For Quick Alerts
ALLOW NOTIFICATIONS  
For Daily Alerts

ಮಧುಮೇಹವನ್ನು ಹದ್ದು ಬಸ್ತಿನಲ್ಲಿಡುವ ಆಹಾರಗಳಿವು

|

" ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ" ಈ ಗಾದೆ ಮಾತನ್ನು ನಾವು ಪದೇ ಪದೇ ಕೇಳುತ್ತಿರುತ್ತೀವಿ. ನಿಜ ಹಲವಾರು ಕಾಯಿಲೆಗಳನ್ನು ನಾವು ಊಟ ಮಾಡುವುದರಿಂದಲೇ ತಡೆಯಬಹುದು ಮತ್ತು ನಿವಾರಿಸಿಕೊಳ್ಳಬಹುದು. ಅದಕ್ಕಾಗಿ ನಾವು ತಿನ್ನುವ ಆಹಾರದ ಬಗ್ಗೆ ಸ್ವಲ್ಪ ಙ್ಞಾನ ಮತ್ತು ತಿಳುವಳಿಕೆಯಿದ್ದರೆ ಸಾಕು. ಆಹಾರವು ಸದೃಢ ಆರೋಗ್ಯದ ಸೋಪಾನವಾಗಿ ಪರಿಣಮಿಸುತ್ತದೆ. ಹೀಗೆ ನಾವು ಆಹಾರದಿಂದ ಹದ್ದು ಬಸ್ತಿನಲ್ಲಿಟ್ಟುಕೊಳ್ಳಬಹುದಾದ ಕೆಲವು ಕಾಯಿಲೆಗಳಲ್ಲಿ ಮಧುಮೇಹ ಸಹ ಒಂದಾಗಿದೆ.

ಮಧುಮೇಹ ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಹೆಚ್ಚು ಜನರನ್ನು ಕಾಡುತ್ತಿರುವ ಕಾಯಿಲೆ. ನಿಮ್ಮ ರಕ್ತದಲ್ಲಿನ ಸಕ್ಕರೆ ಪ್ರಮಾಣ ಏರುಪೇರಿನಿಂದಾಗಿ ಇದು ಸಂಭವಿಸುತ್ತದೆ. ಮಧುಮೇಹ ಬಂದರೆ ಅದಕ್ಕಾಗಿ ತಲೆ ಕೆಡಿಸಿಕೊಳ್ಳಬೇಡಿ. ಅದನ್ನು ನಿಯಂತ್ರಣದಲ್ಲಿಡುವುದು ಸುಲಭವಾದ ಕೆಲಸ. ಅದಕ್ಕಾಗಿ ನಮ್ಮ ಸುತ್ತ ಮುತ್ತ ದೊರೆಯುವ 10 ಅದ್ಭುತವಾದ ಆಹಾರ ಪದಾರ್ಥಗಳನ್ನು ಸೇವಿಸಿ, ಮದು ಮೇಹವನ್ನು ಹದ್ದು ಬಸ್ತಿನಲ್ಲಿಡಿ.

1. ಓಟ್‍ಮೀಲ್

1. ಓಟ್‍ಮೀಲ್

ಓಟ್‍ಮೀಲ್ ಸೇವಿಸಿ ಎಂದೊಡನೆ ಓಟ್‍ಮೀಲ್ ಕುಕಿಸ್ ಅನ್ನು ತೆಗೆದುಕೊಂಡು ಗಂಟೆಗೊಮ್ಮೆ ತಿನ್ನಿ ಎಂದು ಅರ್ಥವಲ್ಲ. ಬೆಳಗ್ಗೆ ಹೊತ್ತು ಒಂದು ಬಟ್ಟಲಿನ ತುಂಬ ಓಟ್ ಮೀಲ್ ಸೇವಿಸಿ. ಇದರಲ್ಲಿರುವ ಸುಲಭವಾಗಿ ಕರಗುವ ನಾರಿನಂಶವು, ನೀರಿನಲ್ಲಿ ಬೆರೆತಾಗ ಒಂದು ಬಗೆಯ ಪೇಸ್ಟ್ ಆಗುತ್ತದೆ. ಈ ಓಟ್‍ಗಳು ನಿಮ್ಮ ಆಹಾರದಲ್ಲಿರುವ ಸ್ಟಾರ್ಚ್ ಮತ್ತು ಜಠರದಲ್ಲಿರುವ ಡೈಜೆಸ್ಟಿವ್ ಎನ್ಜೈಮ್ಸ್ ಮಧ್ಯೆ ಕಂದಕವನ್ನುಂಟು ಮಾಡುತ್ತದೆ. ಇದು ಆಹಾರವು ರಕ್ತದಲ್ಲಿ ಸಕ್ಕರೆಯನ್ನಾಗಿ ಪರಿವರ್ತನೆಗೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳುವಂತೆ ಮಾಡುತ್ತದೆ. ಹಾಗಾಗಿ ಇದನ್ನು ಸೇವಿಸುವುದರಿಂದ ದೇಹದಲ್ಲಿ ಸಕ್ಕರೆಯ ಪ್ರಮಾಣ ಏರುಪೇರಾಗುವುದಿಲ್ಲ.

