For Quick Alerts
ALLOW NOTIFICATIONS  
For Daily Alerts

ಮಧುಮೇಹಿಗಳೇ ಅಡುಗೆ ಎಣ್ಣೆಯ ಕುರಿತು ಎಚ್ಚರವಿರಲಿ

By Super
|

ಅಡುಗೆ ಎಣ್ಣೆ ಎಂದರೆ ಹಿಂದೆ ಕೇವಲ 'ಎಳ್ಳೆಣ್ಣೆ' ಮಾತ್ರ ಆಗಿತ್ತು. ಆದರೆ ಇಂದು ಅಡುಗೆಗೆ ಹತ್ತು ಹಲವು ರೀತಿಯ ಎಣ್ಣೆಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಆದರೆ ಎಲ್ಲಾ ಎಣ್ಣೆಗಳು ಆರೋಗ್ಯಕ್ಕೆ ಉತ್ತಮವಲ್ಲ. ಉದಾಹರಣೆಗೆ ಅಗ್ಗ ಎಂಬ ಕಾರಣಕ್ಕೆ ಹೆಚ್ಚಿನ ಜನರು ಬಳಸುತ್ತಿರುವ ಪಾಮ್ ಎಣ್ಣೆ ಆರೋಗ್ಯಕರವಲ್ಲ. ಅದರಲ್ಲೂ ಮಧುಮೇಹಿಗಳಿಗೆ ಇದು ವಿಷಕ್ಕೆ ಸಮಾನವಾಗಿದೆ. ಮಧುಮೇಹಿಗಳಿಗೆ ಬಹಳಷ್ಟು ಆಹಾರವಸ್ತುಗಳು ನಿಷೇಧವಿರುವಂತೆಯೇ ಅಡುಗೆ ಎಣ್ಣೆಯ ಆಯ್ಕೆಯಲ್ಲಿಯೂ ಎಚ್ಚರ ವಹಿಸುವುದು ಅಗತ್ಯವಾಗಿದೆ. ಏಕೆಂದರೆ ಇತರರಿಗಿಂತ ಮಧುಮೇಹಿಗಳ ರಕ್ತದಲ್ಲಿ ಸೇರುವ ಸಕ್ಕರೆ, ಉಪ್ಪು, ಎಣ್ಣೆ, ಕೊಲೆಸ್ಟ್ರಾಲ್ ಮೊದಲಾದವು ಅವರ ಆರೋಗ್ಯವನ್ನು ಏರುಪೇರುಗೊಳಿಸುತ್ತವೆ.

ಒಂದು ವೇಳೆ ನೀವು ಮಧುಮೇಹಿಗಳಾಗಿದ್ದರೆ ನಿಮ್ಮ ಆರೋಗ್ಯಕ್ಕೆ ಪೂರಕವಾದ ಅಡುಗೆ ಎಣ್ಣೆಯನ್ನು ಆಯ್ಕೆ ಮಾಡಿಕೊಳ್ಳುವುದು ನಿಮ್ಮ ಹೃದಯ ಮತ್ತು ಒಟ್ಟಾರೆ ಆರೋಗ್ಯಕ್ಕೆ ಅಗತ್ಯವಾಗಿದೆ. ಸಾಮಾನ್ಯವಾಗಿ ಮಧುಮೇಹಿಗಳು ರುಚಿಗೆ ಕಾತರಿಸುತ್ತಾ ಇರುತ್ತಾರೆ. ನಿಮಗೆ ಕೊಂಚ ಬೇಸರವಾಗುವಂತೆ ನಿಮ್ಮ ಆರೋಗ್ಯಕ್ಕೆ ಪೂರಕವಾದ ಎಣ್ಣೆಗಳೆಲ್ಲಾ ಇತರ ಎಣ್ಣೆಗಳಷ್ಟು ರುಚಿಕರವಲ್ಲ! ಸಾಮಾನ್ಯವಾಗಿ ಅಡುಗೆ ಎಣ್ಣೆಗಳಲ್ಲಿ ಮೂರು ಬಗೆಯ ಕೊಬ್ಬಿನ ತೈಲದ ಮಿಶ್ರಣವಿರುತ್ತದೆ. monounsaturated fat, polyunsaturated fat ಮತ್ತು saturated fat ಎಂಬ ಈ ಮೂರು ಕೊಬ್ಬಿನ ತೈಲದ ತಲಾವಾರು ಪ್ರಮಾಣ ಆ ಎಣ್ಣೆ ಎಷ್ಟು ಆರೋಗ್ಯಕರ ಎಂಬುದನ್ನು ತಿಳಿಸುತ್ತದೆ. ದೇಹದ ಸ್ವಾಸ್ಥ್ಯಕ್ಕಾಗಿ ಆರೋಗ್ಯಕರವಾದ ಅಡುಗೆ ಎಣ್ಣೆ ಯಾವುದು?

