For Quick Alerts
ALLOW NOTIFICATIONS  
For Daily Alerts

ದೊಡ್ಡವರು ತ್ವಚೆಗೆ ಬೇಬಿ ಪ್ರಾಡೆಕ್ಟ್ ಬಳಸಲೇಬಾರದು, ಏಕೆ?

|

ಮಕ್ಕಳ ತ್ವಚೆ ಎಷ್ಟೊಂದು ಮೃದುವಾಗಿರುತ್ತದೆ ಅಲ್ವಾ? ಅವರ ತ್ವಚೆ ಮುಟ್ಟುವಾಗ ನಮ್ಮ ತ್ವಚೆಯೂ ಅಷ್ಟೇ ನುಣಪಾಗಿದ್ದರೆ ಚೆನ್ನಾಗಿರುತ್ತೆ ಅನಿಸುತ್ತೆ. ಕೆಲವರಂತೂ ನುಣಪಾದ ತ್ವಚೆಗಾಗಿ ಬೇಬಿ ಕ್ರೀಮ್, ಪೌಡರ್ ಬಳಸುತ್ತಾರೆ.

Baby Cream For Skin Care

ಬೇಬಿ ಕ್ರೀಮ್, ಪೌಡರ್ ಬಳಸಿದರೆ ಮಕ್ಕಳ ತ್ವಚೆಯ ರೀತಿಯಲ್ಲಿಯೇ ತುಂಬಾ ಮೃದುವಾಗಿರುತ್ತದೆ ಎಂದು ನೀವು ಅಂದುಕೊಂಡಿದ್ದರೆ ಅದರಷ್ಟು ಮೂರ್ಖತನ ಮತ್ತೊಂದಿಲ್ಲ, ಏಕೆಂದರೆ ದೊಡ್ಡವರ ತ್ವಚೆಗೂ , ಮಕ್ಕಳ ತ್ವಚೆಗೂ ತುಂಬಾ ವ್ಯತ್ಯಾಸವಿರುತ್ತದೆ. ಇಲ್ಲಿ ದೊಡ್ಡವರ ಪೌಡರ್‌, ಕ್ರೀಂಗಿಂತ ಮಕ್ಕಳ ಕ್ರೀಂ ಹೇಗೆ ಭಿನ್ನವಾಗಿರುತ್ತದೆ, ಮಕ್ಕಳ ಕ್ರೀಮ್ ಅನ್ನು ಏಕೆ ಬಳಸಬಾರದು ಎಂದು ಇಲ್ಲಿ ಹೇಳಿದ್ದೇವೆ ನೋಡಿ:

ಮಕ್ಕಳ ಕ್ರೀಂ ಬಳಸಿದರೆ ತ್ವಚೆ ನುಣಪಾಗುವುದು?

ಬೇಬಿ ಕ್ರೀಮ್‌ಗಳಲ್ಲಿ pH ಬ್ಯಾಲೆನ್ಸ್ ಇರುತ್ತದೆ

ಬೇಬಿ ಕ್ರೀಮ್‌ಗಳಲ್ಲಿ pH ಬ್ಯಾಲೆನ್ಸ್ ಇರುತ್ತದೆ

ದೊಡ್ಡವರ ತ್ವಚೆಗೆ ಹೋಲಿಸಿದರೆ ಮಕ್ಕಳ ತ್ವಚೆ ತುಂಬಾ ಸೂಕ್ಷ್ಮವಾಗಿರುತ್ತದೆ. ಆದ್ದರಿಂದಾಗಿ ಅವರಿಗೆ ಬೇಗನೆ ಅಲರ್ಜಿ ಉಂಟಾಗುವುದು, ಏಕೆಂದರೆ ಅವರ ತ್ವಚೆ ರಕ್ಷಣೆಗೆ ಯಾವುದೇ ಎಣ್ಣೆಯಂಶ ಉತ್ಪತ್ತಿಯಾಗುವುದಿಲ್ಲ. ಆದ್ದರಿಂದ ಬೇಬಿ ಕ್ರೀಮ್‌ಗಳಲ್ಲಿ pH ಬ್ಯಾಲೆನ್ಸ್ ಇರುವಂತೆ ಇಡಲಾಗಿರುತ್ತದೆ.

