ಫ್ಯಾಷನ್ ರಾಣಿ ವಿದ್ಯಾ ಬಾಲನ್‌ರ ಸ್ಟೈಲಿಶ್‌ ಲುಕ್‌!

By: Jaya subramanya
Subscribe to Boldsky

ತಮ್ಮ ಅಭಿನಯದಿಂದ ಚಿತ್ರರಂಗದಲ್ಲಿ ಮೋಡಿ ಮಾಡಿರುವ ನಟಿ ವಿದ್ಯಾ ಇದೀಗ ಕಹಾನಿ 2 ಚಿತ್ರದ ಮೂಲಕ ತಮ್ಮ ಅಭಿಮಾನಿ ಬಳಗವನ್ನು ರಂಜಿಸಲಿದ್ದಾರೆ. ಕಹಾನಿ ಚಿತ್ರದ ಯಶಸ್ಸಿನ ನಂತರ ವಿದ್ಯಾ ಈ ಚಿತ್ರದಲ್ಲೂ ಪ್ರಮುಖ ಅವತರಣಿಕೆಯಲ್ಲಿದ್ದಾರೆ. 

Vidya Balan’s
 

ಚಿತ್ರದ ಪ್ರಮೋಷನ್ ಕಾರ್ಯದಲ್ಲಿ ವಿದ್ಯಾ ತಮ್ಮನ್ನು ತೊಡಗಿಸಿಕೊಂಡಿದ್ದು, ಫ್ಯಾಷನ್ ವಿಷಯದಲ್ಲೂ ಸೈ ಅನ್ನಿಸಿಕೊಂಡಿದ್ದಾರೆ. ನೆಲ ಮುಟ್ಟುವ ಗೌನ್‌ನಲ್ಲಿ ವಿದ್ಯಾ ಸರಳವಾಗಿ ತಮ್ಮನ್ನು ತೋರಿಸಿಕೊಂಡಿದ್ದು ಉದ್ದನೆಯ ಜಾಕೆಟ್ ಜೊತೆಗೆ ಅರ್ಬನ್ ಸ್ಟೈಲ್‌ನಿಂದ ಮೋಡಿ ಮಾಡಿದ್ದಾರೆ.

Vidya Balan’s

ತಮ್ಮ ದಿರಿಸಿಗೆ ತಕ್ಕಂತೆಯೇ ವಿದ್ಯಾ ಮೇಕಪ್ ಮಾಡಿಕೊಂಡಿದ್ದಾರೆ. ಗುಂಗುರು ಕೂದಲಿನ ತುರುಬನ್ನು ಕಟ್ಟಿ ಕಣ್ಣಿಗೆ ತೆಳುವಾದ ಮೇಕಪ್ ಅನ್ನು ವಿದ್ಯಾ ಮಾಡಿದ್ದಾರೆ. 

Vidya Balan’s
 

ದೆಹಲಿಯಲ್ಲಿ ವಿದ್ಯಾ ಕಹಾನಿ 2 ನ ಪ್ರಮೋಷನ್‌ನಲ್ಲಿ ಸ್ಟೈಲಿಶ್ ಆಗಿ ಕಂಡುಬಂದಿದ್ದು ಸೀರೆಗಿಂತ ಭಿನ್ನವಾದ ದಿರಿಸನ್ನು ಆರಿಸಿಕೊಂಡಿದ್ದಾರೆ. ದಿರಿಸಿಗೆ ಹೊಂದಿಕೊಂಡಂತೆ ಕಿವಿಯಾಭರಣ ಮತ್ತು ನೆಕ್ಲೇಸ್ ಅನ್ನು ವಿದ್ಯಾ ಆರಿಸಿಕೊಂಡಿರುವುದರಿಂದ ಅವರ ಸೌಂದರ್ಯ ಇನ್ನಷ್ಟು ಇಮ್ಮಡಿಗೊಂಡಿತ್ತು.... 

English summary

Vidya Balan’s Urban Desi Look During The Promotion Of Kahaani 2

Durga Rani Singh aka Vidya Balan is a dynamite package in Kahaani 2 and the audience is already excited about it. The super-talented diva has always won our hearts, she's scared us with the looks of Monjolika and made us fall in love with her simple motherly look in Paa.
Story first published: Saturday, December 3, 2016, 23:50 [IST]
Please Wait while comments are loading...
Subscribe Newsletter