ನಿಮಗೆ ಯಾವ ಎಣ್ಣೆ ಸೂಕ್ತ ಎಂದು ಕಂಡುಕೊಂಡ ಬಳಿಕ ನಿಮ್ಮ ನಿತ್ಯದ ಆಹಾರವನ್ನು ಆ ಎಣ್ಣೆಯಿಂದಲೇ ತಯಾರಿಸಿ ಸೇವಿಸುವ ಮೂಲಕ ನಿಮ್ಮ ಮಧುಮೇಹ ಶೀಘ್ರವೇ ಹತೋಟಿಗೆ ಬರುತ್ತದೆ ಹಾಗೂ ತನ್ಮೂಲಕ ಆರೋಗ್ಯವನ್ನು ವೃದ್ಧಿಸುತ್ತದೆ. ಸಾಮಾನ್ಯವಾಗಿ ಅಡುಗೆ ಎಣ್ಣೆ ಅಪ್ಪಟವೇ ಎಂದು ಹಿಂದೆ ಬಣ್ಣ, ರುಚಿ ಮತ್ತು ಸಾಂದ್ರತೆಯ ಮೂಲಕ ಸ್ಥೂಲವಾಗಿ ಅಳೆಯಲಾಗುತ್ತಿತ್ತು.

ಆದರೆ ಇಂದು ಇದಕ್ಕೂ ಹೆಚ್ಚಿನ ಪರೀಕ್ಷೆಗಳು ಎಣ್ಣೆ ಅಪ್ಪಟವೇ ಎಂದು ಖಾತ್ರಿಪಡಿಸುತ್ತವೆ. ಸುಲಭ ವಿಧಾನವೆಂದರೆ ಕೊಂಚ ಎಣ್ಣೆಯನ್ನು ಬಿಸಿಮಾಡಿ ನೋಡುವುದು. ಬಿಸಿಯಾದ ಬಳಿಕ ಬಣ್ಣ ಬದಲಾಗದಿದ್ದರೆ, ರುಚಿ ಕಳಪೆಯಾಗದಿದ್ದರೆ ಮತ್ತು ಕರಿಯಲು ಹಾಕಿದ ತಿಂಡಿಯಿಂದ ತುಂಬಾ ನೊರೆ ಬರದಿದ್ದರೆ ಅದು ಉತ್ತಮ ಎಂದು ಸ್ಥೂಲವಾಗಿ ಅರಿತುಕೊಳ್ಳಬಹುದು. ಮಧುಮೇಹ ರೋಗದ ಹೆಡೆಮುರಿ ಕಟ್ಟಿಹಾಕುವ ಫಲಪ್ರದ ಮನೆಮದ್ದು

