For Quick Alerts
ALLOW NOTIFICATIONS  
For Daily Alerts

ಬೆನ್ನೇರಿ ಕಾಡುವ, ಬೆನ್ನು ನೋವಿಗೆ ಒಂದಿಷ್ಟು ಟಿಪ್ಸ್

By Deepu
|

ನೀವು ಹೆಚ್ಚಿನ ಸಮಯವನ್ನು ಕಂಪ್ಯೂಟರ್‌ನ ಮುಂದೆ ಕುಳಿತು ವ್ಯಯಿಸುತ್ತಿದ್ದೀರಾ ಹಾಗಾದರೆ ಬೆನ್ನು ನೋವು ನಿಮಗೆ ಹಿಂಸೆ ನೀಡುವುದು ಖಂಡಿತ. ಆಧುನಿಕ ಜೀವನ ಶೈಲಿಯಲ್ಲಿ ನಾವು ಹೆಚ್ಚಿನ ಆದ್ಯತೆಗಳನ್ನು ಕೆಲಸಗಳಿಗೆ ನೀಡುವುದರಿಂದ ನಮ್ಮ ದೇಹದ ಆರೈಕೆಯಲ್ಲಿ ಕೊರತೆಯನ್ನು ಉಂಟುಮಾಡುತ್ತಿದ್ದೇವೆ. ಯಾರು ಹೆಚ್ಚು ಕಂಪ್ಯೂಟರ್‌ನಂತಹ ಆಧುನಿಕ ತಂತ್ರಜ್ಞಾನಗಳೊಂದಿಗೆ ಕೆಲಸ ಮಾಡುತ್ತಿದ್ದಾರೋ ಅವರಲ್ಲಿ ಬೆನ್ನು ನೋವು ಸಾಮಾನ್ಯವಾಗಿಬಿಟ್ಟಿದೆ.

ಕೆಲಸ ಮಾಡುವ ಸಮಯದಲ್ಲಿ ನೀವು ಕುಳಿತಿರುವ ಭಂಗಿಗೆ ಪ್ರಾಮುಖ್ಯತೆಯನ್ನು ನೀಡದೇ ಇರುವುದು, ಬಿದ್ದಲ್ಲಿ ಬೆನ್ನುಹುರಿಗೆ ಸಣ್ಣಪೆಟ್ಟಾಗಿ ಆ ಪೆಟ್ಟೇ ನಂತರ ಗಂಭೀರ ನೋವಾಗಿ ಪರಿಣಮಿಸುವುದು ಹೀಗೆ ಬೇರೆ ಬೇರೆ ಬಗೆಯಲ್ಲಿ ತಾಳಲಾರದ ವೇದನೆಯನ್ನು ನೀಡುವ ಬೆನ್ನು ನೋವು ಏರ್ಪಡುವ ಸಾಧ್ಯತೆ ಇರುತ್ತದೆ. ಬೆನ್ನು ನೋವಿಗೆ ಗುಡ್ ಬೈ ಹೇಳಲು ಈ ರೀತಿ ಮಾಡಿ!

ನೀವು ಈ ಬೆನ್ನು ನೋವನ್ನು ನಿರ್ಲಕ್ಷಿಸಿದಲ್ಲಿ ನಂತರ ಇದು ತೀವ್ರಗೊಳ್ಳು ಸಾಧ್ಯತೆ ಇದ್ದು ಇದಕ್ಕೆ ತಕ್ಕುದಾದ ಪರಿಹಾರವನ್ನು ನೀವು ನೋವು ಎಳವೆಯಲ್ಲಿ ಇದ್ದಾಗಲೇ ಬಗೆಹರಿಸಬೇಕು. ನೀವು ಹೆಚ್ಚು ಸ್ಥೂಲಕಾಯರಾಗಿದ್ದಲ್ಲಿ ಕೂಡ ಬೆನ್ನುನೋವು ನಿಮ್ಮನ್ನು ಕಾಡುತ್ತದೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ. ಹಾಗಿದ್ದರೆ ನಿಮಗೆ ತೊಂದರೆಯನ್ನುಂಟು ಮಾಡುವ ಬೆನ್ನಿ ನೋವಿನ ಉಪಶಮನಕ್ಕಾಗಿ ಕೆಲವೊಂದು ಸರಳ ವಿಧಾನಗಳನ್ನು ನಾವು ನೀಡುತ್ತಿದ್ದು ಇವುಗಳು ನಿಮ್ಮ ಬೆನ್ನು ನೋವಿಗೆ ಉಪಶಮನವನ್ನು ನೀಡುವುದು ಖಂಡಿತ...

