬಗ್ಗೆ ನೀವು ಸರಿಯಾದ ಮಾಹಿತಿ ಪಡೆದುಕೊಳ್ಳಬೇಕು. ಹೃದಯ ಮತ್ತು ಕಿಡ್ನಿ ಸಮಸ್ಯೆ ಇಲ್ಲದೆ ಇದ್ದರೆ ಆಗ ನೀವು ಎಲೆಕ್ಟ್ರೋಲೈಟ್ಸ್ಗಳನ್ನು ನಿತ್ಯದ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಬಹುದು. ಇದು ದೇಹದಲ್ಲಿ ನಷ್ಟವಾಗಿರುವ ಖನಿಜಾಂಶ ಮರಳಿ ಪಡೆಯಲು ನೆರವಾಗುವುದು ಮತ್ತು ದೇಹದಲ್ಲಿ ನೀರನ್ನು ಹೀರಿಕೊಳ್ಳಲು ಕೂಡ ನೆರವಾಗುವುದು.

ನೀರು v/s ಎಲೆಕ್ಟ್ರೋಲೈಟ್ಸ್

ನೀರು v/s ಎಲೆಕ್ಟ್ರೋಲೈಟ್ಸ್

ಆರೋಗ್ಯಕ್ಕೆ ನೀರು ಎನ್ನುವುದು ಅತೀ ಮುಖ್ಯ ಮತ್ತು ಇದು ದೇಹವನ್ನು ತೇವಾಂಶದಿಂದ ಇಡುತ್ತದೆ. ಆದರೆ ನೀವು ನೀರಿನ ಬದಲಿಗೆ ಎಲೆಕ್ಟ್ರೋಲೈಟ್ಸ್ ತೆಗೆದುಕೊಳ್ಳುತ್ತಿದ್ದರೆ ಆಗ ಅದರಲ್ಲಿ ತಪ್ಪೇನಿಲ್ಲ. ವ್ಯಾಯಾಮದ ಬಳಿಕ ನೀವು ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯಬೇಕು. ಆದರೆ ಅತಿಯಾಗಿ ಬೆವರಿದ್ದರೆ ಅಥವಾ ವ್ಯಾಯಾಮ ಮಾಡಿದ್ದರೆ ಆಗ ಎಲೆಕ್ಟ್ರೋಲೈಟ್ಸ್ಗಳು ಒಳ್ಳೆಯ ಆಯ್ಕೆ

ಎಲೆಕ್ಟ್ರೋಲೈಟ್ಸ್ಗಳು ಹೇಗೆ ಕೆಲಸ ಮಾಡುವುದು?

ಎಲೆಕ್ಟ್ರೋಲೈಟ್ಸ್ಗಳು ಹೇಗೆ ಕೆಲಸ ಮಾಡುವುದು?

ಎಲೆಕ್ಟ್ರೋಲೈಟ್ಸ್ಗಳಲ್ಲಿ ಇರುವಂತಹ ವಿವಿಧ ರೀತಿಯ ಖನಿಜಗಳು ನಮ್ಮ ದೇಹದೊಂದಿಗೆ ಕೆಲಸ ಮಾಡಿ, ಅದರ ಕ್ಷಮತೆ ಸುಧಾರಿಸಲು ನೆರವಾಗುವುದು. ಉತ್ತಮ ಪ್ರಮಾಣದಲ್ಲಿ ವಿದ್ಯುದ್ವಿಚ್ಛೇದಗಳು ಇದ್ದರೆ ಆಗ ದೇಹವು ತುಂಬಾ ಶಕ್ತಿಯುತ, ಉಲ್ಲಾಸಿತ ಮತ್ತು ಉತ್ತಮ ರೀತಿಯಲ್ಲಿ ಏಕಾಗ್ರತೆ ಸಾಧಿಸಲು ನೆರವಾಗುವುದು. ನಿರ್ಜಲೀಕರಣದಿಂದಾಗಿ ದೇಹವು ಬಳಲುವುದು ಮತ್ತು ತಲೆನೋವು ಕಾಣಿಸಿಕೊಳ್ಳುವುದು. ಪ್ರತಿನಿತ್ಯವು ಎಲೆಕ್ಟ್ರೋಲೈಟ್ಸ್ ಸೇವಿಸಿದರೆ ಆಗ ಆರೋಗ್ಯಕಾರಿ ಮತ್ತು ಶಕ್ತಿಯಿಂದ ಇರಬಹುದು.

