For Quick Alerts
ALLOW NOTIFICATIONS  
For Daily Alerts

ಸ್ಕಿಪ್ಪಿಂಗ್‌ನಿಂದ ತೂಕ ಇಳಿಕೆ ಜತೆಗೆ ಈ 7 ಲಾಭಗಳಿವೆ

|

ಶಾಲೆಗಳಲ್ಲಿ ಸಣ್ಣ ಮಕ್ಕಳು ಒಂದು ಹಗ್ಗವನ್ನು ಹಿಡಿದುಕೊಂಡು ಅದನ್ನು ತಿರುಗಿಸುತ್ತಾ ಜಿಗಿಯುವುದು ಇದೆ. ಇದನ್ನು ಸ್ಕಿಪ್ಪಿಂಗ್ ಎಂದು ಕರೆಯಲಾಗುತ್ತದೆ. ಇದು ಹೆಚ್ಚಾಗಿ ಹಗ್ಗವನ್ನು ಹಿಡಿದುಕೊಂಡು ಮಾಡುವಂತಹ ವ್ಯಾಯಾಮವಾಗಿದೆ. ಇದು ದೇಹಕ್ಕೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಯಾಕೆಂದರೆ ಇದು ಸಂಪೂರ್ಣ ದೇಹಕ್ಕೆ ವ್ಯಾಯಾಮ ನೀಡುವ ಕಾರಣದಿಂದಾಗಿ ದೇಹವು ಫಿಟ್ ಆಗಿರುವುದು.

Weight Loss Tips

ಇಷ್ಟು ಮಾತ್ರವಲ್ಲದೆ ಹೃದಯಕ್ಕೂ ಇದು ಒಳ್ಳೆಯದು. ಇದೇ ಕಾರಣದಿಂದಾಗಿ ಕೆಲವರು ಇಂದಿಗೂ ಕೇವಲ ಸ್ಕಿಪ್ಪಿಂಗ್ ಮಾತ್ರ ಮಾಡಿ ತಮ್ಮ ದೇಹವನ್ನು ಫಿಟ್ ಆಗಿ ಇಟ್ಟುಕೊಂಡಿರುವರು. ಇದು ದೇಹದ ತೂಕ ಇಳಿಸಬೇಕು ಎಂದು ಬಯಸುವವರಿಗೆ ತುಂಬಾ ಒಳ್ಳೆಯದು. ಇದು ಪ್ರತಿನಿಮಿಷಕ್ಕೆ 10-15 ಕ್ಯಾಲೋರಿ ದಹಿಸುವುದು. ದೇಹದಲ್ಲಿ ಇರುವಂತಹ ಹೆಚ್ಚಿನ ತೂಕವನ್ನು ಇಳಿಸಿ, ಫಿಟ್ ಆಗಿ ಇಡುವುದು.

1. ಇದು ಹೃದಯದ ಆರೋಗ್ಯ ಸುಧಾರಣೆ ಮಾಡುವುದು

1. ಇದು ಹೃದಯದ ಆರೋಗ್ಯ ಸುಧಾರಣೆ ಮಾಡುವುದು

ಸ್ಕಿಪ್ಪಿಂಗ್ ಅಥವಾ ಹಗ್ಗ ಜಗಿಯುವುದು ಒಂದು ಅದ್ಭುತ ಹೃದಯದ ವ್ಯಾಯಾಮ ಆಗಿರುವುದು. ಇದು ಹೃದಯ ಬಡಿತ ಹೆಚ್ಚಿಸುವುದು, ಇದರಿಂದ ಹೃದಯದ ಸ್ನಾಯುಗಳು ತುಂಬಾ ಬಲವಾಗಿ ಆಮ್ಲಜನಕಯುಕ್ತ ಮತ್ತು ಆಮ್ಲಜನಕವಿಲ್ಲದೆ ಇರುವ ರಕ್ತವನ್ನು ದೇಹಕ್ಕೆ ಪಂಪ್ ಮಾಡಬೇಕು. ಇದರಿಂದ ಹೃದಯದ ಆರೋಗ್ಯವು ಸುಧಾರಣೆ ಆಗುವುದು ಮತ್ತು ಎತ್ತರವು ಹೆಚ್ಚಾಗುವುದು.

