For Quick Alerts
ALLOW NOTIFICATIONS  
For Daily Alerts

ಅತಿಯಾದ ಒತ್ತಡದಲ್ಲಿ ಇದ್ದೀರಾ? ಹಾಗಾದರೆ ಅಸಿಡಿಟಿ ಖಚಿತ

By Hemanth
|

ಹುಟ್ಟು ಮತ್ತು ಸಾವಿನ ನಡುವಿನ ಜೀವನದಲ್ಲಿ ಪ್ರಕೃತಿ ಮೇಲಿರುವ ಪ್ರತಿಯೊಂದು ಜೀವವು ಹಲವಾರು ರೀತಿಯ ಸಮಸ್ಯೆ ಎದುರಿಸಲೇಬೇಕಾಗುತ್ತದೆ. ಅನಾರೋಗ್ಯದಿಂದ ಹಿಡಿದು ಆರ್ಥಿಕ ಸಂಕಷ್ಟ ಸಹಿತ ಪ್ರತಿಯೊಂದು ಮನುಷ್ಯನನ್ನು ಕಾಡುವುದು. ಅದರಲ್ಲೂ ಅನಾರೋಗ್ಯ ದೇಹವನ್ನು ಕಾಡಲು ಆರಂಭಿಸಿದರೆ ಅದರಿಂದ ಮುಕ್ತಿ ಪಡೆಯುವುದು ಕೆಲವು ಸಂದರ್ಭಗಳಲ್ಲಿ ತುಂಬಾ ಕಷ್ಟವಾಗುವುದು. ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ' ಎನ್ನುವ ಗಾದೆಯಿದೆ. ಇದು ಅಕ್ಷರಶಃ ನಿಜ.

ನಮ್ಮ ದೇಹವು ಕಾರ್ಯನಿರ್ವಹಿಸಲು ಪ್ರಮುಖವಾಗಿ ಬೇಕಾಗಿರುವುದು ಆಹಾರ. ಇದು ಸರಿಯಾಗಿ ದೇಹಕ್ಕೆ ಸಿಗದೆ ಇದ್ದರೆ ಆಗ ಒಂದೋದೇ ರೋಗಗಳು ಬರುವುದು. ಅದರಲ್ಲೂ ಹೊಟ್ಟೆಗೆ ಸಂಬಂಧಿಸಿದ ಹಲವಾರು ರೋಗಗಳನ್ನು ನಾವು ಕೇವಲ ಅಸಿಡಿಟಿ ಎಂದು ಕಡೆಗಣಿಸಿ ಬಿಡುತ್ತೇವೆ. ಆದರೆ ಇದು ತುಂಬಾ ಅಪಾಯಕಾರಿ.

Acidity

ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಕಾಣಿಸಿಕೊಂಡರೆ ತಕ್ಷಣ ಎಚ್ಚೆತ್ತುಕೊಂಡು ಅದಕ್ಕೆ ಚಿಕಿತ್ಸೆ ಪಡೆಯಬೇಕು. ವಿಳಂಬವಾದರೆ ರೋಗ ಶಮನ ಮಾಡುವುದು ಕಷ್ಟವಾಗಬಹುದು. ವೈದ್ಯಕೀಯ ಕ್ಷೇತ್ರವು ಹೆಚ್ಚು ಮುಂದುವರಿದಿರುವ ಕಾರಣ ದೇಹಕ್ಕೆ ಭಾದಿಸುವ ಹೆಚ್ಚಿನ ರೋಗಗಳು ನಿವಾರಣೆಯಾಗುವುದು.

ಅಸಿಡಿಟಿ ಸಮಸ್ಯೆಯ ಹೆಡೆಮುರಿ ಕಟ್ಟಿಹಾಕುವ ಮನೆಮದ್ದು

ಆದರೆ ಕೆಲವು ಮಾತ್ರ ಸಂಪೂರ್ಣವಾಗಿ ಗುಣಮುಖವಾಗದೆ ಜೀವಮಾನವಿಡಿ ಔಷಧಿ ಮೇಲೆ ಅವಲಂಬಿತವಾಗಿರಬೇಕಾದ ಪರಿಸ್ಥಿತಿ ನಿರ್ಮಾಣವಾಗಬಹುದು. ಜೀರ್ಣಕ್ರಿಯೆಯು ಸರಾಗವಾಗಿದ್ದರೆ ದೇಹಕ್ಕೂ ಯಾವುದೇ ಸಮಸ್ಯೆಯಾಗದು. ಆದರೆ ಇಂದಿನ ದಿನಗಳಲ್ಲಿ ಹೆಚ್ಚಿನವರನ್ನು ಕಾಡುವ ಸಮಸ್ಯೆಯೆಂದರೆ ಆಸಿಡಿಟಿ. ಜೀರ್ಣಕ್ರಿಯೆಯ ವೇಳೆ ಅತಿಯಾಗಿ ಜೀರ್ಣಕ್ರಿಯೆ ಆಮ್ಲ ಹೀರಿಕೊಳ್ಳುವುದೇ ಅಸಿಡಿಟಿ. ಗ್ಯಾಸ್, ಅಜೀರ್ಣ, ಎದೆಯುರಿ, ಹೊಟ್ಟೆನೋವು, ವಾಕರಿಕೆ, ಮಲಬದ್ಧತೆ ಇತ್ಯಾದಿಗಳು ಅಸಿಡಿಟಿಯ ಲಕ್ಷಣಗಳಾಗಿವೆ. ಅಸಿಡಿಟಿಗೆ ಮುಖ್ಯ ಕಾರಣ ಆಹಾರ ಕ್ರಮ. ಆದರೆ ಇತ್ತೀಚಿನ ವರದಿಯೊಂದರ ಪ್ರಕಾರ ಒತ್ತಡದಿಂದಲೂ ಅಸಿಡಿಟಿ ಉಂಟಾಗುವುದು. ಅಸಿಡಿಟಿಗೆ ಕಾರಣವಾಗುವ ಅಂಶಗಳ ಬಗ್ಗೆ ಬೋಲ್ಡ್ ಸ್ಕೈ ನಿಮಗೆ ತಿಳಿಸಲಿದೆ.

