For Quick Alerts
ALLOW NOTIFICATIONS  
For Daily Alerts

ಗ್ರೀನ್ ಟೀಯಿಂದ ತೂಕ ಕಳೆದು ಕೊಳ್ಳಬಹುದೇ?

By Hemanth
|

ಗ್ರೀನ್ ಟೀ ಬಗ್ಗೆ ನೀವು ಇದೇ ಸೆಕ್ಷನ್ ನಲ್ಲಿ ಹಲವಾರು ಸಲ ಓದಿರಬಹುದು. ಅದರ ಪ್ರತಿಯೊಂದು ಆರೋಗ್ಯ ಲಾಭದ ಬಗ್ಗೆಯೂ ನಿಮಗೆ ತಿಳಿದಿರಬಹುದು. ಆದರೆ ಈ ಲೇಖನದಲ್ಲಿ ಗ್ರೀನ್ ಟೀಯು ತೂಕ ಕಳೆದುಕೊಳ್ಳಲು ಯಾವ ರೀತಿ ನೆರವಾಗಲಿದೆ ಎಂದು ನಿಮಗೆ ತಿಳಿಸಿಕೊಡಲಿದ್ದೇವೆ. ಗ್ರೀನ್ ಟೀಯು ಕ್ಯಾನ್ಸರ್, ಅಪಧಮನಿ ಕಾಯಿಲೆ, ಹೃದಯದ ಕಾಯಿಲೆ, ಸಂಧಿವಾತ, ಸೋಂಕು, ಹಲ್ಲಿನ ಸಮಸ್ಯೆ ಮತ್ತು ಅಧಿಕ ಕೊಲೆಸ್ಟ್ರಾಲ್ ತಡೆಗಟ್ಟಲು ನೆರವಾಗುವುದು. ಗ್ರೀನ್ ಟೀಯಲ್ಲಿ ಇರುವಂತಹ ಎಪಿಗಲ್ಲೋಕೆಟೆಚಿನ್ -3 ಗಲೆಟ್(ಇಜಿಸಿಜಿ) ಎನ್ನುವ ಆಕ್ಸಿಡೆಂಟ್ ಹಲವಾರು ಕಾಯಿಲೆಗಳ ನಿವಾರಣೆಗೆ ನೆರವಾಗುವುದು.

ಗ್ರೀನ್ ಟೀಯು ಕುಡಿಯಲು ತುಂಬಾ ಕಹಿಯಾದರೂ ಇದು ಉತ್ತೇಜನಕಾರಿಯಾಗಿದೆ. ಇದರಲ್ಲಿರುವ ಉನ್ನತ ಮಟ್ಟದ ರಾಸಾಯನಿಕಗಳಾದ ಕ್ಯಾಟೆಚಿನ್ ಪಾಲಿಫಿನಾಲ್ ಗಳಲ್ಲಿ ಕ್ಯಾಟೆಚಿನ್, ಎಪಿಕ್ಯಾಟೆಚಿನ್, ಎಪಿಕ್ಯಾಟೆಚಿನ್ ಗಲೆಟ್, ಎಪಿಗಲ್ಲೊಕ್ಯಾಟೆಚಿನ್ ಗಲೆಟ್ ಮತ್ತು ವಿವಿಧ ಪ್ರೊನ್ಟೋಸಯಾನಿಡಿನ್ ಗಳು ಇವೆ. ಗ್ರೀನ್ ಟೀಯು ತೂಕ ಕಳೆದುಕೊಳ್ಳಲು ತುಂಬಾ ಸಹಕಾರಿ. ಇದು ಹೇಗೆ ಎಂದು ಮುಂದಕ್ಕೆ ಓದುತ್ತಾ ತಿಳಿಯಿರಿ.

ಗಯೋಕೊರೊಚಾ

ಗಯೋಕೊರೊಚಾ

ಈ ರೀತಿಯ ಚಹಾ ಸೇವನೆ ಮಾಡಿದಾಗ ಇದು ಸಂಪೂರ್ಣವಾಗಿ ಹಸಿರಾಗಿರುವುದು. ಚಹಾಕ್ಕಾಗಿ ತುದಿಯ ಎಲೆಗಳನ್ನು ತೆಗೆಯಲಾಗುತ್ತದೆ ಮತ್ತು ಇದು ಒಳ್ಳೆಯ ರುಚಿ ಹಾಗೂ ಸುವಾಸನೆ ನೀಡುವುದು. ಇದು ಆರೋಗ್ಯಕ್ಕೂ ಒಳ್ಳೆಯದು. ಇದು ಕಡಿಮೆ ಕಹಿ ಹೊಂದಿರುವುದು.ಗಿಡದ ತುದಿಯ ಎಲೆಗಳಿಂದ ಮಾಡಿರುವ ಕಾರಣದಿಂದಾಗಿ ಇದರಲ್ಲಿ ಟ್ಯಾನಿನ್ ಮತ್ತು ಕೆಫಿನ್ ಕಡಿಮೆ ಇರುವುದು.

