For Quick Alerts
ALLOW NOTIFICATIONS  
For Daily Alerts

ಮೊಳಕೆ ಕಟ್ಟಿದ ಕಾಳುಗಳು ಆರೋಗ್ಯಕ್ಕೆ ಉತ್ತಮ

By Deepak M
|

ಮೊಳಕೆ ಕಾಳುಗಳು ಯಥೇಚ್ಛವಾದ ಪ್ರೊಟಿನ್ ಮತ್ತು ಪೋಷಕಾಂಶಗಳನ್ನು ಒಳಗೊಂಡಿರುವ ಸ್ವಾಭಾವಿಕ ಆಹಾರಗಳಾಗಿವೆ. ಹುರುಳಿ, ಹೆಸರುಕಾಳು, ಕಡಲೆ, ಮುಂತಾದ ಕಾಳುಗಳನ್ನು ಮೊಳೆಕೆಕಟ್ಟಿ ಸೇವಿಸಬಹುದು. ಈ ರೀತಿ ಮೊಳೆಕೆ ಬರಿಸುವುದರಿಂದಾಗಿ ಅತ್ಯಧಿಕ ಖನಿಜಗಳು, ವಿಟಮಿನ್‍ಗಳು, ಪೋಷಕಾಂಶಗಳು ಮತ್ತು ಪ್ರೊಟೀನ್‍ಗಳು ಆಹಾರ ರೂಪದಲ್ಲಿ ನಮ್ಮ ದೇಹವನ್ನು ಸೇರುತ್ತವೆ. ಮೊಳಕೆ ಪ್ರಕ್ರಿಯೆಯು ಅಜೀರ್ಣತೆಯನ್ನು ಹುಟ್ಟುಹಾಕುವ ಪೈಟೇಟ್ಸ್ ಎಂಬ "ಅಂಟಿ ನ್ಯೂಟ್ರಿಯೆಂಟ್‍"ಗಳನ್ನು ಕಾಳುಗಳಿಂದ ತೊಲಗಿಸುತ್ತದೆ. ಇವುಗಳು ಹಲವಾರು ಕಿಣ್ವಗಳನ್ನು ಹುಟ್ಟುಹಾಕುವ ಜೊತೆಗೆ ಸಂಕೀರ್ಣವಾದ ಪಿಷ್ಟಗಳನ್ನು ಕಡಿಮೆ ಮಾಡುತ್ತದೆ. ನೀರಿನಲ್ಲಿ ನೆನೆಹಾಕಿದರೆ ಸಾಕು ಕಾಳುಗಳಲ್ಲಿ ಮೊಳಕೆಯೊಡೆಯುತ್ತವೆ.

ಬಾದಾಮಿಯಂತಹ ಬೀಜಗಳು ಮೊಳಕೆಯೊಡೆದಾಗ ಯಥೇಚ್ಛವಾದ ಪೋಷಕಾಂಶಗಳು ದೊರೆಯುತ್ತವೆ. ಈ ಮೊಳಕೆಗಳು ಬಾದಮಿಯಲ್ಲಿ ಲಿಯಪ್ಸ್ ಅನ್ನು ಉಂಟುಮಾಡಿ ದೇಹದಲ್ಲಿರುವ ಕೊಬ್ಬನ್ನು ಕರಗಿಸುವಂತಹ ಪಿಷ್ಟಗಳನ್ನು ಉತ್ಪತಿ ಮಾಡುತ್ತದೆ. ಅಲ್ಫಲ್ಫಾ, ಮೂಲಂಗಿ, ಕೋಸುಗಡ್ಡೆ, ಕ್ಲೋವರ್ ಮತ್ತು ಸೋಯಾಬಿನ್ ಮುಂತಾದವುಗಳಲ್ಲಿ ನಮ್ಮನ್ನು ಸರ್ವವಿಧವಾದ ಕಾಯಿಲೆಗಳಿಂದ ಕಾಪಾಡುವಂತಹ ಪೋಷಕಾಂಶಗಳು ಸಮೃದ್ಧವಾಗಿವೆ. ಮೊಳಕೆಗಳಲ್ಲಿ ಯಥೇಚ್ಛವಾದ ಆಂಟಿ ಆಕ್ಸಿಡೆಂಟ್‍ಗಳು ಇವೆ. ಇವು ನಮಗೆ ವಯಸ್ಸಾದಂತೆ ಕಾಣುವುದನ್ನು ತಡೆಯುತ್ತವೆ.

