For Quick Alerts
ALLOW NOTIFICATIONS  
For Daily Alerts

ತೂಕ ಇಳಿಕೆಗೆ 9 ವಿಟಮಿನ್ಸ್ ಅವಶ್ಯಕ

By Super
|

ಅತಿಯಾದ ದೇಹ ತೂಕವೂ ಸಹ ವಾಸಿಯಾಗದ ಇತರ ಖಾಯಿಲೆಗಳಂತೆಯೇ ನಮ್ಮನ್ನು ಕಾಡುವ ಒಂದು ಸಮಸ್ಯೆಯೇ! ದೇಹದ ತೂಕ ಹೆಚ್ಚಾಗುವುದು ನಮ್ಮ ದೇಹ ಆಕಾರವನ್ನು ಕಳೆದುಕೊಳ್ಳುವುದು ಮಾತ್ರವಲ್ಲದ ಇದರಿಂದ ಸಾಕಷ್ಟು ಖಾಯಿಲೆಗಳೂ ಉದ್ಭವಿಸಬಹುದು!

ತೂಕವನ್ನು ಇಳಿಸಿಕೊಳ್ಳಲು ಕೆಲವು ಚಟುವಟಕೆಗಳನ್ನು ಕಡ್ಡಾಯವಾಗಿ ಪಾಲಿಸಲೇಬೇಕು. ನಿತ್ಯವೂ ವ್ಯಾಯಾಮವನ್ನು ಮಾಡುವುದರಿಂದ ಹಿಡಿದು ಸರಿಯಾದ ಆಹಾರ ಕ್ರಮವನ್ನು ಕೂಡ ಪಾಲಿಸಬೇಕಾಗುತ್ತದೆ. ಕೆಲವು ನಿರ್ದಿಷ್ಟ ವಿಟಮಿನ್ ಅಂಶ ದೇಹಕ್ಕೆ ಸೇರುವುದರಿಂದ ತೂಕ ಕಡಿಮೆಯಾಗುವುದಲ್ಲದೇ ಈ ಮೂಲಕ ಅಧಿಕ ರಕ್ತದೊತ್ತಡ ಕಡಿಮೆಯಾಗುವುದಲ್ಲದೇ ಎನರ್ಜಿ ಮಟ್ಟವೂ ಅಧಿಕವಾಗುತ್ತದೆ. ಇಲ್ಲಿ ನೀವು ಖಂಡಿತವಾಗಿ ಬಳಸಲೇಬೇಕಾದ ಕೆಲವು ಜೀವಸತ್ವಗಳ ಬಗ್ಗೆ ಮಾಹಿತಿಗಳನ್ನು ನೀಡಲಾಗಿದೆ.

ವಿಟಮಿನ್ ಬಿ ಕಾಂಪ್ಲೆಕ್ಸ್

ವಿಟಮಿನ್ ಬಿ ಕಾಂಪ್ಲೆಕ್ಸ್

ವಿಟಮಿನ್ ಬಿ ಕಾಂಪ್ಲೆಕ್ಸ್, ಎಂಟು ವಿಟಮಿನ್ ಗಳ ಗುಂಪು. ಇವುಗಳಲ್ಲಿ ಪ್ರತಿಯೊಂದು ಜೀವಸತ್ವಗಳೂ ಕೂಡ ಬೇರೆ ಬೇರೆ ರೀತಿಯಲ್ಲಿ ದೇಹಕ್ಕೆ ಅಗತ್ಯವಾಗಿರುವ ಅಂಶವನ್ನು ಒದಗಿಸುತ್ತವೆ. ಇವು ಕಾಬ್ರೋಹೈಡ್ರೆಟ್ ನ್ನು ಶಕ್ತಿಯನ್ನಾಗಿ ಪರಿವರ್ತಿಸಿ, ತೂಕವನ್ನು ಕಡಿಮೆಗೊಳಿಸುತ್ತವೆ. ಯಕೃತ್ತಿನ ಪ್ರಕ್ರಿಯೆಯನ್ನು ಸುಲಭಗೊಳಿಸಿ ಜೀರ್ಣಕ್ರಿಯೆ ಸರಿಯಾಗಿ ನಡೆಯುವಂತೆ ಮಾಡಿ ದೇಹದಲ್ಲಿ ಕೊಬ್ಬು ಉಂಟಾಗದಂತೆ ಮಾಡಲು ಈ ಜೀವಸತ್ವಗಳು ಅತ್ಯಗತ್ಯವಾಗಿವೆ.

