For Quick Alerts
ALLOW NOTIFICATIONS  
For Daily Alerts

ಸಮಂತಾ ಮಾಡಿದ ಈ ಡ್ರೆಸ್ಸಿಂಗ್‌ನಲ್ಲಿ ನೀವೂ ಕೂಡ ಸೂಪರ್ ಆಗಿ ಕಾಣುವಿರಿ

|

ಸಮಂತಾ ತನ್ನ ನಟನೆಯಿಂದ ಮಾತ್ರವಲ್ಲ ಭಿನ್ನವಾದ ಡ್ರೆಸ್ಸಿಂಗ್‌ ಸ್ಟೈಲ್‌ನಿಂದಲೂ ಗಮನ ಸೆಳೆಯುತ್ತಾರೆ. ಅವರು ಆಗಾಗ ಗ್ಲಾಮರಸ್‌ ಲುಕ್‌ನಲ್ಲಿ ಮಿಂಚಿದರೂ, ಹೆಚ್ಚಿನ ಬಾರಿ ಫಂಕ್ಷನ್ ಹಾಗೂ ಪ್ರೆಸ್‌ಮೀಟ್‌ಗಳಿಗೆ ಬರುವಾಗ ಮಾಡುವಂಥ ಡ್ರೆಸ್ಸಿಂಗ್‌ ಸ್ಟೈಲ್‌ ತುಂಬಾ ಆಕರ್ಷಕವಾಗಿರುತ್ತದೆ. ಆ ಸ್ಟೈಲ್ ಯಾರು ಹಾಕಿದರೂ ಚೆನ್ನಾಗಿ ಕಾಣುವಂತಿರುತ್ತದೆ.

ಸ್ವಲ್ಪ ಭಿನ್ನವಾಗಿ ಡ್ರೆಸ್ಸಿಂಗ್ ಮಾಡಬೇಕು, ಆದರೆ ತುಂಬಾ ಆಕರ್ಷಕವಾಗಿ ಕಾಣಬೇಕು. ನಾನು ಹೋಗುವ ಫಂಕ್ಷನ್‌ನಲ್ಲಿ ನನ್ನ ಡ್ರೆಸ್ಸಿಂಗ್ ಸ್ಟೈಲ್‌ ಸ್ವಲ್ಪ ವಿಭಿನ್ನವಾಗಿಯೂ ಕಾಣಬೇಕು, ಆಕರ್ಷಕವಾಗಿಯೂ ಕಾಣಬೇಕೆಂದು ನೀವು ಬಯಸುವುದಾದರೆ ಇಲ್ಲಿ ನಾವು ಸಮಂತಾ ಡ್ರೆಸ್ಸಿಂಗ್ ಸ್ಟೈಲ್‌ನಿಂದ ಆಯ್ದು ಕೆಲವೊಂದು ಡ್ರೆಸ್ಸಿಂಗ್‌ ಸ್ಟೇಟ್‌ಮೆಂಟ್‌ ನೀಡಿದ್ದೇವೆ.

ಇಲ್ಲಿ ನೀಡಿರುವ ಡ್ರೆಸ್ಸಿಂಗ್ ಸ್ಟೈಲ್ ಹದಿಹರೆಯದ ಹಾಗೂ ಯೌವನ ಪ್ರಾಯದ ಹೆಣ್ಮಕ್ಕಳಿಗೆ ಚೆನ್ನಾಗಿ ಒಪ್ಪುವಂತಿದೆ. ಸೆಲ್ವಾರ್ , ಸ್ಯಾರಿಯನ್ನು ಭಿನ್ನವಾಗಿ ಹೇಗೆ ಧರಿಸಬಹುದೆಂದು ಎಂಬ ಫ್ಯಾಷನ್‌ ಐಡಿಯಾವನ್ನು ಇಲ್ಲಿಂದ ತೆಗೆದುಕೊಳ್ಳಬಹುದು ನೋಡಿ:

ಫ್ರೆಂಟ್‌ ಓಪನ್ ಸ್ಲಿಟ್‌ ಸೆಲ್ವಾರ್

ಕಾಲರ್‌ ನೆಕ್‌ನ ಈ ಸೆಲ್ವಾರ್ ವಿಶೇಷತೆ ಅದರ ಪ್ಯಾಂಟ್‌. ಓಪನ್‌ ಸ್ಲಿಟ್‌ ಟಾಪ್‌ಗೆ ಪ್ರಿಲ್‌ ಲುಕ್‌ ನೀಡಿದ್ದು, , ಪ್ಯಾಂಟ್‌ ಕೂಡ ಸ್ಲಿಟ್‌ ಹೊಂದಿದೆ. ಈ ರೀತಿಯ ಡ್ರೆಸ್ಸಿಂಗ್ ಸಾಂಪ್ರದಾಯಿಕ ಲುಕ್‌ ನೀಡಿದರೂ ಮಾಡರ್ನ್ ಟಚ್ ಕೂಡ ನೀಡಿರುವುದರಿಂದ ಗ್ಲಾಮರಸ್‌ ಲುಕ್‌ ಕೂಡ ಸಿಗುವುದು.

View this post on Instagram

Everything #ohbaby till July 5th .. 🙏

A post shared by Samantha Akkineni (@samantharuthprabhuoffl) on

ಕ್ಲಾಸಿ ಲುಕ್‌ನೀಡುವ ಡ್ರೆಸ್ಸಿಂಗ್

ದಿನಾ ಆಫೀಸ್‌ಗೆ ಒಂದೇ ಸ್ಟೈಲ್‌ ಹೋಗುತ್ತಿದ್ದೀರಾ? ಸ್ವಲ್ಪ ಭಿನ್ನವಾಗಿ ಡ್ರೆಸ್ಸಿಂಗ್ ಮಾಡಬೇಕು ಎಂದು ನಿಮಗನಿಸಿದರೆ ಈ ಡ್ರೆಸ್ಸಿಂಗ್ ಸ್ಟೈಲ್‌ ಕಾಪಿ ಮಾಡಬಹುದು. ಬಿಳಿ ಟಾಪ್‌ಗೆ ಪಲೋಜೋ ಪ್ಯಾಂಟ್ ಧರಿಸಿ ಅದರ ಮೇಲೆ ಪ್ರಿಂಟೆಡ್‌ ಕೋಟ್‌ ಧರಿಸಿದರೆ ಸಾಕು ಕ್ಯಾಸ್ಯೂಯಲ್‌ ಲುಕ್‌ನಲ್ಲಿ ಆಕರ್ಷಕವಾಗಿ ಕಾಣುವಿರಿ.

ರೆಟ್ರೋ ಲುಕ್‌

ನಾರ್ಮಲ್‌ ಆಫೀಸ್‌ ಡ್ರೆಸ್‌ಕೋಡ್‌ ಬದಲಿಗೆ ಸ್ವಲ್ಪ ಭಿನ್ನವಾಗಿ ಡ್ರೆಸ್‌ ಮಾಡಬೇಕೆಂದು ಬಯಸಿದಾಗ ಈ ಸ್ಟೈಲ್‌ ಮಾಡಬಹುದು. ಅಲ್ಲದೆ ಈ ಡ್ರೆಸ್ಸಿಂಗ್‌ ಸ್ಟೈಲ್ ಟ್ರಾವೆಲ್, ಮೀಟಿಂಗ್‌ಗೂ ಸೂಕ್ತವಾಗಿದೆ. ಸ್ಕರ್ಟ್‌ಗೆ ಮ್ಯಾಚ್‌ ಶರ್ಟ್ ರೀತಿಯ ಟಾಪ್‌ ಬಳಸಬಹುದು, ಇಲ್ಲಾ ಕಾಂಟ್ರಾಸ್ಟ್ ಕಲರ್‌ ಕೂಡ ಹಾಕಬಹುದು. ಸ್ವಲ್ಪ ರೆಟ್ರೋ ಲುಕ್‌ ನೀಡುವ ಡ್ರೆಸ್ಸಿಂಗ್ ಇದಾಗಿದೆ.

