Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ತುಂಬು ಗರ್ಭಿಣಿ ಕರೀನಾ, ಇನ್ನೂ ಸೂಪರ್ ಆಗಿ ಕಾಣುತ್ತಿದ್ದಾರೆ!
ಕಪೂರ್ ಕುಟುಂಬ ಕುಡಿ ಕರೀನಾ ಕಪೂರ್ ಇನ್ನೇನು ಕೆಲವೇ ದಿನಗಳಲ್ಲಿ ಪುಟಾಣಿ ಕಂದಮ್ಮನಿಗೆ ಜನ್ಮ ನೀಡಲಿದ್ದಾರೆ ಎಂಬುದು ಸದ್ಯಕ್ಕೆ ಬಿ ಟೌನ್‌ನಲ್ಲಿನ ಬಿಸಿ ಬಿಸಿ ಸುದ್ದಿಯಾಗಿದೆ. ತುಂಬು ಗರ್ಭಿಣಿಯಾಗಿರುವ ಕರೀನಾ ಕೂಡ ತಮ್ಮ ಸ್ಟೈಲಿಶ್ ಲುಕ್‌ನಲ್ಲಿ ಈಗ ಮಿನುಗುತ್ತಿದ್ದಾರೆ. ಕೆಲವೊಂದು ನಿಯತಕಾಲಿಕೆಗಳಿಗೆ ರೂಪದರ್ಶಿಯಾಗಿ ಕೂಡ ಖ್ಯಾತಿಗೊಳಿಸುತ್ತಿದ್ದಾರೆ. ಅಂತೂ ತಮ್ಮ ತಾಯ್ತನದ ಕ್ಷಣಗಳನ್ನು ಕರೀನಾ ಅನುಭವಿಸುತ್ತಿದ್ದಾರೆ.

ಇತ್ತೀಚೆಗೆ ಕರೀನಾ ತಮ್ಮ ಸಹೋದರಿ ಕರೀಷ್ಮಾ ಮತ್ತು ಆಪ್ತ ಸ್ನೇಹಿತೆ ಅಮೃತಾ ಅರೋರಾರೊಂದಿಗೆ ಬಾಂದ್ರಾ ಮುಂಬೈನಲ್ಲಿ ಮಧ್ಯಾಹ್ನದ ಊಟಕ್ಕಾಗಿ ಹೊರಗಡೆ ಹೋಗಿದ್ದಾಗ ಕ್ಯಾಮೆರಾ ಕಣ್ಣಿಗೆ ಕಂಡುಬಂದಿದ್ದಾರೆ.
ಬೆಬೊ ಈ ಬಾರಿ ಡೆನೀಮ್ ಮತ್ತು ಕಪ್ಪು ಲೆಗ್ಗಿನ್ಸ್‌ನಲ್ಲಿ ಪೋಸ್ ಕೊಟ್ಟಿದ್ದು, ತಮ್ಮ ತುಂಬಿದ ಹೊಟ್ಟೆಯನ್ನು ಪ್ರದರ್ಶಿಸುವಲ್ಲಿ ಕೂಡ ಸೈ ಅನ್ನಿಸಿಕೊಂಡಿದ್ದಾರೆ.
ಬಿಳಿ ಶೂಗಳನ್ನು ಧರಿಸಿ ಕಪ್ಪು ಬಣ್ಣದ ತಂಪು ಕನ್ನಡಕವನ್ನು ಹಾಕಿಕೊಂಡು ಇನ್ನಷ್ಟು ತಾಯ್ತನದ ಕಳೆಯನ್ನು ಮುಖದಲ್ಲಿ ತುಂಬಿಕೊಂಡು ಕರೀನಾ ಮುದ್ದಾಗಿ ಕಾಣುತ್ತಿದ್ದರು.
ಕ್ಯಾಶುವಲ್ ದಿರಿಸಿನಲ್ಲಿ ಹಾಯಾಗಿ ಕಂಡುಬರುತ್ತಿದ್ದ ಕರೀನಾ ಮುಖದಲ್ಲಿ ಯಾವುದೇ ಬಳಲಿಕೆ ಇರಲಿಲ್ಲ. ಅಂತೂ ಆಕೆ ಸೆಕ್ಸಿ ಮಮ್ಮಿ ಎಂಬುದಂತೂ ನಿಜ.



Click it and Unblock the Notifications