ಆದರೆ ಆರೋಗ್ಯದ ನಿಟ್ಟಿನಲ್ಲಿ ಪ್ರಯೋಗಾಲಯದಲ್ಲಿ ನಡೆಸುವ ಪರೀಕ್ಷೆಗಳು ನಿಖರವಾದ ಪರಿಣಾಮಗಳನ್ನು ಒದಗಿಸುತ್ತವೆ. ಇದರಲ್ಲಿ ಯಾವ ಕೊಬ್ಬು ಎಷ್ಟು ಪ್ರಮಾಣದಲ್ಲಿದೆ, ಇದನ್ನು ಸೇವಿಸಿದ ಬಳಿಕ ದೇಹದ ಜೀವರಾಸಾಯನಿಕ ಕ್ರಿಯೆಯಲ್ಲಿ ಮಾಡುವ ಪರಿಣಾಮ, ಬಿಸಿಯನ್ನು ತಾಳಿಕೊಳ್ಳುವ ಕ್ಷಮತೆ ಮೊದಲಾದವುಗಳನ್ನು ಅಳೆಯಲಾಗುತ್ತದೆ. ಮಧುಮೇಹಿಗಳಿಗೆ ಸೂಕ್ತವಾದ ಎಣ್ಣೆಯನ್ನು ಆರಿಸಿಕೊಳ್ಳಲು ಕೆಳಗಿನ ಸ್ಲೈಡ್ ಶೋ ನೆರವು ನೀಡುತ್ತದೆ.

 ಕೊಬ್ಬರಿ ಎಣ್ಣೆ

ಕೊಬ್ಬರಿ ಎಣ್ಣೆ

ಚಳಿಗೆ ಗಟ್ಟಿಯಾಗುತ್ತದೆ ಎಂಬ ಒಂದೇ ಕಾರಣವನ್ನು ಹಿಡಿದು ಭಾರತದ ಮಾರುಕಟ್ಟೆಯನ್ನು ಆಕ್ರಮಿಸಿಕೊಳ್ಳುವ ಬಹುರಾಷ್ಟ್ರೀಯ ಸಂಸ್ಥೆಗಳು ಕೊಬ್ಬರಿ ಎಣ್ಣೆಯನ್ನು ನಿಷೇಧಿಸಲು ಎಷ್ಟೇ ಹೆಣಗಾಡಿದರೂ ನೂರಾರು ವರ್ಷಗಳಿಂದ ಭಾರತದ ಮನೆಮನೆಯ ನೆಚ್ಚಿನ ಅಡುಗೆ ಎಣ್ಣೆಯಾಗಿರುವ ಕೊಬ್ಬರಿ ಎಣ್ಣೆಯನ್ನು ಬದಲಿಸಲು ಸಾಧ್ಯವಿಲ್ಲ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

 ಕೊಬ್ಬರಿ ಎಣ್ಣೆ

ಕೊಬ್ಬರಿ ಎಣ್ಣೆ

ಒಂದು ವೇಳೆ ಈ ಆರೋಪ ನಿಜವಾಗಿದ್ದರೆ ನಮ್ಮ ಕರಾವಳಿಯ ಅಷ್ಟೂ ಗ್ರಾಮಗಳ ಜನತೆಯ ವಯಸ್ಸು ಐವತ್ತು ದಾಟಿರಬಾರದಿತ್ತು. ನಿತ್ಯವೂ ಕೊಬ್ಬರಿ ಎಣ್ಣೆಯ ಅಡುಗೆ ಊಟ ಮಾಡುತ್ತಿದ್ದ ಕಾರಂತಜ್ಜ ಎಷ್ಟು ವಯಸ್ಸು ಜೀವಿಸಿದ್ದರೆಂದು ಗೊತ್ತೇ? ಕಯ್ಯಾರ ರೈಯವರ ಶತಾಯುಷಿಯಾಗಲು ಕಾರಣ ಗೊತ್ತೇ? ಹಲವು ತಜ್ಞರ ಪ್ರಕಾರ ಮಧುಮೇಹಿಗಳಿಗೆ ಕೊಬ್ಬರಿ ಎಣ್ಣೆ ಅತ್ಯುತ್ತಮವಾಗಿದೆ.