ಸೆಂಚಾ

ಸೆಂಚಾ

ಸೆಂಚಾ ಮತ್ತೊಂದು ರೀತಿಯ ಗ್ರೀನ್ ಟೀಯ ವಿಧ. ಇದು ಶುದ್ಧ, ತಿಳಿಹಸಿರು ಬಣ್ಣ ಹೊಂದಿರುವುದು. ಇದರಲ್ಲಿ ಕೆಫಿನ್ ಮತ್ತು ಟ್ಯಾನ್ನಿನ್ ಹೆಚ್ಚಿದೆ. ಇದು ತುಂಬಾ ಅಗ್ಗ ಮತ್ತು ಗಯೋಕೊರೊಚಾಕ್ಕಿಂತ ಜನಪ್ರಿಯವಾಗಿದೆ.

ಬಾಂಚ

ಬಾಂಚ

ಇದು ಚಿಗುರೆಳೆಗಳಿಂದ ಮಾಡಿರುವ ಕಾರಣದಿಂದಾಗಿ ಇದು ತುಂಬಾ ಕಹಿ ಮತ್ತು ಪ್ರಬಲವಾಗಿರುವುದು. ಬಾಂಚ ಚಾ ತಯಾರಿಸಿದಾಗ ಇದು ಬಂಗಾರದ ಕಂದು ಬಣ್ಣ ನೀಡುವುದು. ಇದು ಗ್ರೀನ್ ಟೀಯಲ್ಲಿ ತುಂಬಾ ಅಗ್ಗದ್ದಾಗಿದೆ.

ಮಾಟ್ಚಾ

ಮಾಟ್ಚಾ

ಗ್ರೀನ್ ಟೀಯ ಅಳಿದುಳಿದು ಪುಡಿಯನ್ನು ಮಾಟ್ಚಾ ಎಂದು ಕರೆಯಲಾಗುತ್ತದೆ. ಇದು ತುಂಬಾ ಕಡು ನೀಲಿ ಬಣ್ಣ ಹೊಂದಿರುವುದು ಮತ್ತು ಹೆಚ್ಚು ನೊರೆ ಉಂಟು ಮಾಡುವುದು. ಆದರೆ ಸುವಾಸನೆಯು ಇತರ ಚಹಾಗಿಂತ ಕಡಿಮೆ ಇರುವುದು. ಮಾಟ್ಚಾ ತುಂಬಾ ಸಾಮಾನ್ಯ ಮತ್ತು ಸಾಂಪ್ರದಾಯಿಕ ಕಾರ್ಯಕ್ರಮಗಳಲ್ಲಿ ಬಳಸುವ ಚಹಾವಾಗಿದೆ. ಇತರ ಚಹಾಗಳಿಗಿಂತ ಇದು ಕಡಿಮೆ ಕಹಿ ಹೊಂದಿರುವುದು.

ಹೌಜಿಚಾ

ಹೌಜಿಚಾ

ಹೌಜಿಚಾ ಎನ್ನುವುದು ಶುದ್ಧ ಗ್ರೀನ್ ಟೀ ಅಲ್ಲ. ಇದು ಗ್ರೀನ್ ಟೀ ಮತ್ತು ಬಾರ್ಲಿ, ಅಕ್ಕಿ ಮತ್ತು ಗೋಧಿಯ ಸೀರೆಲ್ ಗಳ ಹುರಿದ ಹುಡಿಯ ಮಿಶ್ರಣವನ್ನು ಹಾಕಿರುವರು. ಇದು ಬಂಗಾರದ ಕಂದು ಬಣ್ಣ ನೀಡುವುದು ಮತ್ತು ಇದು ಅಗ್ಗ ಕೂಡ.

ಜೆನ್ಮೈಚಾ

ಜೆನ್ಮೈಚಾ

ಇದು ಕೂಡ ಶುದ್ಧ ಗ್ರೀನ್ ಟೀ ಅಲ್ಲ. ಇದು ಗ್ರೀನ್ ಟೀ ಮತ್ತು ಕಂದು ಅಕ್ಕಿಯ ಹುಡಿಯ ಮಿಶ್ರಣ. ಇದು ಬಂಗಾರದ ಹಳದಿ ಬಣ್ಣ ನೀಡುವುದು ಮತ್ತು ತುಂಬಾ ಒಳ್ಳೆಯ ರುಚಿ ನೀಡುವುದು. ಹುರಿದ ಕಂದು ಅಕ್ಕಿಯ ಹುಡಿಯಿಂದಾಗಿ ಸುವಾಸನೆ ಉತ್ತಮವಾಗಿರುವುದು.

