Related Articles
-
ಪುಲ್ವಾಮಾ ದಾಳಿ: ಪ್ರಧಾನಿ ಅಧ್ಯಕ್ಷತೆಯಲ್ಲಿ ಇಂದು ಭದ್ರತಾ ಸಭೆ
-
ಆಕರ್ಷಕ ಬೆಲೆಗಳಲ್ಲಿ ಬಿಡುಗಡೆಯಾದ ಮಹೀಂದ್ರಾ ಎಕ್ಸ್ಯುವಿ300
-
ಕಡಿಮೆ ಮೆಮೊರಿ ಮತ್ತು ರ್ಯಾಮ್ ಇರುವ ಫೋನನ್ನು ಖರೀದಿಸಲೇಬಾರದು ಏಕೆ?
-
ಡಾಲಿ ಫಸ್ಟ್ ಲುಕ್: ಮತ್ತೆ ನಟರಾಕ್ಷಸನ ಆಗಮನ
-
ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ಧನ್ ಯೋಜನೆ: ತಿಂಗಳಿಗೆ 3000 ಪಿಂಚಣಿ
-
ಪುರುಷರಲ್ಲಿ ಫಲವತ್ತತೆ ಹೆಚ್ಚಿಸಲು ಕೆಲವು ಸಲಹೆಗಳು
-
ಐಸಿಸಿ ವಿಶ್ವಕಪ್ ಕ್ರಿಕೆಟ್ 2019 ವೇಳಾಪಟ್ಟಿ ಪ್ರಕಟ
-
ಕೋಲಾರ ಜಿಲ್ಲಾ ನ್ಯಾಯಾಲಯದಲ್ಲಿ ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಹಾಕಿ
80 ರ ದಶಕದ ತಾರೆಯರನ್ನು ನೆನಪಿಗೆ ತಂದ ಸೋನಂ, ರಿಯಾ ಕಪೂರ್ ಸಹೋದರಿಯರು
ಬಾಲಿವುಡ್‌ನ ಮೋಹಕ ಬೆಡಗಿ ಎಂದೇ ಖ್ಯಾತಿ ಪಡೆದಿರುವ ಸೋನಂ ಕಪೂರ್ ತಮ್ಮ ಹೊಸ ರೀತಿಯ ಸ್ಟೈಲ್‌ನಿಂದಲೇ ಬಾಲಿವುಡ್ ಚಿತ್ರ ರಸಿಕರ ಮನ ಗೆದಿದ್ದಾರೆ. ಅನಿಲ್ ಕಪೂರ್ ಮಗಳಾದರೂ ತಂದೆಯ ಪ್ರಭಾವವನ್ನು ಬಳಸಿಕೊಳ್ಳದೆಯೇ ಬಾಲಿವುಡ್‌ನಲ್ಲಿ ತನ್ನದೇ ಝಲಕ್ ತೋರಿಸಿದ ಈ ನಟಿ ಇತ್ತೀಚೆಗೆ ಹಿಟ್ ಚಿತ್ರಗಳನ್ನೇ ನೀಡಿ ಖ್ಯಾತ ಬಾಲಿವುಡ್ ತಾರೆಗಳೊಂದಿಗೆ ನಟಿಸಿ ಸೈ ಅನ್ನಿಸಿಕೊಂಡಿದ್ದಾರೆ.
ಇತ್ತೀಚೆಗೆ ನಡೆದ ಫ್ಯಾಷನ್ ಶೋನಲ್ಲಿ ಸೋನಂ ಕಪೂರ್ ಮತ್ತು ರಿಯಾ ಕಪೂರ್ ತಮ್ಮದೇ ಆದ ವಿನ್ಯಾಸಗೊಳಿಸಿದ ದಿರಿಸುಗಳಿಗೆ ಸೆಲೆಬ್ರಿಟಿಗಳಾಗಿ ಮಿಂಚಿದ್ದಾರೆ. 80 ರ ದಶಕದ ತಾರೆಯರ ದಿರಿಸುಗಳನ್ನು ಸ್ವತಃ ವಿನ್ಯಾಸಗೊಳಿಸಿ ಅವರು ಅದನ್ನು ಪ್ರದರ್ಶಿಸಿದ್ದು ನಿಜಕ್ಕೂ ಈ ಸಾಧನೆ ಪ್ರಶಂಸೆಗೆ ಕಾರಣವಾಗಿದೆ. ಸೋನಂ ಮತ್ತು ರಿಯಾ ಕಪೂರ್ ಇಬ್ಬರೂ ದಿರಿಸುಗಳಲ್ಲಿ ಸಖತ್ ಮಿಂಚಿದ್ದಾರೆ.
ಬೆಲ್ಲಿ ವಿನ್ಯಾಸಗಳಿಂದ ಹಿಡಿದು ಅಂದಿನ ಕಾಲದ ಫ್ಯಾಷನ್ ದಿರಿಸುಗಳಲ್ಲಿ ಕೂಡ ಇವರು ಸಖತ್ ಮಿಂಚಿದ್ದು ಅಕ್ಕ ತಂಗಿಯರು ಹಿಂದಿನ ಕಾಲದ ತಾರೆಯರ ಝಲಕ್ ಅನ್ನು ಈಗಿನ ಕಾಲಕ್ಕೆ ಹೊಂದುವಂತೆ ಹೊರತಂದಿದ್ದಾರೆ. ಆಗಿನ ಕಾಲದ ಪ್ರಿಂಟ್‌ಗೆ ಸಂಬಂಧಿಸಿದ ದಿರಿಸುಗಳನ್ನು ಕೂಡ ರೀಸನ್ ಪ್ರಸ್ತುತಪಡಿಸಿದೆ. ಕೆಳಗಿನ ಫೋಟೋಗಳಲ್ಲಿ ಸಹೋದರಿಯರು ತಮ್ಮ ದಿರಿಸುಗಳ ಮೂಲಕ ಹೇಗೆ ಮಿಂಚಿದ್ದಾರೆ ಎಂಬುದನ್ನು ನೀವು ನೋಡಬಹುದಾಗಿದೆ. ನಿಮಗೆ ಈ ಸ್ಟೈಲ್ ಇಷ್ಟವಾಗಿದ್ದರೆ ನೀವುಗಳೂ ಕೂಡ ದಿರಿಸು ಧರಿಸಿ ಮಿಂಚಬಹುದು.