For Quick Alerts
ALLOW NOTIFICATIONS  
For Daily Alerts

ಪತ್ರೊಡೆ, ಕೆಸುವಿನ ಎಲೆಯ ಗೊಜ್ಜು ತಿಂದ್ರೆ ಎಷ್ಟೊಂದು ಒಳ್ಳೆಯದು ಗೊತ್ತಾ?

|

ಮಳೆಗಾಲ ಬಂತೆಂದರೆ ಕೊಡಗು, ಮಲೆನಾಡು, ಕರಾವಳಿ ಕಡೆ ಕೆಸುವಿನ ಎಲೆಗೆ ಭಾರೀ ಡಿಮ್ಯಾಂಡ್‌. ಇಂಗ್ಲಿಷ್‌ನಲ್ಲಿ ಇದಕ್ಕೆ ಎಲಿಫೆಂಟ್ ಇಯರ್‌ ಎಂದು ಕರೆಯಲಾಗುವುದು. ಈ ಕೆಸುವಿನ ಎಲೆ ತಂದು ಅದರಿಂದ ನಾನಾ ಬಗೆಯ ಅಡುಗೆ ತಯಾರಿಸುತ್ತಾರೆ. ಕೆಸುವಿನ ದಂಟಿನಿಂದ ಸಾರು, ಎಲೆಯಿಂದ ಗೊಜ್ಜು ಮಾಡುತ್ತಾರೆ.

Health Benefits Of Elephant Ear Or Kesuvina Ele In Kannada

ಇನ್ನು ಕೆಸುವಿನ ಎಲೆಯಿಂದ ಪತ್ರೊಡೆ ಅಂತೂ ತುಂಬಾ ಫೇಮಸ್. ಪತ್ರೊಡೆ ಅಂದ್ರೆ ಮೂಗು ಮುರಿಯುವರೇ ಇಲ್ಲ, ಅಷ್ಟು ಪ್ರಿಯವಾದ ಖಾದ್ಯ ಇದಾಗಿದೆ. ಪತ್ರೊಡೆಯನ್ನು ಹಲವಾರು ರುಚಿಯಲ್ಲಿ ಮಾಡಿ ಸವಿಯುತ್ತಾರೆ.

ಮಳೆಗಾಲದಲ್ಲಿ ಇದನ್ನು ತಿಂದರೆ ಒಳ್ಳೆಯದು, ಮೈ ಬೆಚ್ಚಗಿರುತ್ತದೆ ಎಂದು ಹಿರಿಯರು ಹೇಳುತ್ತಾರೆ. ಆದರೆ ಕೆಸುವಿನ ಎಲೆ ಮೈ ಬೆಚ್ಚಗಿಡುವುದು ಮಾತ್ರವಲ್ಲ ಇನ್ನೂ ಅನೇಕ ಆರೋಗ್ಯಕರ ಪ್ರಯೋಜನಗಳಿವೆ ಎಂಬುವುದು ನಿಮಗೆ ಗೊತ್ತೇ?

ಇನ್ನು ಕೆಸುವಿನ ಎಲೆಯ ಸಾರು, ಗೊಜ್ಜು, ಪತ್ರೊಡೆ ಸವಿಯುವಾಗ ವಿಶಿಷ್ಟ ರುಚಿಯ ಜೊತೆಗೆ ಈ ಪ್ರಮುಖ ಪ್ರಯೋಜನಗಳು ದೊರೆಯುತ್ತವೆ ಎಂಬುವುದು ನೆನಪಿರಲಿ:

ಕೆಸುವಿನ ಎಲೆಯಲ್ಲಿರುವ ಪೋಷಕಾಂಶಗಳು

ಕೆಸುವಿನ ಎಲೆಯಲ್ಲಿರುವ ಪೋಷಕಾಂಶಗಳು

100ಗ್ರಾಂ ಕೆಸುವಿನ ಎಲೆಯಲ್ಲಿ 100ಕ್ಯಾಲೋರಿ, 70ಗ್ರಾಂ ನೀರು, 2.2ಗ್ರಾಂ ಪ್ರೊಟೀನ್, 0.1 ಗ್ರಾಂ ಲಿಪಿಡ್ ಫ್ಯಾಟ್, 23ಗ್ರಾಂ ಕಾರ್ಬೋಹೈಡ್ರೇಟ್ಸ್, 1.9 ಗ್ರಾಂ ಡಯಟರಿ ಫೈಬರ್‌, 38 ಮಿಗ್ರಾಂ ಕ್ಯಾಲ್ಸಿಯಂ, 0.8 ಮಿಗ್ರಾಂ ಕಬ್ಬಿಣದಂಶ, 52 ಮಿಗ್ರಾಂ ಮೆಗ್ನಿಷ್ಯಿಯಂ, 267 ಮಿಗ್ರಾಂ ಪೊಟಾಷ್ಯಿಯಂ, 30 ಮಿಗ್ರಾಂ ಸೋಡಿಯಂ, 1.6 ಮಿಗ್ರಾಂ ಸತುವಿನಂಶವಿದೆ. ಅಲ್ಲದೆ ಇದರಲ್ಲಿ ವಿಟಮಿನ್‌ಗಳಾದ 0.02 ಮಿಗ್ರಾಂ ವಿಟಮಿನ್ ಬಿ1, 0.02 ಮಿಗ್ರಾಂ ವಿಟಮಿನ್ ಬಿ2, ವಿಮಿನ್ ಸಿ ಹಾಗೂ ವಿಟಮಿನ್ ಇ ಅಂಶಗಳಿವೆ.

ಅಬ್ಬಾ ಈ ಎಲೆಯಲ್ಲಿ ಎಷ್ಟೆಲ್ಲಾ ಪೋಷಕಾಂಶಗಳಿವೆಯೆಲ್ಲಾ? ಬನ್ನಿ ಇದರ ಪ್ರಯೋಜನಗಳ ಬಗ್ಗೆ ತಿಳಿಯೋಣ:

1. ಸ್ಕರ್ವಿ (Scurvy) ಕಾಯಿಲೆ ತಡೆಗಟ್ಟುತ್ತದೆ

1. ಸ್ಕರ್ವಿ (Scurvy) ಕಾಯಿಲೆ ತಡೆಗಟ್ಟುತ್ತದೆ

ಸ್ಕರ್ವಿ ಸಮಸ್ಯೆಯೆಂದರೆ ಮೂಳೆ, ರಕ್ತನಾಳಗಳು ಹಾಗೂ ನರಗಳು ದುರ್ಬಲವಾಗಿ ಕೊಲೆಜಿನ್ ಉತ್ಪತ್ತಿಗೆ ತೊಂದರೆ ಉಂಟಾಗುವುದು. ವಿಟಮಿನ್ ಸಿ ಕೊರತೆಯಿಂದ ಈ ಸಮಸ್ಯೆ ಉಂಟಾಗುತ್ತದೆ. ದೇಹದಲ್ಲಿ ಕೊಲೆಜಿನ್ ಉತ್ಪತ್ತಿಗೆ ವಿಟಮಿನ್ ಸಿ ಅವಶ್ಯಕ.

2. ದೇಹದಲ್ಲಿರುವ ಕಶ್ಮಲಗಳನ್ನು ಹೊರ ಹಾಕುತ್ತದೆ

2. ದೇಹದಲ್ಲಿರುವ ಕಶ್ಮಲಗಳನ್ನು ಹೊರ ಹಾಕುತ್ತದೆ

ದೇಹದಲ್ಲಿ ಕಶ್ಮಲಗಳು ಹೆಚ್ಚಾದಾಗ ದೇಹದಲ್ಲಿ ಫ್ರೀ ರ‍್ಯಾಡಿಕಲ್ ಸಂಗ್ರಹವಾಗುತ್ತಾ ಸಾಗುತ್ತದೆ. ಇದರಿಂದಾಗಿ ಹೃದಯ ತೊಂದರೆ, ಸಂಧಿವಾತ, ಕ್ಯಾನ್ಸರ್ ಮುಂತಾದ ಸಮಸ್ಯೆ ಉಂಟಾಗುವುದು. ಫ್ರೀ ರ‍್ಯಾಡಿಕಲ್ಸ್ ಆಹಾರ ವಿಭಜನೆ ಆಗುವಾಗ ಅಥವಾ ತಂಬಾಕು, ಧೂಮಪಾನ ಅಥವಾ ವಿಕಿರಣಗಳು ಸೋಕಿದಾಗ ಉಂಟಾಗುತ್ತದೆ.