ಗ್ರೀನ್ ಟೀಯಿಂದ ಆರೋಗ್ಯಕ್ಕೆ ಆಗುವಂತಹ ಲಾಭಗಳು

ಗ್ರೀನ್ ಟೀಯಿಂದ ಆರೋಗ್ಯಕ್ಕೆ ಆಗುವಂತಹ ಲಾಭಗಳು

*ವಯಸ್ಸಾಗುವ ಪ್ರಕ್ರಿಯೆ ವಿಳಂಬಗೊಳಿಸುವುದು

ಗ್ರೀನ್ ಟೀಯಲ್ಲಿರುವ ಆ್ಯಂಟಿಆಕ್ಸಿಡೆಂಟ್ ಗಳು ದೇಹದಲ್ಲಿ ಆಕ್ಸಿಡೆಂಟ್ ಅಥವಾ ಫ್ರೀ ರ್ಯಾಡಿಕಲ್ ನ್ನು ತಟಸ್ಥಗೊಳಿಸುವುದು. ಕ್ಯಾಟೆಚಿನ್ ಪಾಲಿಫಿನಾಲ್ ಗಳು ಆ್ಯಂಟಿ ಆಕ್ಸಿಡೈಜ್ ಪ್ರಕ್ರಿಯೆಗೆ ಪ್ರಮುಖ ಕಾರಣವಾಗಿದೆ. ಗ್ರೀನ್ ಟೀ ನಿಯಮಿತವಾಗಿ ಸೇವನೆ ಮಾಡುವುದರಿಂದ ವಯಸ್ಸಾಗುವ ಲಕ್ಷಣಗಳು ಮತ್ತು ಚಿಹ್ನೆಗಳು ದೂರವಾಗುವುದು.

*ಪ್ರತಿರೋಧಕ ಶಕ್ತಿ ವರ್ಧನೆ

ಗ್ರೀನ್ ಟೀ ನಿಯಮಿತವಾಗಿ ಸೇವನೆ ಮಾಡುವಂತಹ ಜನರು ಬ್ಯಾಕ್ಟೀರಿಯಾ ಅಥವಾ ವೈರಲ್ ಸೋಂಕಿಗೆ ಒಳಗಾಗುವುದಿಲ್ಲವೆಂದು ಅಧ್ಯಯನಗಳು ಹೇಳಿವೆ. ಗ್ರೀನ್ ಟೀಯಲ್ಲಿ ಇರುವಂತಹ ಕ್ಯಾಟಚಿನ್ ಕೋಶದ ಪದರಗಳಿಗೆ ಬ್ಯಾಕ್ಟೀರಿಯಾ ಮತ್ತು ವೈರಸ್ ಗಳು ಅಂಟಿಕೊಂಡು ಬೆಳೆಯದಂತೆ ಮಾಡುವುದು. ಕ್ಯಾಟಚಿನ್ ನಲ್ಲಿ ಸೂಕ್ಷ್ಮಾಣು ವಿರೋಧಿ ಗುಣಗಳು ಇವೆ ಮತ್ತು ಇದು ಬಾಯಿಯ ದುರ್ಗಂಧ, ಭೇದಿ, ಜ್ವರ, ಕಫ, ಚಳಿ, ಹಲ್ಲು ಕೆಡುವುದನ್ನು ತಡೆಯುವುದು.

*ತೂಕ ಕಳೆದುಕೊಳ್ಳಲು ಸಹಕಾರಿ

ಚಯಾಪಚಾಯ ಕ್ರಿಯೆಯನ್ನು ಹೆಚ್ಚಿಸುವ ಮೂಲಕ ಗ್ರೀನ್ ಟೀಯು ತೂಕ ಕಳೆದುಕೊಳ್ಳಲು ನೆರವಾಗುವುದು. ಒಂದು ಕಪ್ ಅಥವಾ ಎರಡು ಕಪ್ ಗ್ರೀನ್ ಟೀ ಸೇವನೆ ಮಾಡಿದರೆ ಅದರಿಂದ ವಾರದಲ್ಲಿ ತೂಕ ಕಡಿಮೆ ಮಾಡಬಹುದು.

