For Quick Alerts
ALLOW NOTIFICATIONS  
For Daily Alerts

ಪಾಯಲ್ ಸಿಂಘಾಲ್ ಕೈಚಳಕಕ್ಕೆ ಭೇಷ್ ಎನ್ನಲೇಬೇಕು!

By Hemanth
|

ರಾಜದ ಕಾಲದಿಂದಲೂ ಭಾರತದಲ್ಲಿ ಬಟ್ಟೆಗಳ ವಿನ್ಯಾಸವೂ ತುಂಬಾ ಅನನ್ಯವಾಗಿರುತ್ತಿತ್ತು. ಅದರಲ್ಲೂ ರಾಣಿ ಮಹಾರಾಣಿಯರು ಧರಿಸುತ್ತಿದ್ದ ಬಟ್ಟೆಗಳ ವಿನ್ಯಾಸವೂ ವಿಭಿನ್ನವಾಗಿರುತ್ತಿತ್ತು. ಕೆಲವೊಂದು ವಿನ್ಯಾಸಗಳನ್ನು ನೀವು ಫ್ಯಾಷನ್ ಶೋಗಳಲ್ಲಿ ನೋಡಿರಬಹುದು.

Payal singhal collection lakme fashion week winter-2016

ಪ್ರಸಿದ್ಧ ವಿನ್ಯಾಸಗಾರ್ತಿ ಪಾಯಲ್ ಸಿಂಘಾಲ್ ಅವರ ಹೊಸ ವಿನ್ಯಾಸದ ಹೆಸರು ಪಕೀಝ. ಈ ವಿನ್ಯಾಸಕ್ಕೆ ರಾಜರ ಕಾಲದ ಬಟ್ಟೆಗಳ ವಿನ್ಯಾಸವು ಪ್ರೇರಣೆಯೆಂದರೆ ತಪ್ಪಾಗಲಾರದು.

ಈ ಒಂದು ಅದ್ಭುತವಾಗಿರುವ ವಿನ್ಯಾಸವನ್ನು ರ್ಯಾಂಪ್ ಮೇಲೆ ಸಾದರಪಡಿಸಿದವರು ರೂಪದರ್ಶಿ ಸಾಯಿಯಮಿ ಖೇರ್. ಅನಿಲ್ ಕಪೂರ್ ಪುತ್ರ ಹರ್ಷವರ್ಧನ್ ನಾಯಕ ನಟನಾಗಿರುವ ಮಿರ್ಝಯಾ ಚಿತ್ರದಲ್ಲಿ ಸಾಯಿಯಮಿ ಖೇರ್ ನಟಿಸಲಿದ್ದಾರೆ.

ತನ್ನ ಬಟ್ಟೆಗಳ ವಿನ್ಯಾಸದ ಬಗ್ಗೆ ಮಾತನಾಡಿದ ಪಾಯಲ್ ಸಿಂಘಾಲ್, ಇಸ್ಲಾಂನ ಕಲೆ ಮತ್ತು ವಾಸ್ತುಶಿಲ್ಪವು ಯಾವಾಗಲೂ ನನ್ನ ವಿನ್ಯಾಸದ ಮೇಲೆ ಪ್ರಭಾವ ಬೀರಿದೆ. ಆದರೆ ಹಳೆಯದಾಗಿರು ಅತ್ಯಂತ ಶುಭ್ರವಾಗಿರುವ ವಿನ್ಯಾಸವನ್ನು ಈ ಬಟ್ಟೆಯ ವಿನ್ಯಾಸದಲ್ಲಿ ಮಾಡಿದ್ದೇನೆ.

ಸರಳತೆಯ ಗುಣಮಟ್ಟವನ್ನು ಹೊರಗಿನ ಪ್ರಪಂಚಕ್ಕೆ ತೋರಿಸುವುದೇ ಇದರ ಉದ್ದೇಶವಾಗಿತ್ತು ಎನ್ನುತ್ತಾರೆ. ಈ ವಿನ್ಯಾಸದಲ್ಲಿ ಹಲವಾರು ವಿಧಗಳಿವೆ. ಆಧುನೀಕರಿಸಿದ ಧೋತಿಗಳು ಮತ್ತಿತರ ಕೆಲವೊಂದು ವಿನ್ಯಾಸಗಳು ಈ ಶೋದ ಪ್ರಮುಖ ಆಕರ್ಷಣೆಯಾಗಿತ್ತು. ಪಾಯಲ್ ತನ್ನ ವಿನ್ಯಾಸಕ್ಕೆ ತನ್ನದೇ ಆಗಿರುವಂತಹ ಮೆರಗನ್ನು ನೀಡುತ್ತಾರೆ.

ಸರಳ ಹಾಗೂ ತುಂಬಾ ಸ್ಟೈಲಿಶ್ ಆಗಿ ಕಾಣಿಸಿಕೊಳ್ಳಬೇಕೆಂದು ಬಯಸುವಂತಹ ವಧುಗಳು ಈ ವಿನ್ಯಾಸನವನ್ನು ಖಂಡಿತವಾಗಿಯೂ ಆಯ್ಕೆ ಮಾಡಿಕೊಳ್ಳಲೇಬೇಕು. ನಟಿ ಸಾಯಿಯಾಮಿ ಖೇರ್ ವಿಶೇಷವಾಗಿ ವಿನ್ಯಾಸಗೊಳಿಸಿದ್ದ ಲೆಹಂಗದಲ್ಲಿ ರ್ಯಾಂಪ್ ಮೇಲೆ ಮಾರ್ಜಾಲ ನಡಿಗೆ ತೋರಿಸಿದರು.

English summary

Payal singhal collection lakme fashion week winter-2016

Payal Singhal's brand new collection titled Pakizah takes its inspiration from Indian designs. In thiscollection, you'll come across neat cuts and minimalistic patterns. The fabric used here are silk, raw silk, Saiyami Kher walked the ramp for the ace designer. Saiyami Kher is set to make her Bollywood debut in the film Mirzya, which also stars Anil Kapoor's son Harshavardhan.
Story first published: Saturday, August 27, 2016, 19:52 [IST]
X
Desktop Bottom Promotion