ಮಕ್ಕಳ ಮೇಲೆ ನಡೆಸಿರುವ 12 ತಿಂಗಳ ಅಧ್ಯಯನದ ಪ್ರಕಾರ ಸ್ಕಿಪ್ಪಿಂಗ್ ಮಾಡಿದರೆ ಆಗ ಹೃದಯದ ಸಮಸ್ಯೆಗಳು ಗಣನೀಯವಾಗಿ ಕಡಿಮೆ ಆಗಿದೆ ಎಂದು ಹೇಳಬಹುದು.

2. ದೇಹದ ಮೇಲ್ಭಾಗ ಹಾಗೂ ಕೆಳಭಾಗ ಬಲಗೊಳಿಸುವುದು

2. ದೇಹದ ಮೇಲ್ಭಾಗ ಹಾಗೂ ಕೆಳಭಾಗ ಬಲಗೊಳಿಸುವುದು

ಸ್ಕಿಪ್ಪಿಂಗ್ ಎನ್ನುವುದು ಒಂದು ಸಂಪೂರ್ಣ ದೇಹದ ವ್ಯಾಯಾಮವಾಗಿದೆ. ಇದು ದೇಹದ ಎಲ್ಲಾ ಭಾಗದಲ್ಲಿ ಇರುವಂತಹ ಕೊಬ್ಬನ್ನು ಕರಗಿಸುವುದು ಮತ್ತು ದೇಹವನ್ನು ಕಟ್ಟುಮಸ್ತಾಗಿ ಇಡುವುದು. ಇದಕ್ಕಾಗಿ ಇದನ್ನು ತುಂಬಾ ತೀವ್ರಯಿಂದ ಮಾಡಿಕೊಳ್ಳಬೇಕು.

3. ಕ್ಯಾಲೋರಿ ದಹಿಸುವುದು

3. ಕ್ಯಾಲೋರಿ ದಹಿಸುವುದು

ಸ್ಕಿಪ್ಪಿಂಗ್ ಎನ್ನುವುದು ಕ್ಯಾಲೋರಿ ದಹಿಸುವುದು ಮತ್ತು ಕೊಬ್ಬು ಕರಗಿಸುವುದು. ಸಾಮಾನ್ಯ ವ್ಯಾಯಮಕ್ಕಿಂತಲೂ ಹಗ್ಗ ಜಿಗಿಯುವ ಸಂಗೀತ ವ್ಯಾಯಾಮದಿಂದ ಬಿಎಂಐ ಸುಧಾರಣೆ ಆಗಿದೆ ಎಂದು ವಿಜ್ಞಾನಿಗಳು ಕಂಡುಕೊಂಡಿರುವರು. ಹತ್ತು ನಿಮಿಷ ತೀವ್ರವಾಗಿ ಸ್ಕಿಪ್ಪಿಂಗ್ ಮಾಡಿದರೆ ಅದು 8 ನಿಮಿಷ ಮೈಲಿ ಓಡುವುದಕ್ಕೆ ಸಮ ಮತ್ತು ಇದು ಒಂದು ಗಂಟೆಗೆ ಸುಮಾರು 1300 ಕ್ಯಾಲೋರಿ ದಹಿಸುವುದು.

ಪ್ರತಿನಿತ್ಯವು 2-3 ನಿಮಿಷ ಕಾಲ ನೀವು ಸ್ಕಿಪ್ಪಿಂಗ್ ಮಾಡಿ ಮತ್ತು ಇದು ಮುಂದುವರಿದಂತೆ ಸಮಯವನ್ನು ಹೆಚ್ಚಿಸುತ್ತಾ ಹೋಗಿ.

4. ಇದು ತ್ರಾಣ ಹೆಚ್ಚಿಸುವುದು

4. ಇದು ತ್ರಾಣ ಹೆಚ್ಚಿಸುವುದು

ಇದೇ ಕಾರಣದಿಂದಾಗಿ ಹೆಚ್ಚಿನ ಅಥ್ಲೆಟಿಕ್ಸ್ ಗಳು, ಅದರಲ್ಲೂ ಬಾಕ್ಸರ್ ಗಳು ಸ್ಕಿಪ್ಪಿಂಗ್ ನ್ನು ಅಭ್ಯಾಸ ಮಾಡುವರು. ವ್ಯಾಯಾಮ ಕ್ರಮಕ್ಕೆ ಸ್ಕಿಪ್ಪಿಂಗ್ ಅಥವಾ ಹಗ್ಗ ಜಿಗಿಯುವುದನ್ನು ಸೇರಿಸಿಕೊಂಡರೆ ಆಗ ಸಹಕಾರ, ಬಲವು ಅಥ್ಲೆಟಿಕ್ಸ್ ಗಳಲ್ಲಿ ಹೆಚ್ಚಾಗುವುದು.