*ಕ್ಯಾನ್ಸರ್ ತಡೆಯುವುದು

ಗ್ರೀನ್ ಟೀಯಲ್ಲಿ ಇರುವಂತಹ ಕ್ಯಾಟಚಿನ್ ಫ್ರೀ ರ್ಯಾಡಿಕಲ್ ನ್ನು ತಟಸ್ಥಗೊಳಿಸುವುದು ಮತ್ತು ನೈಟ್ರೋಸಮೈನ್ ಗಳಂತಹ ಕಾರ್ಸಿನೋಜೆನ್ ಗಳನ್ನು ತಡೆಯುವುದು. ನಿಯಮಿತವಾಗಿ ಗ್ರೀನ್ ಟೀ ಕುಡಿದರೆ ಕ್ಯಾನ್ಸರ್ ಬರುವಂತಹ ಸಾಧ್ಯತೆ ಕಡಿಮೆ ಇರುವುದು. ಮೇಧೋಜೀರಕ ಗ್ರಂಥಿ, ಕರುಳು, ಗುದನಾಳ ಮತ್ತು ಕರುಳಿನ ಕ್ಯಾನ್ಸರ್ ಬರದಂತೆ ತಡೆಯುವುದು.

*ಮಧುಮೇಹ ನಿಯಂತ್ರಣ

ಗ್ರೀನ್ ಟೀ ಗೆ ಸಕ್ಕರೆ ಹಾಕದೆ ಸೇವನೆ ಮಾಡಿದರೆ ಅದರಿಂದ ಮಧುಮೇಹ ತಡೆಯಬಹುದು. ಇದರಲ್ಲಿರುವಂತಹ ಸಂಕೋಚನ ಗುಣ ಮತ್ತು ಆ್ಯಂಟಿಆಕ್ಸಿಡೆಂಟ್ ಒಳ್ಳೆಯ ಆರೋಗ್ಯ ಮತ್ತು ಮೇಧೋಜೀರಕ ಗ್ರಂಥಿಗಳು ಸರಿಯಾಗಿ ಕಾರ್ಯನಿರ್ವಹಿಸಲು ನೆರವಾಗುವುದು. ಇದರಿಂದ ಮಧುಮೇಹ ನಿಯಂತ್ರಣದಲ್ಲಿರುವುದು.

ಬುದ್ಧಿಮತ್ತೆಯನ್ನು ಹೆಚ್ಚಿಸುತ್ತದೆ

ಬುದ್ಧಿಮತ್ತೆಯನ್ನು ಹೆಚ್ಚಿಸುತ್ತದೆ

ಬುದ್ಧಿಮತ್ತೆಗೆ ಚುರುಕು ಮುಟ್ಟಿಸಲು ಕೊಂಚವೇ ಪ್ರಮಾಣದ ಕೆಫೇನ್ ಬೇಕು. ಹಸಿರು ಟೀಯಲ್ಲಿ ಇದು ಅತ್ಯಂತ ಸಮರ್ಪಕ ಪ್ರಮಾಣದಲ್ಲಿರುವ ಕಾರಣ ಮೆದುಳಿನ ಕ್ಷಮತೆ ಹೆಚ್ಚಿಸಲು ಇದು ಹೊರಡಿರುವ ನ್ಯೂರಾನ್ ಗಳೆಂಬ ನರವ್ಯವಸ್ಥೆಯ ಕಣಗಳು ನೆರವಾಗುತ್ತವೆ. ಆದರೆ ಕಾಫಿಯಲ್ಲಿರುವ ಕೆಫೀನ್ ಆಗಾಧ ಪ್ರಮಾಣದಲ್ಲಿದ್ದು ಅಗತ್ಯಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಪ್ರವಾಹದಂತೆ ಹರಿದು ಬರುವುದರಿಂದ ಒಳ್ಳೆಯದಕ್ಕಿಂತ ಕೆಡಕು ಮಾಡುವುದೇ ಹೆಚ್ಚು.

ಕೊಬ್ಬು ಕರಗಿಸಲು ನೆರವಾಗುತ್ತದೆ

ಹಸಿರು ಟೀ ನಮ್ಮ ಪಚನಕ್ರಿಯೆ ಮತ್ತು ಜೀವರಾಸಾಯನಿಕ ಕ್ರಿಯೆಯನ್ನು ಸರಿಸುಮಾರು ಶೇಖಡಾ ನಾಲ್ಕರಷ್ಟು ಹೆಚ್ಚಿಸುತ್ತದೆ. ಈ ಹೆಚ್ಚುವರಿ ಕೆಲಸವನ್ನು ಪೂರೈಸಲು ದೇಹದಲ್ಲಿ ಶೇಖರವಾಗಿದ್ದ ಕೊಬ್ಬನ್ನು ಬಳಸಬೇಕಾಗಿ ಬರುತ್ತದೆ. ನಿತ್ಯದ ಹಸಿರು ಟೀ ಸೇವನೆಯಿಂದ ನಿಧಾನವಾಗಿಯಾದರೂ ಆರೋಗ್ಯಕರವಾಗಿ ಕೊಬ್ಬು ಕರಗುತ್ತದೆ.