3. ಮೊಡವೆ ಹೋಗಲಾಡಿಸುತ್ತೆ

3. ಮೊಡವೆ ಹೋಗಲಾಡಿಸುತ್ತೆ

ಕೆಸುವಿನ ಎಲೆಯಲ್ಲಿರುವ ಸತುವಿನಂಶ ಮೊಡವೆ ಹೋಗಲಾಡಿಸಲು ಸಹಕಾರಿ. ಇದು ಟೆಸ್ಟೋಸ್ಟಿರೋನ್ ನಿಯಂತ್ರಣದಲ್ಲಿಡುವಲ್ಲಿ ಸಹಕಾರಿ. ಇದು ತ್ವಚೆಯಲ್ಲಿ ಎಣ್ಣೆಯಂಶ ಉತ್ಪತ್ತಿಯನ್ನು ನಿಯಂತ್ರಿಸುತ್ತದೆ. ಸತು ಬಿಳಿ ರಕ್ತ ಕಣಗಳ ಸಂಖ್ಯೆ ಹೆಚ್ಚು ಮಾಡುತ್ತದೆ ಹಾಗೂ ಸೋಂಕು ತಡೆಗಟ್ಟುತ್ತದೆ. ಇನ್ನು ಮೊಡವೆಯಿಂದ ಉಂಟಾದ ಕಲೆ ಹೋಗಲಾಡಿಸುವಲ್ಲಿಯೂ ಇದು ಸಹಕಾರಿ.

 4. ಹಾರ್ಮೋನ್‌ಗಳನ್ನು ಸಮತೋಲನ ಕಾಪಾಡುತ್ತದೆ

4. ಹಾರ್ಮೋನ್‌ಗಳನ್ನು ಸಮತೋಲನ ಕಾಪಾಡುತ್ತದೆ

ಸತು ಸಂತಾನೋತ್ಪತ್ತಿ ಸಾಮಾರ್ಥ್ಯ ಹಾಗೂ ಹಾರ್ಮೋನ್‌ಗಳ ಸಮತೋಲನ ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಇದು ಪುರುಷರಲ್ಲಿ ಟೆಸ್ಟೋಸ್ಟಿರೋನ್ ಉತ್ಪತ್ತಿ ಹೆಚ್ಚು ಮಾಡುತ್ತದೆ. ಅಲ್ಲದೆ ಸತು ಮಹಿಳೆಯರಲ್ಲಿ ಅಂಡಾಣುಗಳ ಬಿಡುಗಡೆಗೆ ಸಹಕಾರಿಯಾಗಿದೆ. ಸಂತೋತ್ಪತ್ತಿಗೆ ಅವಶ್ಯಕವಾದ ಪ್ರೊಗೊಸ್ಟಿರೋನ್ ಹಾಗೂ ಈಸ್ಟ್ರೋಜಿನ್ ಉತ್ಪತ್ತಿಗೆ ಸಹಕಾರಿಯಾಗಿದೆ.

5. ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು

5. ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು

ವಿಟಮಿನ್ ಇ ವಯಸ್ಸಾದಾಗ ಉಂಟಾಗುವ ಕಣ್ಣಿನ ಪೊರೆ ಸಮಸ್ಯೆ ತಡೆಗಟ್ಟುವಲ್ಲಿ ಸಹಕಾರಿಯಾಗಿದೆ. ಬೀಟಾ ಕೆರೋಟಿನ್, ವಿಟಮಿನ್ ಸಿ, ಸತು ಈ ಅಂಶಗಳು ದೃಷ್ಟಿ ದೋಷ ಉಂಟಾಗುವುದನ್ನು ತಡೆಗಟ್ಟುವಲ್ಲಿ ಸಹಕಾರಿ. ವಿಟಮಿನ್ ಎ ಮತ್ತು ವಿಟಮಿನ್ ಇ ಕಣ್ಣಿನ ಆರೋಗ್ಯ ಕಾಪಾಡುವಲ್ಲಿ ಸಹಕಾರಿ.

6. ನಿದ್ರಾಹೀನತೆ ಹೋಗಲಾಡಿಸುತ್ತೆ

6. ನಿದ್ರಾಹೀನತೆ ಹೋಗಲಾಡಿಸುತ್ತೆ

ಇದರಲ್ಲಿರುವ ಮೆಗ್ನಿಷ್ಯಿಯಂ ಸುಖ ನಿದ್ದೆಗೆ ಸಹಕಾರಿ. ಮೆಗ್ನಿಷ್ಯಿಯಂ ಸಪ್ಲಿಮೆಂಟ್‌ ಸಿಗುವುದರಿಂದ ನಿದ್ರಾಹೀನತೆ ಸಮಸ್ಯೆ ತಡೆಗಟ್ಟುವಲ್ಲಿ ಸಹಕಾರಿಯಾಗಿದೆ.