2. ಸೇಬು

2. ಸೇಬು

"ದಿನಕ್ಕೊಂದು ಸೇಬು ತಿನ್ನಿ, ವೈಧ್ಯರನ್ನು ದೂರವಿಡಿ" ಎಂಬ ನಾಣ್ಣುಡಿಯಿದೆ.ನಿಜ ಸೇಬನ್ನು ತಿನ್ನುವುದರಿಂದ ಆರೋಗ್ಯ ವೃದ್ಧಿಗೊಳ್ಳುತ್ತದೆ. ಅದರಲ್ಲೂ ಸೇಬಿನಲ್ಲಿ ಕ್ಯಾಲೊರಿ ಪ್ರಮಾಣ ಕಡಿಮೆಯಿದೆ, ಹೆಚ್ಚಿನ ನಾರಿನಂಶವಿದೆ. ಇದು ಕೊಲೆಸ್ಟ್ರಾಲ್‍ಗಳ ಜೊತೆಗೆ ಹೊಡೆದಾಡುವುದರ ಜೊತೆಗೆ, ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಇದರ ಸಿಪ್ಪೆಯನ್ನು ತೆಗೆಯದೆ ಹಾಗೆಯೇ ತಿನ್ನಿ, ಹೆಚ್ಚಿನ ಲಾಭವನ್ನು ಪಡೆಯಿರಿ.ಸೇಬಿನಲ್ಲಿರುವ ಕ್ವೆರ್ಸೆಟಿನ್ ಎಂಬ ಅಂಶವು ಒಂದು ಸಮೃದ್ಧವಾದ ಅಂಟಿ ಬಯೋಟಿಕ್ ಆಗಿದ್ದು, ಇದು ಮಧುಮೇಹವನ್ನು ನಿಯಂತ್ರಿಸುವಲ್ಲಿ ಪ್ರಧಾನ ಪಾತ್ರವಹಿಸುತ್ತದೆ.

3. ಹುರುಳಿ

3. ಹುರುಳಿ

ಬೇಯಿಸಿದ, ನೆನೆಸಿದ ಅಥವಾ ಒಣಗಿಸಿದ ಯಾವುದಾದರು ಸರಿ, ಹುರುಳಿಯು ನಿಮ್ಮ ರಕ್ತದಲ್ಲಿರುವ ಅಧಿಕ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಹುರುಳಿಯಲ್ಲಿ ಅಧಿಕ ಪ್ರೋಟಿನ್ ಇರುತ್ತದೆ. ಇವು ಮಾಂಸಾಹಾರಕ್ಕೆ ಪೂರಕವಾಗಿ ಬಳಸಲ್ಪಡುತ್ತವೆ. ಮತ್ತೊಂದು ಆಶಾದಾಯಕವಾದ ಸುದ್ದಿಯೆಂದರೆ ಹುರುಳಿಯಲ್ಲಿರುವ ಫೈಟೊನ್ಯೂಟ್ರಿಯೆಂಟ್ಸ್ ಹೃದಯಕ್ಕೆ ಮಾತ್ರವಲ್ಲದೆ, ಮಧುಮೇಹ ನಿಯಂತ್ರಣಕ್ಕು ಸಹ ಉಪಯೋಗಕಾರಿ.