ವಿಟಮಿನ್ ಡಿ

ವಿಟಮಿನ್ ಡಿ

ವೈದ್ಯಕೀಯ ಅಧ್ಯಯನದ ಪ್ರಕಾರ, ವಿಟಮಿನ್ ಡಿ ಅಂಶವನ್ನು ಸೇವಿಸಿದವರು ತೂಕ ಹೆಚ್ಚಾಗುವ ಅಥವಾ ಕೊಬ್ಬಿನ ಸಮಸ್ಯೆಯಿಂದ ದೂರವುಳಿಯುತ್ತಾರೆ. ಹಾಗೆಯೇ ಕಡಿಮೆ ಡೋಸ್ ವಿಟಮಿನ್ ಡಿ ಅಂಶವನ್ನು ಸೇವಿಸಿದವರಿಗಿಂತಲೂ ಹೆಚ್ಚಾಗಿ ಡಿ ಜೀವಸತ್ವವನ್ನು ಸೇವಿಸಿದವರು ಕಡಿಮೆ ತೂಕವನ್ನು ಹೊಂದಿರುತ್ತಾರೆ! ಜೊತೆಗೆ ವಿಟಮಿನ್ ಡಿ ತೂಕ ಕಡಿಮೆ ಮಾಡುವುದರ ಜೊತೆಗೆ ಕ್ಯಾಲ್ಸಿಯಂ ಹೀರಿಕೊಳ್ಳಲು ಸಹಾಯಮಾಡುತ್ತದೆ.

ವಿಟಮಿನ್ ಸಿ

ವಿಟಮಿನ್ ಸಿ

ಸಂಶೋಧನೆಯ ಪ್ರಕಾರ, ವಿಟಮಿನ್ ಸಿ ಅಂಶವು ವ್ಯಾಯಾಮದ ಫಲಿತಾಂಶವನ್ನು ಸರಿಯಾದ ಪ್ರಮಾಣದಲ್ಲಿ ದೇಹಕ್ಕೆ ದೊರಕುವಂತೆ ಮಾಡುವುದರ ಜೊತೆಗೆ ಕ್ಯಾಲೋರಿಯನ್ನು ಕಡಿಮೆಮಾಡುವುದರಲ್ಲಿ ಸಹಾಯಮಾಡುತ್ತದೆ. ಆದರೆ ಅತಿಯಾದ ಪ್ರಮಾಣದ ವಿಟಮಿನ್ ಸೇವನೆ ತೂಕವನ್ನು ಕಡಿಮೆಗೊಳಿಸುತ್ತದೆ ಎಂಬುದು ಸಾಬೀತಾದರೂ, ಕೆಲವರಲ್ಲಿ ಇದು ಜೀರ್ಣಕ್ರಿಯೆಯನ್ನು ನಿಧಾನಗೊಳಿಸಿ ತೂಕ ಹೆಚ್ಚಾಗಲೂ ಕಾರಣವಾಗಬಹುದು!

ಕ್ಯಾಲ್ಸಿಯಂ

ಕ್ಯಾಲ್ಸಿಯಂ

ಸಂಶೋಧನೆಯ ಪ್ರಕಾರ, ಕ್ಯಾಲ್ಸಿಯಂಗೂ ತೂಕ ಕಡಿಮೆಯಾಗುವುದಕ್ಕೂ ನಿಕಟ ಸಂಬಂಧವಿದೆ. ಕ್ಯಾಲ್ಸಿಯಂ ಇರುವ ಆಹಾರಗಳ ಸೇವನೆ ತೂಕವನ್ನು ಕಡಿಮೆಗೊಳಿಸುವುದರಲ್ಲಿ ನಿರ್ಣಾಯಕ ಪಾತ್ರವಹಿಸುತ್ತವೆ. ಕೊಬ್ಬನ್ನು ಕರಗಿಸುವುದರಲ್ಲಿ ಕ್ಯಾಲ್ಸಿಯಂಯುಕ್ತ ಆಹಾರ ದೇಹಕ್ಕೆ ಅತ್ಯಗತ್ಯ.

ಕ್ರೋಮಿಯಮ್

ಕ್ರೋಮಿಯಮ್

ಇದು ದೇಹದ ಕೊಬ್ಬು ಮತ್ತು ಕಾರ್ಬೋಹೈಡ್ರೇಟ್ ಗಳನ್ನು ನಿಯಂತ್ರಿಸಿ, ತೂಕ ಕಡಿಮೆಮಾಡಲು ಅತ್ಯಗತ್ಯ. ಇದು ದೇಹದಲ್ಲಿ ಗ್ಲುಕೋಸ್ ಪ್ರಕ್ರಿಯೆಗೆ ಮತ್ತು ಶಕ್ತಿ ಉತ್ಪಾದಿಸುವಲ್ಲಿ ಅಗತ್ಯವಾದ ಇನ್ಸುಲಿನ್ ಕೆಲಸಕ್ಕೆ ಸಹಾಯಮಾಡುತ್ತದೆ.

