For Quick Alerts
ALLOW NOTIFICATIONS  
For Daily Alerts

ಒಂದೇ ಬಗೆಯ ಧಿರಿಸಿನಲ್ಲಿ ಕಂಡುಬಂದ ವಿದ್ಯಾ ಹಾಗೂ ಕರೀನಾ

|

ಬಾಲಿವುಡ್‌ನಲ್ಲಿ ಒಬ್ಬ ಕಲಾವಿದೆ ಮತ್ತೊಬ್ಬರಿಂದ ಸ್ಟೈಲ್ ಅನ್ನು ಅಥವಾ ಅವರು ಮಾಡಿದ ಫ್ಯಾಶನ್ ಅನ್ನು ಮತ್ತೊಬ್ಬ ಕಲಾವಿದೆ ಅನುಕರಿಸುತ್ತಿರುವುದು ಈಗ ಹೆಚ್ಚು ಕಂಡುಬರುತ್ತಿದೆ. ಪಾಯಲ್ ಸಿಂಗಾಲ್ ಸೂಟ್ ಅಂತೂ ಈಗ ಬಾಲಿವುಡ್‌ನ ಪ್ರತಿಯೊಬ್ಬರಿಗೂ ಅಚ್ಚುಮೆಚ್ಚಿನದಾಗಿದ್ದು ಕರೀನಾ ತಮ್ಮ ಚಿತ್ರ 'ಗೋರಿ ತೇರಾ ಪ್ಯಾರೆ ಮೆ" ಚಿತ್ರದ ಪ್ರಮೋಶನ್‌ಗೆ ಈ ಸೂಟನ್ನು ಧರಿಸಿ ಬಂದಿದ್ದರು.

ಈಗ ಇದೇ ಮಾದರಿಯ ಫ್ಯಾಶನ್ ಧಿರಿಸನ್ನು ಅನುಕರಿಸುತ್ತಿರುವವರು ವಿದ್ಯಾ ಬಾಲನ್. ತಮ್ಮ ಮುಂಬರುವ ಚಿತ್ರ ಬೋಬ್ಬಿ ಜಾಸೂಸ್‌ಗಾಗಿ ವಿದ್ಯಾ ಈ ಸೂಟ್ ಅನ್ನು ಆಯ್ದುಕೊಂಡಿದ್ದಾರೆ. ಪಾಯಲ್ ಸಿಂಗಾಲ್ ವಿನ್ಯಾಸದ ಈ ಸೂಟ್‌ಗಳು ಇಬ್ಬರಿಗೂ ಹೇಳಿ ಮಾಡಿಸಿದಂತಿವೆ ಮತ್ತು ಒಂದೇ ರೀತಿಯ ಫ್ಯಾಶನ್ ಅನ್ನೇ ಇವರಿಬ್ಬರೂ ಅನುಸರಿಸಿದ್ದಾರೆ.

ಸೇಮ್ ಪಿಂಚ್ ಧಿರಿಸಿನಲ್ಲಿ ವಿದ್ಯಾ ಹಾಗೂ ಕರೀನಾ!

ಗೋರಿ ತೇರಾ ಪ್ಯಾರ್ ಮೇ ಚಿತ್ರದ ಪ್ರಚಾರ ಸಮಯದಲ್ಲಿ ಕರೀನಾ ತೊಟ್ಟ ಈ ಸೂಟ್ ಆಕರ್ಷಕವಾಗಿತ್ತು ಮತ್ತು ಝೀರೋ ಸೈಜ್ ಬೆಡಗಿಗೆ ಇನ್ನಷ್ಟು ಅಂದವಾಗಿ ಕಾಣುತ್ತಿತ್ತು. ಹೊಳೆಯುವ ಚಿನ್ನದ ಹಳದಿ ಬಣ್ಣದ ಮೇಲಂಗಿ ಮತ್ತು ಪಟಿಯಾಲಾ ವಿನ್ಯಾಸದ ಕಪ್ಪು ಬಣ್ಣದ ಟಾಪ್‌ನಲ್ಲಿ ಕರೀನಾ ಮಿಂಚಿದ್ದರು. ಹಾಗೂ ಇದಕ್ಕೆ ಈ ಸೂಟ್‌ಗೆ ಹೊಂದುವಂತೆ ಕರೀನಾ ಬಿಳಿ-ಕಪ್ಪು ಮಿಶ್ರವಿರುವ ಶಾಲನ್ನು ತೊಟ್ಟಿದ್ದರು.

