Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಸೀರೆಯಲ್ಲಿ ಮನಸೆಳೆದ ಗುಳಿಕೆನ್ನೆ ಬೆಡಗಿ ದೀಪಿಕಾ ಪಡುಕೋಣೆ
ಬಾಲಿವುಡ್ನಲ್ಲಿ ತಮ್ಮ ಸೀರೆಗಳಿಂದಲೇ ಖ್ಯಾತಿಗೊಂಡಿದ್ದ ರೇಖಾ, ವಿದ್ಯಾ ಬಾಲನ್ ಸಾಲಿಗೆ ಈಗ ಲೇಟೆಸ್ಟ್ ಹೆಸರು ದೀಪಿಕಾ ಪಡುಕೋಣೆಯವರದ್ದಾಗಿದೆ. ಗೆಲ್ಲುವ ಕುದುರೆಯೆಂದೇ ಪ್ರಸಿದ್ಧಿಯನ್ನು ಪಡೆದುಕೊಂಡಿರುವ ದೀಪಿಕಾ ಬಾಲಿವುಡ್ ಅಂಗಳದಲ್ಲಿ ಮಾತ್ರವಲ್ಲದೆ ಹಾಲಿವುಡ್ನಲ್ಲೂ ಹೆಸರು ಗಿಟ್ಟಿಸಿಕೊಂಡ ಗಟ್ಟಿಗಿತ್ತಿ. ಬ್ಯಾಡ್ಮಿಂಟನ್ ಆಟಗಾರ್ತಿಯಾಗಿದ್ದರೂ ಸಿನಿ ಕ್ಷೇತ್ರದಲ್ಲೂ ತಮ್ಮ ಹೆಸರನ್ನು ಕಾಪಾಡಿಕೊಂಡ ಕರಾವಳಿ ಚೆಲುವೆ.
ದೀಪಿಕಾ ಫ್ಯಾಷನ್ ವಿಷಯದಲ್ಲೂ ಒಂದು ಕೈ ಮೇಲೆಯೇ ಎನ್ನಬಹುದು. ಫ್ಯಾಷನೇಬಲ್ ದಿರಿಸೇ ಆಗಿರಲಿ ಸಾಂಪ್ರದಾಯಿಕ ಉಡುಗೆಯೇ ಆಗಿರಲಿ ದೀಪಿಕಾ ಎಲ್ಲಿಯೂ ರಾಜಿ ಮಾಡಿಕೊಳ್ಳುವುದೇ ಇಲ್ಲ. ಯಾವುದೇ ದಿರಿಸನ್ನು ನಾಜೂಕಾಗಿ ನಿರ್ವಹಿಸುವ ಕಲೆಯನ್ನು ಕರತಲಾಮಲಕ ಮಾಡಿಕೊಂಡ ಜಾಣೆ. ಇಂದಿನ ಲೇಖನದಲ್ಲಿ ದೀಪಿಕಾರ ಸಾರಿ ಲುಕ್ ಅನ್ನು ಅಂದವಾಗಿ ಕೆಳಗಿನ ಸ್ಲೈಡರ್ಗಳಲ್ಲಿ ತೋರಿಸುತ್ತಿದ್ದು ನೀವೂ ಇವರ ಸೀರೆ ಬೆಡಗನ್ನು ಮೆಚ್ಚಿಕೊಂಡು ಅದನ್ನು ಅನುಸರಿಸುವುದು ಖಂಡಿತ.

ಹೊಳೆಯುವ ಬಿಳಿ ಸೀರೆ
ಸಬ್ಯಸಾಚಿ ವಿನ್ಯಾಸಪಡಿಸಿರುವ ಹೊಳೆಯುವ ಬಿಳಿ ಸೀರೆಯಲ್ಲಿ ದೀಪಿಕಾ ಇನ್ನಷ್ಟು ಮುದ್ದಾಗಿ ಕಾಣುತ್ತಿದ್ದಾರೆ. ಸ್ಲೀವ್ ಲೆಸ್ ರವಿಕೆ ತೊಟ್ಟು ಕೂದಲನ್ನು ಗಂಟು ಕಟ್ಟಿ ಬನ್ನಂತೆ ಮಾಡಿಕೊಂಡಿರುವ ದೀಪಿಕಾರ ಸೌಂದರ್ಯ ಇನ್ನಷ್ಟು ಇಮ್ಮಡಿಗೊಂಡಿದೆ.

ರೋಹಿತ್ ಬಾಲಾರ ಬಿಳಿ ಸೀರೆ
ಕೇನ್ಸ್ನಲ್ಲಿ ರೋಹಿತ್ ಬಾಲಾ ವಿನ್ಯಾಸಪಡಿಸಿರುವ ಈ ಬಿಳಿ ಸೀರೆಯನ್ನು ದೀಪಿಕಾ ಉಟ್ಟಿದ್ದರು. ದಕ್ಷಿಣ ಭಾರತದಲ್ಲಿ ಮದುಮಗಳೂ ಈ ಸೀರೆಯನ್ನು ಉಟ್ಟು ದೀಪಿಕಾರಂತೆ ಮಿಂಚ ಬಹುದಾಗಿದೆ.