ಹಳೆಯ ಕಾಲದ ಹಾಸಿಗೆಗೆ ಗುಡ್ ಬೈ ಹೇಳಿ

ಹಳೆಯ ಕಾಲದ ಹಾಸಿಗೆಗೆ ಗುಡ್ ಬೈ ಹೇಳಿ

ಹಳೆಯ ಕಾಲದ ಹಾಸಿಗೆ, ಅಥವಾ ಸಮತಟ್ಟಾಗಿಲ್ಲದ ಹಳೆ ಹಾಸಿಗೆ ಬೆನ್ನು ನೋವು ಬಳುವಳಿಯಾಗಿ ನೀಡಬಹುದು. ಯಾವುದೇ ಮುಲಾಜಿಲ್ಲದೆ ಹಳೆ ಹಾಸಿಗೆಯನ್ನು ಬಿಸಾಡಿ ಹೊಸದನ್ನು ಕೊಂಡುಕೊಳ್ಳಿ. ಅದರಲ್ಲೂ ಬರೀ ಒಂದು ಚಾಪೆಯ ಮೇಲೆ ಮಲಗಿದರೆ, ಬೆನ್ನು ನೋವಿಗೆ ಸಾಂತ್ವನ ಸಿಗುತ್ತದೆ.

ನಿಯಮಿತವಾಗಿ ಗೋಧಿಹುಲ್ಲು ಜ್ಯೂಸ್

ನಿಯಮಿತವಾಗಿ ಗೋಧಿಹುಲ್ಲು ಜ್ಯೂಸ್

ಗೋಧಿಹುಲ್ಲು (wheatgrass) ಎಂದು ಕರೆಯಲ್ಪಡುವ ಈ ಸೊಪ್ಪಿನಲ್ಲಿ ಪೋಷಕಾಂಶಗಳ ಭಂಡಾರವೇ ಇದೆ. ವಿಟಮಿನ್ ಕೆ, ಸಿ, ಬಿ ಮತ್ತು ಇ, ಅಲ್ಲದೇ ಹೆಚ್ಚಿನ ಪ್ರಮಾಣದಲ್ಲಿ ಕ್ಯಾಲ್ಸಿಯಂ, ಮೆಗ್ನೀಶಿಯಂ, ಗಂಧಕ, ಸೋಡಿಯಂ, ಸಲ್ಫರ್, ಸತು, ಪೊಟಾಶಿಯಂ ಹಾಗೂ ಹದಿನೇಳು ಅಮೈನೋ ಆಮ್ಲಗಳಿವೆ. ಪ್ರತಿದಿನ ಒಂದು ಲೋಟ ತಾಜಾ ಗೋಧಿಹುಲ್ಲಿನ ಜ್ಯೂಸ್ ಕುಡಿಯುವುದರಿಂದ ಆರೋಗ್ಯ ವೃದ್ಧಿಸುವುದರ ಜೊತೆಗೆ, ಬೆನ್ನು ನೋವಿಗೂ ಸೂಕ್ತ ಪರಿಹಾರ ಸಿಗುತ್ತದೆ.

ಕಂಪ್ಯೂಟರ್ ಬಳಸುವಾಗ

ಕಂಪ್ಯೂಟರ್ ಬಳಸುವಾಗ

ಕಂಪ್ಯೂಟರ್ ಬಳಸುವಾಗ ನಿಮ್ಮ ಕಾಲುಗಳು ನೇರವಾಗಿ ನೆಲದಲ್ಲಿ ಚಾಚಿರಲಿ. ಕಂಪ್ಯೂಟರ್ ಸ್ಕ್ರೀನ್ ನಿಮ್ಮ ಕಣ್ಣ ಮುಂದೆ ನೇರವಾಗಿ ಇರುವಂತೆ ನೋಡಿಕೊಳ್ಳಿ. ಬೆನ್ನನ್ನು ಹಿಂದೆ ಮುಂದೆ ಆಗಾಗ ಬಗ್ಗಿಸಿ.

ಸರಿಯಾದ ವ್ಯಾಯಮ

ಸರಿಯಾದ ವ್ಯಾಯಮ

ಬೆನ್ನು ನೋವು ನಿವಾರಿಸಲು ಫಿಟ್ ಆಗಿರುವುದು ತುಂಬಾ ಮುಖ್ಯ. ದುರ್ಬಲ ಹೊಟ್ಟೆ ಮತ್ತು ಹಿಂಬದಿಯ ಸ್ನಾಯುಗಳು ನೋವನ್ನು ಉಂಟುಮಾಡುತ್ತದೆ. ಫಿಟ್ ಆಗಿರಲು ಪ್ರತೀ ದಿನ ವ್ಯಾಯಮ ಮಾಡಿ ಮತ್ತು ಯೋಗ ಅಭ್ಯಾಸ ಮಾಡಿ. ವ್ಯಾಯಾಮದಿಂದ ಸ್ನಾಯುಗಳು ಹೆಚ್ಚಿನ ಪ್ರಮಾಣದಲ್ಲಿ ಹಿಗ್ಗಿಸಲು ಮತ್ತು ಸಡಿಲಗೊಳಿಸಲು ಸಹಾಯಮಾಡುತ್ತದೆ. ಗಾರ್ಡ್‌ನಲ್ಲಿ ಕೆಲವು ನಿಮಿಷಗಳ ಕಾಲ ನಡೆದಾಡಿ ಅಥವಾ ಏರೋಬಿಕ್ಸ್ ಮಾಡಿದರೆ ಬೆನ್ನು ನೋವು ನಿವಾರಿಸಬಹುದು. ಇದು ನಿಮ್ಮ ಮನಸ್ಸಿಗೂ ಆರಾಮ ನೀಡುತ್ತದೆ.