4. ಚಹಾ

4. ಚಹಾ

ಮಧುಮೇಹ ಬಂದರೆ ಕಾಫೀ , ಟೀಗೆ ಗುಡ್ ಬೈ ಹೇಳುತ್ತಾರೆ ಜನ. ನೀವೇಕೆ ಹಾಗೆ ಮಾಡುವಿರಿ. ಚಹಾದಲ್ಲಿ ಯಥೇಚ್ಛವಾಗಿರುವ ಕ್ಯಟೆಚಿನ್‍ಗಳಂತಹ ಫೈಟೊನ್ಯೂಟ್ರಿಯೆಂಟ್ಸ್ ರಕ್ತದಲ್ಲಿ ಸಕ್ಕರೆ ಪ್ರಮಾಣವನ್ನು ಸಮತೋಲನದಲ್ಲಿಡುತ್ತವೆ. ಮತ್ತೇಕೆ ತಡ ಚಹಾ ಕುಡಿಯಲು ಒಂದು ನೆಪ ದೊರೆಯಿತಲ್ಲ. ಒಂದು ಕಪ್ ಸೇವಿಸಿ.

5. ಒಣ ಹಣ್ಣುಗಳು

5. ಒಣ ಹಣ್ಣುಗಳು

ಒಣ ಹಣ್ಣುಗಳು " ನಿಧಾನವಾಗಿ ಜೀರ್ಣವಾಗುವ" ಆಹಾರವಾಗಿದೆ. ಇವು ತಮ್ಮಲ್ಲಿರುವ ಹೆಚ್ಚಿನ ಪ್ರಮಾಣದ ನಾರು ಮತ್ತು ಪ್ರೊಟಿನ್‍ಗಳಿಂದಾಗಿ ರಕ್ತದಲ್ಲಿರುವ ಸಕ್ಕರೆ ಅಂಶದ ಸ್ನೇಹಿಯಾಗಿ ಕೆಲಸ ಮಾಡುತ್ತವೆ. ಅಧ್ಯಯನಗಳ ಪ್ರಕಾರ ನಿಯಮಿತವಾಗಿ ಪ್ರತಿದಿನ ಒಣ ಹಣ್ಣುಗಳನ್ನು ಸೇವಿಸುವುದರಿಂದಾಗಿ ಹೃದಯದ ಬೇನೆಯನ್ನು ತಡೆಯಬಹುದಂತೆ. ಒಣ ಹಣ್ಣುಗಳಲ್ಲಿರುವ ಟೊಕೊಟ್ರೈಯೆನೊಲ್‍ಗಳು ನಮಗೆ ಉತ್ತಮ ಆರೋಗ್ಯವನ್ನು ನೀಡುತ್ತವೆ. ಆದರೆ ಒಣ ಹಣ್ಣುಗಳನ್ನು ನಿಯಮಿತವಾಗಿ ಸೇವಿಸಬೇಕೆಂಬುದನ್ನು ಮರೆಯಬೇಡಿ.

6. ಸಿಟ್ರಸ್ ಹಣ್ಣುಗಳು

6. ಸಿಟ್ರಸ್ ಹಣ್ಣುಗಳು

ಕಡಿಮೆ ಕೊಬ್ಬು ,ಸಮೃದ್ಧ ನಾರಿನಂಶದಿಂದ ಕೂಡಿರುವ ಸಿಟ್ರಸ್ ಹಣ್ಣುಗಳು ತಮ್ಮಲ್ಲಿರುವ ಉತ್ತಮ ಪೋಷಕಾಂಶಗಳಿಂದಾಗಿ ಆರೋಗ್ಯಕ್ಕೆ ಉತ್ತಮ ಕೊಡುಗೆಯನ್ನು ನೀಡುತ್ತವೆ. ಉದಾಹರಣೆಗೆ ; ಕಿತ್ತಳೆ ಹಣ್ಣಿನಲ್ಲಿ ಫ್ಲವೊನೊಯ್ಡ್ಸ್, ಕ್ಯಾರೊಟೆನೊಯ್ಡ್ಸ್, ಟರ್ಪೈನ್ಸ್, ಪೆಕ್ಟಿನ್ಸ್ ಮತ್ತು ಗ್ಲುಟತಿಯೊನ್ ಮತ್ತು ಫೋಟೊನ್ಯೂಟ್ರಿಯೆಂಟ್‍ಗಳ ಸಮೃದ್ಧ ಆಗರವಿದೆ. ಇವುಗಳೆಲ್ಲವು ಸೇರಿ ಮಧುಮೇಹವನ್ನು ನಿಯಂತ್ರಣದಲ್ಲಿಡಲು ಸಹಕರಿಸುತ್ತವೆ. ಪ್ರಪಂಚದ ನಾನಾ ಮೂಲೆಗಳಲ್ಲಿ ನಡೆದ ಅಧ್ಯಯನಗಳಲ್ಲಿ ತಿಳಿದು ಬಂದ ವಿಚಾರದ ಪ್ರಕಾರ ಮಧುಮೇಹಿಗಳಲ್ಲಿ ವಿಟಮಿನ್ ಸಿಯ ಪ್ರಮಾಣ ಕಡಿಮೆ ಇರುತ್ತದೆ. ಹಾಗಾಗಿ ನಿಮ್ಮ ತಿಂಡಿಯಲ್ಲಿ ಅಂಟಿ ಆಕ್ಸಿಡೆಂಟ್ ಹೆಚ್ಚಾಗಿರುವ ಸಿಟ್ರಸ್ ಹಣ್ಣುಗಳನ್ನು ಸೇರಿಸುವುದನ್ನು ಮರೆಯಬೇಡಿ.

