For Quick Alerts
ALLOW NOTIFICATIONS  
For Daily Alerts

ವಿಶ್ವದ ಚಿತ್ತ, ಈಗ ಪ್ರತಿಷ್ಠಿತ ಆಸ್ಕರ್ 2016 ಪ್ರಶಸ್ತಿಯತ್ತ,,,

By Manu
|

ಹಾಲಿವುಡ್ ಚಿತ್ರರಂಗ ಮತ್ತು ಇಡಿಯ ವಿಶ್ವವೇ ಎದುರು ನೋಡುವ ಆಸ್ಕರ್ ಪ್ರಶಸ್ತಿಗಳನ್ನು ಪ್ರತಿ ವರ್ಷದ ಫೆ. 28ರಂದು ನೀಡಲಾಗುತ್ತದೆ. ಈ ಸಂಜೆಯ ಒಂದೊಂದು ಕ್ಷಣವೂ ರೋಮಾಂಚಕವಾಗಿದ್ದು ಇದರಲ್ಲಿ ಭಾಗಿಯಾಗಲು ಇದರ ಬಗ್ಗೆ ಕೊಂಚ ಅರಿತಿರುವುದು ಅಗತ್ಯ.

ಈ ಪ್ರಶಸ್ತಿಗೆ ಕ್ಷಣಗಣನೆ ಈಗಾಗಲೇ ಪ್ರಾರಂಭವಾಗಿದೆ. ಈ ಬಗ್ಗೆ ಏನೂ ಗೊತ್ತಿಲ್ಲದಿದ್ದರೆ ಈ ವಿಶ್ವಮಟ್ಟದ ಕಾರ್ಯಕ್ರಮದಲ್ಲಿ ಏನಾಗುತ್ತಿದೆ ಎಂಬುದನ್ನು ಕಂಡುಕೊಳ್ಳಲು ಸಾಧ್ಯವೇ ಇಲ್ಲ. ಇದರಲ್ಲಿ ಪ್ರಶಸ್ತಿಯ ಜೊತೆಗೇ ಹಾಸ್ಯ, ವಿನೋದ, ಕಚಗುಳಿ, ಚಿತ್ರಗಳ ಬಗ್ಗೆ ಅಮೂಲ್ಯ ಮಾಹಿತಿ, ನಟನೆ, ತಂತ್ರಜ್ಞಾನ, ನಿರ್ದೇಶನ ಮೊದಲಾದವುಗಳಲ್ಲಿ ಉತ್ಕೃಷ್ಟ ಸಾಧನೆಗೆ ನೀಡಲಾಗುವ ಮಹತ್ವವನ್ನೂ ವಿವರಿಸಲಾಗುತ್ತದೆ. ಬನ್ನಿ, ಈ ಬಗ್ಗೆ ಅಗತ್ಯವಿರುವ ಮಾಹಿತಿಗಳನ್ನು ಅರಿಯೋಣ:

ಆಸ್ಕರ್ ಪ್ರಶಸ್ತಿಗಳನ್ನು ಎಲ್ಲಿ ಪ್ರದಾನಿಸಲಾಗುತ್ತದೆ?

ಈ ಪ್ರಶಸ್ತಿಗಳನ್ನು ಹಾಲಿವುಡ್ ನಗರದ ನಟ್ಟ ನಡುವೆ ಇರುವ ಭವ್ಯ ಮತ್ತು ಅದ್ಭುತ ಡಾಲ್ಬಿ ಶ್ರಾವಣ ವ್ಯವಸ್ಥೆ ಇರುವ ಚಿತ್ರಮಂದಿರದಲ್ಲಿ ನೀಡಲಾಗುತ್ತದೆ. ಈ ಸಂದರ್ಭದಲ್ಲಿ ಸದಾ ಜಿಗಿಜಿಡುತ್ತಿದ್ದ ರಸ್ತೆಯನ್ನು ವಾಹನಗಳಿಂದ ಮುಕ್ತವಾಗಿಸುತ್ತದೆ.

ಈ ಕಾರ್ಯಕ್ರಮದ ಅತಿಥೇಯರು ಯಾರು?

ಹಾಸ್ಯ ನಟ ಕ್ರಿಸ್ ರಾಕ್ ಈ ವರ್ಷದ ಕಾರ್ಯಕ್ರಮದ ಅತಿಥೇಯರಾಗಿದ್ದಾರೆ. ಇವರೊಬ್ಬ ಉತ್ತಮ ಹಾಸ್ಯನಟ ಮತ್ತು ವಾಗ್ಮಿಯಾಗಿದ್ದು ದಶಕಗಳಿಂದ ಜನರನ್ನು ರಂಜಿಸುತ್ತಾ ಬಂದಿದ್ದಾರೆ. ಇವರ ಮಾತಿನಲ್ಲಿ ಚುಟುಕು ಕುಟುಕು ನಗೆಹನಿಗಳಿದ್ದು ನೆರೆದವರನ್ನು ಹಾಸ್ಯದ ಹೊನಲಿನಲ್ಲಿ ಮುಳುಗಿಸುತ್ತದೆ. ಈ ಕಾರ್ಯಕ್ರಮದಲ್ಲಿ ಕ್ರಿಸ್ ರವರ ಮಾತುಗಳೇ ಪ್ರಮುಖ ಆಕರ್ಷಣೆಯಾಗಲಿವೆ.

ಈ ಕಾರ್ಯಕ್ರಮದಲ್ಲಿ ಯಾರು ಯಾರು ಬರಲಿದ್ದಾರೆ?

ಈ ಕಾರ್ಯಕ್ರಮದಲ್ಲಿ ಭಾಗವಹಿಸುವುದೇ ಒಂದು ಭಾಗ್ಯ ಎಂದು ಹಾಲಿವುಡ್ ಭಾವಿಸಿರುವಾಗ ಈ ಅವಕಾಶವನ್ನು ಬಿಟ್ಟುಕೊಡಲು ಯಾರೂ ಇಚ್ಛಿಸುವುದಿಲ್ಲ. ಆದರೂ ಉದಾಹರಿಸಬೇಕೆಂದರೆ ಮ್ಯಾಟ್ ಡಾಮನ್, ಲಿಯೋನಾರ್ಡೋ ಡಿ ಕ್ಯಾಪ್ರಿಯೋ, ಮೈಕಲ್ ಫಾಸ್ಬೆಂಡರ್, ಬ್ರೈ ಲಾರ್ಸನ್, ಕೇಟ್ ಬ್ಲಾಂಚೆಟ್, ಜೆನ್ನಿಫರ್ ಲಾರೆನ್ಸ್, ಟಾಮ್ ಹಾರ್ಡಿ, ರ್‍ಯಾಶೆಲ್ ಮೆಕ್ ಆಡಮ್ಸ್, ಪಟ್ಟಿ ಇನ್ನೂ ದೊಡ್ಡದಿದೆ. ಎಲ್ಲರನ್ನೋ ನೋಡಬೇಕೆಂದರೆ ಈ ಕಾರ್ಯಕ್ರಮದ ನೇರ ಪ್ರಸಾರ ನೋಡಲು ಮರೆಯದಿರಿ.

English summary

Oscar statuettes 2016-Facts you may not know

It’s almost time, film lovers! The Oscars are nearly here, and we can’t wait to bring you every second of the action on Feb. 28. But we wanted to make sure you know everything there is to know before the big show, so we put together a list of all the details, right here!
Story first published: Monday, February 29, 2016, 6:16 [IST]
X