7. ಹೃದಯ ಸಮಸ್ಯೆ ತಡೆಗಟ್ಟುತ್ತದೆ

7. ಹೃದಯ ಸಮಸ್ಯೆ ತಡೆಗಟ್ಟುತ್ತದೆ

ಮೆಗ್ನಿಷ್ಯಿಯಂ ಹೃದಯ ಬಡಿತ ಸಹಜವಾಗಿರುವಂತೆ ನೋಡಿಕೊಳ್ಳುತ್ತದೆ, ನರಗಳ ಮೇಲೆ ಹೆಚ್ಚು ಒತ್ತಡ ಬೀಳದಂತೆ ನೋಡಿಕೊಳ್ಳುತ್ತದೆ. ವಾಂತಿ, ಸ್ನಾಯು ಸೆಳೆತ, ಹೊಟ್ಟೆ ನೋವು, ಮಲಬದ್ಧತೆ ಮುಂತಾದ ಸಮಸ್ಯೆ ತಡೆಗಟ್ಟುತ್ತದೆ.

8. ಸ್ನಾಯು ಸೆಳೆತ ತಡೆಗಟ್ಟುತ್ತದೆ

8. ಸ್ನಾಯು ಸೆಳೆತ ತಡೆಗಟ್ಟುತ್ತದೆ

ಮೆಗ್ನಿಷ್ಯಿಯಂ ಬೆನ್ನು ನೋವು ಕಡಿಮೆ ಮಾಡುತ್ತದೆ. ಕಿಡ್ನಿಗೆ ಒತ್ತಡ ಬೀಳದಂತೆ ತಡೆಗಟ್ಟುತ್ತದೆ, ಸ್ನಾಯುಗಳ ನರಗಳ ಆರೋಗ್ಯ ವೃದ್ಧಿಸುತ್ತದೆ. ಮೆಗ್ನಿಷ್ಯಿಯಂ ಕೊರತೆ ಉಂಟಾದರೆ ತಲೆಸುತ್ತು, ಕಾಲುಗಳಲ್ಲಿ ಸ್ನಾಯು ಸೆಳೆತ ಮುಂತಾದ ಸಮಸ್ಯೆ ಕಮಡು ಬರುವುದು.

9. ಮೆದುಳಿನ ಆರೋಗ್ಯಕ್ಕೆ ಒಳ್ಳೆಯದು

9. ಮೆದುಳಿನ ಆರೋಗ್ಯಕ್ಕೆ ಒಳ್ಳೆಯದು

ಇದರಲ್ಲಿರುವ ಕಬ್ಬಿಣದಂಶ ರಕ್ತಕ್ಕೆ ಹೆಚ್ಚು ಆಮ್ಲಜನಕವನ್ನ ಪೂರೈಕೆ ಮಾಡುತ್ತದೆ. ಮೆದುಳಿಗೆ ಆಮ್ಲಜನಕ ಪೂರೈಕೆ ಚೆನ್ನಾಗಿದ್ದರೆ ಮೆದುಳಿನ ಸಾಮಾರ್ಥ್ಯ ಹೆಚ್ಚುವುದು. ಮೆದುಳಿಗೆ ಆಮ್ಲಜನಕದ ಪೂರೈಕೆ ಸರಿಯಾಗಿ ಇದ್ದರೆ ವಯಸ್ಸಾದಾಗ ಕಾಡುವ ಅಲ್ಜೈಮರ್ಸ್ ಸಮಸ್ಯೆ ತಡೆಗಟ್ಟುತ್ತದೆ.

10. ಹೀಮೋಗ್ಲೋಬಿನ್ ಉತ್ಪತ್ತಿಗೆ ಸಹಕಾರಿ

10. ಹೀಮೋಗ್ಲೋಬಿನ್ ಉತ್ಪತ್ತಿಗೆ ಸಹಕಾರಿ

ದೇಹದಲ್ಲಿ ಹೀಮೋಗ್ಲೋಬಿನ್ ಉತ್ಪತ್ತಿಗೆ ಕಬ್ಬಿಣದಂಶ ಅವಶ್ಯಕ. ಕಬ್ಬಿಣದಂಶ ರಕ್ತಹೀನತೆ ಸಮಸ್ಯೆ ಉಂಟಾಗದಂತೆ ತಡೆಗಟ್ಟುವಲ್ಲಿ ಸಹಕಾರಿ.

English summary

Health Benefits of Elephant Ear Plant in Kannada

Here are health benefits of elephant ear or kesuvina ele, read on,
X
Desktop Bottom Promotion