ಮಕ್ಕಳ ಕ್ರೀಮ್‌ ನಮ್ಮ ಮುಖವನ್ನು ಕ್ಲೆನ್ಸ್ ಮಾಡುವುದಿಲ್ಲ

ಮಕ್ಕಳ ಕ್ರೀಮ್‌ ನಮ್ಮ ಮುಖವನ್ನು ಕ್ಲೆನ್ಸ್ ಮಾಡುವುದಿಲ್ಲ

ಮಕ್ಕಳ ಶ್ಯಾಂಪೂ, ಬಾಡಿವಾಶ್‌ ಕ್ರೀಮ್ ತುಂಬಾ ಮೈಲ್ಡ್‌ ಆಗಿರುತ್ತದೆ. ಇನ್ನು ದೊಡ್ಡವರ ತ್ವಚೆಗಿಂತ ಮಕ್ಕಳ ತ್ವಚೆಯಲ್ಲಿ ರಂಧ್ರಗಳು ತುಂಬಾ ಚಿಕ್ಕದಾಗಿರುತ್ತದೆ ಹಾಗೂ ಎಣ್ಣೆಯಂಶ ಕೂಡ ಕಡಿಮೆ ಇರುತ್ತದೆ. ಇನ್ನು ಮಕ್ಕಳ ಕ್ರೀಮ್‌ಗಳಲ್ಲಿ ಆಲ್ಕೋಹಾಲ್‌ ಅಂಶವಿರುವುದಿಲ್ಲ.

ದೊಡ್ಡವರ ತ್ವಚೆ ಕ್ಲೆನ್ಸ್ ಆಗಲು ಆಲ್ಕೋಹಾಲ್ ಅಂಶವಿರಬೇಕು.

ಎಲ್ಲಾ ಮಕ್ಕಳ ಕ್ರೀಮ್‌ ಸೂಕ್ಷ್ಮ ತ್ವಚೆಯವರಿಗೆ ಸೂಕ್ತವಾಗುವುದಿಲ್ಲ

ಎಲ್ಲಾ ಮಕ್ಕಳ ಕ್ರೀಮ್‌ ಸೂಕ್ಷ್ಮ ತ್ವಚೆಯವರಿಗೆ ಸೂಕ್ತವಾಗುವುದಿಲ್ಲ

ಮಕ್ಕಳ ಕ್ರೀಮ್ ಅನ್ನು ಅವರ ಸೂಕ್ಷ್ಮ ತ್ವಚೆಗೆ ಅನುಗುಣವಾಗಿ ತಯಾರಿಸಲಾಗಿರುತ್ತದೆ. ಅದನ್ನು ಅವರ ತ್ವಚೆಗೆ ಹಚ್ಚುವುದರಿಂದ ಮಕ್ಕಳ ತ್ವಚೆಗೆ ಸುರಕ್ಷತೆಯನ್ನು ಒದಗಿಸುತ್ತದೆ. ಆದರೆ ಇದನ್ನೇ ಸೂಕ್ಷ್ಮ ತ್ವಚೆಯವರು ಬಳಸಿದರೆ ಯಾವುದೇ ಪ್ರಯೋಜನ ದೊರೆಯುವುದಿಲ್ಲ.

ಮಕ್ಕಳ ಕ್ರೀಮ್‌ ಅನ್ನು ದೊಡ್ಡವರು ಹಚ್ಚಿಕೊಂಡಾಗ ಉರಿಉರಿಯ ಅನುಭವ ಉಂಟಾಗುವುದು, ಏಕೆಂದರೆ ಬೇಬಿ ಕ್ರೀಮ್‌ಗಳಲ್ಲಿ ಬಳಸಿರುವ ಸುಗಂಧ ವಾಸನೆಯ ಸಾಮಗ್ರಿಯಿಂದಾಗಿ ಆ ರೀತಿ ಉಂಟಾಗಿರುತ್ತದೆ. ಇದು ದೊಡ್ಡವರ ತ್ವಚೆಗೆ ಹೊಂದಿಕೆಯಾಗುವುದಿಲ್ಲ.

ಕೆಲವರಿಗೆ ಬೇಬಿ ಪ್ರಾಡೆಕ್ಟ್ ಸೂಟ್ ಆಗುತ್ತದೆಯೆ?

ಕೆಲವರಿಗೆ ಬೇಬಿ ಪ್ರಾಡೆಕ್ಟ್ ಸೂಟ್ ಆಗುತ್ತದೆಯೆ?

ನಾರ್ಮಲ್ ಸ್ಕಿನ್ (ಸಾಮಾನ್ಯ ತ್ವಚೆ) ಇರುವವರಲ್ಲಿ ಕೆಲವರಿಗೆ ತ್ವಚೆಯಲ್ಲಿದೊಡ್ಡ ರಂಧ್ರಗಳು ಇರುವುದಿಲ್ಲ ಅಂಥವರಿಗೆ ಬೇಬಿ ಪ್ರಾಡೆಕ್ಟ್ ಸೂಟ್‌ ಆಗುತ್ತದೆ. ಅಂಥ ತ್ವಚೆಯವರು ಯಾವುದೇ ಕ್ಲೆನ್ಸರ್ ಬಳಸುವ ಬದಲು ಮೈಲ್ಡ್‌ ಕ್ರೀಮ್ ಬಳಸುವುದು ಒಳ್ಳೆಯದು.

