For Quick Alerts
ALLOW NOTIFICATIONS  
For Daily Alerts

ಮದುವೆ ಫಂಕ್ಷನ್‌ಗೆ ಹೋಗುವಾಗ ಈ ಹೇರ್‌ಸ್ಟೈಲ್‌ ಟ್ರೈ ಮಾಡಿ

|

ಇನ್ನೇನು ಮದುವೆ ಸೀಸನ್‌ ಶುರುವಾಯಿತು, ಮದುವೆಗೆ ಹೊರಡುವುದೇ ಎಂದರೆ ಹೆಣ್ಮಕ್ಕಳಿಗೆ ಸಡಗರ. ಅದರಲ್ಲೂ ಫ್ರೆಂಡ್ಸ್, ಮನೆಯವರ ಮದುವೆ ಬಂದರಂತೂ ತಿಂಗಳ ಮುಂದೆಯೇ ಮದುವೆಗೆ ಹೇಗೆ ಅಲಂಕಾರ ಮಾಡಿಕೊಂಡು ಹೋಗಬೇಕೆಂದು ಆಲೋಚಿಸಿ, ಶಾಪಿಂಗ್ ಶುರು ಮಾಡುತ್ತಾರೆ. ಮದುವೆ ಮನೆಯಲ್ಲಿ ಮದುವೆ ಹೆಣ್ಣಿನ ಜತೆ ಅವಳ ಅಕ್ಕ-ಪಕ್ಕ ಸುಳಿದಾಡುವ ಗೆಳತಿಯರು ಕೂಡ ಅಲ್ಲಿದ್ದವರ ಗಮನ ಸೆಳೆಯುವಂತೆ ಅಲಂಕಾರ ಮಾಡಿಕೊಂಡಿರುತ್ತಾರೆ.

Hair Style

ಯಾರಾದರು ಮದುವೆಗೆ ಹೋಗುವಾಗ ಮದುವೆ ಡ್ರೆಸ್ಸಿಂಗ್‌ನಷ್ಟೇ ಮುಕ್ಯ ಹೇರ್‌ಸ್ಟೈಲ್‌ ಮಾಡುವುದು. ಮದುವೆಗೆ ಸೀರೆ, ಗೌನ್, ಗ್ರ್ಯಾಂಡ್‌ ಜೂಡದಾರ್‌, ಘಾಗ್ರ ಈ ರೀತಿ ಸಾಂಪ್ರದಾಯಿಕ ಹಾಗೂ ಫ್ಯಾಷನಬಲ್ ಗ್ರ್ಯಾಂಡ್‌ ಉಡುಗೆಗಳನ್ನು ತೊಟ್ಟಾಗ, ಸ್ವಲ್ಪ ಹೇರ್‌ ಸ್ಟೈಲ್‌ ಕಡೆಯೂ ಗಮನ ಕೊಟ್ಟರೆ ನಿಮ್ಮ ಲುಕ್‌ ಮತ್ತಷ್ಟು ಆಕರ್ಷಕವಾಗಿ ಕಾಣುವುದು. ಮದುವೆ ಸಮಾರಂಭದಲ್ಲಿ ಹೂ ಮುಡಿದರೆ ಲಕ್ಷಣವಾಗಿ ಕಾಣುವುದು, ಇಲ್ಲಿ ನಾವು ಮದುವೆಗೆ ಎಷ್ಟೆಲ್ಲಾ ಭಿನ್ನವಾಗಿ ಹೂ ಮುಡಿದು ಅಲಂಕಾರ ಮಾಡಬಹುದೆಂದು ಹೇಳಿದ್ದೇವೆ ನೋಡಿ.