ಪ್ರಿಂಟೆಡ್ ಕಪ್ಪು ಸೀರೆ
ಸ್ನೇಹಿತೆಯರ ರಿಸೆಪ್ಶನ್ ಮತ್ತು ಪಾರ್ಟಿಗೆ ಈ ಕಪ್ಪು ಸೀರೆ ಹೇಳಿ ಮಾಡಿಸಿದ್ದಾಗಿದೆ. ಮದುವೆಯ ಮುನ್ನಾ ದಿನ ಕೂಡ ಈ ಸೀರೆಯನ್ನು ಟ್ರೈ ಮಾಡಬಹುದಾಗಿದೆ.

ಸಬ್ಯಸಾಚಿ ಸೀರೆ
ದೀಪಿಕಾ ತಮ್ಮ ಹನಿಮೂನ್ನಲ್ಲೂ ಸೀರೆ ತೊಟ್ಟುಕೊಳ್ಳಲು ಬಯಸಿದ್ದಾರೆ ಎಂದಾದಲ್ಲಿ ಖಂಡಿತ ಈ ಸೀರೆಯನ್ನು ಅವರಿಗೆ ಟ್ರೈ ಮಾಡಬಹುದಾಗಿದೆ.

ಹೊಳೆಯುವ ಸಬ್ಯಸಾಚಿ ಸೀರೆ
ದೀಪಿಕಾರ ಸೀರೆ ಸಂಗ್ರಹಗಳಲ್ಲಿ ಇದು ಅತ್ಯುತ್ತಮವಾಗಿದೆ. ಇದರೊಂದಿಗೆ ಇನ್ನಷ್ಟು ಒಡವೆಗಳನ್ನು ಆಕೆ ತೊಟ್ಟುಕೊಂಡಲ್ಲಿ ಮದುಮಗಳ ಕಳೆ ಖಂಡಿತ ಬಂದೇ ಬರುತ್ತದೆ.

ನಿಯೋನ್ ಹಳದಿ ಸೀರೆ
ಈ ಹಳದಿ ಬಣ್ಣದ ಸೀರೆಯಲ್ಲಿ ದೀಪಿಕಾ ಮುದ್ದಾಗಿ ಕಾಣುತ್ತಿದ್ದಾರೆ. ತಮ್ಮ ಹಳದಿ ಸಮಾರಂಭಕ್ಕೆ ದೀಪಿಕಾ ಈ ಸೀರೆಯನ್ನು ಆಯ್ಕೆಮಾಡಿಕೊಳ್ಳಬಹುದಾಗಿದೆ.

ಫ್ಲೋರಲ್ ಸೀರೆ
ಇನ್ನೊಂದು ಸುಂದರವಾದ ಸೀರೆಯಲ್ಲಿ ಸೊಗಸಾಗಿ ಕಾಣುತ್ತಿರುವ ದೀಪಿಕಾರನ್ನು ಕಣ್ತುಂಬಿಕೊಳ್ಳಬಹುದಾಗಿದೆ. ಸರಳವಾಗಿ ಆಕರ್ಷಕವಾಗಿರುವ ಈ ಸೀರೆಯನ್ನು ನಿಶ್ಚಿತಾರ್ಥಕ್ಕೆ ಉಟ್ಟುಕೊಳ್ಳಬಹುದಾಗಿದೆ.

ಗಾಢ ಕೆಂಪು ವರ್ಣದ ಸೀರೆ
ದೀಪಿಕಾರ ಅಂದಕ್ಕೆ ಕನ್ನಡಿ ಹಿಡಿದಂತಿರುವ ಈ ಸೀರೆ ಅವರ ಗೌರವರ್ಣಕ್ಕೆ ಮೆರುಗನ್ನು ತಂದಿದೆ.

ಕೆಂಪು ಸಬ್ಯಸಾಚಿ ಸೀರೆ
ಮದುವೆ ಸಮಾರಂಭಗಳಿಗೆ ದೀಪಿಕಾ ಈ ಸೀರೆಯನ್ನು ತೊಟ್ಟುಕೊಳ್ಳಬಹುದಾಗಿದೆ, ಸ್ನೇಹಿತರೊಂದಿಗೆ ಪಾರ್ಟಿಗೂ ಈ ಸೀರೆ ಹೇಳಿಮಾಡಿಸಿರುವಂಥದ್ದಾಗಿದೆ.

ಸಬ್ಯಸಾಚಿ ಕೆಂಪು ಸೀರೆ
ಕೆಂಪು ಬಣ್ಣದ ಸಿಲ್ಕ್ ಸೀರೆಯಲ್ಲಿ ವಧುವಿನಂತೆ ಕಂಗೊಳಿಸುತ್ತಿರುವ ದೀಪಿಕಾ ರಾಣಿಯಂತೆ ಮಿಂಚುತ್ತಿದ್ದಾರೆ. ನವ ವಧುವಿನಂತೆ ಮಿಂಚುತ್ತಿರುವ ದೀಪಿಕಾರ ಸೌಂದರ್ಯಕ್ಕೆ ಬೆರಗುಗೊಳ್ಳದವರೇ ಇಲ್ಲವೆನ್ನಬಹುದು.



Click it and Unblock the Notifications