ಆದರೆ ಕೆಲವರು ಡ್ರೈ ಸ್ಕಿನ್ ಇರುವವರು ಬೇಬಿ ಕ್ರೀಮ್ ಬಳಸುತ್ತಾರೆ. ಅಂಥವರು ಬೇಬಿ ಕ್ರೀಮ್ ಬಳಸಿದರೆ ಯಾವುದೇ ಪ್ರಯೋಜನವಿಲ್ಲ. ಇನ್ನು ತ್ವಚೆ ಸಮಸ್ಯೆ ಇರುವವರು ಬೇಬಿ ಕ್ರೀಮ್ ಬಳಸುವುದರಿಂದ ಯಾವುದೇ ಪ್ರಯೋಜನವಿಲ್ಲ. ಬೇಬಿ ಕ್ರೀಮ್‌ ಹಚ್ಚಿದರೆ ಮೊಡವೆ, ತ್ವಚೆ ಒಣಗುವುದು ಮುಂತಾದ ಸಮಸ್ಯೆ ಮತ್ತಷ್ಟು ಅಧಿಕವಾಗುವುದು, ಇನ್ನು ಎಣ್ಣೆ ತ್ವಚೆ ಇರುವವರ ಮುಖ ಮತ್ತಷ್ಟು ಎಣ್ಣೆ-ಎಣ್ಣೆಯಾಗುವ ಸಾಧ್ಯತೆ ಇದೆ.

ಮಕ್ಕಳ ಕ್ರೀಮ್ ದುಬಾರಿ ಕೂಡ

ಮಕ್ಕಳ ಕ್ರೀಮ್ ದುಬಾರಿ ಕೂಡ

ನಿಮ್ಮ ತ್ವಚೆಗೆ ಸರಿ ಹೊಂದುವ ಹಾಗೂ ಮಕ್ಕಳ ಕ್ರೀಮ್‌ಗಳಿಗಿಂತ ಕಡಿಮೆ ಬೆಲೆಯ ಅನೇಕ ಕ್ರೀಮ್‌ಗಳಿವೆ, ಅವುಗಳನ್ನು ಬಳಸಬಹುದು. ನಾವು ಬಳಸುವ ಕ್ರೀಮ್‌ಗಿಂತ ಮಕ್ಕಳ ಕ್ರೀಮ್‌ಗಳು ದುಬಾರಿಯಾಗಿರುತ್ತದೆ ಹಾಗೂ ಅವುಗಳನ್ನು ಬಳಸುವುದರಿಂದ ನಿಮ್ಮ ತ್ವಚೆಗೆ ಯಶವುದೇ ಪ್ರಯೋಜನ ದೊರೆಯುವುದಿಲ್ಲ.

ನಿಮ್ಮ ತ್ವಚೆ ಹಾಳಾಗುವ ಸಾಧ್ಯತೆ ಇದೆ

ನಿಮ್ಮ ತ್ವಚೆ ಹಾಳಾಗುವ ಸಾಧ್ಯತೆ ಇದೆ

ಮುಖದಲ್ಲಿ ರಂಧ್ರಗಳು ಎದ್ದು ಕಾಣುವಂತೆ ಇದ್ದರೆ ಬೇಬಿ ಪ್ರಾಡೆಕ್ಟ್ ಬಳಸಲೇಬೇಡಿ. ಏಕೆಂದರೆ ಅವುಗಳು ತ್ವಚೆಯನ್ನು ಕ್ಲೆನ್ಸ್ ಮಾಡುವುದಿಲ್ಲ, ಇದರಿಂದ ರಂಧ್ರಗಳಲ್ಲಿ ಕೊಳೆ ಕೂತು ಬ್ಲ್ಯಾಕ್‌ ಹೆಡ್ಸ್ ಉಂಟಾಗುವ ಸಾಧ್ಯತೆ ಇದೆ. ಇನ್ನು ಮೊಡವೆ ಸಮಸ್ಯೆ ಇದ್ದರಂತೂ ಬೇಬಿ ಪ್ರಾಡೆಕ್ಟ್ ಬಳಸುವುದರಿಂದ ಈ ಸಮಸ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಇನ್ನು ತ್ವಚೆ ಎಣ್ಣೆ-ಎಣ್ಣೆಯಾಗಿರುತ್ತದೆ.

English summary

Why Adult Should Not Use Baby Product

Some are think baby cream help to get soft skin, but that is the wrong practice. Here we have told why you should not use baby product for skin care. Have a look.
Story first published: Wednesday, March 4, 2020, 12:16 [IST]
X
Desktop Bottom Promotion