ಕೋಲೀನ್

ಕೋಲೀನ್

ಕೋಲೀನ್ ತಾಂತ್ರಿಕವಾಗಿ ಒಂದು ಜೀವಸತ್ವಅಲ್ಲದಿದ್ದರೂ, ಇದು ಸಾಮಾನ್ಯವಾಗಿ ಬಿ ಜೀವಸತ್ವಗಳ ಗುಂಪನ್ನಾಗಿಸಲಾಗಿರುವ ಒಂದು ಅತ್ಯಾವಶ್ಯಕ ಪೌಷ್ಟಿಕಾಂಶ. ಇದು ದೇಹದ ಕೊಬ್ಬುನ್ನು ಕರಗಿಸಿ ಪರಿಣಾಮಕಾರಿಯಾಗಿ ತೂಕ ಕಡಿಮೆ ಮಾಡಲು ಬೇಕಾದ ಜೀವಸತ್ವವಾಗಿದೆ. ಇಲ್ಲದಿಲ್ಲರೆ, ಕೊಬ್ಬು, ಯಕೃತ್ತಿನಲ್ಲಿಯೇ ಉಳಿದುಬಿಡುತ್ತದೆ.

ಸತು

ಸತು

ಸತುವು, ಸರಿಯಾದ ಥೈರಾಯ್ಡ್ ಕ್ರಿಯೆಯ ಜೊತೆಗೆ ಇನ್ಸುಲಿನ್ ನಿಯಂತ್ರಣಕ್ಕೆ ಅಗತ್ಯವಾಗಿದೆ. ಈ ಎರಡೂ ಕ್ತಿಯೆಗಳೂ ಸರಿಯಾಗಿ ಕಾರ್ಯ ನಿರ್ವಹಿಸದಿದ್ದರೆ ಚಯಾಪಚಯ ಕ್ರಿಯೆಗೆ ಅಡ್ಡಿಯಾಗಬಹುದು . ಇದರಿಂದಾಗಿ, ದೇಹದಲ್ಲಿ ಸತುವಿನ ಕೊರತೆಯಿದ್ದರೆ, ದೇಹದ ತೂಕವನ್ನು ತಡೆಯಲು ಅಸಾಧ್ಯ.

ಮ್ಯಾಂಗನೀಸ್

ಮ್ಯಾಂಗನೀಸ್

ಇದು ಕಾರ್ಬೋಹೈಡ್ರೇಟ್ ಮತ್ತು ಕೊಬ್ಬಿನ ಚಯಾಪಚಯವನ್ನು ಸರಿಯಾಗಿ ನಡೆಯುವಂತೆ ಮಾಡಿ ತೂಕ ನಷ್ಟಕ್ಕೆ ಸಹಕರಿಸುತ್ತದೆ.

ಮ್ಯಾಗ್ನೀಶಿಯಂ

ಮ್ಯಾಗ್ನೀಶಿಯಂ

ದೇಹದಲ್ಲಿ, ಮ್ಯಾಗ್ನೀಶಿಯಂ ಕೊರತೆ ಉಂಟಾದರೆ, ಕೊಬ್ಬು ಹೆಚ್ಚಾಗಿ ತೂಕ ಇಳಿಸಿಕೊಳ್ಳಲು ಕಷ್ಟವಾಗುತ್ತದೆ. ಇದು ದೇಹದ ಜಲಸಂಚಯನ (ಹೈಡ್ರೋಜನ್) ವ್ಯವಸ್ಥೆಯ ಜೊತೆಗೆ ಶಕ್ತಿ ಉತ್ಪಾದನೆಯಲ್ಲಿ ಒಂದು ಪ್ರಮುಖ ಪಾತ್ರವನ್ನು ವಹಿಸುತ್ತದೆ . ಇದು ಸರಿಯಾದ ಚಯಾಪಚಯ ಪ್ರಮಾಣವನ್ನು ಉಳಿಸಿಕೊಳ್ಳುಲು ಅಗತ್ಯ.

English summary

The 9 Best Vitamins For Weight Loss

Vitamins can aid in weight loss by boosting energy levels, lowering stress, burning fat and helping with digestion. Here are the 9 best vitamins for weight loss
Story first published: Tuesday, October 1, 2013, 16:49 [IST]
X
Desktop Bottom Promotion