For Quick Alerts
ALLOW NOTIFICATIONS  
For Daily Alerts

ಮಿಸ್‌ ಯೂನಿವರ್ಸ್ ಕಿರೀಟ ಬೆಲೆ ಎಷ್ಟು? ಮಿಸ್‌ ಯೂನಿವರ್ಸ್‌ಗೆ ಎಂಥ ಐಷಾರಾಮಿ ಬದುಕು ಗೊತ್ತಾ?

|

ಇಂದು ಅಂದರೆ ಜನವರಿ 14, 2023ರಂದು ವಿಶ್ವದ ಸೌಂದರ್ಯ ಸ್ಪರ್ಧೆಗಳಲ್ಲಿ ಅತ್ಯಂತ ಪ್ರತಿಷ್ಠಿತ ಮಿಸ್‌ ಯೂನಿವರ್ಸ್ ಸ್ಪರ್ಧೆ ನಡೆಯುತ್ತಿದೆ. ಮಿಸ್‌ ಯೂನಿವರ್ಸ್ ಸ್ಪರ್ಧೆಯ 71ನೇ ಆವೃತ್ತಿ ಇದಾಗಿದ್ದು ಇಷ್ಟು ವರ್ಷಗಳಲ್ಲಿ ಭಾರತಕ್ಕೆ ಮೂರು ಬಾರಿಯಷ್ಟೇ ಈ ಕಿರೀಟ ಲಭಿಸಿದೆ.

ಭಾರತ ಮೊಟ್ಟ ಮೊದಲಿಗೆ 1994ರಲ್ಲಿ ಮಿಸ್‌ ಯೂನಿವರ್ಸ್ ಸ್ಪರ್ಧೆಯಲ್ಲಿ ವಿಜೇತವಾಯಿತು. ಭಾರತಕ್ಕೆ ಕಿರೀಟ ತಂದುಕೊಟ್ಟವರು ಸುಷ್ಮಿತಾ ಸೇನ್. ಅದಾಗಿ 2000ನೇ ಇಸವಿಯಲ್ಲಿ ಲಾರಾ ದತ್ತಗೆ ಮಿಸ್‌ ಯೂನಿವರ್ಸ್ ಪಟ್ಟ ಸಿಕ್ಕಿತು. ಅಲ್ಲಿಂದ 21 ವರ್ಷಗಳ ಕಾಲ ಭಾರತದ ಯಾವೊಬ್ಬ ಸ್ಪರ್ಧಿ ಪಾಲಿಗೆ ಕಿರೀಟ ಒಲಿಯಲಿಲ್ಲ. 2021 ರಲ್ಲಿ ಹರ್ನಾಝ್‌ ಸಂಧು ಈ ಕಿರೀಟ ತಮ್ಮದಾಗಿಸಿದರು. ಈ ವರ್ಷ ಭಾರತದ ಕರ್ನಾಟಕ ಮೂಲದ ದಿವಿತಾ ರೈ ಮಿಸ್‌ ಯೂನಿವರ್ಸ್ ಸ್ಪರ್ಧೆಯಲ್ಲಿದೆ.

ಮಿಸ್‌ ಯೂನಿವರ್ಸ್ ಆಗಿ ಆಯ್ಕೆ ಆದವರಿಗೆ ಸಿಗುವ ಸೌಲಭ್ಯಗಳನ್ನು ನೋಡಿದರೆ ಅಚ್ಚರಿ ಪಡುತ್ತೀರಿ, ಅಷ್ಟೊಂದು ಸೌಲಭ್ಯಗಳಿವೆ. ಈ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಈ ಎಲ್ಲಾ ಐಷಾರಾಮಿ ಸೌಕರ್ಯಗಳು ಸಿಗುವುದು:

ಮಿಸ್‌ ಯೂನಿವರ್ಸ್ ಆದವರಿಗೆ ಸಿಗುವ ಸೌಲಭ್ಯಗಳು

ಮಿಸ್‌ ಯೂನಿವರ್ಸ್ ಆದವರಿಗೆ ಸಿಗುವ ಸೌಲಭ್ಯಗಳು

ಕ್ಯಾಶ್‌ ದುಡ್ಡು ವರ್ಷಗಳು ಕಳೆಯುತ್ತಿದ್ದಂತೆ ಹೆಚ್ಚಾಗುವುದು. ಮಿಸ್‌ ಯೂನುವರ್ಸ್ ಆದವರಿಗೆ US$250,000 ಹಣ ದೊರೆಯಲಿದೆ. ಅದಲ್ಲದೆ ಇವರಿಗೆ ನ್ಯೂಯಾರ್ಕ್ ಸಿಟಿಯಲ್ಲಿ ನೆಲೆಸಲು ಲಕ್ಷುರಿ ಅಪಾರ್ಟ್‌ಮೆಂಟ್‌ ಸಿಗುವುದು.

ಯಾವುದಕ್ಕೂ ತಲೆ ಕೆಡಿಸಿಕೊಳ್ಳಬೇಕಾಗಿಲ್ಲ

ಯಾವುದಕ್ಕೂ ತಲೆ ಕೆಡಿಸಿಕೊಳ್ಳಬೇಕಾಗಿಲ್ಲ

ಬೇಕಾಗಿರುವ ದಿನಸಿ ಸಾಮಾನು, ಮನೆ ನೋಡಿಕೊಳ್ಳಲು ಜನ, ಅಡುಗೆ, ಆಹಾರ, ಸ್ಟೈಲಿಷ್‌ ಬಟ್ಟೆಗಳು, ಆಭರಣಗಳು, ಓಡಾಟಕ್ಕೆ ಸೌಲಭ್ಯ ಹೀಗೆ ಆ ವರ್ಷದ ಸಂಪೂರ್ಣ ಖರ್ಚನ್ನು ಮಿಸ್‌ ಯೂನಿವರ್ಸ್ ಆರ್ಗನೈಸರ್‌ ನೋಡಿಕೊಳ್ಳುತ್ತಾರೆ.

ವಿಶ್ವದ ಯಾವ ಕಡೆ ಹೋಗಬೇಕಾದರೂ ಖರ್ಚಿನ ತಲೆಬಿಸಿಯಿಲ್ಲ

ವಿಶ್ವದ ಯಾವ ಕಡೆ ಹೋಗಬೇಕಾದರೂ ಖರ್ಚಿನ ತಲೆಬಿಸಿಯಿಲ್ಲ

ಮಿಸ್‌ ಯೂನಿವರ್ಸ್‌ ವಿಶ್ವದ ಯಾವುದೇ ಕಡೆಗೆ ಹೋಗಬೇಕಾದರೂ ಖರ್ಚಿನ ಬಗ್ಗೆ ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಅವರಿಗೆ ಓಡಾಟಕ್ಕೆ ಬೇಕಾಗಿರುವ ಎಲ್ಲಾ ಸೌಕರ್ಯಗಳನ್ನು ಆರ್ಗನೈಸರ್‌ಗಳು ನೋಡಿಕೊಳ್ಳುತ್ತಾರೆ. ಮಿಸ್‌ ಯೂನಿವರ್ಸ್ ಚಾರಿಟಿ ಕೆಲಸಗಳಿಗಾಗಿ ಹೆಚ್ಚಾಗಿ ಪ್ರಯಾಣ ಮಾಡಲಾಗುವುದು. ಚಾರಿಟಿ ಕೆಲಸಗಳಿಗೆ ಹೋಗುವಾಗ ಹೋಟೆಲ್ ಖರ್ಚು, ಆಹಾರ, ಡ್ರೆಸ್‌, ಫೋಟೋಗ್ರಾಫರ್ ಎಲ್ಲಾ ವೆಚ್ಚವನ್ನು ಮಿಸ್‌ ಯೂನಿವರ್ಸ್‌ ಆರ್ಗನೈಸೇಷನ್ ಭರಿಸುತ್ತೆ.