ಅಪ್ಪಟವಾದ ಆಲಿವ್ ಎಣ್ಣೆ

ಅಪ್ಪಟವಾದ ಆಲಿವ್ ಎಣ್ಣೆ

ಆಲಿವ್ ಫಲಗಳನ್ನು ಬಿಸಿಮಾಡದೇ ತಣ್ಣನೆಯ ವಿಧಾನದಲ್ಲಿ ಹಿಂಡಿ ತೆಗೆದ ಎಣ್ಣೆ ಸಹಾ ಮಧುಮೇಹಿಗಳ ಸಹಿತ ಎಲ್ಲರಿಗೂ ಅತ್ಯುತ್ತಮವಾದ ಎಣ್ಣೆಯಾಗಿದೆ. ಇದನ್ನು ತುಪ್ಪದಂತೆ ಹಾಗೇ ಆಹಾರದ ಮೇಲೆ ಚಿಮುಕಿಸಿ ಸೇವಿಸಬಹುದು, ಕೊಂಚವೇ ಬಿಸಿ ಮಾಡುವ (ಉದಾಹರಣೆಗೆ ಚಪಾತಿಗೆ ಸವರುವ) ಮೂಲಕ, ಒಗ್ಗರಣೆ, ಪಲ್ಯ ಮೊದಲಾದವುಗಳಿಗೆ ಆಲಿವ್ ಎಣ್ಣೆ ಉತ್ತಮವಾಗಿದೆ. ಆದರೆ ಈ ಎಣ್ಣೆಯಲ್ಲಿ ಆಹಾರಗಳನ್ನು ಹುರಿಯುವುದಾಗಲೀ ಕರಿಯುವುದಾಗಲೀ ಮಾಡಬಾರದು.

ಅಕ್ರೋಟಿನ ಎಣ್ಣೆ

ಅಕ್ರೋಟಿನ ಎಣ್ಣೆ

ಟೈಪ್-2 ಮಧುಮೇಹಿಗಳಿಗೆ ಅಕ್ರೋಟಿನ ಎಣ್ಣೆ ಅತ್ಯುತ್ತಮವಾಗಿದೆ. ಸಂಶೋಧನೆಗಳ ಪ್ರಕಾರ polyunsaturated fatty acid, ಒಮೆಗಾ 3 ಕೊಬ್ಬಿನ ತೈಲ ಮತ್ತು ಇತರ ವಿಟಮಿನ್ನುಗಳು ಹೇರಳವಾಗಿದ್ದು ಮಧುಮೇಹಿಗಳಿಗೆ ವರದಾನವಾಗಿದೆ.

ರಿಫೈನ್ಡ್ ಎಣ್ಣೆ

ರಿಫೈನ್ಡ್ ಎಣ್ಣೆ

ಹಲವು ಬಾರಿ ಶೋಧಿಸಿ ಎಣ್ಣೆಯಲ್ಲಿರುವ ಎಲ್ಲಾ ಕಲ್ಮಶಗಳನ್ನು ಹೊರತೆಗೆಯುವ ವಿಧಾನದಿಂದ ಲಭ್ಯವಾಗುವ ರಿಫೈನ್ಡ್ ಎಣ್ಣೆಯಲ್ಲಿ ಹುರಿದ ಮತ್ತು ಕರಿದ ಅಡುಗೆಗಳು ಮಧುಮೇಹಿಗಳಿಗೆ ಸೂಕ್ತವಾಗಿದೆ. ಆದರೆ ಇದರ ಪ್ರಮಾಣ ಮಾತ್ರ ನಿಯಂತ್ರಣದಲ್ಲಿರುವುದು ಅಗತ್ಯ.