ಮೊಳಕೆಗಳಲ್ಲಿ ಸಂಪೂರ್ಣವಾದ ಪೋಷಕಾಂಶಗಳು ಅತ್ಯಂತ ಕಡಿಮೆ ದರದಲ್ಲಿ ದೊರೆಯುತ್ತವೆ. ಹೆಸರು ಕಾಳು, ಕಡಲೆ ಕಾಳು, ಹುರುಳಿ, ಒಣ ಬಟಾಣಿ, ಮುಂತಾದ ಕಾಳುಗಳು ದೇಶದಾದ್ಯಂತ ಕೈಗೆಟುಕುವ ದರದಲ್ಲಿ ಎಲ್ಲೆಡೆ ದೊರೆಯುತ್ತವೆ. ಮೊಳಕೆ ಕಟ್ಟಿ ಅಡುಗೆ ಮಾಡುವುದು ನಮ್ಮ ದೇಶದಲ್ಲಿ ಶತ ಶತಮಾನಗಳಿಂದಲು ಚಾಲ್ತಿಯಲ್ಲಿರುವ ಪದ್ಧತಿಯಾಗಿದೆ. ಅದರಲ್ಲು ಮೊಳಕೆ ಕಟ್ಟಿದ ಅಲ್ಫಾಲ್ಫ ಕಾಳುಗಳು ಯಥೇಚ್ಛವಾದ ಮ್ಯಾಂಗನೀಸ್, ವಿಟಮಿನ್ ಎ,ಬಿ,ಸಿ,ಇ, ಕೆ ಮತ್ತು ಇನ್ನಿತರ ಉಪಯುಕ್ತ ಅಮೈನೊ ಆಮ್ಲಗಳ ಸಲುವಾಗಿ ಅತ್ಯುಪಯುಕ್ತ ಮೊಳಕೆ ಕಾಳಾಗಿ ಪ್ರಸಿದ್ಧಿಯನ್ನು ಪಡೆದಿದೆ.

ಇಲ್ಲಿ ನಿಮಗಾಗಿ ಮೊಳಕೆ ಕಟ್ಟಿದ ಕಾಳುಗಳಲ್ಲಿ ಅಡಗಿರುವ ಆರೋಗ್ಯಕಾರಿ ಪ್ರಯೋಜನಗಳನ್ನು ಪಟ್ಟಿ ಮಾಡಿ ನೀಡಿದ್ದೇವೆ ಓದಿಕೊಳ್ಳಿ.

1. ಕಿಣ್ವಗಳು

1. ಕಿಣ್ವಗಳು

ಸಾಮಾನ್ಯವಾದ ತರಕಾರಿ ಮತ್ತು ಹಣ್ಣುಗಳಿಗಿಂತ ಹೆಚ್ಚಾಗಿ ಮೊಳಕೆ ಕಾಳುಗಳಲ್ಲಿ ಹೆಚ್ಚಿನ ಪ್ರಮಾಣದ ಕಿಣ್ವಗಳು ಇವೆಯೆಂದು ಅಧ್ಯಯನಗಳಿಂದ ಧೃಡಪಟ್ಟಿವೆ. ಈ ಕಿಣ್ವಗಳು ಒಂದು ಬಗೆಯ ಪ್ರೊಟಿನ್‍ಗಳಾಗಿದ್ದು, ಇವುಗಳು ಆಹಾರದಿಂದ ವಿಟಮಿನ್, ಮಿನೆರಲ್, ಅಮೈನೊ ಆಮ್ಲ ಮತ್ತು ಉಪಯುಕ್ತವಾದ ಕೊಬ್ಬಿನ ಆಮ್ಲಗಳನ್ನು ನಿಮ್ಮ ದೇಹಕ್ಕೆ ಹೆಚ್ಚಿನ ಪ್ರಮಾಣದಲ್ಲಿ ದೊರೆಯುವಂತೆ ಮಾಡುತ್ತದೆ.

2. ಹೆಚ್ಚಿನ ಪ್ರೊಟಿನ್

2. ಹೆಚ್ಚಿನ ಪ್ರೊಟಿನ್

ಬೀನ್ಸ್, ಬೀಜಗಳು, ಕಾಳುಗಳು ಮತ್ತು ಧಾನ್ಯಗಳಲ್ಲಿರುವ ಪ್ರೊಟಿನ್‍ಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಪಡೆಯಲು ಮೊಳಕೆ ಕಟ್ಟುವ ಪ್ರಕ್ರಿಯೆಯು ನೆರವಿಗೆ ಬರುತ್ತದೆ. ಈ ಪ್ರಕ್ರಿಯೆಯಲ್ಲಿ ಉತ್ಪತ್ತಿಯಾಗುವ ಅಮೈನೊ ಆಮ್ಲಗಳು ನಿಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ.

3. ಅತಿ ಹೆಚ್ಚಿನ ಪ್ರಮಾಣದ ನಾರಿನಂಶವನ್ನು ಹೊಂದಿರುತ್ತದೆ.

3. ಅತಿ ಹೆಚ್ಚಿನ ಪ್ರಮಾಣದ ನಾರಿನಂಶವನ್ನು ಹೊಂದಿರುತ್ತದೆ.

