For Quick Alerts
ALLOW NOTIFICATIONS  
For Daily Alerts

ಉತ್ತಮ ಆರೋಗ್ಯಕ್ಕಾಗಿ ಕೆಲವೊಂದು ಸಲಹೆಗಳು

|

ಒಂದು ಸೇಬಿನ ಹಣ್ಣು ಡಾಕ್ಟರ್ ಅನ್ನು ದೂರ ಇಡುತ್ತದೆ' ಎನ್ನುವ ಮಾತಿನಂತೆ ಆಹಾರ ಪದಾರ್ಥಗಳಲ್ಲಿ ಹಣ್ಣುಗಳನ್ನು ಅತ್ಯಂತ ಆರೋಗ್ಯಕರ ಜೀವನ ಶೈಲಿಯನ್ನಾಗಿ ಶಿಫಾರಸು ಮಾಡಲಾಗಿದೆ. ನೀವು ಆರೋಗ್ಯವಂತರಾಗಿರಲು ನಿಮ್ಮ ಆಹಾರದ ಜೊತೆ ಬಹಳಷ್ಟು ಹಣ್ಣುಗಳನ್ನು ತಿನ್ನಲು ಬಯಸುತ್ತೀರಾ ಎಂದು ಖಚಿತ ಪಡಿಸಿಕೊಳ್ಳಿ ಆದರೆ ಒಂದು ಸೇಬು ವೈದ್ಯರನ್ನು ದೂರವಿಡುತ್ತದೆ ಎಂಬ ನಾಣ್ಣುಡಿ ಎಲ್ಲರಿಗೂ ತಿಳಿದಿದೆ.

ಇದರರ್ಥ ನಾವು ಬಳಸುವ ಆಹಾರ ಪದಾರ್ಥಗಳಲ್ಲಿ ಹಣ್ಣುಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುವುದಾಗಿದೆ. ಆದರೂ ಹಣ್ಣುಗಳೊಂದಿಗೆ ತಾಜಾ ತರಕಾರಿಗಳು ಸುವ್ಯವಸ್ಥಿತ ಆಹಾರ ಪದ್ಧತಿಯ ಒಂದು ಭಾಗವಾಗಿದೆ.

ಅದರಲ್ಲೂ ನಾವು ಬಳಸುವ ಹಣ್ಣು ತರಕಾರಿಗಳಲ್ಲಿ ಯಾವುದರಲ್ಲಿ ವಿಟಮಿನ್ ಪ್ರೊಟೀನ್‌ಗಳ ಪ್ರಮಾಣ ಎಷ್ಟಿದೆ? ಯಾವುದರ ಬಳಕೆ ಮಿತಿಯಲ್ಲಿರಬೇಕು? ಯಾವುದು ದೇಹಕ್ಕೆ ಉತ್ತಮ ಮೊದಲಾದ ಅಂಶಗಳನ್ನು ತಿಳಿಯುವುದು ಅತ್ಯವಶ್ಯಕ ಅದಕ್ಕಾಗಿ ಇಲ್ಲಿದೆ ಕೆಲವೊಂದು ಉತ್ತಮ ಸಲಹೆಗಳು:

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ತೂಕ ಇಳಿಸಲು ದಾಳಿಂಬೆ ಹಣ್ಣು ತಿನ್ನಿ!

ತಾಜಾ ತರಕಾರಿಗಳು

ತಾಜಾ ತರಕಾರಿಗಳು

ತಾಜಾ ತರಕಾರಿಗಳು ಹಣ್ಣುಗಳಿಗಿಂತಲೂ ಉತ್ತಮ ಪೋಷಕಾಂಶಗಳನ್ನು ಒಳಗೊಂಡಿರುತ್ತವೆ. ಅದರಲ್ಲೂ ಕೆಲವೊಂದು ತರಕಾರಿಗಳು ಆರೋಗ್ಯವಂತರಾಗಿ ಇರಲು ಹಣ್ಣುಗಳಿಗಿಂತ ಹೆಚ್ಚು ಪ್ರಯೋಜನಕಾರಿ ಎಂಬುದನ್ನು ನೆನಪಿಡಿ.

ಸೊಪ್ಪುಗಳು

ಸೊಪ್ಪುಗಳು

ಗಿಡಮೂಲಿಕೆಗಳಾದ ತುಳಸಿ, ಸೊಪ್ಪುಗಳಾದ ಪಾಲಾಕ್, ಪುದೀನಾ, ಮೆಂತೆಸೊಪ್ಪು ಮೊದಲಾದವುಗಳ ಬಳಕೆ ಆದಷ್ಟು ಮಾಡಿ.

