For Quick Alerts
ALLOW NOTIFICATIONS  
For Daily Alerts

ಇತ್ತೀಚಿನ ದಿನಗಳಲ್ಲಿ ಒಬೆಸಿಟಿ ಹೆಚ್ಚಲು ಈ ಜೀವನಶೈಲಿಯೇ ಕಾರಣ

|

ಇತ್ತೀಚಿನ ದಿನಗಳಲ್ಲಿ ಒಬೆಸಿಟಿ ಸಮಸ್ಯೆ ಹೆಚ್ಚಾಗುತ್ತಿದೆ. ಲೈಫ್‌ಸ್ಟೈಲ್‌ ಹಾಗೂ ಇನ್ನಿತರ ಆರೋಗ್ಯ ಸಮಸ್ಯೆಗಳಿಂದಾಗಿ ಒಬೆಸಿಟಿ ಉಂಟಾಗುವುದು. ಇತ್ತೀಚೆಗೆ ನ್ಯಾಷನಲ್‌ ಫ್ಯಾಮಿಲಿ ಹೆಲ್ತ್‌ ಸರ್ವೇ (NFHS)ನಡೆಸಲಾಗಿತ್ತು, ಅದರ ಅಧ್ಯಯನ ವರದಿ ಉತ್ತರದ ಪ್ರದೇಶದಲ್ಲಿ ಪ್ರತೀ 5 ಜನರಲ್ಲಿ ಒಬ್ಬರಿಗೆ ಒಬೆಸಿಟಿ ಇದೆ ಎಂದು ಹೇಳಿದೆ. ಒಬೆಸಿಟಿ ಸಮಸ್ಯೆ ಇರುವವರಿಗೆ ಆರೋಗ್ಯ ಸಮಸ್ಯೆ ಹೆಚ್ಚಾಗಿ ಕಾಡುವುದು, ಅನೇಕ ಬಗೆಯ ಕ್ಯಾನ್ಸರ್‌, ಹೃದಯ ಸಂಬಂಧಿ ಸಮಸ್ಯೆ, ಶ್ವಾಸಕೋಶದ ಸಮಸ್ಯೆ ಎಲ್ಲವೂ ಕಾಡುವುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ (WHO) ಹೇಳಿದೆ.

ಯಾರು ಮೈ ತೂಕ 30ಕ್ಕಿಂತ ಅಧಿಕ ಬಿಎಂಐ(Body Mass Index) ಅವರನ್ನು ಬೊಜ್ಜು ಮೈನವರು ಎಂದು ಗುರುತಿಸಲಾಗಿದೆ. ದೇಹದ ಮೈ ತೂಕ BMI 25ರಿಂದ 29.9 ಇದ್ದರೆ ಅಧಿಕ ಮೈ ತೂಕದವರು ಎಂದು ಗುರುತಿಸಲಾಗುವುದು. ಮೈ ತೂಕ ಹೆಚ್ಚಾಗುತ್ತಿದ್ದರೆ ಅದನ್ನು ಕಡಿಮೆ ಮಾಡುವತ್ತ ಗಮನ ಹರಿಸದಿದ್ದರೆ ಒಬೆಸಿಟಿಯಿಂದಾಗಿ ಅನೇಕ ಆರೋಗ್ಯ ಸಮಸ್ಯೆಗಳು ಕಾಡುತ್ತಿವೆ.

ಒಬೆಸಿಟಿ ಸಮಸ್ಯೆ ಹೆಚ್ಚಾಗಲು ಬದಲಾದ ಲೈಫ್‌ಸ್ಟೈಲ್‌ ಪ್ರಮುಖ ಕಾರಣವಾಗಿದೆ. ಒಂದೇ ಕಡೆ ತುಂಬಾ ಹೊತ್ತು ಕೂತು ಕೆಲಸ ಮಾಡುವುದು, ಅನಾರೋಗ್ಯಕರ ಆಹಾರ ಸೇವನೆ, ದೈಹಿಕ ವ್ಯಾಯಾಮ ಇಲ್ಲದಿರುವುದು ಇವೆಲ್ಲಾ ಕಾರಣಗಳಿಂದಾಗಿ ಒಬೆಸಿಟಿ ಸಮಸ್ಯೆ ಹೆಚ್ಚಾಗುವುದು.