ಕ್ಯಾನ್ಸರ್ ಬರದಂತೆ ತಡೆಯುತ್ತದೆ

ನಮ್ಮ ದೇಹದ ಎಲ್ಲಾ ಅಂಗಗಳ ಬೆಳವಣಿಗೆಗೆ ಒಂದು ಮಿತಿಯಿದೆ. ಆದರೆ ಕೆಲವು ಕೋಶಗಳು ಅನಿಯಂತ್ರಿತವಾಗಿ ಬೆಳವಣಿಗೆಯಾಗುವ ಮೂಲಕ ಕ್ಯಾನ್ಸರ್ ರೋಗವನ್ನು ಹುಟ್ಟುಹಾಕುತ್ತವೆ. ಈ ಬೆಳವಣಿಗೆಗೆ ಫ್ರೀ ರ್‍ಯಾಡಿಕಲ್ ಎಂಬ ಕಣಗಳು ಕಾರಣವೆಂದು ಇತ್ತೀಚೆಗೆ ತಿಳಿದುಬಂದಿದೆ. ಹಸಿರು ಟೀ ಯಲ್ಲಿರುವ ವಿವಿಧ ಆಂಟಿ ಆಕ್ಸಿಡೆಂಟುಗಳು ಈ ಕಣಗಳನ್ನು ಹಿಮ್ಮೆಟ್ಟಿಸಿ ಕ್ಯಾನ್ಸ್ರರ್ ತಗಲುವ ಸಂಭವವನ್ನು ಕಡಿಮೆಗೊಳಿಸುತ್ತವೆ.ವಿಶೇಷವಾಗಿ ಸ್ತನಕ್ಯಾನ್ಸರ್, ಕರುಳು ಕ್ಯಾನ್ಸರ್ ಮತ್ತು ಪ್ರಾಸ್ಟ್ರೇಟ್ ಗ್ರಂಥಿಯ ಕ್ಯಾನ್ಸರ್ ಬರದಂತೆ ಸಮರ್ಥವಾಗಿ ತಡೆಯುತ್ತದೆ ಎಂದು ತಿಳಿದುಬಂದಿದೆ.

ಕೆಟ್ಟ ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತದೆ

ನಮ್ಮ ದೇಹದಲ್ಲಿ ಯಾವುದೋ ಮಾಯೆಯಿಂದ ಒಳಪ್ರವೇಶಿಸಿ ವಿಶೇಷವಾಗಿ ಹಲ್ಲು ಮತ್ತು ಗಂಟಲಿನೊಳಗೆ ಮನೆ ಮಾಡಿಕೊಂಡು ಹಬ್ಬ ಆಚರಿಸುತ್ತಿರುವ ವಿವಿಧ ಕೆಟ್ಟ ಬ್ಯಾಕ್ಟೀರಿಯಾಗಳನ್ನು ಕೊಲ್ಲುವಲ್ಲಿಯೂ ಹಸಿರು ಟೀ ಮಹತ್ವದ ಪಾತ್ರ ವಹಿಸುತ್ತದೆ.

ಮಧುಮೇಹ ಬರುವ ಸಾಧ್ಯತೆಯನ್ನು ದೂರವಾಗಿಸುತ್ತದೆ

ಮಧುಮೇಹಕ್ಕೆ ಅನುವಂಶೀಯ ಕಾರಣಗಳಿದ್ದು ಯಾವುದೇ ವಯಸ್ಸಿನಲ್ಲಿ ಬರಬಹುದು. ಅದರಲ್ಲೂ ಟೈಪ್-2 ವಿಧದ ಮಧುಮೇಹ ಚಿಕ್ಕವಯಸ್ಸಿನಲ್ಲಿಯೇ ಆವರಿಸುತ್ತದೆ. ನಿಯಮಿತ ಹಸಿರು ಟೀ ಸೇವನೆಯಿಂದ ಮಧುಮೇಹ ಆವರಿಸುವ ವಯಸ್ಸನ್ನು ಸಮರ್ಥವಾಗಿ ಮುಂದೂಡಬಹುದು. ಅಲ್ಲದೇ ಹಸಿರು ಟೀ ಸೇವನೆಯಿಂದ ಮಧುಮೇಹಿಗಳಲ್ಲಿಯೂ ಅಲ್ಪ ಪ್ರಮಾಣದಲ್ಲಿ ರಕ್ತದಲ್ಲಿರುವ ಗ್ಲೂಕೋಸ್ ಪ್ರಮಾಣ ಕಡಿಮೆಯಾಗಿರುವುದು ಕೆಲವು ಪ್ರಯೋಗಗಳಿಂದ ದೃಢಪಟ್ಟಿದೆ. ಆದರೆ ಇದು ಎಷ್ಟರ ಮಟ್ಟಿಗೆ ಮಧುಮೇಹಿಗಳಿಗೆ ಪ್ರಯೋಜನಕಾರಿ ಎಂಬುದನ್ನು ಮಾತ್ರ ಇನ್ನಷ್ಟೇ ಅರಿಯಬೇಕಿದೆ.