ಅಗಸೆ ಬೀಜದ ಎಣ್ಣೆ (Flaxseed Oil)

ಅಗಸೆ ಬೀಜದ ಎಣ್ಣೆ (Flaxseed Oil)

ಹೆಚ್ಚಿನವರಿಗೆ ಗೊತ್ತೇ ಇರದ ಅಗಸೆಬೀಜದ ಎಣ್ಣೆ ಅಥವಾ ಅಗಸೆ ಎಣ್ಣೆ ಮಧುಮೇಹಿಗಳಿಗೆ ಉತ್ತಮವಾದ ಆಯ್ಕೆಯಾಗಿದೆ. ಅಡುಗೆಗೆ ಮತ್ತು ಅನ್ನದೊಡನೆ ಕಲಸಿ ತಿನ್ನಲೂ ಯೋಗ್ಯವಾಗಿರುವ ಈ ಎಣ್ಣೆ ಮಧುಮೇಹಿಗಳಿಗೆ ಹೆಚ್ಚಿನ ಚೈನತ್ಯ ನೀಡಲೂ ಉಪಯೋಗವಾಗುತ್ತದೆ. ಏಕೆಂದರೆ ಇದರಲ್ಲಿ ಒಮೆಗಾ 3 ಕೊಬ್ಬಿನ ತೈಲದ ಪ್ರಮಾಣ ಹೆಚ್ಚಾಗಿದ್ದು ಎರಡೂ ಪ್ರಕಾರದ ಮಧುಮೇಹಿಗಳಿಗೆ ನವಚೈನತ್ಯ

ಕ್ಯಾನೋಲಾ ಎಣ್ಣೆ

ಕ್ಯಾನೋಲಾ ಎಣ್ಣೆ

ಕ್ಯಾನೋಲಾ ಹೂವಿನ ಬೀಜ ಅಥವಾ ಹೊನ್ನಾಂಬರಿ ಹೂವಿನ ಬೀಜದ ಎಣ್ಣೆಯಲ್ಲಿಯೂ ಒಮೆಗಾ 3 ಕೊಬ್ಬಿನ ತೈಲದ ಪ್ರಮಾಣ ಮಧುಮೇಹಿಗಳಿಗೆ ಸೂಕ್ತವಾಗುವಂತಿದೆ. ಅಲ್ಲದೇ ಇದರಲ್ಲಿ ಅತಿ ಕಡಿಮೆ ಇರುವ saturated ಕೊಬ್ಬಿನ ಕಾರಣ ಅಡುಗೆಗೆ ಬಳಸಲು ಅತ್ಯಂತ ಸೂಕ್ತವಾದ ಎಣ್ಣೆಯಾಗಿದೆ.

ಸೂರ್ಯಕಾಂತಿ ಹೂವಿನ ಎಣ್ಣೆ

ಸೂರ್ಯಕಾಂತಿ ಹೂವಿನ ಎಣ್ಣೆ

ಮಧುಮೇಹಿಗಳು ನಿತ್ಯವೂ ಸೂರ್ಯಕಾಂತಿ ಎಣ್ಣೆಯ ಅಡುಗೆಯನ್ನು ಬಳಸುತ್ತಾ ಬಂದರೆ ನಿಧಾನವಾಗಿ ರಕ್ತದಲ್ಲಿರುವ ಸಕ್ಕರೆಯ ಪ್ರಮಾಣದಲ್ಲಿ ನಿಯಂತ್ರಣ ಕಂಡುಬರುತ್ತದೆ. ಅಲ್ಲದೇ ಉತ್ಪತ್ತಿಯಾದ (ಅಥವಾ ಇಂಜೆಕ್ಷನ್ ಮೂಲಕ ಪಡೆಯಲಾದ) ಇನ್ಸುಲಿನ್ ಅನ್ನು ರಕ್ತ ಬಳಸಿಕೊಳ್ಳಲು ನೆರವಾಗುತ್ತದೆ. ಈ ಎಣ್ಣೆಯಲ್ಲಿ polyunsaturated ಕೊಬ್ಬಿನ ತೈಲ ಪ್ರಮುಖ ಪ್ರಮಾಣದಲ್ಲಿರುವ ಕಾರಣ ಟೈಪ್ -1 ಮಧುಮೇಹಿಗಳಿಗೆ ಅತ್ಯಂತ ಸೂಕ್ತವಾದ ಎಣ್ಣೆಯಾಗಿದೆ.

