For Quick Alerts
ALLOW NOTIFICATIONS  
For Daily Alerts

ಯೋಗ ಟಿಪ್ಸ್: ಮಂಡಿಗಳ ಬಲವರ್ಧನೆಗೆ 'ಆಂಜನೇಯಾಸನ'

By Vani Naik
|

ಮನುಷ್ಯನ ದೇಹ ಸಹಜವಾಗಿ ಕಾರ್ಯ ನಿರ್ವಹಿಸಬೇಕಾದರೆ ಆರೋಗ್ಯಕರ ಹಾಗು ಸದೃಢ ಮಂಡಿಗಳು ಅತ್ಯಗತ್ಯ. ಸಣ್ಣದಾಗಿ ನೋವು ಕಾಣಿಸಿಕೊಂಡರೂ ಅಥವಾ ಗಾಯವಾದರೂ ದೇಹದ ಚಲನೆಯ ಮೇಲೆ ಪ್ರಭಾವ ಬೀರುತ್ತದೆ. ನಡೆಯುವುದಕ್ಕೂ ತೊಂದರೆಯಾಗಿ ದೈನಂದಿಕ ಚಟುವಟಿಕೆಗಳನ್ನೂ ನಡೆಸಲು ಸಾಧ್ಯವಾಗುವುದಿಲ್ಲ.

ಆದ್ದರಿಂದ ಮಂಡಿಗಳನ್ನು ಸದೃಢವಾಗಿಟ್ಟುಕೊಳ್ಳುವುದು ಅತ್ಯಗತ್ಯ. ಇಂತಹ ಸಂದರ್ಭಗಳಲ್ಲಿ ನೋವುಶಮನಕ ಗುಳಿಗೆಗಳನ್ನು, ಅಥವಾ ಸ್ಪ್ರೇ ಗಳನ್ನು ಉಪಯೋಗಿಸುವುದು ಸರ್ವೇ ಸಾಮಾನ್ಯ. ಆದರೆ ಇವುಗಳು ಆ ಕ್ಷಣಕ್ಕೆ ಪರಿಹಾರವನ್ನು ಕೊಡುತ್ತದೇ ಹೊರತು ಸಂಪೂರ್ಣವಾಗಿ ಗುಣಪಡಿಸುವುದಿಲ್ಲ. ಮಂಡಿ ನೋವೇ? ಇಲ್ಲಿದೆ ನೋಡಿ ಸಿಂಪಲ್ ಮನೆಮದ್ದು

ಮಂಡಿಗಳ ಬಲವರ್ಧನೆಗೆ, ಧೀರ್ಘಕಾಲದ ಪರಿಹಾರವನ್ನು ಹುಡುಕುತ್ತಿದ್ದರೆ, ಯೋಗಾಭ್ಯಾಸಕ್ಕಿಂತ ಬೇರೆ ಉತ್ತಮವಾದ ವಿಧಾನವಿಲ್ಲ. ಮಂಡಿಗಳ ಬಲವರ್ಧನೆಗೆ, ಅತ್ಯಂತ ಪರಿಣಾಮಕಾರಿಯಾದ ಆಸನವೆಂದರೆ ಆಂಜನೇಯಾಸನ. ಈ ಆಸನದ ಹೆಸರನ್ನು ಸಂಸ್ಕೃತ ಭಾಷೆಯಿಂದ ತೆಗೆದುಕೊಳ್ಳಲಾಗಿದೆ. ಆಂಜನೇಯ ಎಂದರೆ "ಅಂಜನಿಯ ಪುತ್ರ" ಎಂದರ್ಥ. ಆಸನ ಎಂದರೆ "ಭಂಗಿ" ಎಂದರ್ಥ.

Anjaneasana (Low Lunge Pose) To Strengthen Knees

ಈ ಆಸನವನ್ನು ಅಭ್ಯಾಸ ಮಾಡಲು ಪ್ರಾರಂಭಿಕ ಹಂತದಲ್ಲಿರುವವರಿಗೆ, ದೇಹದ ಸಮತೋಲನತೆ ಸದೃಢ ಕಾಲುಗಳು ಬಹಳ ಮುಖ್ಯವಾಗಿರುವುದರಿಂದ ಕಷ್ಟವಾಗಬಹುದು. ಆದರೂ ನಿರಂತರ ಅಭ್ಯಾಸದಿಂದ ಸುಲಭವಾಗುತ್ತದೆ. ಈ ಆಸನವು ಕ್ರೀಡಾಪಟುಗಳಿಗೆ, ಮೇಜಿನ ಮುಂದೆ ಕುಳಿತು ಬಹಳ ಸಮಯದವರೆಗೆ ಕೆಲಸ ಮಾಡುವವರಿಗೂ ಬಹಳ ಉಪಯುಕ್ತವಾಗಿದೆ. ಈ ಆಸನವನ್ನು ಹಾಕುವ ಬಗೆ ಹೇಗೆ ಎಂದು ತಿಳಿದುಕೊಳ್ಳೋಣ. ತೊಡೆಯ ಬೊಜ್ಜು ಕರಗಿಸುವ ಯೋಗಾಸನಗಳು

