ಗಾಲಾ ಅವಾರ್ಡ್‌: ಈ ದೇವಕನ್ನಿಕೆಯ ಸೊಬಗನ್ನು ವರ್ಣಿಸಲು ಪದಗಳೇ ಸಾಲದು!

By: jaya subramanya
Subscribe to Boldsky

ನ್ಯೂಯಾರ್ಕ್‌ನಲ್ಲಿ ನಡೆದ ಗಾಲಾ ಅವಾರ್ಡ್‌ನಲ್ಲಿ ಪ್ರಿಯಾಂಕಾ ಮಿಂಚಿದ್ದು ನಿಮಗೆ ಗೊತ್ತೇ ಇದೆ. ಗಾಲಾ ಅವಾರ್ಡ್‌ 2017 ರಲ್ಲಿ ಈಗ ಸಂಭ್ರಮಿಸುವ ಸರದಿ ದೀಪಿಕಾ ಪಡುಕೋಣೆಯದ್ದಾಗಿದೆ. ತಮ್ಮ ಸ್ಯಾಟೀನ್ ಸ್ಲಿಪ್ ದಿರಿಸಿನಲ್ಲಿ ದೀಪಿಕಾ ಲೋಕವೇ ಬೆರಗುಗೊಳ್ಳುವಂತಹ ಮೈಮಾಟದೊಂದಿಗೆ ಅವತರಿಸಿದ್ದರು. ದೇವಕನ್ನಿಕೆಯಂತೆ ಕಂಡುಬರುತ್ತಿದ್ದ ಅವರು ತಾವು ಧರಿಸಿದ ದಿರಿಸಿನಲ್ಲಿ ತಮ್ಮ ಸುಂದರ ದೇಹವನ್ನು ಇನ್ನಷ್ಟು ಬಳುಕಿಸಿಕೊಂಡು ರೆಡ್ ಕಾರ್ಪೆಟ್‌ನಲ್ಲಿ ನಡೆದ ಪರಿ ಯಾರನ್ನು ಕೂಡ ಬೆರಗುಗೊಳ್ಳುವಂತೆ ಮಾಡಿತ್ತು. 

Deepika

ರೇಷ್ಮೆಯ ದಿರಿಸು ಅವರ ನೀಳಕಾಯಕ್ಕೆ ಹೇಳಿಮಾಡಿಸಿದಂತಿದ್ದು ಗುಳಿಕೆನ್ನೆಯ ಚೆಲುವೆ ದೀಪಿಕಾ ಇನ್ನಷ್ಟು ಸುಂದರಿಯಾಗಿ ಕಾಣುತ್ತಿದ್ದರು ಮತ್ತು ಅವರ ಸೊಬಗು ಯಾರನ್ನೂ ಕೂಡ ಮೋಡಿ ಮಾಡುವಂತೆ ಮಾಡಿತ್ತು.

Deepika

ಹಿಂಭಾಗದಲ್ಲಿ ಈ ದಿರಿಸು ಸ್ಲಿಟ್ ಅನ್ನು ಪಡೆದುಕೊಂಡಿತ್ತು ಅಂತೂ ಈವೆಂಟ್‌ನಲ್ಲಿ ಗಮನ ಹರಿಸಿದ ದಿರಿಸು ಇದಾಗಿತ್ತು ಎಂಬುರದಲ್ಲಿ ಯಾವುದೇ ಸಂಶಯವಿರಲಿಲ್ಲ. ಅದರ ಜೊತೆಗೆ ಆಕೆ ಮಾಡಿದ ಸರಳ ಮೇಕಪ್ ದೀಪಿಕಾರಿಗೆ ಇನ್ನಷ್ಟು ಸೊಬಗನ್ನು ತಂದಿತ್ತು.

Deepika

ಅಂತೂ ಈ ಎಲ್ಲಾ ವಿಧದಲ್ಲಿ ಆಕೆಯೊಂದು ಸುಂದರ ದೇವಕನ್ನಿಕೆ ಎಂಬುದರಲ್ಲಿ ಎರಡು ಮಾತಿರಲಿಲ್ಲ. ದೀಪಿಕಾ ಮಾಡಿಕೊಂಡಿದ್ದ ಸರಳ ಕೇಶವಿನ್ಯಾಸ ಆಕೆಯ ದಿರಿಸಿಗೆ ಅತ್ಯುನ್ನತ ಸೊಬಗನ್ನು ತಂದಿತ್ತು ಎಂಬುದಂತೂ ಸತ್ಯ. ದಿರಿಸಿಗೆ ತಕ್ಕಂತೆ ಆಕೆ ಮಾಡಿಕೊಂಡ ಸರಳ ಮೇಕಪ್ ಆಕೆಯ ಸೌಂದರ್ಯವನ್ನು ಇಮ್ಮಡಿಸಿತ್ತು ಎಂಬುದರಲ್ಲಿ ಎರಡು ಮಾತಿಲ್ಲ. 

 

English summary

Deepika Resembles A Princess At The Met Gala Awards 2017

While Priyanka Chopra flaunted her sexy and gracious look at the Met Gala Awards 2017 held in New York City last evening, Deepika Padukone decided to stay simple in her satin-silk slip dress. We saw her walking the red carpet carrying the most princessly look of the event.
Subscribe Newsletter