For Quick Alerts
ALLOW NOTIFICATIONS  
For Daily Alerts

ಹೊಟ್ಟೆಯ ಬೊಜ್ಜನ್ನು ಕರಗಿಸುವ ಸರಳ ಉಪಾಯ ಇಲ್ಲಿದೆ

|

ಹೊಟ್ಟೆಯ ಬೊಜ್ಜು ಬರೀ ನಿಮ್ಮ ಲುಕ್ ನಷ್ಟೇ ಅಲ್ಲ, ನಿಮ್ಮ ಆರೋಗ್ಯವನ್ನು ಕೂಡ ಹಾಳು ಮಾಡುತ್ತದೆ. ಹೊಟ್ಟೆಯ ಬೊಜ್ಜು ಬೆಳೆಸಿದಷ್ಟು ಕಾಯಿಲೆಗಳನ್ನು ಆಹ್ವಾನಿಸಿಕೊಂಡಂತೆ. ಆದ್ದರಿಂದ ಅದನ್ನು ಕರಗಿಸುವುದು ಆರೋಗ್ಯದ ದೃಷ್ಟಿಯಿಂದ ಅವಶ್ಯಕ ಕೂಡ. ಕೆಲವರು ಹೇಳುವುದನ್ನು ಕೇಳಬಹುದು 'ಎಷ್ಟು ಪ್ರಯತ್ನಿಸಿದರೂ ನನ್ನ ಹೊಟ್ಟೆ ಕಡಿಮೆಯಾಗಲಿಲ್ಲ'. ಆದರೆ ಈ ವಾದ ಸರಿಯಲ್ಲ, ಏಕೆಂದರೆ ಆಹಾರಕ್ರಮ ಹಾಗೂ ವ್ಯಾಯಾಮದ ಕಡೆಗೆ ಗಮನ ಹರಿಸಿದರೆ ಎಂತಹ ಬೊಜ್ಜನ್ನು ಕೂಡ ಕಡಿಮೆ ಮಾಡಬಹುದು.

ಇಲ್ಲಿ ನಾವು ಹೊಟ್ಟೆಯ ಬೊಜ್ಜನ್ನು ಕರಗಿಸಲು ಸರಳವಾದ ಹಾಗೂ ಪರಿಣಾಮಕಾರಿಯಾದ 7 ಟಿಪ್ಸ್ ಅನ್ನು ನೀಡಿದ್ದೇವೆ. ಅವುಗಳನ್ನು ಪಾಲಿಸಿದರೆ ಬೊಜ್ಜು ರಹಿತ ದೇಹ ಹಾಗೂ ದೇಹ ಸೌಂದರ್ಯ ನಿಮ್ಮ,ದಾಗುವುದು.

1. ಬ್ಲ್ಯಾಕ್ ಬೀನ್ಸ್

1. ಬ್ಲ್ಯಾಕ್ ಬೀನ್ಸ್

ಇದರಲ್ಲಿ ಪ್ರೊಟೀನ್ ಮತ್ತು ನಾರಿನಂಶ ಅಧಿಕವಾಗಿದೆ. ಅಲ್ಲದೆ ಈ ಬೀನ್ಸ್ ನಲ್ಲಿ ಉಳಿದ ಬೀನ್ಸ್ ಗಳಿಗಿಂತ ಅಧಿಕ ಫ್ಲೇವನೋಯ್ಡ್ಸ್ ಅಂಶವಿದ್ದು ಇದು ಹೊಟ್ಟೆಯ ಬೊಜ್ಜನ್ನು ಕಡಿಮೆ ಮಾಡುವಲ್ಲಿ ಸಹಕಾರಿಯಾಗಿದೆ ಅನ್ನುವುದು ಸಂಶೋಧನೆಯಿಂದ ದೃಢಪಟ್ಟಿದೆ.

2. ಪಾಪ್ ಕಾರ್ನ್

2. ಪಾಪ್ ಕಾರ್ನ್

ಪಾಪ್ ಕಾರ್ನ್ ಅನ್ನು ಜೋಳದಿಂದ ತಯಾರಿಸಲಾಗುವುದು. ಜೋಳದಲ್ಲಿ ನಾರಿನಂಶ ಕಡಿಮೆ ಇರುವುದರಿಂದ ದೇಹದ ತೂಕ ಕಡಿಮೆ ಮಾಡುವಲ್ಲಿ ಸಹಕಾರಿಯಾಗಿದೆ. ಪಾಸ್ತಾ, ಪಿಜ್ಜಾ, ಅನ್ನ ಇವುಗಳನ್ನು ತಿನ್ನಲು ಹೋಗಬಾರದು.

