For Quick Alerts
ALLOW NOTIFICATIONS  
For Daily Alerts

ಏನು, ಮಾಯಿಶ್ಚರೈಸರ್ ಜೊತೆ ಅರಿಶಿಣ ಬೆರೆಸಿದರೆ ಇನ್ನೂ ಒಳ್ಳೆಯದಾ?

|

ಅರಿಶಿನ, ಒಂದು ಮಸಾಲೆ ಪದಾರ್ಥವಾಗಿದ್ದರೂ ಇದರ ಬಳಕೆ ಔಷಧೀಯ ರೂಪದಲ್ಲಿಯೂ ನೂರಾರು ವರ್ಷಗಳಿಂದ ಬಳಕೆಯಲ್ಲಿದೆ. ಆಯುರ್ವೇದದಲ್ಲಂತೂ ಅರಿಶಿನವನ್ನು ಹಲವಾರು ಕಾಯಿಲೆಗಳ ಔಷಧಿಗಾಗಿ ಬಳಸಲಾಗುತ್ತಿದೆ. ವಿಶೇಷವಾಗಿ ತ್ವಚೆಯ ಆರೈಕೆಗೆ ಅರಿಶಿನದ ಲೇಪವನ್ನು ನಮ್ಮ ಅಜ್ಜಿಯರ ಕಾಲದಿಂದಲೂ ಬಳಸಲಾಗುತ್ತಿದೆ.

ಹಲ್ದೀ ಕಾ ಉಬ್ಟನ್ ಎಂಬುದು ಸಾಂಪ್ರಾದಾಯಿಕವಾಗಿ ಬಂದಿರುವ ತ್ವಚೆಗೆ ಕಾಂತಿ ನೀಡಲು ಬಳಸುವ ವಿಧಾನವೂ ಆಗಿದೆ. ಇಂದಿಗೂ ಅರಿಶಿನವನ್ನು ಮನೆಯ ಆರೈಕೆಯಿಂದ ಹಿಡಿದು ವೃತ್ತಿಪರ ಸೌಂದರ್ಯ ಮಳಿಗೆಗಳಲ್ಲಿ ಬಳಸಲಾಗುತ್ತಿದೆ. ಖ್ಯಾತನಾಮರಾದ ಪ್ರಿಯಾಂಕಾ ಚೋಪ್ರಾ ಮತ್ತು ಕರೀನಾ ಕಪೂರ್ ಖಾನ್ ರಂತಹ ಮೇರುನಟಿಯರೂ ತಮ್ಮ ತ್ವಚೆಯನ್ನು ಬೆಳಗಿಸಲು ಬಳಸುತ್ತಾರೆ.

ಕೇವಲ ಬಾಲಿವುಡ್ ಬೆಡಗಿಯರು ಮಾತ್ರವಲ್ಲ, ಹಾಲಿವುಡ್ ಖ್ಯಾತನಾಮರಾದ ವಿಕ್ಟೋರಿಯಾ ಬೆಖಂ ಸಹಾ ತಮ್ಮ ಸೌಂದರ್ಯಕ್ಕಾಗಿ ಅರಿಶಿನ ಪುಡಿಯನ್ನು ಲೋಳೆಸರದೊಂದಿಗೆ ಮಿಶ್ರಣ ಮಾಡಿ ಹಚ್ಚುತ್ತೇನೆ ಎಂದು ವಿವರಿಸಿದ್ದಾರೆ. ಅರಿಶಿನದ ಉರಿಯೂತ ನಿವಾರಕ ಗುಣಗಳೇ ತ್ವಚೆಯ ಆರೋಗ್ಯ ಮತ್ತು ಕಾಂತಿಯನ್ನು ಹೆಚ್ಚಿಸಲು ನೆರವಾಗುತ್ತಿವೆ ಹಾಗೂ ತ್ವಚೆಯ ಆರೋಗ್ಯವನ್ನೂ ಉತ್ತಮವಾಗಿ ಕಾಪಾಡುತ್ತದೆ.