5. ಶ್ವಾಸಕೋಶ ಕಾರ್ಯವನ್ನು ಸುಧಾರಣೆ ಮಾಡುವುದು

5. ಶ್ವಾಸಕೋಶ ಕಾರ್ಯವನ್ನು ಸುಧಾರಣೆ ಮಾಡುವುದು

ಸ್ಕಿಪ್ಪಿಂಗ್ ಮಾಡಿದರೆ ಅದರಿಂದ ಸರಬರಾಜು ಮತ್ತು ಉಸಿರಾಟವನ್ನು ಉತ್ತಮಪಡಿಸಿ, ಶ್ವಾಸಕೋಶದ ಸಾಮರ್ಥ್ಯವನ್ನು ವೃದ್ಧಿಸುವುದು. ದೀರ್ಘಕಾಲ ತನಕ ಈ ವ್ಯಾಯಾಮ ಮಾಡಿದರೆ ಅದರಿಂದ ಹೃದಯರಕ್ತನಾಳದ ಕಾರ್ಯಗಳ ಮೇಲೆ ಧನಾತ್ಮಕ ಪರಿಣಾಮ ಬೀರುವುದು ಮತ್ತು ಆಮ್ಲಜನಕ ತೆಗೆದುಕೊಳ್ಳುವುದನ್ನು ಹೆಚ್ಚಿಸುವುದು.

6. ಮೂಳೆ ಸಾಂದ್ರತೆ ಸುಧಾರಣೆ ಮಾಡುವುದು

6. ಮೂಳೆ ಸಾಂದ್ರತೆ ಸುಧಾರಣೆ ಮಾಡುವುದು

ಅಸ್ಥಿರಂಧ್ರತೆ ಮತ್ತು ದುರ್ಬಲ ಮೂಳೆಯು ಕಡಿಮೆ ಮೂಳೆ ಸಾಂದ್ರತೆಯ ಪರಿಣಾಮವಾಗಿದೆ. ನಿಯಮಿತವಾಗಿ ಸ್ಕಿಪ್ಪಿಂಗ್ ಮಾಡಿದರೆ ಅದರಿಂದ ಮೂಳೆ ಸಾಂದ್ರತೆ ಸುಧಾರಣೆ ಮಾಡಬಹುದು. ಅದಾಗ್ಯೂ, ಎಷ್ಟು ಸಮಯ, ಆವರ್ತನ ಮತ್ತು ತೀವ್ರತೆಯಿಂದ ಇದನ್ನು ಮಾಡಬೇಕು ಎನ್ನುವ ಬಗ್ಗೆ ಇನ್ನು ಹೆಚ್ಚಿನ ಸಂಶೋಧನೆಗಳು ನಡೆಯಬೇಕಾಗಿದೆ. ಹಗ್ಗ ಜಿಗಿತದ ತೀವ್ರತೆಯು ಮೂಳೆ ಖನಿಜ ಸಾಂದ್ರತೆ ಮೇಲೆ ಪರಿಣಾಮ ಬೀಡುವುದು. ಮಧ್ಯಮದಿಂದ ತೀವ್ರ ರೀತಿಯ ಹಗ್ಗ ಜಿಗಿತವು ಆಸ್ಟಿಯೋಪೆನಿಯಾ ಇರುವ ಜನರಿಗೆ ಸುರಕ್ಷಿತವಾಗಿದೆ ಮತ್ತು ಇದು ಸೊಂಟದ ಮೂಳೆಯ ಖನಿಜ ಸಾಂದ್ರತೆ ಸುಧಾರಿಸುವುದು.

7. ಮಾನಸಿಕ ಆರೋಗ್ಯ ಸುಧಾರಿಸುವುದು

7. ಮಾನಸಿಕ ಆರೋಗ್ಯ ಸುಧಾರಿಸುವುದು

ಮಧ್ಯಮದಿಂದ ತೀವ್ರವಾಗಿ ಸ್ಕಿಪ್ಪಿಂಗ್ ನಿಂದ ಆತಂಕ, ಖಿನ್ನತೆ ಮತ್ತು ಮನಸ್ಥಿತಿ ಮೇಲೆ ಧನಾತ್ಮಕ ಪರಿಣಾಮ ಬೀರುವುದು. ವ್ಯಾಯಮವು ದೇಹದ ತಾಪಮಾನ ಹೆಚ್ಚಿಸುವುದು ಮತ್ತು ಮೆದುಳಿನಲ್ಲಿ ರಕ್ತದ ಸರಬರಾಜನ್ನು ಅಧಿಕ ಮಾಡುವುದು. ಇದರಿಂದ ಒತ್ತಡ ಕಡಿಮೆ ಆಗುವುದು ಮತ್ತು ಅರಿವಿನ ಅಪಶ್ರುತಿಯು ಕಡಿಮೆ ಆಗುವುದು.