ತಲೆನೋವನ್ನು ನಿವಾರಿಸಲು

ತಲೆನೋವನ್ನು ನಿವಾರಿಸಲು

ಹಸಿರು ಚಹಾ ಹಸಿರು ಚಹಾ (ಗ್ರೀನ್ ಟೀ) ಯಲ್ಲಿ ಒಂದು ನಿರ್ಧಾರಿತ ಪ್ರಮಾಣದ ಕೆಫೀನ್ ಇದ್ದು ಇದು ಎಲ್ಲಾ ತರಹದ ತಲೆನೋವುಗಳನ್ನು ನಿವಾರಿಸಲು ಅತ್ಯಂತ ಸೂಕ್ತವಾದ ಪ್ರಮಾಣವಾಗಿದೆ.ಹಸಿರು ಟೀಯಲ್ಲಿ ಹಾಲಿಲ್ಲದೇ ಕೊಂಚವೇ ಸಕ್ಕರೆ ಸೇರಿಸಿ ಕುಡಿಯಬಹುದು ಅಥವಾ ಕೊಂಚ ಲಿಂಬೆರಸ ಸೇರಿಸುವುದರಿಂದ ರುಚಿ ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಕ್ಷಮತೆಯೂ ಹೆಚ್ಚುತ್ತದೆ.

ನಿಮ್ಮ ಸೌಂದರ್ಯ ವರ್ಧಿಸಲು

ನಿಮ್ಮ ಸೌಂದರ್ಯ ವರ್ಧಿಸಲು

ಬಿಸಿನೀರಿನಲ್ಲಿ ಎರಡು ಅಥವಾ ಮೂರು ಹಸಿರು ಚಹಾ ಇರುವ ಚೀಲಗಳನ್ನು ಕೊಂಚಕಾಲ ಮುಳುಗಿಸಿ. ಬಳಿಕ ಈ ಚೀಲಗಳನ್ನು ಕತ್ತರಿಸಿ ಒಳಗಿನ ಟೀಪುಡಿಯನ್ನು ಒಂದು ಬೋಗುಣಿಯಲ್ಲಿ ಹಾಕಿ ಒಂದು ಚಿಕ್ಕ ಚಮಚ ಜೇನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಇನ್ನು ಈ ಲೇಪವನ್ನು ಮುಖ ಮತ್ತು ಗಂಟಲಿಗೆ ಹಚ್ಚಿ ಸುಮಾರು ಹದಿನೈದು ನಿಮಿಷಗಳವರೆಗೆ ನಯವಾಗಿ ಮಸಾಜ್ ಮಾಡಿ. ಬಳಿಕ ಉಗುರುಬೆಚ್ಚನಿಯ ನೀರಿನಿಂದ ತೊಳೆದುಕೊಳ್ಳಿ. ನಂತರ ಸೋಪು ಉಪಯೋಗಿಸಬೇಡಿ. ಇದರಿಂದ ಮುಖದ ಚರ್ಮ ಕಾಂತಿಯುತವಾಗಿ ಮತ್ತು ತಾಜಾತನದಿಂದ ಕೂಡಿರುತ್ತದೆ.

ದೇಹದ ಕೊಬ್ಬನ್ನು ಕರಗಿಸಲು

ದೇಹದ ಕೊಬ್ಬನ್ನು ಕರಗಿಸಲು

ದೇಹದ ಕೊಬ್ಬನ್ನು ಕರಗಿಸಲು ದೇಹದ ಕೊಬ್ಬನ್ನು ಕರಗಿಸಲು ನಿಮ್ಮ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಣದಲ್ಲಿರಿಸುತ್ತಾ ದೇಹದಲ್ಲಿನ ಕಾರ್ಬೋಹೈಡ್ರೇಟ್ ಅನ್ನು ನಿಧಾನವಾಗಿ ಇದು ಹೊರಬಿಡುತ್ತದೆ. ನಿಮ್ಮ ದೇಹದ ಕೊಬ್ಬನ್ನು ಇದು ಸುಲಭವಾಗಿ ಕರಗಿಸುತ್ತದೆ. ಒಂದು ಕಪ್‌ನಷ್ಟು ನೀರಿಗೆ ಎರಡು ಹಸಿರು ಚಹಾ ಬ್ಯಾಗ್ ಸಾಕು. ಇದು ನಿಮ್ಮ ತೂಕವನ್ನು ಕರಗಿಸುತ್ತದೆ.