ಕುಳಿತುಕೊಳ್ಳುವ ಭಂಗಿ

ಕುಳಿತುಕೊಳ್ಳುವ ಭಂಗಿ

ಸಾಮಾನ್ಯವಾಗಿ ನಾವು ಆರಾಮವಾಗಿ ಕುಳಿತುಕೊಳ್ಳುವ ಭರದಲ್ಲಿ ಬೆನ್ನು ಮೂಳೆಯನ್ನು ಕಮಾನಿನಂತೆ ಬಾಗಿಸುತ್ತೇವೆ. ಚಿಕ್ಕವಯಸ್ಸಿನಲ್ಲಿ ಈ ಪರಿ ಹೆಚ್ಚಿನ ಪರಿಣಾಮವನ್ನು ಬೀರದೇ ಇದ್ದರೂ ಕ್ರಮೇಣ ಬೆನ್ನುಮೂಳೆಯ ಕೆಳಗಿನ ತಟ್ಟೆಗಳು ಜಖಂಗೊಂಡು ಬೆನ್ನುನೋವು ನೀಡುತ್ತವೆ. ಇದಕ್ಕೆ ಸುಲಭ ಉಪಾಯವೆಂದರೆ ನೆಟ್ಟಗೆ ಕುಳಿತುಕೊಳ್ಳುವುದು. ಕುರ್ಚಿಯಲ್ಲಿ ನೆಟ್ಟಗೆ ಕುಳಿತುಕೊಳ್ಳುವುದು ಕೊಂಚ ಕಷ್ಟಕರವಾದುದರಿಂದ ಚಿಕ್ಕ ದಿಂಬೊಂದನ್ನು ಕುರ್ಚಿಯ ಬೆನ್ನಿನ ಕೆಳಭಾಗದಲ್ಲಿರಿಸುವ ಮೂಲಕ ಬೆನ್ನುಮೂಳೆ ನೆಟ್ಟಗಿರುವ ಭಂಗಿಯನ್ನು ಪಡೆಯಬಹುದು. ಇತ್ತೀಚಿನ ಕುರ್ಚಿಗಳು ಈ ಭಂಗಿಯನ್ನು ಅನುಸರಿಸುವಂತೆಯೇ ವಿನ್ಯಾಸಗೊಳಿಸಲಾಗುತ್ತಿದೆ. ಸಾಧ್ಯವಾದರೆ ಉತ್ತಮ ಗುಣಮಟ್ಟದ ಕುರ್ಚಿಯನ್ನು ನಿತ್ಯದ ಕೆಲಸಗಳಿಗಾಗಿ ಬದಲಿಸಬಹುದು.

ಯೋಗಾಸನಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಿ

ಯೋಗಾಸನಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಿ

ಬೆನ್ನುನೋವು ಕಡಿಮೆಗೊಳಿಸಲೂ ಹಲವು ಯೋಗಾಸನಗಳಿವೆ. ಹೆಚ್ಚಿನ ನೋವಿದ್ದರೆ ಮಾರ್ಜ್ಯಾಸನ, ಭಾರದ್ವಾಜಾಸನ ಮತ್ತು ಮಸ್ತ್ಯಾಸನ ಉತ್ತಮ ಆಸನಗಳಾಗಿವೆ. ಕಡಿಮೆ ನೋವಿದ್ದರೆ ಅರ್ಧ ಮಸ್ತ್ಯೇಂದ್ರಾಸನ, ಉಷ್ಟ್ರಾಸನ, ಧನುರಾಸನ, ಸೇತು ಬಂಧ ಸರ್ವಾಂಗಾಸನ, ಅಧೋಮುಖ ಶ್ವಾನಾಸನ ಮೊದಲಾದ ಆಸನಗಳು ಸೂಕ್ತವಾಗಿವೆ. ಯೋಗಾಸನಗಳಲ್ಲಿ ಭಂಗಿಯ ಜೊತೆಗೇ ಉಸಿರಾಟವನ್ನೂ ನಿಯಂತ್ರಿಸಬೇಕಾದುದರಿಂದ ಸ್ನಾಯುಗಳು ಉತ್ತಮವಾದ ಸೆಳೆತವನ್ನು ಪಡೆದು ರಕ್ತಸಂಚಾರವನ್ನು ಹೆಚ್ಚಿಸಿ ಬೆನ್ನುನೋವನ್ನು ಕಡಿಮೆಗೊಳಿಸಲು ನೆರವಾಗುತ್ತವೆ.

English summary

Quick Ways to Stop Back Pain, which should surprise you

Back pain one of the serious health problem. Lifestyle, stress, lack of vitamin are the main reason for back pain. Here are few home remedies for back pain, have a look..
X
Desktop Bottom Promotion