ಸಾಸಿವೆ ಎಣ್ಣೆ

ಸಾಸಿವೆ ಎಣ್ಣೆ

ಹುರಿಯುವ ಮತ್ತು ಕರಿಯುವ ತಿಂಡಿಗಳಿಗೆ ಸಾಸಿವೆ ಎಣ್ಣೆಯ ಬಳಕೆ ಮಧುಮೇಹಿಗಳಿಗೆ ವರದಾನವಾಗಿದೆ. ಇದರಲ್ಲಿ mono unsaturated ಎಣ್ಣೆ ಪ್ರಮುಖ ಪ್ರಮಾಣದಲ್ಲಿದ್ದು ಮಧುಮೇಹಿಗಳಿಗೆ ಸೂಕ್ತವಾಗಿದೆ.ಎಣ್ಣೆ ಕೊಂಚ ಖಾರವಾದ ರುಚಿಯನ್ನು ಹೊಂದಿದ್ದರೂ ಇದರಿಂದ ಹೊಗೆ ಏಳಲು ಹೆಚ್ಚಿನ ತಾಪಮಾನ ಬೇಕಾಗಿರುವುದರಿಂದ ಕರಿಯಲು ಹೆಚ್ಚು ಸಮಯ ತೆಗೆದುಕೊಳ್ಳುವ ಅಥವಾ ಗ್ರಿಲ್ ಮೊದಲಾದ ಖಾದ್ಯಗಳಿಗೆ ಬಳಸಲು ಉಪಯುಕ್ತವಾಗಿದೆ.

ಬೆಣ್ಣೆಹಣ್ಣಿನ ಎಣ್ಣೆ

ಬೆಣ್ಣೆಹಣ್ಣಿನ ಎಣ್ಣೆ

ಬೆಣ್ಣೆಹಣ್ಣಿನ ತಿರುಳನ್ನು ಚೆನ್ನಾಗಿ ಒಣಗಿಸಿ ಬಳಿಕ ತಣ್ಣನೆಯ ವಿಧಾನದಲ್ಲಿ ಹಿಂಡಿ ತೆಗೆದ ಎಣ್ಣೆ ಸಹಾ ಮಧುಮೇಹಿಗಳಿಗೆ ಅತ್ಯುತ್ತಮವಾಗಿದೆ. ಇದರಲ್ಲಿ ಪ್ರಮುಖವಾಗಿ ಓಲಿಕ್ ಕೊಬ್ಬಿನ ತೈಲ, ವಿಟಮಿನ್ ಇ ಮತ್ತು Monounsaturated fat ಹೆಚ್ಚಿನ ಪ್ರಮಾಣದಲ್ಲಿದ್ದು ಮಧುಮೇಹಿಗಳು ಇನ್ಸುಲಿನ್ ಅನ್ನು ಬಳಸಿಕೊಳ್ಳಲು ನೆರವಾಗುತ್ತದೆ. ಇದೇ ಕಾರಣಕ್ಕೆ ಇದು ಟೈಪ್ -1 ಮಧುಮೇಹಿಗಳಿಗೆ ಅತ್ಯಂತ ಸೂಕ್ತವಾದ ಎಣ್ಣೆಯಾಗಿದೆ.

English summary

Healthy Cooking Oils For Diabetes

If you are diabetic, it is better to opt for cooking oils that are friendly for your metabolism and heart health. While satisfying your taste buds, think of your health as well. Cooking oils usually come with three types of fatty acids and one of the acids will be in high levels. The major factors to be considered are the type of fat, amount of fat, effect on glucose metabolism and heat tolerance. Let’s discuss about some of the best cooking oils for diabetes.
Story first published: Thursday, October 22, 2015, 12:21 [IST]
X
Desktop Bottom Promotion