ಮೊಳಕೆ ಕಟ್ಟುವ ಪ್ರಕ್ರಿಯೆಯಿಂದ ಕಾಳುಗಳಲ್ಲಿ ನಾರಿನಂಶವು ಅಧಿಕಗೊಳ್ಳುತ್ತದೆ. ಇವುಗಳು ನಿಮ್ಮ ಜೀರ್ಣ ಶಕ್ತಿಯನ್ನು ಮತ್ತು ತೂಕ ಇಳಿಸಿಕೊಳ್ಳಲು ನೆರವಾಗುತ್ತವೆ. ನಾರಿನಂಶವು ನಿಮ್ಮ ದೇಹದಲ್ಲಿರುವ ಅನಗತ್ಯ ಕೊಬ್ಬು ಮತ್ತು ಟಾಕ್ಸಿನ್‍ಗಳನ್ನು ಹೊರದಬ್ಬುತ್ತದೆ.

4. ವಿಟಮಿನ್‍ಗಳು

4. ವಿಟಮಿನ್‍ಗಳು

ಮೊಳಕೆ ಕಟ್ಟುವ ಪ್ರಕ್ರಿಯೆಯಿಂದಾಗಿ ವಿಟಮಿನ್‍ಗಳು ವೃದ್ಧಿಗೊಳ್ಳುತ್ತವೆ. ಅದರಲ್ಲು ವಿಟಮಿನ್ ಎ, ಬಿ-ಕಾಂಪ್ಲೆಕ್ಸ್, ಸಿ ಮತ್ತು ಇ ಗಳು ವೃದ್ಧಿಗೊಳ್ಳುತ್ತವೆ. ಕೆಲವೊಂದು ಅಧ್ಯಯನಗಳ ಪ್ರಕಾರ ಮೊಳಕೆ ಕಟ್ಟಿದಾಗ ಆ ಕಾಳಿನಲ್ಲಿರುವ ವಿಟಮಿನ್ ಪ್ರಮಾಣವು ಅದರಲ್ಲಿನ ಮೂಲ ಪ್ರಮಾಣಕ್ಕಿಂತ 20 ಪಟ್ಟು ಹೆಚ್ಚಾಗುತ್ತದೆ ಎಂದು ತಿಳಿದು ಬಂದಿವೆ.

5. ಅಮೈನೊ ಆಮ್ಲಗಳು

5. ಅಮೈನೊ ಆಮ್ಲಗಳು

ಅಮೈನೊ ಆಮ್ಲಗಳ ಕೊರತೆಯಿಂದ ಸ್ಥೂಲ ಕಾಯದ ಸಮಸ್ಯೆ ಎದುರಾಗುತ್ತದೆ. ಅದರಲ್ಲು ನಿರಂತರವಾಗಿ ಸರಿಯಾದ ಆಹಾರ ಕ್ರಮವಿಲ್ಲದಿದ್ದರೆ ಸ್ಥೂಲ ಕಾಯ ಕಟ್ಟಿಟ್ಟ ಬುತ್ತಿ. ಮೊಳಕೆ ಕಟ್ಟಿದ ಕಾಳುಗಳಲ್ಲಿ ನಮ್ಮ ದೇಹದ ಚೈತನ್ಯವನ್ನು ಕಾಪಾಡುವಂತಹ ಅಮೈನೊ ಆಮ್ಲಗಳು ಹೆಚ್ಚಿನ ಪ್ರಮಾಣದಲ್ಲಿ ದೊರೆಯುತ್ತವೆ.

6. ಅತ್ಯುಪಯುಕ್ತವಾದ ಖನಿಜಗಳು

6. ಅತ್ಯುಪಯುಕ್ತವಾದ ಖನಿಜಗಳು

ಮೊಳಕೆಗಳಲ್ಲಿ ಖನಿಜಗಳು ವಿವಿಧ ರೂಪದಲ್ಲಿ ಅಡಗಿರುತ್ತವೆ. ಮೊಳಕೆಯೊಡೆಯುವಾಗ ಕ್ಯಾಲ್ಸಿಯಂ, ಮೆಗ್ನಿಶಿಯಂ ಇತ್ಯಾದಿಗಳು ಉತ್ಪತ್ತಿಯಾಗುತ್ತವೆ. ಇವುಗಳು ನಮ್ಮ ಆಹಾರದಲ್ಲಿ ಸುಲಭವಾಗಿ ಜೀರ್ಣಗೊಳ್ಳುತ್ತವೆ.

7. ಕೀಟನಾಶಕಗಳನ್ನು ಮತ್ತು ರಾಸಾಯನಿಕಗಳನ್ನು ನಿಯಂತ್ರಿಸುತ್ತವೆ.