ಸೈಡ್‌ ಜಡೆಯಲ್ಲಿ ಹುವಿನ ಅಲಂಕಾರ

ಈ ಹೇರ್‌ಸ್ಟೈಲ್‌ಗೆ ಇಲ್ಲಿ ತೋರಿಸಿರುವಂಥ ಹೂಗಳೇ ಬೇಕೆಂದಿಲ್ಲ. ಮಲ್ಲಿಗೆ ಹಾಗೂ ಗುಲಾಬಿ ಹೂಗಳಿಂದಲೂ ಈ ಹೇರ್‌ಸ್ಟೈಲ್‌ ಮಾಡಬಹುದು. ಜೂಡಿದಾರ್‌, ಗೌನ್‌ ಈ ರೀತಿಯ ಡ್ರೆಸ್‌ಗಳಿಗೆ ಈ ಹೇರ್‌ಸ್ಟೈಲ್‌ ತುಂಬಾ ಆಕರ್ಷಕವಾಗಿ ಕಾಣುತ್ತದೆ. ಸ್ಟೆಪ್‌ ಜಡೆಯನ್ನು ಹಾಕಿ, ಕೂದಲು ಒಂದು ಭುಜದ ಮೇಲೆ ಬೀಳುವಂತೆ ಜಡೆ ಎಳೆದು ನಂತರ ಹೂ ಮುಡಿಯಿರಿ. ಈ ಹೇರ್‌ ಸ್ಟೈಲ್ ಹದಿ ಹರೆಯದ ಹಾಗೂ ಯೌವನ ಪ್ರಾಯದ ಹೆಣ್ಮಕ್ಕಳಿಗೆ ತುಂಬಾ ಆಕರ್ಷಕವಾಗಿ ಕಾಣುತ್ತದೆ.

ಸರಳವಾಗಿದ್ದರೂ ಆಕರ್ಷಕ ಲುಕ್ ನಿಡುವ ಹೇರ್‌ಸ್ಟೈಲ್

ಇನ್ನು ಈ ಹೇರ್‌ಸ್ಟೈಲ್‌ ತುಂಬಾ ಸರಳವಾಗಿದ್ದರೂ ಈ ಹೇರ್‌ ಸ್ಟೈಲ್ ಅಲಂಕಾರಕ್ಕೆ ಅಗಲವಾದ ಕ್ಲಿಪ್‌ಗಳನ್ನು ಬಳಸಿ. ನಂತರ ಗುಲಾಬಿ ಹೂಗಳನ್ನು ಈ ರೀತಿ ಅಲಂಕರಿಸಿದರೆ ಆಕರ್ಷಕವಾಗಿ ಕಾಣುವುದು. ಸೆಲ್ವಾರ್‌ಗೆ ಈ ಬಗೆಯ ಹೇರ್‌ಸ್ಟೈಲ್ ಮತ್ತಷ್ಟು ಆಕರ್ಷಕವಾಗಿ ಕಾಣುವಂತೆ ಮಾಡುವುದು.

ಮುಡಿಗೆ ಮಲ್ಲಿಗೆ ದಂಡಿನ ಅಲಂಕಾರ

ಇದೊಂದು ಸರಳವಾದ ಹೇರ್‌ಸ್ಟೈಲ್ ಆಗಿದ್ದು, ಘಾಗ್ರ ರೀತಿಯ ಡ್ರೆಸ್ಸಿಂಗ್‌ ಹೇರ್ ಸ್ಟೈಲ್‌ ತುಂಬಾ ಆಕರ್ಷಕವಾಗಿ ಕಾಣುವುದು. ಇನ್ನು ರಿಸೆಪ್ಷನ್‌ಗೆ ಈ ಬಗೆಯ ಹೇರ್‌ಸ್ಟೈಲ್ ತುಂಬಾ ಆಕರ್ಷಕವಾಗಿ ಕಾಣುವುದು. ಈ ಹೇರ್‌ಸ್ಟೈಲ್‌ ಮಾಡುವಾಗ ಮುಂದಿಗಡೆ ಸ್ವಲ್ಪ ಬಫ್‌ ರೀತಿಯಲ್ಲಿರಲಿ.

ತುರುಬಿನ ಹೇರ್‌ಸ್ಟೈಲ್

ಈ ಹೇರ್‌ಸ್ಟೈಲ್‌ ಮದುಮಗಳು ರಿಸೆಪ್ಷನ್‌ಗೆ ಟ್ರೈ ಮಾಡಬಹುದು. ಇನ್ನು ಸ್ವಲ್ಪ ಗ್ರ್ಯಾಂಡ್‌ ಆಗಿ ಕಾಣಬೇಕೆಂದು ಬಯಸುವುದಾದರೆ ತುರುಬು ಹಾಕಿ ಈ ರೀತಿ ಹೇರ್‌ಸ್ಟೈಲ್ ಮಾಡಿದರೆ ಸಾಕು ಆಕರ್ಷಕವಾಗಿ ಕಾಣುವುದು. ಈ ಹೇರ್‌ಸ್ಟೈಲ್‌ಗೆ ಗುಲಾಬಿ ಅಥವಾ ಮಲ್ಲಿಗೆ ದಂಡು ಆಕರ್ಷಕವಾಗಿ ಕಾಣುವುದು.