ಆಂಜನೇಯಾಸನವನ್ನು ಹಾಕಲು ಕ್ರಮಬದ್ಧವಾದ ವಿವರಣೆ:
1. ಮೊದಲಿಗೆ ಅಧೋಮುಖ ಶ್ವಾನಾಸನದ ಭಂಗಿಯಲ್ಲಿ ಇರಬೇಕು.
2. ನಿಮ್ಮ ಬಲಪಾದವನ್ನು ಮುಂದಕ್ಕೆ ತರಬೇಕು.
3. ಬಲ ಮಂಡಿ ಹಾಗು ಬಲ ಕಣಕಾಲನ್ನು ನೇರವಾಗಿರಬೇಕು.
4. ಎಡ ಮಂಡಿಯನ್ನು ನೆಲದ ಮೇಲಿರಿಸಬೇಕು.
5. ನಿಧಾನವಾಗಿ ನಿಮ್ಮ ತೋಳುಗಳನ್ನು ಮತ್ತು ಹೆಡಕನ್ನು ಮೇಲಕ್ಕೆ ಎತ್ತಿ. ನಿಮ್ಮ ಕೈಗಳು ನಿಮ್ಮ ತಲೆಯ ಮೇಲಿರಬೇಕು.
6. ನಿಮ್ಮ ಎರಡೂ ಕೈಗಳು ಎದರುಮುಖವಾಗಿರಬೇಕು.


7. ಧೀರ್ಘವಾಗಿ ಉಸಿರಾಡಿ ನಿಧಾನವಾಗಿ ನಿಮ್ಮ ಸೊಂಟವನ್ನು ಮುಂದಕ್ಕೆ ಬಾಗಿಸಿ.
8. ತೋಳುಗಳನ್ನು ಹಿಂದಕ್ಕೆ ಚಾಚಿ ಎದೆಯ ಭಾಗವನ್ನು ಸ್ವಲ್ಪ ಮೇಲಕ್ಕೆ ತರಬೇಕು.
9. ಇದೇ ಭಂಗಿಯಲ್ಲಿ ಸ್ವಲ್ಪ ಕಾಲ ಇರಬೇಕು.
10. ಧೀರ್ಘವಾಗಿ ಉಸಿರಾಡಿಸಿ ನಿಧಾನವಾಗಿ ಆ ಭಂಗಿಯಿಂದ ಹೊರಬರಬೇಕು.
11. ಅದೇ ರೀತಿಯಾಗಿ ಇನ್ನೊಂದು ಕಾಲಿಗೂ ಅಭ್ಯಾಸ ಮಾಡಬೇಕು.

ಆಂಜನೇಯಾಸನದಿಂದ ಆಗುವ ಇತರ ಪ್ರಯೋಜನಗಳು:
*ಸೊಂಟಭಾಗವನ್ನು ಸದೃಢ ಮಾಡುತ್ತದೆ
*ಬೆನ್ನಿನ ಬಲವನ್ನು ವರ್ಧಿಸುತ್ತದೆ
*ದೇಹದ ಸಮತೋಲನತೆಯನ್ನು ಕಾಪಾಡುತ್ತದೆ


*ಮಂಡಿರಜ್ಜನ್ನು ಹಿಗ್ಗಿಸುವಲ್ಲಿ ನೆರವಾಗುತ್ತದೆ
*ಕಾಲುಗಳ ಬಲವನ್ನು ವರ್ಧಿಸುತ್ತದೆ
*ಭುಜಗಳನ್ನು ಸದೃಢವಾಗಿಸುತ್ತದೆ
*ಪಾದಗಳನ್ನು ಹಾಗು ತೊಡೆಗಳನ್ನು ಹಿಗ್ಗಿಸುವುದಕ್ಕೆ ನೆರವಾಗುತ್ತದೆ
*ತೊಡೆ ಸಂದನ್ನು ಹಿಗ್ಗಿಸುವುದಕ್ಕೆ ನೆರವಾಗುತ್ತದೆ

ಎಚ್ಚರಿಕೆ
ರಕ್ತದೊತ್ತಡ ಹೆಚ್ಚಿರುವವರು ಮತ್ತು ಮೊಳಕಾಲಲ್ಲಿ ಗಾಯವಾದವರು ಈ ಆಸನವನ್ನು ಅಭ್ಯಾಸ ಮಾಡತಕ್ಕದ್ದಲ್ಲ. ಯೋಗಾ ತರಬೇತಿದಾರರ ಸೂಚನೆಯ ಮೇರೆಗೆ ಮಾಡುವುದು ಸೂಕ್ತ.

English summary

Anjaneasana (Low Lunge Pose) To Strengthen Knees

If you are looking out for a long term solution to strengthen your knees, then there is no other best alternative than yoga. Anjaneasana also known as Low Lunge Pose is one such yoga asana which helps in strengthening the kness effectively. The word Anjaneasana comes from the Sanskrit words 'Anjaneya' which means son of Anjani and 'Asana' which means pose.
X
Desktop Bottom Promotion