For Quick Alerts
ALLOW NOTIFICATIONS  
For Daily Alerts

ಆರೋಗ್ಯದ ಕಣಜ 'ಒಣ ಬೀಜ'ದ ಮೂಲ ಅರಿಯಿರಿ

|

ಪ್ರಕೃತಿಯಲ್ಲಿ ಹಾಲಿನಷ್ಟೇ ಕ್ಯಾಲ್ಸಿಯಂ ಅನ್ನು ಹೊಂದಿರುವ ಹಲವಾರು ಆಹಾರ ಪದಾರ್ಥಗಳು ಬಹಳಷ್ಟಿವೆ - ಮೀನು, ಒಣ ಹಣ್ಣುಗಳು, ಒಣ ಬೀನ್ಸ್, ಹಸಿರು ಸೊಪ್ಪುಗಳು ಮತ್ತು ಧಾನ್ಯಗಳಲ್ಲಿ ಕ್ಯಾಲ್ಸಿಯಂ ಇರುತ್ತದೆ. ಮೀನನ್ನು ಸೇವಿಸುವಾಗ ಅದರ ಮೂಳೆ ಅಥವಾ ಮುಳ್ಳುಗಳನ್ನು ಸೇವಿಸುವುದು ಕೂಡ ಅಷ್ಟೇ ಆರೋಗ್ಯಕಾರಿ. ಹೌದು ಕೆಲವೊಂದು ಆಹಾರಗಳು ಅದರದ್ದೇ ಆದ ವೈಶಿಷ್ಟ್ಯತೆಯನ್ನು ಹೊಂದಿರುತ್ತದೆ, ಇದಕ್ಕೆಲ್ಲಾ ಒಂದು ಉತ್ತಮ ಉದಾಹರಣೆ ಎಂದರೆ ಡ್ರೈ ನಟ್ಸ್ (ಒಣ ಬೀಜಗಳು)

"ಒಳ್ಳೆಯ ವಸ್ತುಗಳು ಸಣ್ಣ ಪೊಟ್ಟಣಗಳಲ್ಲಿ ಲಭಿಸುತ್ತವೆ" ಎಂಬ ಮಾತು ಡ್ರೈ ನಟ್ಸ್ ವಿಚಾರದಲ್ಲಿ ಅಕ್ಷರಶಃ ಸತ್ಯ. ಇವುಗಳಲ್ಲಿ ಒಮೆಗಾ-3 ಕೊಬ್ಬಿನ ಆಮ್ಲಗಳು ಸಮೃದ್ಧವಾಗಿದ್ದು ದೇಹದಲ್ಲಿರುವ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಇದು ಪ್ರಮುಖ ಪಾತ್ರವಹಿಸುತ್ತದೆ. ಅಲ್ಲದೆ ಇವುಗಳು ಹೃದಯ ಮತ್ತು ಮೆದುಳಿಗೆ ತುಂಬಾ ಒಳ್ಳೆಯದು ಎಂಬುದನ್ನು ವೈದ್ಯರೇ ಖಚಿತಪಡಿಸಿದ್ದಾರೆ. ಅಲ್ಲದೆ ತೂಕವನ್ನು ಕಡಿಮೆ ಮಾಡಿಕೊಳ್ಳಲು ಮತ್ತು ಕ್ಯಾನ್ಸರ್‌ನಿಂದ ರಕ್ಷಣೆಯನ್ನು ಪಡೆಯಲು ಹೇಳಿ ಮಾಡಿಸಿದ ಆಹಾರ ಪದಾರ್ಥಗಳಾಗಿರುತ್ತವೆ ಎಂಬುದೇ ಇದರ ಹೆಗ್ಗಳಿಕೆ. ನಿಮ್ಮ ಹೃದಯ ಗಟ್ಟಿಗೊಳಿಸಲು ನಟ್ಸ್ ತಿನ್ನಿ