ಕೆಲವರಿಗೆ ಹಾರ್ಮೋನ್‌ಗಳ ಬದಲಾವಣೆ ಮತ್ತಿತರ ಆರೋಗ್ಯ ಸಮಸ್ಯೆ, ಆರೋಗ್ಯ ಸಮಸ್ಯೆಗಳಿಗೆ ತೆಗೆದುಕೊಳ್ಳುತ್ತಿರುವ ಔಷಧಗಳ ಅಡ್ಡಪರಿಣಾಮದಿಂದಾಗಿ ಕೂಡ ಒಬೆಸಿಟಿ ಸಮಸ್ಯೆಯಿಂದಾಗಿ ಬಳಲುತ್ತಿದ್ದಾರೆ.

ಒಬೆಸಿಟಿ ಸಮಸ್ಯೆಗೆ ಈ ಬಗೆಯ ಜೀವನಶೈಲಿ ಪ್ರಮುಖ ಕಾರಣಗಳು:

ಒಬೆಸಿಟಿ ಸಮಸ್ಯೆಗೆ ಈ ಬಗೆಯ ಜೀವನಶೈಲಿ ಪ್ರಮುಖ ಕಾರಣಗಳು:

1. ಸರಿಯಾಗಿ ನಿದ್ದೆ ಇಲ್ಲದಿರುವುದು

2. ತುಂಬಾ ಆಹಾರ ಸೇವನೆ

3. ಸಂಸ್ಕರಿಸಿದ ಆಹಾರ ಸೇವನೆ

4. ವ್ಯಾಯಾಮ ಮಾಡದಿರುವುದು

5. ಒತ್ತಡದ ಬದುಕು

6. ಸರಿಯಾಗಿ ಆಹಾರ ಸೇವಿಸದಿರುವುದು

7. ಮದ್ಯಪಾನ

ಈ ಬಗೆಯ ಜೀವನಶೈಲಿ ರೂಢಿಸಿಕೊಂಡವರಲ್ಲಿ ಮಧುಮೇಹದ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತಿದೆ.

ಒಬೆಸಿಟಿ ತಡೆಗಟ್ಟಲು ಏನು ಮಾಡಬೇಕು?

ಒಬೆಸಿಟಿ ತಡೆಗಟ್ಟಲು ಏನು ಮಾಡಬೇಕು?

* ಸಂಸ್ಕರಿಸಿದ ಆಹಾರಗಳಿಂದ ದೂರವಿರಿ

* ಸಿಹಿ ಪದಾರ್ಥಗಳನ್ನು ತುಂಬಾ ಕಡಿಮೆ ತಿನ್ನಿ

* ನಾರಿನಂಶವಿರುವ ಆಹಾರ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸಿ.

* ಆಹಾರವನ್ನು ಅಲ್ಪ ಪ್ರಮಾಣದಲ್ಲಿ ಸೇವಿಸಿ

* ದಪ್ಪಗಾಗುತ್ತಿದ್ದೇನೆ ಎಂದು ಒಂದು ಅಥವಾ ಎರಡು ಹೊತ್ತು ಆಹಾರವನ್ನು ತ್ಯಜಿಸುವ ತಪ್ಪು ಮಾಡದಿರಿ.

* ಜಂಕ್‌ ಫುಡ್ಸ್‌ ಹೆಚ್ಚಾಗಿ ಸೇವಿಸಬೇಡಿ.