7. ಕೀಟನಾಶಕಗಳನ್ನು ಮತ್ತು ರಾಸಾಯನಿಕಗಳನ್ನು ನಿಯಂತ್ರಿಸುತ್ತವೆ.

ಮೊಳಕೆ ಕಟ್ಟುವ ಪ್ರಕ್ರಿಯೆಯಿಂದ ಆ ಕಾಳು ಅಥವಾ ಧಾನ್ಯಗಳನ್ನು ಸಂಸ್ಕರಿಸುವಾಗ ಅಥವಾ ಬೆಳೆಯುವಾಗ ಸಿಂಪಡಿಸಿರುವ ಕೀಟ ನಾಶಕ ಮತ್ತು ರಾಸಾಯನಿಕಗಳನ್ನು ನಿವಾರಿಸಿಕೊಳ್ಳಬಹುದು. ಇದು ಮೊಳೆಕೆಯಿಂದ ದೊರೆಯುವ ಅತ್ಯದ್ಭುತ ಲಾಭವಾಗಿದೆ.

8. ಶಕ್ತಿಯನ್ನು ಬಿಡುಗಡೆ ಮಾಡುತ್ತವೆ.

8. ಶಕ್ತಿಯನ್ನು ಬಿಡುಗಡೆ ಮಾಡುತ್ತವೆ.

ಮೊಳಕೆ ಕಟ್ಟುವ ಪ್ರಕ್ರಿಯೆಯಿಂದಾಗಿ ಆ ಕಾಳು ಅಥವಾ ಧಾನ್ಯಗಳಲ್ಲಿರುವ ಶಕ್ತಿಯು ಬಿಡುಗಡೆ ಹೊಂದುತ್ತದೆ. ಇವು ಆ ಧಾನ್ಯದಲ್ಲಿರುವ ಸಂಪೂರ್ಣ ಪೋಷಕಾಂಶಗಳ ಸದುಪಯೋಗ ನಮ್ಮ ದೇಹಕ್ಕೆ ದೊರೆಯುವಂತೆ ಮಾಡುತ್ತವೆ.

9. ಕೈಗೆಟುಕುವ ದರದಲ್ಲಿ ದೊರೆಯುತ್ತದೆ.

9. ಕೈಗೆಟುಕುವ ದರದಲ್ಲಿ ದೊರೆಯುತ್ತದೆ.

ಇತರ ಪೋಷಕಾಂಶ ಭರಿತ ಆಹಾರಗಳಿಗಿಂತ ಮೊಳಕೆಗಳು ಸುಲಭವಾಗಿ ಕೈಗೆಟುಕುವ ದರದಲ್ಲಿ ನಮಗೆ ದೊರೆಯುತ್ತವೆ. ಜೊತೆಗೆ ಇವು ಸರ್ವ ಋತು ಆಹಾರಗಳು ಯಾವಾಗಲು ದೊರೆಯುತ್ತವೆ. ಇಲ್ಲವಾದಲ್ಲಿ ನೀವೇ ಇವುಗಳನ್ನು ತಯಾರಿಸಿಕೊಳ್ಳಬಹುದು. ಇದರ ಬೆಲೆಯು ಕಡಿಮೆ ಎಂಬುದು ಇದರ ಹಿರಿಮೆಯಾಗಿರುತ್ತದೆ.

10. ಹೊಂದಿಕೊಳ್ಳುವ ಆಹಾರ

10. ಹೊಂದಿಕೊಳ್ಳುವ ಆಹಾರ

ಇದನ್ನು ಹೇಗೆ ಬೇಕಾದರು ಸೇವಿಸಬಹುದು. ಬೇಯಿಸಿ, ಬೇಯಿಸದೆ ಹೀಗೆ ನಾನಾ ಬಗೆಯಲ್ಲಿ ಇವುಗಳನ್ನು ಸೇವಿಸಬಹುದು. ನಿಮ್ಮ ಸ್ಥಳೀಯ ಆಹಾರ ಪದ್ಧತಿಗು ಇದು ಹೊಂದಿಕೊಳ್ಳುತ್ತದೆ. ಜೀವನಶೈಲಿಗು ಸಹ ಇದು ಹೊಂದಿಕೊಳ್ಳುತ್ತದೆ. ಜೊತೆಗೆ ಎಲ್ಲಾ ರೀತಿಯ ರುಚಿಗು ಇದು ಹೊಂದಿಕೊಳ್ಳುತ್ತದೆ.

English summary

Health benefits of sprouts

Published: Friday, November 22, 2013, 10:34 [IST] Ads by Google Sprouts are highly nutritional and protein rich source of natural food. Pulses, Nuts, Seeds, Grains, and Beans can be sprouted. Sprouting helps in absorption of minerals and increase their protein, vitamin and nutrient content.
Story first published: Monday, November 25, 2013, 9:33 [IST]
X
Desktop Bottom Promotion