For Quick Alerts
ALLOW NOTIFICATIONS  
For Daily Alerts

ಹಾರ್ಮೋನ್ ಸಮತೋಲನಕ್ಕೆ ಯೋಗದ ಭಂಗಿಗಳು

By Arpitha Rao
|

ಯೋಗಾಸನ ಇಂದು ಪ್ರಪಂಚದಾದ್ಯಂತ ಹೆಸರು ಪಡೆದಿದೆ.ಯೋಗದಲ್ಲಿರುವ ವಿವಿಧ ಆಸನಗಳ ಮೂಲಕ ಮಾನವ ದೇಹದ ಅನೇಕ ಕಾಯಿಲೆಗಳಿಗೆ ಪರಿಹಾರ ಒದಗಿಸಬಹುದು ಎಂದು ಕೂಡ ಹೇಳಲಾಗುತ್ತದೆ. ಒತ್ತಡವನ್ನು ನಿವಾರಿಸುವಲ್ಲಿ ಯೋಗ ಸಹಕಾರಿ ಹಾಗೆಯೇ ತೂಕ ಕಡಿಮೆ ಮಾಡಿಕೊಳ್ಳಲು ಕೂಡ ಯೋಗದ ಮೊರೆ ಹೋಗಲಾಗುತ್ತದೆ. ಅಷ್ಟೇ ಅಲ್ಲ ಯೋಗದಿಂದ ಅರೋಗ್ಯಯುತವಾಗಿ ಇರಬಹುದು ಎಂಬುದು ಸಾಬೀತಾಗಿದೆ. ಹಾರ್ಮೋನುಗಳ ಸಮತೋಲನದಲ್ಲಿ ಕೂಡ ಯೋಗ ಪ್ರಮುಖ ಪಾತ್ರ ವಹಿಸುತ್ತದೆ ಎನ್ನಲಾಗುತ್ತದೆ.

ನೀವು ನಿಮ್ಮ ಹಾರ್ಮೋನ್ ನ ಸಮತೋಲನ ಕಾಪಾಡಲು ಯೋಗ ಮೊರೆಹೋಗುವಿರಾದರೆ ಸಾಕಷ್ಟು ವಿಧಗಳಿವೆ.ಹಾರ್ಮೋನ್ ಸಮತೋಲನದ ಈ ಭಂಗಿಗಳಿಂದ ಪುರುಷರು ಮತ್ತು ಮಹಿಳೆಯರು ಇಬ್ಬರೂ ಕೂಡ ಉಪಯೋಗ ಪಡೆಯಬಹುದು. ಆದಾಗ್ಯೂ ಕೆಲವು ತಾಯಿಯರು ಮಗು ಹುಟ್ಟಿದ ನಂತರ ಕಾಣಿಸಿಕೊಳ್ಳುವ ಖಿನ್ನತೆಯನ್ನು ತಡೆಯಲು ಈ ಭಂಗಿಗಳನ್ನು ಬಳಸಬಹುದು.

ಇಡೀ ದೇಹವನ್ನು ನಿರ್ನಾಳ ಗ್ರಂಥಿ ನಿಯಂತ್ರಿಸುತ್ತದೆ.ಈ ಜಾಲವು ಇಡೀ ದೇಹದ ಬೆಳವಣಿಗೆಗೆ ಶಕ್ತಿ ನೀಡಿ ವ್ಯಕ್ತಿಯು ಬಲಯುತವಾಗಿರುವಂತೆ ಮಾಡುತ್ತದೆ. ಹಾರ್ಮೋನ್ ಗಳು ದೇಹದ ಒಳಗೆ ವಿಶೇಷ ಸಂಯುಕ್ತವನ್ನು ಉತ್ಪತ್ತಿ ಮಾಡುತ್ತವೆ. ನಿರ್ನಾಳ ಗ್ರಂಥಿಗಳು ಇದನ್ನು ಹತೋಟಿಯಲ್ಲಿ ಇಡುತ್ತವೆ. ಸಾಕಷ್ಟು ಜನರು ಯೋಗದ ವಿವಿಧ ಭಂಗಿಗಳಿಂದ ಕೆಲವು ಗ್ರಂಥಿಗಳು ಸಕ್ರಿಯಗೊಳ್ಳುತ್ತವೆ ಎಂದು ನಂಬುತ್ತಾರೆ, ನಿರಂತರ ಅಭ್ಯಾಸದ ಮೂಲಕ ಹಾರ್ಮೋನ್ ಗಳ ಸಮತೋಲನ ಕಾಪಾಡಲು ಸಾಧ್ಯ.

Yoga Postures for Balancing Hormones

ಹಾರ್ಮೋನ್ ಗಳ ಸಮತೋಲನಕ್ಕೆ ಉತ್ತಮ ಯೋಗ ಭಂಗಿಗಳು:

ಮೊಲದ ಭಂಗಿ ಅಥವಾ ಸಾಸಂಗಾಸನ

ಈ ಭಂಗಿಯಿಂದ ಥೈರಾಯಿಡ್ ಮತ್ತು ಪ್ಯಾರಥೈರಾಯಿಡ್ ಕಡಿಮೆ ಮಾಡಬಹುದು. ಖಿನ್ನತೆ ಹೋಗಲಾಡಿಸಬಹುದು.