* ಮದ್ಯಪಾನ, ಧೂಮಪಾನಗಳಿಂದ ದೂರವಿರಿ

* ಒತ್ತಡಮುಕ್ತ ಜೀವನ ನಡೆಸಿ

ಆಹಾರವನ್ನು ಹೀಗೆ ಸೇವಿಸಿ

ಆಹಾರವನ್ನು ಹೀಗೆ ಸೇವಿಸಿ

ಸಮತೂಕದ ಮೈಕಟ್ಟು ನಿಮ್ಮದಾಗಬೇಕೆಂದರೆ ನೀವು ಆಹಾರಕ್ರಮದ ಕಡೆ ತುಂಬಾನೇ ಗಮನ ನೀಡಬೇಕು. ಜಂಕ್ಸ್‌ ಫುಡ್ಸ್‌ ಸೇವನೆ, ಕರಿದ ಪದಾರ್ಥಗಳ ಸೇವನೆಯಿಂದ ಮೈ ತೂಕ ಹೆಚ್ಚಾಗುವುದಲ್ಲ, ಆರೋಗ್ಯಕರ ಆಹಾರಗಳ ಸೇವನೆಯ ವಿಧಾನ ತಿಳಿಯದಿದ್ದರೂ ಮೈ ತೂಕ ಹೆಚ್ಚಾಗುವುದು. ನೀವು ಆಹಾರವನ್ನು ಅಲ್ಪ ಪ್ರಮಾಣದಲ್ಲಿ ಸೇವಿಸಬೇಕು. ಅಂದರೆ ನೀವು ಬೆಳಗ್ಗೆ 3 ದೋಸೆ ತಿನ್ನುತ್ತಿದ್ದರೆ ಬೆಳಗ್ಗೆ ಒಂದೂವರೆ ದೋಸೆ ತಿಂದು ಉಳಿದ ಒಂದೂವರೆ ದೋಸೆಯನ್ನು 11 ಗಂಟೆಗೆ ಸೇವಿಸಿ. ಈ ರೀತಿ ಆಹಾರವನ್ನು ಸ್ವಲ್ಪ-ಸ್ವಲ್ಪವಂತೆ ದಿನದಲ್ಲಿ 5-6 ಬಾರಿ ಸೇವಿಸುವುದು ಆರೋಗ್ಯಕರ ಆಹಾರ ಸೇವನೆಯ ವಿಧಾನವಾಗಿದೆ. ನಿಮ್ಮ ಆಹಾರದಲ್ಲಿ ನಾರಿನ ಪದಾರ್ಥ ಹೆಚ್ಚಾಗಿರಲಿ, ನೀರು ಚೆನ್ನಾಗಿ ಕುಡಿಯಿರಿ.

ವ್ಯಾಯಾಮ , ಧ್ಯಾನ

ವ್ಯಾಯಾಮ , ಧ್ಯಾನ

ಇನ್ನು ಮೈತೂಕ ನಿಯಂತ್ರಣದಲ್ಲಿಡಲು ವ್ಯಾಯಾಮ ಹಾಗೂ ಧ್ಯಾನ ಕೂಡ ತುಂಬಾನೇ ಪ್ರಮುಖವಾ ಅಂಶಗಳಾಗಿವೆ. ಅತ್ಯಂತ ಒತ್ತಡದ ಬದುಕು ಮೈ ತೂಕ ಹೆಚ್ಚಿಸುವುದು ಮಾತ್ರವಲ್ಲ ಅನೇಕ ಆರೋಗ್ಯ ಸಮಸ್ಯೆಗಳನ್ನು ತರುತ್ತದೆ. ಆದ್ದರಿಂದ ಒತ್ತಡಮುಕ್ತ ಜೀವನ ನಡೆಸಲು ಧ್ಯಾನ ಸಹಕಾರಿಯಾಗಿದೆ ಹಾಗೂ ಮೈಯನ್ನು ಫಿಟ್‌ ಆಗಿಡಲು ದಿನಾ ಅರ್ಧ ಗಂಟೆ ವ್ಯಾಯಾಮ ಮಾಡಿ.

English summary

Everyday Lifestyle Habits Reason For Obesity in Kannada

These lifestyle habits are the main reason for obesity read on...
Story first published: Monday, September 26, 2022, 15:34 [IST]
X
Desktop Bottom Promotion