ಹೊಟ್ಟೆ ನೋವಿನ ಶಮನಕ್ಕಾಗಿ

ಹೊಟ್ಟೆ ನೋವಿನ ಶಮನಕ್ಕಾಗಿ

ಹೊಟ್ಟೆ ನೋವಿನ ಶಮನಕ್ಕಾಗಿ ಹೊಟ್ಟೆ ನೋವಿಗಾಗಿ ಹಾಲಿನ ಚಹಾದ ಬದಲಿಗೆ ಗ್ರೀನ್ ಟೀಯನ್ನು ಸೇವಿಸುವುದು ಹೊಟ್ಟೆ ನೋವನ್ನು ಹೋಗಲಾಡಿಸುತ್ತದೆ. ಅಷ್ಟೇ ಅಲ್ಲದೆ ಗ್ರೀನ್ ಟೀಯೊಂದಿಗೆ ಸಣ್ಣ ತುಂಡು ಶುಂಠಿಯನ್ನು ಬೆರೆಸಿ ಸೇವಿಸುವುದು ಆರೋಗ್ಯಕ್ಕೆ ಉತ್ತಮ.

ಹಸಿವನ್ನು ನಿಯಂತ್ರಿಸುತ್ತದೆ

ಹಸಿವನ್ನು ನಿಯಂತ್ರಿಸುತ್ತದೆ

ನಿಮ್ಮ ಹಸಿವಿನ ತುಡಿತವನ್ನು ಆದಷ್ಟು ಕಡಿಮೆ ಮಾಡಬೇಕೆಂಬ ಬಯಕೆ ನಿಮ್ಮದಾಗಿದ್ದಲ್ಲಿ ದಿನಪೂರ್ತಿ ಇದನ್ನು ಹೆಚ್ಚು ಸೇವಿಸಿ. ಊಟದ ಮುಂಚೆ ಒಂದು ಕಪ್‌ನಷ್ಟು ಹಸಿರು ಚಹಾವನ್ನು ನೀವು ಸೇವಿಸಿದಲ್ಲಿ ಹೆಚ್ಚು ಊಟ ಮಾಡಬೇಕೆನ್ನುವ ನಿಮ್ಮ ತುಡಿತ ನಿಯಂತ್ರಣದಲ್ಲಿರುತ್ತದೆ. ಊಟದ ನಂತರ ಕೂಡ ಒಂದು ಕಪ್‌ನಷ್ಟು ಹಸಿರು ಚಹಾವನ್ನು ಸೇವಿಸಿ ಇದು ನಿಮ್ಮ ಕ್ಯಾಲೋರಿಯನ್ನು ಕರಗಿಸುತ್ತದೆ.

ಚರ್ಮದ ಕಾಂತಿ ಹೆಚ್ಚಿಸಲು

ಚರ್ಮದ ಕಾಂತಿ ಹೆಚ್ಚಿಸಲು

ಒಂದು ಚಿಕ್ಕಚಮಚ ಮೊಸರಿಗೆ ಒಂದು ಚಿಕ್ಕಚಮಚ ಲಿಂಬೆಹಣ್ಣಿನ ರಸ ಸೇರಿಸಿ. (ಈಗ ತಾನೇ ಹಿಂಡಿದ ಲಿಂಬೆರಸ). ಇದಕ್ಕೆ ಒಂದರಿಂದ ಎರಡು ಚಿಕ್ಕ ಚಮಚ ಹಸಿರು ಟೀ ಕುದಿಸಿ ಸೋಸಿದ ನೀರನ್ನು ಬೆರೆಸಿ. ಈ ಲೇಪನವನ್ನು ಮುಖದ ಮೇಲೆ ನಯವಾಗಿ ಒಮ್ಮುಖವಾಗಿ ಹಚ್ಚಿರಿ. ಸುಮಾರು ಹದಿನೈದು ನಿಮಿಷ ಒಣಗಲು ಬಿಡಿ. ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಸೋಪು ಉಪಯೋಗಿಸಬೇಡಿ.