ನಿಮ್ಮ ಹಿಮ್ಮಡಿ ಮೂಲಕ ಕುಳಿತುಕೊಳ್ಳಿ

ನಿಮ್ಮ ಕೈಗಳನ್ನು ಅಗಲಿಸಿ ಪಾದದ ಅಡಿಯಲ್ಲಿ ತರಬೇಕು. ನಿಮ್ಮ ಗಲ್ಲವನ್ನು ಎದೆಯ ಭಾಗಕ್ಕೆ ಬಗ್ಗಿಸಿ,ಸೊಂಟವನ್ನು ಮೇಲಕ್ಕೆ ಎತ್ತಿ ತಲೆಯನ್ನು ನೆಲಕ್ಕೆ ತಾಗಿಸಿ, ಹಣೆ ಕಾಲನ್ನು ತಾಗುತ್ತಿರಲಿ. ನಿಮ್ಮ ತಲೆ ನೆಲಕ್ಕೆ ತಾಗುತ್ತಿದ್ದಂತೆ ನಿಮ್ಮ ಹಿಂಬದಿಯನ್ನು ಮೇಲಕ್ಕೆ ಎತ್ತಿ.ನಂತರ ಸರಾಗವಾಗಿ ಉಸಿರಾಡಿ.

ಲೆಯಿಂದ ಮಂಡಿ ಎತ್ತುವುದು ಅಥವಾ ಜನುರ್ಸಿರಾಸನ

ಪಶ್ಚಿಮೊತ್ತಾಸನದ ಜೊತೆ ಸೇರಿ ಈ ಆಸನ ಮಾಡಿದಲ್ಲಿ ರಕ್ತದಲ್ಲಿ ಸಕ್ಕರೆ ಅಂಶ ಸಮತೋಲನದಲ್ಲಿಡುತ್ತದೆ ಮತ್ತು ಥೈಮಾಸ್, ಕಿಡ್ನಿ, ಥೈರಾಯ್ಡ್, ಮೇದೋಜೀರಕ ಗ್ರಂಥಿ ಇವುಗಳನ್ನು ಹತೋಟಿಯಲ್ಲಿ ಇಡುತ್ತದೆ.

ಪರ್ವತ ಆಸನದ ಮೂಲಕ ಆರಂಭಿಸಿ

ನಿಮ್ಮ ಎಡ ಮಂಡಿಯನ್ನು ಎತ್ತಿ ಮತ್ತು ಎರಡೂ ಕೈಗಳಿಂದ ಹಿಡಿದುಕೊಳ್ಳಿ.ಉಸಿರನ್ನು ಒಳಗೆ ಎಳೆದುಕೊಳ್ಳಿ ಮತ್ತು ಹೊರಬಿಡಿ.(ಉಚ್ವಾಸ ಮತ್ತು ನಿಶ್ವಾಸ). ನಂತರ ನೀವು ಉಸಿರು ಒಳಎಳೆದುಕೊಳ್ಳುವಾಗ ನಿಮ್ಮ ಬಲಪಾದ ಎಳೆದುಕೊಳ್ಳಲು ನಿಮ್ಮ ಕೈಯನ್ನು ಮುಂದೆ ಬಗ್ಗಿಸಿ ಮತ್ತು ಉಸಿರು ಹೊರಬಿದುವಾಗ ಬಲಗಾಲನ್ನು ಹೊರಚೆಲ್ಲಿಬಿಡಿ. ಈಗ ನಿಮ್ಮ ಎಡಗಾಲನ್ನು 90 ಡಿಗ್ರಿ ಯಲ್ಲಿ ಹಿಡಿದುಕೊಳ್ಳಿ.ನಿಮ್ಮ ಮಂಡಿಗೆ ತಲೆ ತಾಗಿಸುವಾಗ ಮೊಣಕೈಯನ್ನು ಪಕ್ಕದಲ್ಲಿ ಬರಲಿ.ಇನ್ನೊಂದು ಬಾಡಿಗೆ ಮಾಡುವ ಮೊದಲು ಒಂದೆರಡು ಸರಾಗ ಉಸಿರಾಟ ಮಾಡಿ. ಆರಂಭದಲ್ಲಿ ಕೇವಲ ಮಂಡಿಯನ್ನು ಹಿಡಿದುಕೊಂಡು ಪಶ್ಚಿಮೋತ್ತಾಸನ ಮಾಡುವುದು ಸುಲಭವಾಗುತ್ತದೆ.