 ನಾರಿನ ಅಂಶಗಳು

ನಾರಿನ ಅಂಶಗಳು

ನಿಮ್ಮ ದಿನನಿತ್ಯದ ಆಹಾರದಲ್ಲಿ ನಾರಿನ ಅಂಶಗಳು ಹೆಚ್ಚಿವೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಿ. ಉತ್ತಮ ಆರೋಗ್ಯವನ್ನು ಪಡೆಯುವುದು ನಮ್ಮ ಕೈಯಲ್ಲಿದೆ. ಆದ್ದರಿಂದ ಸೋಮಾರಿತನಕ್ಕೆ ಎಡೆ ಮಾಡಿಕೊಡುವಂತಹ ಆಹಾರ ಪದಾರ್ಥದ ವರ್ಜನೆ ಅತೀ ಮುಖ್ಯವಾದುದು.

ಡಯೆಟ್‌

ಡಯೆಟ್‌

ನಿಮ್ಮ ದೈನಂದಿನ ಜೀವನ ವೇಳಾಪಟ್ಟಿಯ ಮಾದರಿಯಲ್ಲಿ ರೂಪಿತವಾಗಿರಲಿ. ಡಯೆಟ್‌ಗೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡಿ. ಸಮಯಕ್ಕೆ ಸರಿಯಾಗಿ ಊಟ, ನಿದ್ದೆ, ಇರಲಿ.

ವೈದ್ಯರನ್ನು ಸಂಪರ್ಕಿಸಿ

ವೈದ್ಯರನ್ನು ಸಂಪರ್ಕಿಸಿ

ವೈದ್ಯರ ಸಂಪರ್ಕವನ್ನು ಯಾವುದೇ ಹಿಂಜರಿಕೆಯಿಲ್ಲದೆ ಮಾಡಿ. ಹೆಚ್ಚು ಬೊಜ್ಜಿನ ಆಹಾರಗಳನ್ನು ವೈದ್ಯರ ಸಲಹೆಯ ಮೇರೆಗೆ ತೆಗೆದುಕೊಳ್ಳುವುದು ಉತ್ತಮ.

ನೀರು ಸೇವನೆ

ನೀರು ಸೇವನೆ

ನೀರ ಸೇವನೆ ದೇಹದ ಪಚನ ಕ್ರಿಯೆಗೆ ಸಹಕಾರಿ. ಆದ್ದರಿಂದ ಸಾಧ್ಯವಾದಷ್ಟು ನೀರು ಕುಡಿಯುವುದನ್ನು ಅಭ್ಯಾಸ ಮಾಡಿಕೊಳ್ಳಿ.

ಸಸ್ಯಾಹಾರಕ್ಕೆ ಪ್ರಾಮುಖ್ಯತೆ ನೀಡಿ

ಸಸ್ಯಾಹಾರಕ್ಕೆ ಪ್ರಾಮುಖ್ಯತೆ ನೀಡಿ

ನಿಮ್ಮ ಆಹಾರದಲ್ಲಿ ಆದಷ್ಟು ಮಾಂಸಾಹಾರವನ್ನು ಕಡಿಮೆಗೊಳಿಸಿ ಸಸ್ಯಾಹಾರಕ್ಕೆ ಹೆಚ್ಚಿನ ಪ್ರಧಾನತೆ ನೀಡಿ.

ತಂಪು ಪಾನೀಯಗಳನ್ನು ಕಡಿಮೆ ಮಾಡಿ

ತಂಪು ಪಾನೀಯಗಳನ್ನು ಕಡಿಮೆ ಮಾಡಿ

ಕೋಕ್ ಪೆಪ್ಸಿ ಮೊದಲಾದ ತಂಪು ಪಾನೀಯಗಳ ಬಳಕೆ ಆದಷ್ಟು ಕಡಿಮೆ ಮಾಡಿ. ಇದರೊಂದಿಗೆ ಸಣ್ಣ ಪುಟ್ಟ ಮನೆಗೆಲಸಗಳನ್ನು ಮಾಡುವುದು ಆರೋಗ್ಯಕ್ಕೂ ಒಳ್ಳೆಯದು ಎಂಬುದನ್ನು ನೆನಪಿಡಿ.

ಯೋಗ

ಯೋಗ

ಪ್ರತಿದಿನ ಯೋಗ, ಪ್ರಾಣಾಯಾಮ, ಸೈಕ್‌ಲಿಂಗ್, ಈಜುವುದು, ಏರೋಬಿಕ್ಸ್ ಮೊದಲಾದ ದೈಹಿಕ ಚಟುವಟಿಕೆಗಳನ್ನು ಮರೆಯದೆ ಮಾಡಿ.

English summary

Benefits of green vegetables

An apple a day keeps the doctor away. We all have heard the saying and totally believe that apples are loaded with several nutrients, vitamins and proteins that are required by the body. Green vegetables protect you from heart diseases, diabetes, and even cancer. Green vegetables are potent sources of vitamins, minerals, phytonutrients and other micronutrients.
Story first published: Friday, January 24, 2014, 15:29 [IST]
X