ಹಾಲು ಮತ್ತು ಸಕ್ಕರೆ ಸೇರಿಸಬೇಡಿ

ಗ್ರೀನ್ ಟೀಯಲ್ಲಿರುವ ಆ್ಯಂಟಿ ಆಕ್ಸಿಡೆಂಟ್ ಮತ್ತು ಥೇನೈನ್ ಆರೋಗ್ಯಕ್ಕೆ ಒಳ್ಳೆಯದು. ಆದರೆ ಹಾಲಿನ ಪ್ರೋಟೀನ್ ಮತ್ತು ಸಕ್ಕರೆಯಲ್ಲಿನ ಕ್ಯಾಲರಿ ಗ್ರೀನ್ ಟೀಯಲ್ಲಿ ಸೇರಿದಾಗ ಅದು ದೇಹದ ಮೇಲೆ ನಕಾರಾತ್ಮಕ ಪರಿಣಾಮ ಉಂಟು ಮಾಡುತ್ತದೆ. ಇದರಿಂದ ದೇಹಕ್ಕೆ ಆರೋಗ್ಯ ಲಾಭಗಳು ಸಿಗುವುದಿಲ್ಲ.

ಜೇನುತುಪ್ಪ ಹಾಕಿ ಗ್ರೀನ್ ಟೀ ಕುಡಿಯಿರಿ

ಗ್ರೀನ್ ಟೀಯಲ್ಲಿರುವ ಕೆಫಿನ್ ಮತ್ತು ಜೇನಿನಲ್ಲಿರುವ ವಿಟಮಿನ್ ನರಗಳನ್ನು ಪುರ್ನಯೌವನಗೊಳಿಸಿ ಕೊಬ್ಬನ್ನು ಕರಗಿಸಲು ನೆರವಾಗುತ್ತದೆ. ಜೇನು ಕ್ಯಾಲರಿ ಕಡಿಮೆ ಮಾಡಲು ಮತ್ತು ಗ್ರೀನ್ ಟೀ ಚಯಾಪಚಾಯ ಕ್ರಿಯೆ ಸುಧಾರಿಸಲು ನೆರವಾಗುವುದು.

ಊಟವಾದ ಕೂಡಲೇ ಗ್ರೀನ್ ಟೀ ಸೇವನೆ ಮಾಡಬೇಡಿ

ಊಟವಾದ ತಕ್ಷಣ ಗ್ರೀನ್ ಟೀ ಸೇವನೆ ಮಾಡಬಾರದು. ಗ್ರೀನ್ ಟೀಯಲ್ಲಿನ ಕೆಫೀನ್ ಜೀರ್ಣಕ್ರಿಯೆಗೆ ತೊಂದರೆ ಉಂಟುಮಾಡುವುದು ಮತ್ತು ಪೋಷಕಾಂಶಗಳನ್ನು ಹೀರಿಕೊಳ್ಳಲು ದೇಹಕ್ಕೆ ಕಷ್ಟವಾಗುವುದು.

ದಿನದಲ್ಲಿ 2-3 ಕಪ್

ಆರೋಗ್ಯಕದ ಲಾಭವನ್ನು ಪಡೆಯಬೇಕೆಂದರೆ ದಿನದಲ್ಲಿ 2-3 ಕಪ್ ಗ್ರೀನ್ ಟೀ ಕುಡಿಯಲೇಬೇಕು. ಗ್ರೀನ್ ಟೀ ಆ್ಯಂಟಿಆಕ್ಸಿಡೆಂಟ್ ಮತ್ತು ಫ್ಲಾವೋನಾಯಿಡ್ ನಿಂದ ಸಮೃದ್ಧವಾಗಿದೆ. ಇದನ್ನು ಅತಿಯಾಗಿ ಸೇವನೆ ಮಾಡುವುದು ಒಳ್ಳೆಯದಲ್ಲ. ಇದರಿಂದ ವಿಷತ್ವ ಸಂಗ್ರಹವಾಗಿ ಯಕೃತ್ ಮೇಲೆ ದುಷ್ಪರಿಣಾಮ ಬೀರಬಹುದು.

Read more about: health benefits
English summary

did-you-know-that-green-tea-is-best-for-weight-loss

You must have read countless articles about how green tea helps in weight loss. Do you know which green tea is best for weight loss? That's the reason we are writing this article. Green tea is a great beverage to include in your diet for the prevention and treatment of cancer, cardiovascular diseases, heart problems, rheumatoid arthritis, infection, tooth decay, and high cholesterol levels.
Story first published: Saturday, June 9, 2018, 15:31 [IST]
X
Desktop Bottom Promotion