ರೆಡ್ ಗೌನ್‌ನಲ್ಲಿ ಸೆನ್ಶುವಲ್ ಸುಂದರಿಯಾಗಿ ಸನ್ನಿ ಲಿಯೋನ್

ಸಿಲ್ಕ್ ಪಾಯಲ್ ಸಿಂಗಾಲ್ ಹಳದಿ ಸೂಟ್ ಅನ್ನು ಧರಿಸಿದ್ದ ಕರೀನಾಗೆ ಈ ಡ್ರೆಸ್ ತುಂಬಾ ಚೆನ್ನಾಗಿ ಕಂಡುಬಂದಿದೆ. ಹಾಗೂ ಧಿರಿಸಿನ ಕಲರ್ ಕಾಂಬಿನೇಶನ್ ಕೂಡ ಮೆಚ್ಚುವಂತಿತ್ತು. ಸಿಲ್ವರ್ ಬಣ್ಣದ ಶೂ ರೀತಿಯ ಪಾದರಕ್ಷೆಗಳನ್ನು ಈ ಸೂಟ್‌ಗಾಗಿ ಕರೀನಾ ಧರಿಸಿದ್ದರು. ಇಳಿ ಬಿಟ್ಟ ಕೂದಲಿನೊಂದಿಗೆ ಅತಿ ಸರಳವಾಗಿ ಅಲಂಕರಿಸಿಕೊಂಡ ಕರೀನಾ ತಮ್ಮ ಸಿಂಪಲ್ ಉಡುಗೆ ತೊಡುಗೆಯಿಂದ ಮನಮೆಚ್ಚುವಂತಿದ್ದಾರೆ.

ಬೋಬ್ಬಿ ಜಾಸೂಸ್ ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ಕೂಡ ವಿದ್ಯಾ ಇದೇ ರೀತಿಯ ಸೂಟ್‌ನಲ್ಲಿ ಕಂಡುಬಂದಿದ್ದಾರೆ. ತುಂಬಾ ಸಮಯದ ನಂತರ ವಿದ್ಯಾ ಮುದ್ದಾಗಿ ಮತ್ತು ಸುಂದರಿಯಾಗಿ ಕಂಡುಬಂದಿದ್ದಾರೆ. ಪಾಯಲ್ ಸಿಂಗಾಲ್ ದಿಟ್ಟೋ ಸೂಟ್ ವಿದ್ಯಾರಿಗೆ ತುಂಬಾ ಚೆನ್ನಾಗಿ ಒಪ್ಪುತ್ತಿದೆ. ಹಾಟ್ ಪಿಂಕ್ ಪಟಿಯಾಲಾವನ್ನು ಧರಿಸಿರುವ ವಿದ್ಯಾ ಆಕಾಶ ನೀಲಿ ಬಣ್ಣದ ಸ್ಟ್ರೇಟ್ ಕುರ್ತಾವನ್ನು ಧರಿಸಿ ಕರೀನಾ ಧರಿಸಿದ್ದ ಅದೇ ದುಪ್ಪಾಟ್ಟಾವನ್ನು ವಿದ್ಯಾ ಧರಿಸಿದ್ದಾರೆ.

ಸೆಲೆಬ್ರಿಟಿಗಳ ಸೌಂದರ್ಯವನ್ನು ನಿಮ್ಮದಾಗಿಸಿ ಕೊಳ್ಳಬೇಕೇ?

ವಿದ್ಯಾ ತಮ್ಮ ಕೂದಲನ್ನು ಸ್ಟೈಲಿಶ್ ಆಗಿ ಮಾಡಿಕೊಂಡಿದ್ದಾರೆ. ಫ್ರೆಂಚ್ ಬ್ರೈಡ್ ಮತ್ತು ದೊಡ್ಡ ಜುಮುಕಿಯನ್ನು ಧರಿಸಿರುವ ನಟಿ ಬೋಬ್ಬಿ ಜಾಸೂಸ್ ಪ್ರಮೋಶನ್‌ನಲ್ಲಿ ಚೆನ್ನಾಗಿ ಮಿಂಚಿದ್ದಾರೆ. ಈ ಇಬ್ಬರೂ ತಾರೆಯರಲ್ಲಿ ಯಾರು ಚೆನ್ನಾಗಿ ಕಂಡುಬರುತ್ತಿದ್ದಾರೆ ಎಂಬುದು ತುಸು ತಲೆನೋವಿನ ಸಂಗತಿಯಾಗಿದೆ. ಆದರೆ ಇಬ್ಬರೂ ವಿಭಿನ್ನವಾಗಿ ತಮ್ಮ ಸ್ಟೈಲ್‌ನಲ್ಲಿ ಅಂದವಾಗಿ ಕಾಣುತ್ತಿದ್ದಾರೆ ಅಲ್ಲವೇ?

English summary

Ditto: Kareena Kapoor & Vidya Balan In Bright Colours

Looks like there are a lot of Bollywood beauties who love copying their styles from other celebrities in the industry. The Payal Singhal suit which seems to be trending these days was first spotted on diva Kareena Kapoor at her promotions of her film ‘Gori Tere Pyaar Mein'.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more