ಸಾಂಪ್ರದಾಯಿಕ ಲುಕ್‌

ಇಲ್ಲಿ ಸಮಂತಾ ವೇಲ್‌ ಅನ್ನು ದುಪ್ಪಟ ರೀತಿ ಹೊದ್ದುಕೊಂಡು ಸ್ಟೈಲ್‌ ಪೋಸ್‌ ಣೀಡಿದ್ದಾರೆ. ದೇವಾಸ್ಥಾನ, ಪೂಜೆಯಲ್ಲಿ ಈ ಲುಕ್‌ನಲ್ಲಿ ಮಿಂಚಬಹುದು. ಇಲ್ಲಿ ಪ್ಯಾಂಟ್‌ ಹಾಗೂ ದುಪ್ಪಟ ಗ್ರ್ಯಾಂಡ್ ಆಗಿದ್ದು, ಟಾಪ್‌ ಪ್ಲೇನ್‌ ಆಗಿದೆ. ಈ ಲುಕ್‌ ಎಲ್ಲಾ ಪ್ರಾಯದವರಿಗೂ ಒಪ್ಪುವಂತಿದೆ.

ರೆಡ್‌ ಹಾಟ್‌ ಲುಕ್‌

ರೆಡ್‌ ಎನ್ನುವುದು ಯಾವತ್ತಿಗೂ ಹಾಟ್‌ ಕಲರ್‌. ನೀವು ಸೆಲ್ವಾರ್‌ನಲ್ಲಿ ಹಾಟ್‌ ಆಗಿ ಕಾಣಬಯಸುವುದಾದರೆ ಸಮಂತಾರ ಈ ಸ್ಟೈಲ್ ಬೆಸ್ಟ್. ಶರಾರ ಸ್ಟೈಲ್‌ ಪ್ಯಾಂಟ್‌ ಶಾರ್ಟ್‌ ಕುರ್ತಾ ಧರಿಸಿದರೆ ಆಕರ್ಷಕವಾಗಿ ಕಾಣಬಹುದು. ರೆಡ್‌, ಮೆರೂನ್, ರಾಯಲ್ ಬ್ಲೂ ಈ ರೀತಿಯ ಬಣ್ಣದ ಡ್ರೆಸ್‌ಗಳು ಆಕರ್ಷಕವಾಗಿ ಕಾಣುವುದು.

ಪ್ರಿಂಟೆಡ್‌ ಸ್ಯಾರಿ ಲುಕ್‌

ಶಿಫಾನ್ ಅಥವಾ ಕಾಟನ್ ಸೀರೆಯಲ್ಲಿ ನೀವು ಈ ರೀತಿ ಡ್ರೆಸ್ಸಿಂಗ್ ಮಾಡಿದರೆ ಸ್ವಲ್ಪ ಭಿನ್ನವಾಗಿ ಆಕರ್ಷಕವಾಗಿ ಕಾಣುವಿರಿ. ಸ್ಲೀವ್‌ಲೆಸ್‌ ಬ್ಲೌಸ್‌ ಅಥವಾ ಕಾಲರ್‌ ನೆಕ್‌ ಬ್ಲೌಸ್‌ ಈ ರೀತಿಯ ಸೀರೆಗೆ ಆಕರ್ಷಕವಾಗಿ ಕಾಣುವುದು.

English summary

For Different And Attractive Look Can follow Samantha Style

Do You want to look different but attractive here are different And attractive Look you can follow from Samantha, take a look.
Story first published: Tuesday, December 3, 2019, 17:38 [IST]
X