For Quick Alerts
ALLOW NOTIFICATIONS  
For Daily Alerts

ಮಧುಮೇಹಕ್ಕೆ ರಾಮಬಾಣ ಬೆಂಡೆಕಾಯಿ!

|
Lady's Finger Can Control Diabetes
ಮಧುಮೇಹ ಕಾಯಿಲೆ ಒಮ್ಮೆ ಬಂದರೆ ಅದನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿಲ್ಲ. ಆದರೆ ಈ ಕಾಯಿಲೆಯನ್ನು ನಿಯಂತ್ರಣದಲ್ಲಿಡಬಹುದು. ಮಧುಮೇಹ ಕಾಯಿಲೆ ಇದ್ದರೆ ದೇಹಕ್ಕೆ ಇನ್ಸುಲಿನ್ ಚುಚ್ಚು ಮದ್ದನ್ನು ತೆಗದುಕೊಳ್ಳಬೇಕಾಗುತ್ತದೆ, ಅದಕ್ಕೆ ಪರ್ಯಾಯವಾಗಿ ಬೆಂಡೆಕಾಯಿಯನ್ನು ಬಳಸಿ ಮಧುಮೇಹವನ್ನು ನಿಯಂತ್ರಣದಲ್ಲಿಡಬಹುದು. ಮಧುಮೇಹ ನಿಯಂತ್ರಣಕ್ಕೆ ಬೆಂಡೆಕಾಯಿಯನ್ನು ಹೇಗೆ ಬಳಸಬೇಕೆಂದು ತಿಳಿಯಲು ಮುಂದೆ ಓದಿ.

ಮಧುಮೇಹ ನಿಯಂತ್ರಣಕ್ಕೆ ಬೆಂಡೆಕಾಯಿಯನ್ನು ಬಳಸಬೇಕಾದ ವಿಧಾನ:

1. ಒಂದು ಬೆಂಡೆಕಾಯಿಯನ್ನು ತೆಗೆದುಕೊಂಡು ಅದರ ಎರಡೂ ತುದಿಗಳನ್ನು ಚಾಕುವಿನಿಂದ ಕತ್ತರಿಸಬೇಕು.

2. ಅಗ ಅದರಿಂದ ಬಿಳಿ ದ್ರಾವಣ ಬರಲಾರಂಭಿಸುತ್ತದೆ, ಅದನ್ನು ಒರೆಸಬೇಡಿ. ಆ ಬೆಂಡೆಕಾಯಿಯನ್ನು ನೀರಿರುವ ಲೋಟಕ್ಕೆ ಹಾಕಿ ಅದನ್ನು ಮುಚ್ಚಿಟ್ಟು ಮಲಗಿ.

3. ಬೆಳಗ್ಗೆ ಆ ಬೆಂಡೆಕಾಯಿ ತುಂಡನ್ನು ನೀರಿನಿಂದ ತೆಗೆಯಬೇಕು. ನಂತರ ಆ ನೀರನ್ನು ಕುಡಿಯಬೇಕು. ಈ ರೀತಿ ಪ್ರತಿದಿನ ಮಾಡಿದರೆ ಮಧುಮೇಹವನ್ನು ನಿಯಂತ್ರಣದಲ್ಲಿಡಬಹುದು.

ಸೂಚನೆ: ಬೇಯಿಸಿದ ಬೆಂಡೆಕಾಯಿಕ್ಕಿಂತ ಹಸಿಬೆಂಡೆಕಾಯಿ ಮಧುಮೇಹ ನಿಯಂತ್ರಣಕ್ಕೆ ಒಳ್ಳೆಯದು.

ಮಧುಮೇಹಿಗಳು ಬೆಂಡೆಕಾಯಿ ತಿನ್ನುವುದರಿಂದ ಈ ಕೆಳಗಿನ ಪ್ರಮುಖ ಪ್ರಯೋಜನಗಳನ್ನು ಪಡೆಯಬಹುದು:

ಕಡಿಮೆ GI ಪ್ರಮಾಣ: ಮಧುಮೇಹಿಗಳಿಗೆ ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ (GI) ಇರುವ ಆಹಾರಗಳನ್ನು ತಿನ್ನಲು ವೈದ್ಯರು ಸಲಹೆ ಮಾಡುತ್ತಾರೆ. ಬೆಂಡೆಕಾಯಿಯಲ್ಲಿ ಕಡಿಮೆ ಪ್ರಮಾಣದ GI ಇರುವುದರಿಂದ ದೇಹದಲ್ಲಿ ಸಕ್ಕರೆಯಂಶ ಹೆಚ್ಚಾಗದಂತೆ ನೋಡಿಕೊಳ್ಳುತ್ತದೆ.

ಕಿಡ್ನಿಗೆ ಒಳ್ಳೆಯದು: ಬೆಂಡೆಕಾಯಿ ಮಧುಮೇಹ ಕಾಯಿಲೆಗೆ ಮಾತ್ರವಲ್ಲ ಕಿಡ್ನಿ ಆರೋಗ್ಯಕ್ಕೂ ತುಂಬಾನೇ ಒಳ್ಳೆಯದು.

ನಾರಿನಂಶ: ಇದು ತಿನ್ನಬಹುದಾದ ನಾರಿನಂಶವಿರುವ ಪದಾರ್ಥವಾಗಿರುವುದರಿಂದ ಇದನ್ನು ತಿಂದಾಗ ಜೀರ್ಣಕ್ರಿಯೆ ಸ್ವಲ್ಪ ನಿಧಾನವಾಗಿ ಆಗುವುದರಿಂದ ದೇಹದಲ್ಲಿ ಸಕ್ಕರೆಯಂಶವನ್ನು ನಿಯಂತ್ರಣದಲ್ಲಿಡುವಲ್ಲಿ ಸಹಕಾರಿಯಾಗಿದೆ.

English summary

Lady's Finger Can Control Diabetes | Tips For Health | ಬೆಂಡೆಕಾಯಿ ಮಧುಮೇಹವನ್ನು ನಿಯಂತ್ರಣದಲ್ಲಿಡುತ್ತದೆ | ಆರೋಗ್ಯಕ್ಕಾಗಿ ಕೆಲ ಸಲಹೆಗಳು

Insulin injections are not your only option if you are diabetic. You can also depend on natural remedies like lady's finger to control your blood sugar levels.
Story first published: Thursday, September 27, 2012, 17:04 [IST]
X
Desktop Bottom Promotion