ಫ್ಲವರ್ ಕ್ಲಿಪ್ ಹೇರ್ ಸ್ಟೈಲ್‌

ಮದುವೆಯಲ್ಲಿ ಫ್ರೀ ಹೇರ್‌ಗಿಂತ ಈ ಬಗೆಯ ಹೇರ್‌ ಸ್ಟೈಲ್‌ ಆಕರ್ಷಕ ಲುಕ್‌ ನೀಡುತ್ತದೆ. ಕೂದಲನ್ನು ಬಾಚಿ, ಸಯಡ್‌ನಿಂದ ಎರಡು ಭಾಗ ತೆಗೆದು ಅದನ್ನು ಸುರುಳಿ ಸುತ್ತಿ ಕ್ಲಿಪ್‌ ಹಾಕಿ ನಂತರ ಈ ರೀತಿ ಹೂ ಮುಡಿದರೆ ಆಕರ್ಷಕವಾಗಿ ಕಾಣುವುದು.

ಜಡೆಗೆ ಮಲ್ಲಿಗೆ ಅಲಂಕಾರ

ನಿಮಗೆ ಉದ್ದ ಕೂದಲಿದ್ದರೆ ಈ ಹೇರ್ ಸ್ಟೈಲ್‌ ಡ್ರೈ ಮಾಡಬಹುದು ನೋಡಿ. ಮಲ್ಲಿಗೆ ಮೊಗ್ಗಿನಿಂದ ಕೇಶ ಅಲಂಕಾರ ಮಾಡಿದರೆ ತುಂಬಾ ಆಕರ್ಷಕವಾಗಿ ಕಾಣುವುದು. ಈ ರೀತಿಯ ಹೇರ್‌ಸ್ಟೈಲ್‌ ಮಾಡಬಯಸುವುದಾದರೆ ಮೊದಲೇ ಹೂ ಕಟ್ಟುವವರ ಬಳಿ ಹೇಳಿ ಮಾಡಿಸಬೇಕಾಗುತ್ತದೆ. ಮಲ್ಲಿಗೆ ಮೊಗ್ಗುಗಳನ್ನು ದಪ್ಪವಾಗಿ ಪೋಣಿಸಿರುತ್ತಾರೆ. ಇದನ್ನು ಉದ್ದವಾದ ಜಡೆಗೆ ಮುಡಿಯಬಹುದು, ಇಲ್ಲಾ ತುರುಬು ಕಟ್ಟಿಯೂ ಹೂವನ್ನು ಈ ರೀತಿ ಮುಡಿದರೆ ಸೀರೆಗೆ ತುಂಬಾ ಆಕರ್ಷಕವಾಗಿ ಕಾಣುವುದು.

ಫ್ಲವರ್‌ ಬನ್‌ ಹೇರ್‌ ಸ್ಟೈಲ್

ಈ ಹೇರ್‌ಸ್ಟೈಲ್‌ ಮಾಡಲು ಇಷ್ಟಪಡುವುದಾರೆ ಬ್ಯೂಟ ಎಕ್ಸ್‌ಫರ್ಟ್‌ ಅವರ ಬಳಿ ಹೇಳಿ ಮಾಡಿಸಿಕೊಳ್ಳಿ. ನಂತರ ಕಡುಗೆಂಪು ಬಣ್ಣದ ಗುಲಾಬಿ ಮುಡಿದರೆ ತುಂಬಾ ಆಕರ್ಷಕವಾಗಿ ಕಾಣುವುದು. ಗ್ರ್ಯಾಂಡ್‌ ಸೀರೆಗೆ ಫ್ಲವರ್ ಬನ್ ಹೇರ್‌ಸ್ಟೈಲ್ ಮತ್ತಷ್ಟ ಆಕರ್ಷಕ ಲುಕ್‌ ನೀಡುವುದು.

English summary

2019 trending Hair style for marriage function

For marriage function if you want to dress up with different hair style here are most trending hair style in this year. These hair simple to try and will give mist attractive look.
Story first published: Friday, November 15, 2019, 13:41 [IST]
X
Desktop Bottom Promotion