8. ಗಂಟುಗಳಿಗೆ ಇದು ಒಳ್ಳೆಯದು

8. ಗಂಟುಗಳಿಗೆ ಇದು ಒಳ್ಳೆಯದು

ಸ್ವಲ್ಪ ಪ್ರಮಾಣದ ಸ್ಕಿಪ್ಪಿಂಗ್ ಗಂಟುಗಳಿಗೆ ತುಂಬಾ ಒಳ್ಳೆಯದು. ಇದರಿಂದ ಮಣಿಗಂಟುಗಳಿಗೆ ಗಾಯ ಮತ್ತು ಇತರ ಯಾವುದೇ ಗಾಯದ ಸಮಸ್ಯೆಯನ್ನು ಇದು ನಿವಾರಣೆ ಮಾಡುವುದು. ಹಗ್ಗ ಜಿಗಿಯುವ ಪರಿಣಾಮದಿಂದ ಅದು ಅಥ್ಲೆಟಿಕ್ ಗಳಲ್ಲಿ ಭುಜದ ಮೇಲಿನ ಚಲನೆ ಸುಧಾರಣೆ ಮಾಡುವುದು.

ಸೂಚನೆ

ಸೂಚನೆ

ಯಾವುದೇ ಶಸ್ತ್ರಚಿಕಿತ್ಸೆ ಅಥವಾ ಗಂಭೀರ ಗಾಯಗೊಂಡ ಬಳಿಕ ಹಗ್ಗ ಜಿಗಿತ ಅಭ್ಯಾಸ ಮಾಡಬಾರದು. ವೈದ್ಯರು ಅಥವಾ ಫಿಸಿಯೋಥೆರಪಿಸ್ಟ್ ಅನುಮತಿ ನೀಡುವ ತನಕ ನೀವು ಹೀಗೆ ಮಾಡಲು ಹೋಗಬೇಡಿ.

ಹಗ್ಗ ಜಿಗಿಯುವುದು ಒಂದು ಸರಳ, ಪರಿಣಾಮಕಾರಿ ಮತ್ತು ಸುಲಭದ ಏರೋಬಿಕ್ಸ್ ವ್ಯಾಯಾಮವಾಗಿದೆ. ಇದು ಹಲವಾರು ರೀತಿಯ ಲಾಭಗಳನ್ನು ನೀಡುವುದು ಮತ್ತು ಬೆವರು ಹರಿದು ಹೋಗುವಂತೆ ಮಾಡುವುದು. ವ್ಯಾಯಮ ಕ್ರಮದಲ್ಲಿ ಐದು ನಿಮಿಷ ಕೊಬ್ಬು ಕರಗಿಸುವ ಸ್ಕಿಪ್ಪಿಂಗ್ ಸೇರಿಸಿದರೆ ಅದು ತುಂಬಾ ಒಳ್ಳೆಯದು.

ಸ್ಕಿಪ್ಪಿಂಗ್ ಆರಂಭಿಸುವುದು ಹೇಗೆ

ಹಗ್ಗದ ಉದ್ದವನ್ನು ಸರಿಯಾಗಿ ಮಾಡಿಸಿಕೊಳ್ಳಿ.

ಹಗ್ಗದ ಹಿಡಿಯನ್ನು ಎರಡು ಕೈಗಳಲ್ಲಿ ಸರಿಯಾಗಿ ಇಟ್ಟುಕೊಳ್ಳಿ.

ಹಗ್ಗದ ಮಧ್ಯಭಾಗದಲ್ಲಿ ನಿಂತುಕೊಂಡು ಮೇಲಿನ ಭಾಗಕ್ಕೆ ಎಳೆದುಕೊಂಡು ಉದ್ದವನ್ನು ಸರಿಪಡಿಸಿಕೊಳ್ಳಿ. ಕಂಕುಳಿನ ತನಕ ಹಗ್ಗ ಬರುವ ತನಕ ನೀವು ಹಗ್ಗವನ್ನು ಸಣ್ಣದು ಮಾಡಿ.

