ಅದೇನ್ ಚಂದಾನೇ ಕಾಜಲ್, ನಿನ್ನ ಉಡುಗೆ-ತೊಡುಗೆ!

By: Jaya subramanya
Subscribe to Boldsky

ಬಾಲಿವುಡ್, ಕಾಲಿವುಡ್, ಟಾಲಿವುಡ್‌ನಲ್ಲಿ ತಮ್ಮ ಪ್ರಸಿದ್ಧತೆಯನ್ನು ಗಳಿಸಿಕೊಳ್ಳುತ್ತಿರುವ ಬೆಡಗಿ ಕಾಜಲ್ ಅಗರ್‌ವಾಲ್ ಇತ್ತೀಚೆಗೆ ಬೇಡಿಕೆಯ ನಟಿಯಾಗಿ ಖ್ಯಾತಿಯನ್ನು ಗಳಿಸಿಕೊಳ್ಳುತ್ತಿದ್ದಾರೆ. ಹೆಚ್ಚಿನ ಸಿನಿಮಾಗಳಲ್ಲಿ ನಟಿಸುತ್ತಾ ಬ್ಯುಸಿಯಾಗಿರುವ ಈ ನಟಿ ಸಂಭಾವನೆಯ ವಿಷಯದಲ್ಲೂ ಎತ್ತಿದ ಕೈ ಎಂದರೆ ಸುಳ್ಳಲ್ಲ.  

kajal-aggarwal
 

ಎಲ್ಲಾ ಸೆಲೆಬ್ರಿಟಿಗಳಂತೆಯೇ ಕಾಜಲ್ ಕೂಡ ಫ್ಯಾಷನ್ ವಿಷಯದಲ್ಲಿ ತುಂಬಾ ಚ್ಯೂಸಿಯಾಗಿದ್ದಾರೆ. ಇತ್ತೀಚಿಗಿನ ಟ್ರೆಂಟ್‌ಗೆ ಸರಿಹೊಂದುವಂತಹ ದಿರಿಸುಗಳನ್ನೇ ನಟಿ ಆಯ್ಕೆಮಾಡುತ್ತಿದ್ದು ಅದರಲ್ಲೂ ನವೀನತೆಯನ್ನು ಅವರು ಆಯ್ದುಕೊಂಡಿದ್ದಾರೆ.

ಮರೀನಾ ಕುರೇಶಿ ವಿನ್ಯಾಸದ ಉಡುಗೆಯಲ್ಲಿ ಕಾಜಲ್ ತಮ್ಮ ಸೌಂದರ್ಯವನ್ನು ಇನ್ನಷ್ಟು ಮೆರುಗಿನೊಂದಿಗೆ ಉಣಬಡಿಸಿದ್ದಾರೆ. ಬಿಳಿ ಮತ್ತು ನೀಲಿ ಬಣ್ಣದ ಸ್ಟ್ರಿಪ್ ಕಾಲರ್ ಶರ್ಟ್ ಅನ್ನು ಕಾಜಲ್ ಆಯ್ಕೆಮಾಡಿದ್ದು ಈ ಶರ್ಟ್ ಅನ್ನು ತಮ್ಮ ಪೆನ್ಸಿಲ್ ಸ್ಕರ್ಟ್‌ನಲ್ಲಿ ಅವರು ಫೈನಲ್ ಟಚಪ್ ಮಾಡಿ ಕೊಂಡಿರುವ ಬಗೆಯನ್ನು ಮೆಚ್ಚಿಕೊಳ್ಳಲೇಬೇಕು. 

kajal-aggarwal
 

ಆದರೆ ಇದೊಂದು ಸ್ಕರ್ಟ್ ಎಂಬುದನ್ನು ನಾವಿಲ್ಲಿ ತಿಳಿಸುತ್ತಿದ್ದೇವೆ ಕೂಡ. ಈ ಸ್ಕರ್ಟ್‌ನಲ್ಲಿ ಪಾಕೆಟ್‌ಗಳು ಮತ್ತು ಸಣ್ಣ ಸಣ್ಣ ನಕ್ಷತ್ರಗಳಿದ್ದು ಮೆಟಾಲಿಕ್ ಸಿಲ್ವರ್ ಪಾದರಕ್ಷೆಯನ್ನು ಕಾಜಲ್ ಉಡುಗೆಗಾಗಿ ಆಯ್ದುಕೊಂಡಿದ್ದಾರೆ. ಇನ್ನು ಕಾಜಲ್ ಮಾಡಿಕೊಂಡಿರುವ ಕೇಶ ವಿನ್ಯಾಸ ಲೊ ಪೋನಿಟೇಲ್ ಆಗಿದೆ.

ಅಂತೂ ಕಾಜಲ್ ತಮ್ಮ ದಿರಿಸು ಮತ್ತು ಮಾಡಿಕೊಂಡಿರುವ ಸ್ಟೈಲ್‌ನಲ್ಲಿ ಸೈ ಎನ್ನಿಸಿಕೊಂಡಿದ್ದು ಆಕೆಯ ಸ್ಟೈಲಿಸ್ಟ್‌ಗೆ ಈ ವಿಷಯದಲ್ಲಿ ಧನ್ಯವಾದಗಳನ್ನು ಅರ್ಪಿಸಬೇಕು. ಹಾಗಿದ್ದರೆ ಕಾಜಲ್ ಅನುಸರಿಸಿರುವ ಹೊಸ ಟ್ರೆಂಡ್ ಅನ್ನು ನೀವೂ ಅನುಸರಿಸಬಹುದು ಏನಂತೀರಾ?

English summary

look-of-the-day-kajal-aggarwal-look-chic-as-hell

Kajal Aggarwal takes a dig at formal outfit and looks wonderful. Check out starry pencil skirt here! Kajal Aggarwal does a classy lookbook and we make sure we cover every bit of it for you guys. Kajal was recently seen looking absolutely chic in Marina Qureshi ensemble.
Story first published: Wednesday, January 18, 2017, 23:14 [IST]
Please Wait while comments are loading...
Subscribe Newsletter