For Quick Alerts
ALLOW NOTIFICATIONS  
For Daily Alerts

ಹೋ.. ಖಾರದಿಂದ ವಾವ್! ಅನ್ನುವಂತಹ ಮೈಕಟ್ಟು

|
Tips For Reduce Weight
ಅತಿ ಖಾರವನ್ನು ತಿನ್ನುವುದು ಆರೋಗ್ಯಕ್ಕೆ ಅಷ್ಟು ಒಳ್ಳೆಯದಲ್ಲ , ಆದ್ದರಿಂದ ಅದನ್ನು ಮಿತವಾಗಿ ತಿನ್ನಬೇಕು ಎನ್ನುವುದು ವೈದ್ಯರ ಸಲಹೆ. ಆಹಾರವು ರುಚಿಕರವಾಗಿರಬೇಕೆಂದರೆ ಸ್ವಲ್ಪ ಖಾರ ಬೇಕು, ಚಪ್ಪೆ ಊಟ ಬಾಯಿಗೆ ಅಷ್ಟು ರುಚಿಸುವುದಿಲ್ಲ. ಈ ಮೆಣಸನ್ನು ಅಡುಗೆಗೆ ಅಷ್ಟೆ ಅಲ್ಲ ಆರ್ಯುವೇದಲ್ಲೂ ಕೂಡ ಔಷಧಿಯಾಗಿ ಬಳಸುತ್ತಾರೆ. ಮೆಣಸು ತೂಕ ಕಡಿಮೆ ಮಾಡುತ್ತದೆ. ಕೊಲೆಸ್ಟ್ರಾಲ್ ಕರಗಿಸುವಲ್ಲಿ ಮೆಣಸು ಹೇಗೆ ಪರಿಣಾಮಕಾರಿ ಎಂದು ತಿಳಿಯಲು ಮುಂದೆ ಓದಿ.

ತೂಕ ಕಡಿಯಾಗಲು ಕಾರಣ:

ಮೆಣಸು ತಿಂದಾಗ ಬಾಯಿ ಉರಿಯಾಗಿ ಮುಖ ಕೆಂಪಾಗುತ್ತದೆ. ಹೊಟ್ಟೆಯಲ್ಲಿ ಉರಿ ಉಂಟಾಗುತ್ತದೆ. ಇದರ ಜೊತೆಗೆ ಅಧಿಕ ಕೊಬ್ಬನ್ನು ಕರಗಿಸುತ್ತದೆ. ಆದ್ದರಿಂದ ಅಧಿಕ ಖಾರ ತಿಂದರೆ ಕೊಬ್ಬು ದೇಹದಲ್ಲಿ ಶೇಖರವಾಗುವುದಿಲ್ಲವಾದ್ದರಿಂದ ತೆಳ್ಳಗಿನ ಮೈಮಾಟ ಪಡೆಯಬಹುದು.

ಇಷ್ಟಲ್ಲದೆ ಮೆಣಸು ಸೇವನೆಯ ಇತರ ಪ್ರಯೋಜನಗಳು:

1. ಖಾರ ಆಹಾರ ತಿಂದರೆ ಆಗಾಗ ತಿನ್ನಬೇಕೆಂದು ಅನಿಸುವುದಿಲ್ಲ.

2. ತಿಂದ ಆಹಾರ ಬೇಗನೆ ಜೀರ್ಣವಾಗುತ್ತದೆ.

3. ತುಂಬಾ ಖಾರ ಅಧಿಕ ಕ್ಯಾಲೋರಿ ಅಥವಾ ಅಧಿಕ ಕೊಬ್ಬಿನ ಇರುವ ಆಹಾರದಲ್ಲಿದ್ದರೆ ಹೆಚ್ಚಾಗಿ ತಿನ್ನಲು ಸಾಧ್ಯವಿಲ್ಲ. ಇದರಿಂದ ದೇಹದಲ್ಲಿ ಕೊಬ್ಬಿನಂಶ ಹೆಚ್ಚುವುದಿಲ್ಲ.

4. ಖಾರವನ್ನು ಇಷ್ಟ ಪಡುವವರು ಸಿಹಿ ತಿಂಡಿಗಳನ್ನು ಇಷ್ಟ ಪಡುವುದು ಕಷ್ಟ. ಸಿಹಿ ದೇಹದ ತೂಕವನ್ನು ಹೆಚ್ಚು ಮಾಡುವುದು.

ಖಾರದ ಜೊತೆ ಶುಂಠಿ, ಬೆಳ್ಳುಳ್ಳಿ ಸೇವಿಸಿದರೆ ಬೊಜ್ಜು ಬೇಗನೆ ಕರಗುತ್ತದೆ. ಹಾಗಂತ ಬರೀ ಖಾರ ತಿನ್ನುವ ಬದಲು ಮಿತಿ ಖಾರ ಆಹಾರ ಆರೋಗ್ಯಕ್ಕೆ ಒಳ್ಳೆಯದು.

English summary

Chillies Will Reduce Weight | Tips For Reduce Weight | ಮೆಣಸು ತೂಕ ದೇಹದ ಕಡಿಮೆ ಮಾಡುವುದು | ತೂಕ ಕಡಿಮೆಯಾಗಲು ಕೆಲ ಸಲಹೆ

Although chillies or chilli pepper have been branded as bad foods they do have some magic to play when it comes to weight loss. This diet is useful for the obese as the food they eat is getting burnt immediately without getting stored.
Story first published: Saturday, January 21, 2012, 13:03 [IST]
X
Desktop Bottom Promotion