ಹಗ್ಗದ ಮುಂದಿನ ಭಾಗಕ್ಕೆ ಹೋಗಿ ಮತ್ತು ಹಗ್ಗವನ್ನು ಹಿಂದಿನ ಭಾಗದಿಂದ ಮುಂದಕ್ಕೆ ಹಾರಿಸಿ.

ಹಗ್ಗವು ಕಾಲಿನ ಭಾಗಕ್ಕೆ ಬಂದ ವೇಳೆ ನೀವು ಜಿಗಿಯಿರಿ. ಕಾಲುಗಳು ನೇರವಾಗಿ ಇರಲಿ.

ನೆಲದ ಮೇಲೆ ನಯವಾಗಿ ನಿಲ್ಲಿ.

ಸ್ಕಿಪ್ಪಿಂಗ್ ಮಾಡಬೇಕಾದ ಸಮಯ

ಒಂದು ನಿಮಿಷ ಸ್ಕಿಪ್ಪಿಂಗ್ ಮಾಡಿ. ಇದರ ಬಳಿಕ ಅದರ ತೀವ್ರತೆ ಹಾಗೂ ಸಮಯ ಹೆಚ್ಚಿಸುತ್ತಾ ಹೋಗಿ. ಪ್ರತೀ ವಾರವು 1-2 ನಿಮಿಷ ಕಾಲ ಸಮಯ ಹೆಚ್ಚಿಸುತ್ತಾ ಹೋಗಿ. 10-15 ನಿಮಿಷ ಕಾಲ ನೀವು ಹಗ್ಗ ಜಿಗಿಯಬೇಕು. ವಿಶ್ರಾಂತಿ ಪಡೆಯಿರಿ, ಪಾನೀಯ ಸೇವಿಸಿ ಮತ್ತು ಮತ್ತೆ ಜಿಗಿಯಿರಿ.

ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು

ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು

ಹಗ್ಗ ಜಿಗಿಯುವ ಮೊದಲು ಹತ್ತು ನಿಮಿಷ ಕಾಲ ವಾರ್ಮ್ ಅಪ್ ಮಾಡಿ.

ಸಾಕ್ಸ್ ಮತ್ತು ಮೆತ್ತಗಿನ ಶೂ ಧರಿಸಿ.

ಸ್ಪೋರ್ಟ್ಸ್ ಬ್ರಾ ಧರಿಸಿದರೆ ಆಗ ಸ್ತನಗಳು ಜೋತು ಬೀಳುವುದು ತಡೆಯಬಹುದು.

ವ್ಯಾಯಮಕ್ಕೆ ಮೊದಲು ಮತ್ತು ಬಳಿಕ ಎಲೆಕ್ಟ್ರೋಲ್ಯಟ್ ಇರುವ ನೀರು ಸೇವಿಸಿ.

ಸ್ಟ್ರೆಚಿಂಗ್ ಮೂಲಕ ಆರಾಮ ಮಾಡಿ.

ಯಾರು ಸ್ಕಿಪ್ಪಿಂಗ್ ಮಾಡಬಾರದು

ಯಾರು ಸ್ಕಿಪ್ಪಿಂಗ್ ಮಾಡಬಾರದು

ಹೃದಯದ ಸಮಸ್ಯೆ ಇದ್ದರೆ ಆಗ ನೀವು ವೈದ್ಯರ ಸಲಹೆ ಪಡೆದ ಬಳಿಕವಷ್ಟೇ ಇದನ್ನು ಮಾಡಿ.

ಗಂಭೀರ ಅನಾರೋಗ್ಯ ಮತ್ತು ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿದ್ದರೆ.

ಅಧಿಕ ರಕ್ತದೊತ್ತಡವಿದ್ದರೆ, ವೈದ್ಯರ ಸಲಹೆ ಪಡೆಯಿರಿ.

ಮೂಳೆ ಗಾಯದ ಸಮಸ್ಯೆಯಿದ್ದರೆ.

English summary

Benefits Of Skipping Rope How To Enjoy It At Home

Skipping is very good exercise for weight loss, It not only help to loose weight also will get so much health benefits. Here we explained health benefits of skipping, take look.
Story first published: Friday, January 3, 2020, 10:26 [IST]
X
Desktop Bottom Promotion