ಆದರೂ ಬಹುತೇಕ ಮಂದಿ ಈ ಡ್ರೈ ನಟ್ಸ್‌ಗಳನ್ನು ತಮ್ಮ ಆಹಾರದಲ್ಲಿ ಸೇವಿಸುವುದಿಲ್ಲ, ಅದಕ್ಕೆ ಇವರು ಕೊಡುವ ಕಾರಣ ಈ ಡ್ರೈ ನಟ್ಸ್‌ಗಳಲ್ಲಿ ಕ್ಯಾಲೋರಿಗಳು ಅಧಿಕವಾಗಿರುತ್ತವೆ ಎಂಬುದು, ಹೌದು ಇದು ಸತ್ಯ! ಈ ಡ್ರೈ ನಟ್ಸ್‌ಗಳಲ್ಲಿ, ಕೊಬ್ಬು ಮತ್ತು ಕ್ಯಾಲೋರಿಗಳು ಅಧಿಕವಾಗಿರುತ್ತವೆ ಆದರೆ ಒಂದು ಹಿಡಿ ಒಣ ನಟ್ಸ್ ನಿಮ್ಮ ಮುಖ್ಯವಾದ ಊಟವನ್ನು ಸೇವಿಸದಿದ್ದರು ನಿಮಗೆ ಹಸಿವಾಗದಂತೆ ತಡೆಯುತ್ತವೆ. ಡ್ರೈ ನಟ್ಸ್‌ಗಳು ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ, ಹಾಗೂ ಉತ್ತಮ ದೃಷ್ಟಿಯನ್ನು ಒದಗಿಸುತ್ತವೆ. ಬನ್ನಿ ಅದಕ್ಕಾಗಿ ನಾವು ಯಾವ ಬಗೆಯ ಡ್ರೈ ನಟ್ಸ್‌ಗಳನ್ನು ಸೇವಿಸಬೇಕೆಂದು ಒಮ್ಮೆ ನೋಡಿಕೊಂಡು ಬರೋಣ...

ಬಾದಾಮಿ

ಬಾದಾಮಿ

ನಾರಿನಂಶ ಮತ್ತು ವಿಟಮಿನ್ ಇ ಯು ಬಾದಾಮಿಯಲ್ಲಿ ಇತರೆ ಎಲ್ಲಾ ಒಣ ಬೀಜಗಳಿಗಿಂತ ಅಧಿಕ ಪ್ರಮಾಣದಲ್ಲಿರುತ್ತದೆ. ಇವುಗಳು ನಿಮ್ಮನ್ನು ಆರೋಗ್ಯಕರವನ್ನಾಗಿ ಇಡುವುದರ ಜೊತೆಗೆ, ಮಲಬದ್ಧತೆಯಿಂದ ತಡೆಯುತ್ತವೆ. ವಿಟಮಿನ್ ಇ ಎಂಬುದು ಒಂದು ಪ್ರಭಾವಶಾಲಿ ಆಂಟಿ ಆಕ್ಸಿಡೆಂಟ್, ಇದು ಕ್ಯಾನ್ಸರ್ ಅಪಾಯದಿಂದ ನಿಮ್ಮನ್ನು ಕಾಪಾಡುತ್ತದೆ. ಬಾದಾಮಿಗಳು ನಿಮ್ಮ ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತವೆ, ಜೊತೆಗೆ ಇವು ಮಧುಮೇಹ ಮತ್ತು ತೂಕ ಕಳೆದುಕೊಳ್ಳಲು ಸಹಾಯ ಮಾಡುತ್ತವೆ.

ಮೆಕಾಡಮಿಯ ಬೀಜಗಳು

ಮೆಕಾಡಮಿಯ ಬೀಜಗಳು

ಇವುಗಳಲ್ಲಿ ಸಮೃದ್ಧವಾದ ಮೊನೊಸ್ಯಾಚುರೇಟೇಡ್ ಫ್ಯಾಟ್ (MUFA) ಅಧಿಕವಾಗಿರುತ್ತವೆ. ಇವು ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಈ ಡ್ರೈ ನಟ್ಸ್‌ಗಳು ಅಧಿಕ ರಕ್ತದೊತ್ತಡವನ್ನು ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತವೆ.