ಮುಂದೆ ಬಾಗಿ ಕುಳಿತುಕೊಳ್ಳುವ ಆಸನ ಅಥವಾ ಪಶ್ಚಿಮೋತ್ತಾಸನ

ಕಾಲನ್ನು ಚಾಚಿ ಕುಳಿತುಕೊಳ್ಳಿ

ನಿಮ್ಮ ಬೆನ್ನನ್ನು ನೇರವಾಗಿರಿಸಿ ಕೈಯನ್ನು ಎರಡೂ ಕಾಲುಗಳ ಕೆಳಗೆ ತನ್ನಿ.ನಿಮ್ಮ ಕೈಗಳಲ್ಲಿ ಕಾಲುಗಳನ್ನು ಹಿಡಿದುಕೊಂಡು 5 ಬಾರಿ ಉಸಿರಾಡಿ.ನಂತರ ನಿಧಾನವಾಗಿ ಮೊದಲ ರೀತಿ ಮಾಡಿ.ನಿಮ್ಮ ಕೈಗಳನ್ನು ಕಾಲುಗಳಿಂದ ಹೊರತನ್ನಿ.

ಸುಲಭಾಸನ ಅಥವಾ ಸುಖಾಸನ

ಇದು ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಮಗು ಜನನವಾದ ನಂತರದ ಖಿನ್ನತೆಯನ್ನು ಹೋಗಲಾಡಿಸುತ್ತದೆ,ಹಾರ್ಮೋನುಗಳನ್ನು ಸಮತೋಲನದಲ್ಲಿ ಇಡುತ್ತದೆ. ಎರಡು ಇಂಚು ದಪ್ಪ ಇರುವ ಬ್ಲಾಂಕೆಟ್ ಹಾಸಿಕೊಂಡು ಕುಳಿತುಕೊಳ್ಳಿ. ನಿಮ್ಮ ಕಾಲುಗಳನ್ನು ಮಡಿಚಿ ಕುಳಿತುಕೊಳ್ಳಿ ಮತ್ತು ನಿಮ್ಮ ಅಂಗೈ ಮೇಲ್ಮುಖವಾಗಿ ತೊಡೆಯ ಮೇಲಿರಲಿ.ನಿಮ್ಮ ಬೆನ್ನು ನೇರವಾಗಿರಲಿ ಆದರೆ ವಿಶ್ರಾಂತಿ ಇರಲಿ. ಉಚ್ವಾಸ ಮತ್ತು ನಿಶ್ವಾಸ ಮಾಡುತ್ತಿರಿ.ಇದೇ ರೀತಿ 30 ಸೆಕೆಂಡ್ ಮಾಡುತ್ತಿರಿ.

ಮುದ್ರೆಗಳು

ಪಿಟ್ಯುಟರಿ ಮತ್ತು ಪೈನಿಯಲ್ ಗ್ರಂಥಿಗಳ ಉತ್ತೇಜನಕ್ಕೆ ಇದು ಸಹಾಯಕವಾಗುತ್ತದೆ.

ಎರಡು ಕೈಗಳನ್ನು ಜೋಡಿಸಿ ಪ್ರಾಣ ಮುದ್ರೆಯನ್ನು ಮಾಡಿ ನಿಮ್ಮ ಹೆಬ್ಬೆರಳು ಎದೆ ಮೂಳೆಯನ್ನು ಒತ್ತುತ್ತಿರಲಿ.ನಿಮ್ಮ ಹೆಬ್ಬೆರಳನ್ನು ಎಡ ಬಲ ಮತ್ತು ಮಧ್ಯದಲ್ಲಿ ತಿರುಗಿಸಿ.ಮತ್ತೆ ಪುನರಾವರ್ತಿಸಿ.ನಂತರ ಕೈಗಳನ್ನು ಪ್ರತ್ಯೇಕಿಸಿ,ಹೆಬ್ಬೆರಳು ಮತ್ತು ತೋರು ಬೆರಳು ಜೊತೆಗೂಡಿಸಿ ಜ್ಞಾನ ಮುದ್ರೆ ಮಾಡಿ.ಎರಡೂ ಬೆರಳುಗಳನ್ನು ಒಟ್ಟಿಗೆ ಒತ್ತಿ.

ನಂತರ ಮಧ್ಯ ಮತ್ತು ಹೆಬ್ಬೆರಳನ್ನು ಒಟ್ಟಿಗೆ ಒತ್ತಿ,ಅದೇ ರೀತಿ ಉಂಗುರ ಬೆರಳು ಮತ್ತು ಹೆಬ್ಬೆರಳು,ಕಿರುಬೆರಳು ಮತ್ತು ಹೆಬ್ಬೆರಳು ನಂತರ ಮತ್ತೆ ತೋರುಬೆರಳು ಮತ್ತು ಹೆಬ್ಬೆರಳು ಪುನರಾವರ್ತಿಸಿ.ನಿಮ್ಮ ಚಲನೆ ನಿಮ್ಮ ಉಸಿರಾಟವನ್ನು ಗಮನಿಸುತ್ತಿರಲಿ.ಇದೇ ರೀತಿ ಎರಡು ನಿಮಿಷಗಳ ಕಾಲ ಮುಂದುವರೆಸಿ.

English summary

Yoga Postures for Balancing Hormones

Some people believe by doing yoga poses that stimulate and/or activate certain glands and organs, the practice helps to maintain hormone balance and consistent production and distribution. Here are Best Yoga Postures for Balancing Hormones. 
X
Desktop Bottom Promotion