For Quick Alerts
ALLOW NOTIFICATIONS  
For Daily Alerts

ಏರ್‌ಪೋರ್ಟ್‌ನಲ್ಲಿ ಎಲ್ಲರ ಮನಸ್ಸನ್ನು ಕದ್ದ ಪದ್ಮಾವತ್ ಪ್ರತಿಭೆ ದೀಪಿಕಾ

|

ಬಾಲಿವುಡ್‌ನಲ್ಲಿ ತಮ್ಮ ಅದ್ಭುತ ಕಲಾಪ್ರತಿಭೆಯಿಂದ ಹೆಸರುವಾಸಿಯಾಗಿರುವ ಪ್ರತಿಭೆ ದೀಪಿಕಾ ಪಡುಕೋಣೆ ಇಂದು ಹೆಚ್ಚು ಸಂಭಾವನೆ ಪಡೆಯವ ನಟಿಯರಲ್ಲಿ ಮೊದಲ ಸ್ಥಾನವನ್ನು ಅಲಂಕರಿಸಿದ್ದಾರೆ. ಅವರು ಅನುಸರಿಸುವ ಸ್ಟೈಲ್‌ಗಳು ಎಲ್ಲಾ ಕಾಲದಲ್ಲೂ ಎಲ್ಲರ ಮನವನ್ನು ಗೆದ್ದಿದ್ದು ಒಂದೊಂದು ಸ್ಥಳದಲ್ಲಿ ಕೂಡ ಅವರು ಅನುಸರಿಸುವ ಸ್ಟೈಲ್‌ಗಳು ಪ್ರತಿಯೊಬ್ಬರ ಮನಸ್ಸನ್ನು ಕದಿಯುವಂತಿದೆ.

ಇತ್ತೀಚಿನ ಅವರ ಏರ್‌ಪೋರ್ಟ್ ಸ್ಟೈಲ್ ಎಲ್ಲರ ಮನವನ್ನು ಕದ್ದಿದ್ದು ಸರಳವಾಗಿ ಎಲ್ಲರ ಕಣ್ಮನ ಸೆಳೆದಿದೆ. ಇದಲ್ಲದೆ ದೀಪಿಕಾ ಬಿಳಿ ಬಣ್ಣವನ್ನು ಹೆಚ್ಚು ಇಷ್ಟಪಡುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಆಕೆ ಬಿಳಿ ಬಣ್ಣಕ್ಕೆ ಹೆಚ್ಚು ಮನಸೋಲುತ್ತಿದ್ದು ಈ ಬಣ್ಣದ ಉಡುಪುಗಳನ್ನೇ ಅವರು ಹೆಚ್ಚು ಆರಿಸಿಕೊಂಡು ಧರಿಸುತ್ತಿದ್ದಾರೆ ಎಂಬುದು ಲೇಟೆಸ್ಟ್ ಸ್ಟೈಲ್ ರಿಪೋರ್ಟ್ ಆಗಿದೆ.

ಇತ್ತೀಚೆಗೆ ದೀಪಿಕಾ ಧರಿಸಿದ್ದ ದಿರಿಸು ಬಿಗಿಯಾದ ಬಿಳಿ ಬಣ್ಣದ ತೋಳು ರಹಿತ ಟಾಪ್ ಆಗಿದ್ದು ಇದಕ್ಕೆ ಆಕೆ ಆಯ್ದುಕೊಂಡಿದ್ದು ಕಪ್ಪು ಬಣ್ಣದ ಪ್ಯಾಂಟ್ ಆಗಿದೆ. ಹೈ ವೇಸ್ಟ್ ಪ್ಯಾಂಟ್ ಆಕರ್ಷಕವಾಗಿದ್ದು ಮೆಟಾಲಿಕ್ ಸ್ಪರ್ಶವನ್ನು ಒಳಗೊಂಡಿದೆ. ನಿಜಕ್ಕೂ ದೀಪಿಕಾರ ಈ ಉಡುಗೆ ಅಲ್ಲಿದ್ದವರ ಮನವನ್ನು ಕದಿಯುವಂತಿತ್ತು.

ಕಪ್ಪು ಮತ್ತು ಬಿಳಿ ಬಣ್ಣದ ದೀಪಿಕಾರ ಉಡುಗೆಯು ಎಲ್ಲರ ಚಿತ್ತವನ್ನು ಅವರೆಡೆಗೆ ಸೆಳೆದಿತ್ತು. ಇದರೊಂದಿಗೆ ಆಕೆ ಕಪ್ಪು ಬಣ್ಣದ ಸ್ಪೋರ್ಟ್ಸ್ ಶೂವನ್ನು ಧರಿಸಿದ್ದು ಆಕೆಯ ಉಡುಪಿಗೆ ಹೊಂದುವಂತಿತ್ತು. ವಾಚ್ ಜೊತೆಗೆ ಕೆಲವು ಸ್ಟೈಲ್ ಬಳೆಗಳನ್ನು ಆಕೆ ಧರಿಸಿದ್ದರು. ತಮ್ಮ ಕೂದಲನ್ನು ಅವರು ಮುಕ್ತವಾಗಿ ಬಿಚ್ಚಿದ್ದರು.

ನಿಜಕ್ಕೂ ದೀಪಿಕಾರ ಈ ಲುಕ್ ಅತ್ಯದ್ಭುತವಾಗಿದ್ದು ನಮ್ಮನ್ನು ಹೆಚ್ಚು ಆಕರ್ಷಿತಗೊಳಿಸಿದೆ. ನಿಮಗೂ ದೀಪಿಕಾರ ಈ ಲುಕ್ ಇಷ್ಟವಾಗಿದೆಯೇ? ಹಾಗಿದ್ದರೆ ಕೆಳಗೆ ನಿಮ್ಮ ಕಾಮೆಂಟ್‌ಗಳನ್ನು ತಿಳಿಸಿ.

English summary

deepika-padukone-s-latest-airport-look-will-knock-your-socks

Apart from her this sporty outfit, we have also noticed Deepika Padukone's growing fondness for the colour white. Her latest airport attire featured a tight sleeveless white short top and she paired it with black flared bottoms. Her trousers looked very contemporary and had a metallic touch. She wore black sports shoes and matching shades to complete her cool look.
X