3. ಆಲೂಗೆಡ್ಡೆ

3. ಆಲೂಗೆಡ್ಡೆ

ಆಲೂಗೆಡ್ಡೆ ತಿಂದರೆ ಹೊಟ್ಟೆ ದಪ್ಪಗಾಗುತ್ತದೆ ಎಂದು ಹೆಚ್ಚಿನವರು ಭಾವಿಸುತ್ತಾರೆ. ಆದರೆ ಆಲೂಗೆಡ್ಡೆಯನ್ನು ಬೇಯಿಸಿ ತಣ್ಣನೆ ಮಾಡಿ ಸಲಾಡ್ ನಲ್ಲಿ ಹಾಕಿ ತಿಂದರೆ ಹೊಟ್ಟೆ ದಪ್ಪಗಾಗುವುದಿಲ್ಲ. ಏಕೆಂದರೆ ಆಲೂಗೆಡ್ಡೆ ಹೊಟ್ಟೆ ಹಸಿವು ಹೆಚ್ಚಿಸುವ ಹಾರ್ಮೋನ್ ಅನ್ನು ನಿಯಂತ್ರಣದಲ್ಲಿಡುತ್ತದೆ. ಇದರಿಂದ ಕಡಿಮೆ ಊಟ ಸಾಕಾಗುತ್ತದೆ. ದೇಹವು ತನಗೆ ಬೇಕಾದ ಕೊಬ್ಬಿನಂಶ ಆಹಾರದಿಂದ ದೊರೆಯದಿದ್ದರೆ ದೇಹದಲ್ಲಿರುವ ಕೊಬ್ಬನ್ನೇ ಕರಗಿಸುತ್ತದೆ. ಇದರಿಂದ ದೇಹದ ತೂಕ ಹೆಚ್ಚಾಗುವುದು.

4. ನೆಲಗಡಲೆ

4. ನೆಲಗಡಲೆ

ನೆಲಗಡಲೆಯಲ್ಲಿ ಕೊಬ್ಬಿನಂಶವಿದೆ. ಆದರೆ ಇದರಲ್ಲಿರುವ ಕೊಬ್ಬಿನಂಶ ಬೇಗನೆ ಕರಗುತ್ತದೆ. ಸ್ನಾಕ್ಸ್ ಆಗಿ ಚಾಕಲೇಟ್ ತಿನ್ನುವ ಬದಲು ನೆಲಗಡಲೆ ತಿಂದರೆ ಹೊಟ್ಟೆ ಬೊಜ್ಜು ಬರುವುದನ್ನು ತಡೆಯಬಹುದು.

5. ಸೂರ್ಯಕಾಂತಿ ಬೀಜ

5. ಸೂರ್ಯಕಾಂತಿ ಬೀಜ

ಇದನ್ನು ಸೂಪ್ ಅಥವಾ ಸಲಾಡ್ ನಲ್ಲಿ ಹಾಕಿ ತಿಂದರೆ ಸೊಂಟದ ಸುತ್ತಳತೆ ಹೆಚ್ಚಾಗದಂತೆ ತಡೆಯಬಹುದು ಹಾಗೂ ಇದು ಹೊಟ್ಟೆಯ ಬೊಜ್ಜನ್ನು ಕರಗಿಸುತ್ತದೆ.

6. ವೈಟ್ ಟೀ

6. ವೈಟ್ ಟೀ

ವೈಟ್ ಟೀಯನ್ನು ಜಪಾನಿನಲ್ಲಿ ಇದನ್ನು ಬೆಳೆಯಲಾಗುವುದು. ಈ ವೈಟ್ ಟೀಯನ್ನು ಪ್ರತಿನಿತ್ಯ ಕುಡಿದರೆ ಹೊಟ್ಟೆಯ ಬೊಜ್ಜನ್ನು ಕರಗಿಸಬಹುದು. ಗ್ರೀನ್ ಟೀ ಕುಡಿದರೂ ಸಾಕು ಹೊಟ್ಟೆಯ ಬೊಜ್ಜು ಕರಗುವುದು.

 7. ಆಪಲ್ ಸೈಡರ್ ವಿನಿಗರ್

7. ಆಪಲ್ ಸೈಡರ್ ವಿನಿಗರ್

ಒಂದು ಲೋಟ ಬಿಸಿ ನೀರಿಗೆ ಒಂದು ಚಮಚ ಆಪಲ್ ಸೈಡರ್ ಹಾಕಿ ಕುಡಿಯುತ್ತಾ ಬಂದರೆ ಶೀಘ್ರವೇ ಹೊಟ್ಟೆ ಕರಗುತ್ತದೆ ಹಾಗೂ ದೇಹದಲ್ಲಿ ಅಧಿಕ ಕೊಬ್ಬಿನಂಶ ಸಂಗ್ರಹವಾಗಲು ಬಿಡುವುದಿಲ್ಲ.

English summary

Effective Tips To Reduce Stomach Fat Fat | Tips For Health | ಹೊಟ್ಟೆಯ ಬೊಜ್ಜನ್ನು ಕರಗಿಸಲು ಪರಿಣಾಮಕಾರಿ ಟಿಪ್ಸ್ | ಆರೋಗ್ಯಕ್ಕಾಗಿ ಕೆಲ ಸಲಹೆಗಳು

Stomach not only spoil your look, but also spoil your health. So it''s better to reduce stomach fat for healthy body. Here is some effective tips to reduce belly fat.
X
Desktop Bottom Promotion