Latest Updates
-
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ -
ಹಬ್ಬದ ಸೀಸನ್: ಕಲಬೆರಕೆ ಆಹಾರದಿಂದ ಎಚ್ಚರ! ಮಹಾರಾಷ್ಟ್ರ FDA ಕಠಿಣ ತಪಾಸಣೆ ಆರಂಭ
ಡ್ಯಾನ್ಸ್ ಶೋನಲ್ಲಿ ಮಿಂಚಿದ ಧಕ್ ಧಕ್ ಬೆಡಗಿ ಮಾಧುರಿ ದೀಕ್ಷಿತ್
ಬಾಲಿವುಡ್‌ನ ಮೋಹಕ ತಾರೆ ಧಕ್ ಧಕ್ ಬೆಡಗಿ ಮಾಧುರಿ ದೀಕ್ಷಿತ್ ಈಗಲೂ ತಮ್ಮ ಬೇಡಿಕೆಯನ್ನುಳಿಸಿಕೊಂಡು ಬಾಲಿವುಡ್ ಅಂಗಳದಲ್ಲಿ ಮಿಂಚುತ್ತಿದ್ದಾರೆ. ಸಿನಿಮಾದಲ್ಲಿ ನಟಿಸುತ್ತಾ ಡ್ಯಾನ್ಸ್ ಶೋಗಳಲ್ಲಿ ಜಡ್ಜ್ ಆಗಿ ಭಾಗವಹಿಸುತ್ತಾ ತಮ್ಮ ಆಸಕ್ತಿಯನ್ನು ಅಂತೆಯೇ ತಮ್ಮ ಝಲಕ್ ಅನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ. ಎರಡು ಮಕ್ಕಳ ತಾಯಿಯಾಗಿದ್ದರೂ ಮಾಧುರಿ ತಮ್ಮ
ಬೆಡಗನ್ನು ಕಳೆದುಕೊಂಡಿಲ್ಲ.
ದೈಹಿಕ ಫಿಟ್‌ನೆಸ್ ಮತ್ತು ನಾಟ್ಯವನ್ನು ಮುಂದುವರಿಸುತ್ತಾ ತಮ್ಮ ಯವ್ವೌನವನ್ನು ಹಾಗೆಯೇ ಇರಿಸಿಕೊಂಡಿದ್ದಾರೆ. ಒಂದು ಕಾಲದಲ್ಲಿ ಬಾಲಿವುಡ್ ಅನ್ನು ಆಳಿದ್ದ ಈ ರೂಪಸಿಗೆ ಈಗಲೂ ಫ್ಯಾನ್ ಬೇಡಿಕೆ ಕುಗ್ಗಿಲ್ಲ. ಅಂದಿಗೂ ಎಂದಿಗೂ ಮಾಧುರಿ ಬಾಲಿವುಡ್‌ನ ರೂಪಸಿ ಎಂದು ಕರೆಯಿಸಿಕೊಂಡವರು. ಇಂದಿನ ಲೇಖನದಲ್ಲಿ ಮಾಧುರಿಯ ಸ್ಟೈಲ್ ಬಗ್ಗೆ ನಾವು ಮಾತನಾಡುತ್ತಿರುವುದಕ್ಕೆ ಕಾರಣವಿದೆ.

ಇತ್ತೀಚೆಗೆ ಆರಂಭವಾಗಿರುವ ಡ್ಯಾನ್ಸಿಂಗ್ ರಿಯಾಲಿಟಿ ಶೋನಲ್ಲಿ ಮಾಧುರಿ ಎಲ್ಲರನ್ನೂ ಸ್ತಬ್ಧಗೊಳಿಸುವಂತೆ ಅಂದವಾಗಿ ಕಾಣುತ್ತಿದ್ದರು. ಸಬ್ಯಸಾಚಿ ವಿನ್ಯಾಸದ ಸೀರೆಯನ್ನುಟ್ಟುಕೊಂಡು ಅಂತೆಯೇ ಮನೀಶ್ ಮಲ್ಹೋತ್ರಾ ಸೂಟ್‌ನಲ್ಲಿ ತಮ್ಮ ರೂಪವನ್ನು ಮತ್ತೊಮ್ಮೆ ಬಿಚ್ಚಿಟ್ಟಿದ್ದಾರೆ.ತಮ್ಮ ಉಡುಗೆ ಸಾಂಪ್ರದಾಯಿಕವಾಗಿ ಇರಲಿ ಅಥವಾ ಆಧುನಿಕವಾಗಿರಲಿ ಮಾಧುರಿ ಅದನ್ನು ತಮ್ಮದೇ ರೀತಿಯಲ್ಲಿ ಕೊಂಡೊಯ್ಯುತ್ತಾರೆ ಮತ್ತು ತಮ್ಮ ಅಭಿಮಾನಿಗಳಿಗೆ ಹೊಸತನದ ಸ್ಟೈಲ್ ರುಚಿಯನ್ನು ಉಣಬಡಿಸುತ್ತಾರೆ. ಆದ್ದರಿಂದಲೇ ತಮ್ಮದೇ ಆದ ಮೋಹಕತೆಯನ್ನು ಮಾಧುರಿ ಬಾಲಿವುಡ್ ಅಂಗಳದಲ್ಲಿ ಹೊರಸೂಸಿರುವುದು.
ಸೋಯು ಥಿಂಕ್ ಯು ಕೇನ್ ಡ್ಯಾನ್ಸ್ ಕಾರ್ಯಕ್ರಮದಲ್ಲಿ ಮಾಧುರಿ ಪಂಕಜ್ ಮತ್ತು ನಿಧಿ ವಿನ್ಯಾಸದ ಮಾಡರ್ನ್ ದಿರಿಸಿನಲ್ಲಿ ಕಂಗೊಳಿಸಿದ್ದಾರೆ. ಮಾಧುರಿ ಕಪ್ಪು ಬಣ್ಣದ ಚಪ್ಪಲಿಗಳನ್ನು ಉಡುಗೆಗೆ ಒಪ್ಪುವಂತೆ ತೊಟ್ಟಿದ್ದು ಆಕೆ ಮಾಡಿರುವ ಹೇರ್ ಸ್ಟೈಲ್ ಕೂಡ ನಮಗೆ ಇಷ್ಟವಾಗಿದೆ. ಸ್ಟೈಲಿಸ್ಟ್ ಬನಿ ಬಿ ಟೌನ್‌ನಲ್ಲಿ ತಮ್ಮ ಪ್ರಸಿದ್ಧತೆಯನ್ನು ಗಳಿಸಿಕೊಳ್ಳುವುದು ಖಂಡಿತ.



Click it and Unblock the Notifications