ಮಿಸ್‌ ಯೂನಿವರ್ಸ್ ಕಿರೀಟ ತಮ್ಮ ಬಳಿಯೇ ಇಟ್ಟುಕೊಳ್ಳಬಹುದಾ?

ಮಿಸ್‌ ಯೂನಿವರ್ಸ್ ಕಿರೀಟ ತಮ್ಮ ಬಳಿಯೇ ಇಟ್ಟುಕೊಳ್ಳಬಹುದಾ?

70 ವರ್ಷದಲ್ಲಿ ಮಿಸ್‌ ಯೂನಿವರ್ಸ್ ಕಿರೀಟ ಮತ್ತು ಬೆಲೆ 9 ಬಾರಿ ಬದಲಾಗಿದೆ. ಈ ಮಿಸ್‌ ಯೂನಿವರ್ಸ್ ಕಿರೀಟವನ್ನುMouawad ತಯಾರಿಸುತ್ತದೆ. ಈ ವರ್ಷದ ಮಿಸ್‌ ಯೂನಿವರ್ಸ್‌ಗೆ ಮುಡಿಸಲು ಹೊಸ ಕಿರೀಟವನ್ನು ಡಿಸೆಂಬರ್ 19, 2022ಕ್ಕೆ ಸಿದ್ಧಪಡಿಸಿದೆ.

ಮಿಸ್‌ ಯೂನಿವರ್ಸ್ ಕಿರೀಟ ತಯಾರಿಸಲು ಬಳಸಿರುವ ಆಭರಣಗಳು

110 ಕ್ಯಾರೆಟ್ ಬ್ಲೂ ಸಫೈರ್ಸ್, 48 ಕ್ಯಾರೆಟ್‌ ವೈಟ್‌ ಡೈಮೆಂಡ್, 45.14 ಕ್ಯಾರೆಟ್‌ ರಾಯಲ್‌ ಬ್ಲೂ ಸಫೈರ್ ಕಿರೀಟ ಮಧ್ಯದಲ್ಲಿ ಹಾಕಲಾಗಿದೆ. ಇದರ ಬೆಲೆ ಸುಮಾರು $5.75 ಆಗಿದೆ.]

ಮಿಸ್‌ ಯೂನಿವರ್ಸ್‌ ಕಿರೀಟ ಗೆದ್ದವರು ಆ ಕಿರೀಟ ತಮ್ಮ ಬಳಿಯೇ ಇಟ್ಟುಕೊಳ್ಳಬಹುದೇ?

ಮಿಸ್‌ ಯೂನಿವರ್ಸ್‌ ಕಿರೀಟ ಗೆದ್ದವರು ಆ ಕಿರೀಟ ತಮ್ಮ ಬಳಿಯೇ ಇಟ್ಟುಕೊಳ್ಳಬಹುದೇ?

ಮಿಸ್‌ ಯೂನಿವರ್ಸ್‌ ಕಿರೀಟ ಗೆದ್ದವರು ಆ ಕಿರೀಟವನ್ನು ತಮ್ಮ ಬಳಿ ಒಂದು ವರ್ಷದ ಅವಧಿಯವರೆಗೆ ಮಾತ್ರ ಇಟ್ಟುಕೊಳ್ಳಬಹುದು, ನಂತರ ಹಿಂತಿರುಗಿಸಬೇಕು, ಆದರೆ ಅವರಿಗೆ ಆ ಕಿರೀಟವನ್ನೇ ಹೋಲುವ ಮತ್ತೊಂದು ಕಿರೀಟವನ್ನು ನೆನಪಿಗಾಗಿ ನೀಡಲಾಗುವುದು.

ಹಿಂತಿರುಗಿಸಿದ ಮಿಸ್‌ ಯೂನಿವರ್ಸ್ ಕಿರೀಟವನ್ನು ಮತ್ತೆ ಬಳಸುತ್ತಾರಾ?

