For Quick Alerts
ALLOW NOTIFICATIONS  
For Daily Alerts

ಫ್ಯಾಷನ್ ಲೋಕಕ್ಕೆ ಅನುಷ್ಕಾ ಶರ್ಮ ಪರಿಚಯಿಸಿದ ವೆಂಡೆಲ್ ಇನ್ನಿಲ್ಲ

|

ಬಾಲಿವುಡ್‌ನ ಪ್ರಸಿದ್ಧ ಫ್ಯಾಷನ್ ಡಿಸೈನರ್ ವೆಂಡೆಲ್ ರಾಡ್ರಿಕ್ಸ್ 59ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಗೋವಾದ ತಮ್ಮ ನಿವಾಸದಲ್ಲಿ ಫೆ. 12ಕ್ಕೆ ವೆಂಡೆಲ್ ರಾಡ್ರಿಕ್ಸ್ ಕೊನೆಯುಸಿರು ಎಳೆದಿದ್ದಾರೆ. ಫ್ಯಾಷನ್‌ ಲೋಕದಲ್ಲಿ ತನ್ನದೇ ಛಾಪು ಮೂಡಿಸಿರುವ ವೆಂಡೆಲ್‌ ಇದೀಗ ನೆನಪು ಮಾತ್ರ.

ಪದ್ಮಶ್ರೀ ಪುರಸ್ಕೃತ ವೆಂಡೆಲಾ IGEDO (The world's largest garment fair)ಗೆ ಆಹ್ವಾನ ಸಿಕ್ಕಂತಹ ಮೊದಲ ಭಾರತೀಯ ಫ್ಯಾಷನ್ ಡಿಸೈನರ್ ಕೂಡ ಹೌದು. ಫ್ಯಾಷನ್ ಲೋಕದಲ್ಲಿ ಹಲವಾರು ಕ್ರಿಯೇಟಿವ್‌ ಐಡಿಯಾಗಳಿಂದ ಸದ್ದು ಮಾಡುತ್ತಿದ್ದ ವೆಂಡೆಲಾ ಅವರ ಸಾಂಪ್ರದಾಯಿಕ ಗೋನ್‌ ಕುನ್ಬಿ ಸ್ಯಾರಿ ಎಂದೆಂದಿಗೂ ಫ್ಯಾಷನ್ ಪ್ರಿಯರ ಫೆವರೆಟ್ ಅಗಿದೆ. ಇವರು 2017ರಲ್ಲಿ ದಪ್ಪಗಿನ ಮಹಿಳೆಯರಿಗಾಗಿ ಹಲವಾರು ಡಿಸೈನರ್ ಡ್ರೆಸ್‌ ಮಾಡಿ ಪ್ರಮೋಟ್ ಮಾಡುವ ಮೂಲಕ ಗಮನ ಸೆಳೆದಿದ್ದರು.

ವೆಂಡೆಲ್ ರಾಡ್ರಿಕ್ಸ್ ಗೆ ಗೋವಾದಲ್ಲಿ ಕಾಸ್ಟ್ಯೂಮ್ ಮ್ಯೂಸಿಯಂ ನಿರ್ಮಿಸಬೇಕೆಂಬ ಕನಸಿತ್ತು. ಗೋವಾ ಕಾಸ್ಟ್ಯೂಮ್ ಮತ್ತು ಗೋವಾ ಫ್ಯಾಶನ್ ಕುರಿತಾದ ಮ್ಯೂಸಿಯಂ ನಿರ್ಮಾಣ ಕೆಲಸ ಭರದಿಂದ ಸಾಗುತ್ತಿತ್ತು. ಅದು ಪೂರ್ಣಗೊಳ್ಳುವ ಮುನ್ನವೇ ವೆಂಡೆಲ್ ರಾಡ್ರಿಕ್ಸ್ ನಿಧನ ಹೊಂದಿದ್ದಾರೆ.

ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರನ್ನು ಮಾಡೆಲಿಂಗ್ ಜಗತ್ತಿಗೆ ಪರಿಚಯಿಸಿದ ಕೀರ್ತಿ ಕೂಡ ಇವರಿಗೆ ಸಲ್ಲುತ್ತದೆ. ಬೆಂಗಳೂರಿನ ಶಾಪ್‌ವೊಂದರಲ್ಲಿ ಅನುಷ್ಕಾರನ್ನು ನೋಡಿದ ವೆಂಡೆಲಾ ಆಕೆಗೆ ಮಾಡೆಲಿಂಗ್‌ ಜಗತ್ತಿಗೆ ಬರುವಂತೆ ಸಲಹೆ ನೀಡುತ್ತಾರೆ. ಇವರ ಮುಖಾಂತರ ಅನುಷ್ಕಾ ಬಣ್ಣದ ಲೋಕಕ್ಕೆ ಕಾಲಿಡುತ್ತಾರೆ.

ಲೈಂಗಿಕ ಅಲ್ಪ ಸಂಖ್ಯಾತರ ಹಕ್ಕುಗಳಿಗಾಗಿ ಹಲವಾರು ಹೋರಾಟ ಮಾಡಿದ್ದಾರೆ. ಇವರ ಸಮಾಜ ಸೇವೆಯನ್ನು ಗುರುತಿಸಿ ಪದ್ಮಶ್ರೀ ನೀಡಿ ಗೌರವಿಸಲಾಯಿತು.

ನಟನ ಅಕಾಲಿಕ ಮರಣಕ್ಕೆ ಬಾಲಿವುಡ್ ಮಂದಿ ಕಂಬನಿ ಮಿಡಿದ್ದಾರೆ.

English summary

Fashion Designer Wendell Rodricks No More

Fashion designer, author, environmentalist, and advocate for gay rights, Wendell Rodricks passed away at his Goa home on 12th February 2020.
Story first published: Thursday, February 13, 2020, 13:20 [IST]
X