ಈ ವ್ಯಕ್ತಿಗಳು ಅರಿಶಿನವನ್ನು ಬಳಸಿಕೊಳ್ಳುತ್ತಿದ್ದೇವೆ ಎಂದು ವಿವರಿಸಿದ್ದಾರೆಯೇ ವಿನಃ ಇವನ್ನು ಸ್ವತಃ ತಾವೇ ಹಚ್ಚಿಕೊಳ್ಳುತ್ತಿದ್ದೇವೆ ಎಂದೇನೂ ಹೇಳಿಲ್ಲ. ವಾಸ್ತವದಲ್ಲಿ, ಈ ನೈಸರ್ಗಿಕ ಉತ್ಪನ್ನಗಳನ್ನು ಅವರು ವೃತ್ತಿಪರರಿಂದ ಪಡೆದಿರುತ್ತಾರೆ. ಅರಿಶಿನದ ಸರಿಯಾದ ಬಳಕೆಯಿಂದಲೇ ಈ ಸೌಂದರ್ಯ ಮತ್ತು ತ್ವಚೆಯ ಆರೋಗ್ಯ ಪಡೆದಿರುವುದು ನಗ್ನಸತ್ಯ.

ಆದರೆ ನೀವು ಮನೆಯಲ್ಲಿಯೇ ಅರಿಶಿನವನ್ನು ಸೌಂದರ್ಯವರ್ಧಕವಾಗಿ ಬಳಸುವಾಗ ನಿಮಗೆ ಯಾರು ಇದರ ಸರಿಯಾದ ವಿಧಾನವನ್ನು ತಿಳಿಸುತ್ತಾರೆ? ಈ ಕಾರ್ಯವನ್ನು ಇಂದಿನ ಲೇಖನ ನಿರ್ವಹಿಸಲಿದೆ.

1. ನಿಮ್ಮ ತೇವಕಾರಕ (ಮಾಯಿಶ್ಚರೈಸರ್) ನೊಂದಿಗೆ ಅರಿಶಿನವನ್ನು ಬಳಸಿ

1. ನಿಮ್ಮ ತೇವಕಾರಕ (ಮಾಯಿಶ್ಚರೈಸರ್) ನೊಂದಿಗೆ ಅರಿಶಿನವನ್ನು ಬಳಸಿ

ಇದು ಏಕೋ ಸರಿಯಲ್ಲ ಎಂದು ತೋರುತ್ತದೆ, ಆದರೆ ಮಹಿಳೆಯರೇ, ನೀವು ಇದನ್ನು ಪ್ರಯತ್ನಿಸಲೇಬೇಕು! ನಿಮ್ಮ ಮಾಯಿಶ್ಚರೈಸರ್ ಗೆ ಕೊಂಚ ಅರಿಶಿನ ಪುಡಿಯನ್ನು ಸೇರಿಸಿ, ಮತ್ತು ಅದನ್ನು ಪ್ರತಿದಿನ ಬಳಸಿ. ಇದು ಉರಿಯೂತದ ಗುಣಲಕ್ಷಣಗಳನ್ನು ಹೊಂದಿರುವುದರಿಂದ, ಕಲೆಗಳನ್ನು ಕಡಿಮೆ ಮಾಡಲು ನೀವು ಅರಿಶಿನವನ್ನು ನಂಬಬಹುದು, ಮತ್ತು ತ್ವಚೆಯನ್ನು ಸಾಧ್ಯವಿರುವ ಎಲ್ಲಾ ರೀತಿಯಲ್ಲಿ ಗುಣಪಡಿಸಬಹುದು! ನಿಮ್ಮ ಕಾಂತಿಯುಕ್ತ ತ್ವಚೆಯನ್ನು ಕಂಡವರು ಮುಂದಿನ ಬಾರಿ ನಿಮ್ಮನ್ನು ಅಭಿನಂದಿಸಿದಾಗ, ಅರಿಶಿನಕ್ಕೆ ಧನ್ಯವಾದ ಹೇಳಲು ಮರೆಯಬೇಡಿ.