ಗಮನಿಸಬೇಕಾದ ವಿಚಾರಗಳು

ಗಮನಿಸಬೇಕಾದ ವಿಚಾರಗಳು

ಎಲೆಕ್ಟ್ರೋಲೈಟ್ಸ್ ಸಪ್ಲಿಮೆಂಟ್ ಸೇವಿಸುವ ಮೊದಲು ಇದರ ಲೇಬಲ್ ನ್ನು ಸರಿಯಾಗಿ ಓದಿಕೊಳ್ಳಿ. ಎಲೆಕ್ಟ್ರೋಲೈಟ್ಸ್ ಹುಡಿಯಲ್ಲಿ ಇರುವ ಸಕ್ಕರೆ ಅಂಶದ ಬಗ್ಗೆ ಕೂಡ ನೀವು ಗಮನಹರಿಸಿ. ಹೆಚ್ಚಿನ ಸಪ್ಲಿಮೆಂಟ್ ಗಳು ಸಕ್ಕರೆ ಮುಕ್ತವಾಗಿ ಇರುವುದು. ಆದರೆ ಇಷ್ಟು ಸಾಕಾಗಲ್ಲ. ದೇಹದಲ್ಲಿ ಸೋಡಿಯಂ ಹೀರಿಕೊಳ್ಳಲು ಸ್ವಲ್ಪ ಪ್ರಮಾಣದಲ್ಲಿನ ಸಕ್ಕರೆ ಅಂಶವು ಬೇಕಾಗುವುದು. ಇದರಿಂದ ನೀವು ಸೇವಿಸುವ ಸಪ್ಲಿಮೆಂಟ್ ತುಂಬಾ ಕಡಿಮೆ ಪ್ರಮಾಣದಲ್ಲಿ ಇದನ್ನು ಹೊಂದಿರಬಹುದು.

ನೈಸರ್ಗಿಕ ಎಲೆಕ್ಟ್ರೋಲೈಟ್ಸ್ ಬಗ್ಗೆ?

ನೈಸರ್ಗಿಕ ಎಲೆಕ್ಟ್ರೋಲೈಟ್ಸ್ ಬಗ್ಗೆ?

ಕೆಲವು ಜನರಿಗೆ ರಾಸಾಯನಿಕಯುಕ್ತ ಸಪ್ಲಿಮೆಂಟ್ ಗಳು ಬೇಕಾಗಿರುವುದಿಲ್ಲ ಮತ್ತು ಇದಕ್ಕಾಗಿ ಅವರು ನೈಸರ್ಗಿಕದತ್ತವಾಗಿ ಸಿಗುವಂತಹ ಎಳನೀರು ಕುಡಿಯುವುದು ಒಳಿತು. ಆದರೆ ಇದರ ಬಗ್ಗೆ ನೀವು ಇನ್ನೊಂದು ಅಂಶವನ್ನು ಗಮನಿಸಬೇಕು. ಯಾಕೆಂದರೆ ಎಳನೀರಿನಲ್ಲಿ ಪೊಟಾಶಿಯಂ ಕೂಡ ಇದೆ. ಆದರೆ ಸೋಡಿಯಂ ಇರುವುದಿಲ್ಲ. ಇದು ನಮ್ಮ ದೇಹದಲ್ಲಿ ಎಲೆಕ್ಟ್ರೋಲೈಟ್ಸ್ ಉಂಟು ಮಾಡಲು ಪ್ರಮುಖ ಖನಿಜಾಂಶವಾಗಿದೆ. ಇದರಿಂದ ಎಳನೀರಿಗೆ ಕಲ್ಲು ಉಪ್ಪು ಹಾಕಿಕೊಂಡು ಕುಡಿಯಬಹುದು.

English summary

How Electrolytes Helpfull To our Health? Is it Necessary To our Body

It is a common trend among fitness enthusiasts to take electrolytes during a workout session to fulfill the loss of minerals due to sweating. They either opt for electrolyte powder mixed with water or tablets. But is it really important to take electrolyte supplements? Isn't water sufficient to fullfill the loss of minerals from the body? Let's find out.
X
Desktop Bottom Promotion