ಹಿಂತಿರುಗಿಸಿದ ಮಿಸ್‌ ಯೂನಿವರ್ಸ್ ಕಿರೀಟವನ್ನು ಮತ್ತೆ ಬಳಸುತ್ತಾರಾ?

ಮಿಸ್‌ ಯೂನಿವರ್ಸ್ ಕಿರೀಟವನ್ನು ತಮ್ಮ ಅವಧಿ ಮುಗಿದ ಮೇಲೆ ಹಿಂತಿರುಗಿಸಬೇಕಾಗುತ್ತದೆ. ಮಿಸ್‌ ಯೂನಿವರ್ಸ್ ಹೊಸದಾಗಿ ಆಯ್ಕೆಯಾದ ಮಿಸ್ ಯೂನಿವರ್ಸ್‌ಗೆ ಆ ಕಿರೀಟವನ್ನು ಮುಡಿಸುತ್ತಾರೆ.

ತಮಾಷೆಯ ಸಂಗತಿಯೆಂದರೆ: ಈ ಕಿರೀಟವನ್ನು ಮಿಸ್‌ ಯೂನಿವರ್ಸ್ ಎರಡೇ ಬಾರಿ ಬಳಸುತ್ತಾರೆ ಎಂದು ಹೇಳಲಾಗುವುದು. ಮಿಸ್‌ ಯೂನಿವರ್ಸ್ ಆಗಿ ಆಯ್ಕೆಯಾದ ಆ ದಿನ ರಾತ್ರಿ ಆ ಕಿರೀಟ ಮುಡಿಸಿ ಸನ್ಮಾನ ಮಾಡಲಾಗುವುದು, ಅದಾಗಿ ತನ್ನ ಅವಧಿ ಮುಗಿದ ಮೇಲೆ ಕಿರೀಟವನ್ನು ಹಿಂತಿರುಗಿಸಬೇಕು. ಹೊಸದಾಗಿ ಆಯ್ಕೆಯಾದ ಮಿಸ್‌ ಯೂನಿವರ್ಸ್‌ ತಲೆಗೆ ಹಾಕುವ ಮುನ್ನ ಈ ಹಿಂದೆ ಗೆದ್ದ ಮಿಸ್‌ ಯೂನಿವರ್ಸ್‌ ತಲೆಯಲ್ಲಿರುತ್ತದೆ. ಅದನ್ನು ತೆಗೆದು ತನ್ನ ನಂತರ ವಿಜೇತರಾದ ಸುಂದರಿಯ ತಲೆಗೆ ಹಾಕಲಾಗುವುದು.

ವಿಶ್ವದ ಅತ್ಯಂತ ದುಬಾರಿ ಕಿರೀಟ

ಈ ಕಿರೀಟ ವಿಶ್ವದ ದುಬಾರಿ ಕಿರೀಟಗಳಲ್ಲಿ ಒಂದಾಗಿದೆ. ಈ ಮೊದಲು ಮಿಸ್‌ ಯೂನಿವರ್ಸ್ ಕಿರೀಟದಲ್ಲಿ ಮುತ್ತುಗಳು, ಪಚ್ಚೆ ಹರಳುಗಳನ್ನು ಬಳಸುತ್ತಿದ್ದರು, ಅಲ್ಲದೆ ಆ ಕಿರೀಟಗಳು ಭಾರವಾಗಿದ್ದೆವು. ಈಗ ಬಳಸುವ ಕಿರೀಟ Mouawad Crown ಆಗಿದ್ದು ಇದು ಅಷ್ಟು ಭಾರವಾಗಿಲ್ಲ, ಹರಳು ಹಾಗೂ ವಿಜ್ರ ಬಳಸಿ ಇದನ್ನು ತಯಾರಿಸಲಾಗುವುದು.

English summary

Miss Universe Prize Money 2023: What are the Benefits of winning miss universe?

Miss Universe Prize Money 2023: Interesting Facts about miss universe read on...
X
Desktop Bottom Promotion