2. ನಿಮ್ಮ ತುಟಿಗಳಿಗೆ ಅರಿಶಿನ ಹಚ್ಚಿ

2. ನಿಮ್ಮ ತುಟಿಗಳಿಗೆ ಅರಿಶಿನ ಹಚ್ಚಿ

ಇಲ್ಲ, ಇದು ಉತ್ಪ್ರೇಕ್ಷೆ ಏನೂ ಅಲ್ಲ. ನಿಮ್ಮ ನೆಚ್ಚಿನ ತುಟಿಗೆ ಹಚ್ಚಿಕೊಳ್ಳುವ ಬಾಮ್ ಅಥವಾ ವ್ಯಾಸಲೀನ್‌ಗೆ ನೀವು ಒಂದು ಚಿಟಿಕೆ ಅರಿಶಿನ ಪುಡಿಯನ್ನು ಮಿಶ್ರಣ ಮಾಡಬಹುದು ಮತ್ತು ಮೃದು ಮತ್ತು ಪೂರಕವಾದ ತುಟಿಗಳನ್ನು ಮುಂದಿನ ಕೆಲವು ದಿನಗಳಲ್ಲಿ ಕಾಣಬಹುದು. ಚಳಿಗಾಲದಲ್ಲಿ ಇದು ವಿಶೇಷವಾಗಿ ಉಪಯುಕ್ತವಾಗಿದೆ, ಹವಾಮಾನದ ಕಾರಣದಿಂದಾಗಿ ನಿಮ್ಮ ತುಟಿಗಳು ಅತಿಯಾಗಿ ಒಣಗಿದಾಗ ಒಣಗಿ ಬಿರುಕು ಬಿಡುತ್ತದೆ. ಅರಿಶಿನ ಹೀಗಾಗುವುದನ್ನು ತಡೆಯುತ್ತದೆ. ಈ ಸಲಹೆಯನ್ನು ಯಾವಾಗಲೂ ನೆನಪಿನಲ್ಲಿಡಿ, ಮತ್ತು ನೀವು ಎಂದಿಗೂ ತೊಂದರೆ ಅನುಭವಿಸುವುದಿಲ್ಲ!

3. ಅರಿಶಿನ ಮಿಶ್ರಿತ ಫೇಸ್ ಪ್ಯಾಕ್ ಹಚ್ಚಿಕೊಳ್ಳಿ

3. ಅರಿಶಿನ ಮಿಶ್ರಿತ ಫೇಸ್ ಪ್ಯಾಕ್ ಹಚ್ಚಿಕೊಳ್ಳಿ

ನೀವು ಪ್ರಿಯಾಂಕಾ ಚೋಪ್ರಾ ಅವರನ್ನು ಅನುಸರಿಸಿದರೆ, ಮುಖದ ಮಾಸ್ಕ್ ಅಥವಾ ಮುಖಲೇಪದ ಜೊತೆ ಅರಿಶಿನವು ಹೇಗೆ ಅದ್ಭುತವಾಗಿ ಕೆಲಸ ಮಾಡುತ್ತದೆ ಎಂದು ನಿಮಗೆ ತಿಳಿದಿದೆ. ಇತ್ತೀಚೆಗೆ, ಕಡಲೆ ಹಿಟ್ಟು, ಮೊಸರು, ನಿಂಬೆ, ಹಸಿ ಹಾಲು, ಶ್ರೀಗಂಧದ ಪುಡಿ, ಮತ್ತು ಅರಿಶಿನದ ಒಳ್ಳೆಯತನವನ್ನು ಹೊಂದಿರುವ ಮನೆಯಲ್ಲಿ ತಯಾರಿಸಿದ ಮುಖಲೇಪದ ಬಗ್ಗೆ ಆಕೆ ನಮಗೆ ಕೆಲವು ಮಾಹಿತಿಯನ್ನು ನೀಡಿದ್ದಾರೆ. ಇದನ್ನು ನಿಯಮಿತವಾಗಿ ಬಳಸುವುದರಿಂದ ನಿಮ್ಮ ತ್ವಚೆಯ ವಿನ್ಯಾಸವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಮತ್ತು ಬ್ಲ್ಯಾಕ್‌ಹೆಡ್‌ಗಳನ್ನೂ ತೆಗೆದುಹಾಕಬಹುದು.