7. ವೋಲ್‍ಗ್ರೇನ್ ಬ್ರೆಡ್

7. ವೋಲ್‍ಗ್ರೇನ್ ಬ್ರೆಡ್

"ಬೆಳ್ಳಗಿರುವುದಲ್ಲ ಹಾಲಲ್ಲ" ಎಂಬ ಗಾದೆಯಂತೆ, ಕಣ್ಣಿಗೆ ಬಿದ್ದ, ಚೆಂದದ ಜಾಹಿರಾತುಗಳಿಂದ ಕೂಡಿದ ಆಹಾರಗಳನ್ನೆಲ್ಲ ಸೇವಿಸಲು ಹೋಗಬೇಡಿ. ಬೆಳ್ಳಗಿರುವ ಬ್ರೆಡ್ ತಿನ್ನುವುದು ಒಂದೇ, ಸಕ್ಕರೆಯನ್ನು ಹಾಗೆಯೇ ತಿನ್ನುವುದು ಒಂದೇ. ಅದಕ್ಕಾಗಿ ಆ ಮೈದಾದಿಂದ ಮಾಡಿದ ಬ್ರೆಡ್ ಅನ್ನು ತಿನ್ನುವ ಬದಲು, ವೋಲ್ ಗ್ರೇನ್‍ನಿಂದ ಮಾಡಿದ ಬ್ರೆಡ್ ತಿನ್ನಿ. ಇದು ನಿಮ್ಮ ರಕ್ತಕ್ಕೆ ಅಗತ್ಯವಾದ ಇನ್ಸುಲಿನ್ ಅನ್ನು ಒದಗಿಸುತ್ತದೆ. ಜೊತೆಗೆ ಇದರಲ್ಲಿರುವ ಒರಟುತನವನ್ನು ನಿಮ್ಮ ಜೀರ್ಣಶಕ್ತಿಯನ್ನು ಕಡಿಮೆ ಮಾಡುತ್ತದೆ.