Stress

ಒತ್ತಡದಿಂದ ಅಸಿಡಿಟಿ ಹೇಗೆ ಉಂಟಾಗುವುದು

ಪ್ರತಿನಿತ್ಯ ಯಾವುದಾದರೊಂದು ರೀತಿಯ ಒತ್ತಡವು ನಮ್ಮನ್ನು ಕಾಡುವುದು. ಒತ್ತಡದ ಕೆಲಸ, ಕಠಿಣ ಪಾಠ, ಆರ್ಥಿಕ ಸಮಸ್ಯೆ, ಸಂಬಂಧದಲ್ಲಿ ಸಮಸ್ಯೆ ಇತ್ಯಾದಿಗಳು ಒತ್ತಡ ಉಂಟು ಮಾಡುವುದು. ಕೆಲವು ಜನರು ದಿನನಿತ್ಯ ಸಾಮಾನ್ಯಕ್ಕಿಂತ ಹೆಚ್ಚಿನ ಒತ್ತಡಕ್ಕೆ ಒಳಗಾಗುವರು. ಒತ್ತಡವು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದು ಎಂದು ನಮಗೆ ಈಗ ತಿಳಿದಿದೆ. ನೀವು ಹಿಂದೆ ಅತಿಯಾದ ಒತ್ತಡಕ್ಕೆ ಸಿಲುಕಿದ್ದಾಗ ನಿಮಗೆ ತಲೆನೋವು, ನಿಶ್ಯಕ್ತಿ, ವಾಕರಿಕೆ ಇತ್ಯಾದಿಯ ಅನುಭವವಾಗಿದೆಯಾ?

ಒತ್ತಡವು ಹೃದಯ ಸಮಸ್ಯೆ, ಅಧಿಕ ರಕ್ತದೊತ್ತಡ ಮತ್ತು ಕ್ಯಾನ್ಸರ್ ನ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಬಹುದು. ಒತ್ತಡವು ಕೊರ್ಟಿಸೊಲ್ ಎನ್ನುವ ಹಾರ್ಮೋನ್ ಬಿಡುಗಡೆ ಮಾಡುತ್ತದೆ. ಇದರಿಂದ ಕೆಲವೊಂದು ರೋಗಗಳು ಬರುವುದು. ಅಸಿಡಿಟಿಗೆ ಪ್ರಮುಖ ಕಾರಣವೇ ಒತ್ತಡ.

Stress

ಆರೋಗ್ಯವಂತ ಜೀವನಶೈಲಿ ನಡೆಸಿಕೊಂಡು ಹೋಗುತ್ತಿರುವ ಜನರಲ್ಲೂ ಒತ್ತಡದಿಂದ ಅಸಿಡಿಟಿ ಉಂಟಾಗುವುದು ಎಂದು ಇಂಟರ್ನಲ್ ಮೆಡಿಸಿನ್ ಮ್ಯಾಗಜಿನ್ ನಲ್ಲಿ ಇತ್ತೀಚೆಗೆ ಪ್ರಕಟವಾಗಿರುವ ಅಧ್ಯಯನ ವರದಿಯು ಹೇಳಿದೆ. ದೀರ್ಘಕಾಲದ ಒತ್ತಡದಿಂದ ಬಳಲುತ್ತಿರುವ ವ್ಯಕ್ತಿಯ ದೇಹದಲ್ಲಿ ಕೊರ್ಟಿಸಾಲ್ ಹಾರ್ಮೋನು ಮಟ್ಟವು ಅತಿಯಾಗಿ ಒತ್ತಡದ ಆಮ್ಲ ಉಂಟು ಮಾಡಲಿದೆ. ಇದರಿಂದ ಅಸಿಡಿಟಿ ಉಂಟಾಗುವುದು. ಒತ್ತಡವು ಅಸಿಡಿಟಿ ಮೇಲೆ ಪರಿಣಾಮ ಬೀರುವುದು ಎಂದು ತಿಳಿದುಬಂದಿದೆ.

ಆಯುರ್ವೇದ ಟಿಪ್ಸ್: ಬರೀ ಒಂದೇ ದಿನದಲ್ಲಿ ಅಸಿಡಿಟಿ ನಿಯಂತ್ರಣಕ್ಕೆ...

English summary

Surprising Things Triggering Your Acid Reflux

Do you often feel a burning sensation in your stomach and chest, especially after meals? If yes, then you could be suffering from a common ailment known as acidity. Now, we know that in our lifetimes, we could be suffering from a number of diseases and ailments. Right from our birth to the time we are on our deathbeds, any disease could affect us, at any point of time. So, one can never be too careful when it comes to taking care of one's own health.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X