ಕಣ್ಣ ಕೆಳಗಿನ ಕಪ್ಪು ವರ್ತುಲ ಕಡಿಮೆ ಮಾಡುವ ಅರಿಶಿನ

ಕಣ್ಣ ಕೆಳಗಿನ ಕಪ್ಪು ವರ್ತುಲ ಕಡಿಮೆ ಮಾಡುವ ಅರಿಶಿನ

ಕಣ್ಣ ಕೆಳಗಿನ ಕಪ್ಪು ವರ್ತುಲಗಳನ್ನು ಸಹಜವರ್ಣಕ್ಕೆ ತರಲು ನಿಮ್ಮ ಕಣ್ಣುಗಳ ಕೆಳಗೆ ಅರಿಶಿನವನ್ನು ಬಳಸಿ

ನೀವು ಆಗಾಗ್ಗೆ ನಿದ್ರೆಯಿಂದ ವಂಚಿತರಾಗಿದ್ದರೆ ಮತ್ತು ಕಣ್ಣ ಕೆಳಗೆ ಕಪ್ಪು ವರ್ತುಲಗಳು ಮತ್ತು ಊದಿಕೊಂಡಿರುವ ತೊಂದರೆಯಿಂದ ಬಳಲುತ್ತಿದ್ದರೆ, ಅರಿಶಿನದ ಒಳ್ಳೆಯತನವನ್ನು ಸ್ವೀಕರಿಸುವ ಸಮಯ ಇದು. ನೀವು ಅದನ್ನು ನಿಮ್ಮ ನೆಚ್ಚಿನ ಅವಶ್ಯಕ ಎಣ್ಣೆಯೊಂದಿಗೆ ಬೆರೆಸಬಹುದು ಮತ್ತು ಅದನ್ನು ಕೆಲವು ನಿಮಿಷಗಳ ಕಾಲ ನೇರವಾಗಿ ಕಣ್ಣುಗಳ ಕೆಳಗೆ ಅನ್ವಯಿಸಬಹುದು. ಇದು ಯಾವುದೇ ಸಮಯದಲ್ಲಿ ಕಣ್ಣುಗಳ ಕೆಳಗಿನ ಊದಿಕೊಂಡಿರುವುದನ್ನು ಶೀಘ್ರದಲ್ಲಿಯೇ ಕಡಿಮೆ ಮಾಡುತ್ತದೆ!

ಇಷ್ಟೆಲ್ಲಾ ಒಳ್ಳೆಯತನವನ್ನು ನೀಡುವ ಅರಿಶಿನ ಅತ್ಯಂತ ಅಗ್ಗ, ಅತಿ ಸುಲಭವಾಗಿ ಸಿಗುವ ಸಾಂಬಾರ ವಸ್ತುವಾಗಿದೆ. ಇದನ್ನು ಬಳಸಿ ಕಾಂತಿಯುಕ್ತ ಮತ್ತು ಆರೋಗ್ಯಕರ ತ್ವಚೆಯನ್ನು ಪಡೆಯಲು ಈಗ ನಿಮಗೆ ಬೇರಾವ ಪ್ರಲೋಭನೆಯೂ ಅಡ್ಡಿಯಾಗಲಾರದು.

English summary

Way To Use Turmeric For Skincare In Kannada

Here are effective way to use turmeric for skincare, read on,
X