8. ಆಲಿವ್ ಎಣ್ಣೆ

8. ಆಲಿವ್ ಎಣ್ಣೆ

ಆಲಿವ್ ಎಣ್ಣೆಯನ್ನು ದ್ರವರೂಪದ ಬಂಗಾರ ಎಂದು ಬೇಕಾದರು ಕರೆಯಿರಿ. ಆಲಿವ್ ಎಣ್ಣೆಯಲ್ಲಿ ಅಂಟಿ- ಇನ್‍ಫ್ಲೆಮ್ಮೆಟರಿ ಅಂಶಗಳು ಯಥೇಚ್ಛವಾಗಿರುತ್ತವೆ. ಇವು ಹೃದಯ ಬೇನೆ ಮತ್ತು ಮಧುಮೇಹ ಬರುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಇವೆರಡು ಸಹ ಉರಿಯೂತ ( ಇನ್‍ಫ್ಲೆಮ್ಮೆಶನ್)ದ ಜೊತೆಗೆ ಸಂಬಂಧವನ್ನು ಹೊಂದಿವೆ. ಆಲಿವ್ ಎಣ್ಣೆಯಲ್ಲಿರುವ ಆರೋಗ್ಯಕಾರಿ ಕೊಬ್ಬು, ನಿಮ್ಮ ದೇಹದಲ್ಲಿರುವ ಇನ್ಸುಲಿನ್ ಪ್ರಮಾಣ ಹೆಚ್ಚಾಗಲು ಬಿಡುವುದಿಲ್ಲ. ಒಂದು ವೇಳೆ ನಿಮ್ಮ ದೇಹದಲ್ಲಿ ಇನ್ಸುಲಿನ್ ಹೆಚ್ಚಾಗಿದ್ದರೆ, ಅದನ್ನು ಕಡಿಮೆ ಮಾಡುವ ಗುಣ ಇದಕ್ಕಿದೆ. ನಮ್ಮ ಆಹಾರದ ತಯಾರಿಕೆಗೆ ಆಲಿವ್ ಎಣ್ಣೆಯನ್ನು ಬಳಸಿದಲ್ಲಿ, ನಮ್ಮ ಜೀರ್ಣಶಕ್ತಿಯು ನಿಧಾನವಾಗುತ್ತದೆ.ಇದರಿಂದಾಗಿ ನಮ್ಮ ಆಹಾರದ ಗ್ಲೂಕೊಸ್ ಪ್ರಮಾಣ ಸಮತೋಲನದಲ್ಲಿರುತ್ತದೆ. ಹಾಗಾಗಿ ಇನ್ನು ಮುಂದೆ ಸಲಾಡ್, ಪಾಸ್ತ ಮುಂತಾದವನ್ನು ತಿನ್ನಲು ಮತ್ತೊಂದು ಕಾರಣ ನಿಮಗೆ ದೊರೆಯಿತಲ್ಲ.

9. ಮೀನು

9. ಮೀನು

ಹೃದಯದ ಬೇನೆ ಉಂಟಾಗಲು ಮೂಲ ಕಾರಣ ಮಧುಮೇಹ. ವಾರಕ್ಕೆ ಒಮ್ಮೆಯಾದರು ಮೀನನ್ನು ಸೇವಿಸುವುದರಿಂದ ಶೇ.40ರಷ್ಟು ಈ ಸಮಸ್ಯೆ ಬರದಂತೆ ತಡೆಯಬಹುದು. ಮೀನಿನಲ್ಲಿರುವ ಒಮೆಗಾ - 3 ಕೊಬ್ಬಿನ ಆಮ್ಲಗಳು ದೇಹದಲ್ಲಿ ಉರಿಯೂತವನ್ನು ತಡೆಯುತ್ತವೆ. ಜೊತೆಗೆ ಮಧುಮೇಹ ಹಾಗು ಇನ್ಸುಲಿನ್ ಪ್ರತಿರೋಧಕವಾಗಿ ಕೆಲಸ ಮಾಡುತ್ತವೆ.

10. ಕ್ಯಾರೆಟ್

10. ಕ್ಯಾರೆಟ್

ಪ್ರಕೃತಿ ನಮಗೆ ನೀಡಿದ ಅತ್ಯುತ್ತಮ ಬೀಟಾ- ಕ್ಯಾರೋಟಿನ್ ಸಮೃದ್ಧವಾಗಿ ದೊರೆಯುವ ತರಕಾರಿ ಎಂದರೆ ಅದು ಕ್ಯಾರೆಟ್. ಮತ್ತೊಂದು ಸಿಹಿ ಸುದ್ದಿಯೆಂದರೆ ಈ ಕ್ಯಾರೆಟ್‍ನಲ್ಲಿ ಸಕ್ಕರೆ ಪ್ರಮಾಣ ತೀರ ಕಡಿಮೆಯಿರುತ್ತದೆ. ಇದನ್ನು ಸೇವಿಸುವುದರಿಂದ ನಿಮಗೆ ಮಧು ಮೇಹ ಬರುವ ಸಾಧ್ಯತೆಯನ್ನು ಕಡಿಮೆ ಮಾಡಬಹುದು ಮತ್ತು ರಕ್ತದಲ್ಲಿ ಸಕ್ಕರೆ ಪ್ರಮಾಣವನ್ನು ಸಹ ಹದ್ದು ಬಸ್ತಿನಲ್ಲಿಡ ಬಹುದು.

English summary

10 Wonder Foods To Beat Diabetes

Controlling your blood sugar and preventing diabetes complications be as simple as eating the right foods. So MensXP brings you 10 wonder foods to beat diabetes and stay healthy forever!
X
Desktop Bottom Promotion