ಗೋಡಂಬಿಗಳು

ಗೋಡಂಬಿಗಳು

ಗೋಡಂಬಿಗಳಲ್ಲಿ ಸತು ಮತ್ತು ಕಬ್ಬಿಣಾಂಶವು ಅಧಿಕವಾಗಿರುತ್ತವೆ. ಇವು ನಿಮ್ಮ ದೇಹದಲ್ಲಿ ಹಿಮೊಗ್ಲೋಬಿನ್ ಪ್ರಮಾಣವನ್ನು ಅಧಿಕ ಮಾಡುತ್ತವೆ, ಅಲದೆ ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ ಮತ್ತು ಕಣ್ಣಿನ ದೃಷ್ಟಿಯನ್ನು ಸಹ ಸುಧಾರಿಸುತ್ತವೆ. ಜೊತೆಗೆ ಇವುಗಳಲ್ಲಿ ಮೆಗ್ನಿಷಿಯಂ ಸಮೃದ್ಧವಾಗಿರುತ್ತದೆ, ಇದು ಸ್ಮರಣೆ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ವಯಸ್ಸಾದಂತೆ ಸ್ಮರಣೆ ಶಕ್ತಿ ಕುಂಠಿತಗೊಳ್ಳುವುದನ್ನು ತಡೆಯುತ್ತದೆ.

ಬ್ರೆಜಿಲ್ ನಟ್

ಬ್ರೆಜಿಲ್ ನಟ್

ಇವುಗಳು ಸಹ ಕ್ಯಾನ್ಸರನ್ನು ತಡೆಯುವ ಒಳ್ಳೆಯ ಒಣ ಬೀಜಗಳಾಗಿರುತ್ತವೆ. ಒಂದು ಬ್ರೆಜಿಲ್ ನಟ್ಸ್ ನಲ್ಲಿ ಶೇ.100 ಶಿಫಾರಸು ಮಾಡಲಾದ ಸೆಲೆನಿಯಂ ಇರುತ್ತದೆ. ಇವು ಪ್ರೋಸ್ಟೇಟ್ ಕ್ಯಾನ್ಸರ್ ಮತ್ತು ಸ್ತನ ಕ್ಯಾನ್ಸರ್‌ನಿಂದ ರಕ್ಷಣೆಯನ್ನು ನೀಡುತ್ತದೆ.

ಪಿಸ್ತಾ

ಪಿಸ್ತಾ

ಇವು ಅತ್ಯಂತ ಕಡಿಮೆ ಕ್ಯಾಲೋರಿ ಇರುವ ಬೀಜಗಳಾಗಿರುತ್ತವೆ. ಒಂದು ಬೀಜದಲ್ಲಿ ಕೇವಲ ನಾಲ್ಕು ಕ್ಯಾಲೋರಿಗಳು ಮಾತ್ರ ಇರುತ್ತವೆ. ಇವು ಶ್ವಾಸಕೋಶದ ಕ್ಯಾನ್ಸರ್ ಬರುವ ಸಾಧ್ಯತೆಯನ್ನು ಕಡಿಮೆ ಮಾಡುತ್ತವೆ. ಇದಕ್ಕೆ ಕಾರಣ ಇದರಲ್ಲಿರುವ ಗ್ಯಾಮ-ಟೊಕೊಫೆರೊಲ್ ಎಂಬ ವಿಟಮಿನ್ ಇ. ಇದು ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ. ಜೊತೆಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ನಿಮ್ಮ ಮೂಡ್ ಸುಧಾರಿಸುತ್ತದೆ,ಸ್ನಾಯುಗಳನ್ನು ಮತ್ತು ಮೆದುಳನ್ನು ಆರೋಗ್ಯವಾಗಿಡುತ್ತದೆ. ಇದಕ್ಕೆ ಇದರಲ್ಲಿರುವ ವಿಟಮಿನ್ ಬಿ6 ಮತ್ತು ಪೊಟಾಶಿಯಂ ಸಹಾಯ ಮಾಡುತ್ತವೆ.

English summary

Must To Eat Dry Nuts

"Good things come in small packets" An example of this is nuts. Nuts are the best nutritious snacks that you should never miss to eat. They are rich in omega 3 fatty acids and thus reduce cholesterol level, They are good for your heart and brain. Dry Nuts help in weight loss and reduce the risk of cancer as well.
X
Desktop Bottom Promotion