For Quick Alerts
ALLOW NOTIFICATIONS  
For Daily Alerts

ಕೊರೊನಾ ಚೇತರಿಕೆ ಬಳಿಕ ನಿಮ್ಮ ಸೌಂದರ್ಯ ಮರಳಿ ಪಡೆಯಲು ಹೀಗೆ ಮಾಡಿ

|

ಸೌಂದರ್ಯ ಮತ್ತು ವೈಯಕ್ತಿಕ ಆರೈಕೆ ಜೀವನದ ಬಹುಮುಖ್ಯ ಭಾಗವಾಗಿದೆ. ಆದರೆ ಕೊರೊನಾ ವೈಯಕ್ತಿಕ ಜೀವನ ಸೇರಿದಂತೆ ಸಮಾಜದ ಸ್ಥಿತಿಗತಿಯನ್ನೇ ಬುಡಮೇಲು ಮಾಡಿದೆ. ಕೊರೊನಾ ಪಾಸಿಟಿವ್ ಆದಾಗ ಕೆಲವೊಂದು ಕೆಂಪು ಗುಳ್ಳೆಗಳು, ದದ್ದುಗಳು ಸಹ ಜನರನ್ನು ಕಾಡುತ್ತಿದೆ. ಇದು ಚೇತರಿಕೆಯಾದ ಮೇಲೂ ಕೆಲವರನ್ನು ಕಾಡಿದ ಉದಾಹರಣೆಗಳಿವೆ. ಹಾಗಾಗಿ ಈ ಸಮಯದಲ್ಲಿ ನಾವು ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ತುಂಬಾ ಮುಖ್ಯ. ಅದಕ್ಕಾಗಿ ನಾವಿಲ್ಲಿ ತಜ್ಞರು ಶಿಫಾರಸು ಮಾಡಿದ ಕೆಲವು ಸಲಹೆಗಳನ್ನು ನೀಡಿದ್ದೇವೆ. ಇದನ್ನು ನಿಮ್ಮ ದಿನಚರಿಯ ಭಾಗ ಮಾಡಿಕೊಳ್ಳಿ.

Ways to Revive Your Skin Post Covid-19 Recovery in Kannada

ಚರ್ಮದ ಆರೋಗ್ಯಕ್ಕಾಗಿ ತಜ್ಞರು ಶಿಫಾರಸು ಮಾಡಿದ ಕೆಲವು ಸಲಹೆಗಳನ್ನು ನೀಡಲಾಗಿದೆ. ಇವುಗಳು ನೇರವಾಗಿ ಮತ್ತು ಪರೋಕ್ಷವಾಗಿ ನಿಮ್ಮ ಚರ್ಮದ ಆರೋಗ್ಯ ಕಾಪಾಡಲು ಸಹಾಯ ಮಾಡುತ್ತದೆ:

1. ಗಿಡಮೂಲಿಕೆಗಳಿಂದ ಕೂಡಿದ ಚಹಾದೊಂದಿಗೆ ನಿಮ್ಮ ದಿನವನ್ನು ಪ್ರಾರಂಭಿಸಿ. ಸೂಪ್, ವಿವಿಧ ಶೇಕ್ ಗಳನ್ನು ಕೂಡ ನಿಮ್ಮ ದಿನಚರಿಯಲ್ಲಿ ಸೇರಿಸಬಹುದು.

2. ಇದುವರೆಗೆ ವ್ಯಾಯಾಮ ಮಾಡದಿದ್ದರೆ ಇನ್ನು ಮುಂದಾದರೂ ಲಘು ವ್ಯಾಯಾಮಗಳನ್ನು ನಿಮ್ಮ ದಿನಚರಿಯಲ್ಲಿ ಸೇರಿಸಿಕೊಳ್ಳಿ.

3. ಆಯುರ್ವೇದ ಔಷಧಿ ಗುಣಗಳನ್ನು ಹೊಂದಿರುವ ಬೇವು ಮತ್ತು ಅರಿಶಿನದಿಂದ ಕೂಡಿದ ಸಾಬೂನನ್ನು ಸ್ನಾನಕ್ಕೆ ಬಳಸಿ.

4. ಯಾರಾದರೂ ನಿದ್ರಾಹೀನತೆಯಿಂದ ಬಳಲುತ್ತಿದ್ದರೆ ನಿದ್ರೆಯನ್ನು ಪ್ರಚೋದಿಸುವ ಸಾರಭೂತ ತೈಲಗಳನ್ನು ದಿಂಬಿನ ಕವರ್ ಗೆ ಸಿಂಪಡಿಸಿ.

5. ಅರಿಶಿನ, ಹಾಲಿನಂತಹ ನೈಸರ್ಗಿಕ ಪರಿಹಾರಗಳು ಅತ್ಯುತ್ತಮವಾದ ಉರಿಯೂತದ ಕೆಲಸ ಮಾಡುತ್ತದೆ ಜೊತೆಗೆ ನಿದ್ರೆಯನ್ನು ಪ್ರೇರೇಪಿಸುತ್ತದೆ.

6. ಮನಸ್ಥಿತಿಯನ್ನು ಸುಧಾರಿಸಲು ಮತ್ತು ಗಾಳಿಯನ್ನು ಶುದ್ಧೀಕರಿಸಲು ಡಿಫ್ಯೂಸರ್ನಲ್ಲಿ ನೀಲಗಿರಿ ತೈಲಗಳನ್ನು ಸೇರಿಸಿ. ಇದು ನಿಮಗೆ ರಿಲಾಕ್ಸ್ ನೀಡುತ್ತದೆ.

7. ನಿದ್ರೆಗೆ ಮುನ್ನ, ಅಂಡರ್ ಐ ಕ್ರೀಮ್ ಹಚ್ಚುವುದನ್ನು ಮರೆಯಬೇಡಿ. ಇದು ನಿಮ್ಮ ಕಣ್ಣನ್ನು ಫ್ರೆಶ್ ಮಾಡಲು ಸಹಾಯ ಮಾಡುತ್ತದೆ.

8. ಸೋಂಕಿನ 8 ರಿಂದ 12 ವಾರಗಳ ನಂತರ ರೋಗಿಯು ತೀವ್ರ ಕೂದಲು ಉದುರುವಿಕೆಯನ್ನು ಅನುಭವಿಸಬಹುದು. ಇದರ ಆರೈಕೆಗಾಗಿ ಸಲ್ಫೇಟ್ ಮುಕ್ತ ಹೇರ್ ಶಾಂಪ್ಯೂ ಮತ್ತ ಕಂಡೀಷನರ್ ಬಳಸಿ.

9. ಆರೋಗ್ಯಕರ ಆಹಾರವನ್ನು ತೆಗೆದುಕೊಳ್ಳಿ. ಇದು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದಲ್ಲದೇ, ಚರ್ಮದ ಆರೋಗ್ಯವನ್ನೂ ಸಹ ಸುಧಾರಿಸುತ್ತದೆ.

10. ವಿಟಮಿನ್ ಸಿ ಜೆಲ್ ಅಥವಾ ಇನ್ನಾವುದೇ ಚರ್ಮದ ಆರೋಗ್ಯವನ್ನು ಕಾಪಾಡುವ ನೈಟ್ ಕ್ರೀಮ್ ಅಥವಾ ಮಾಯಿಶ್ಚರೈಸರ್ ಹಚ್ಚಿ. ಇದು ಚರ್ಮವನ್ನು ಹೊಳಪನ್ನು ಸಲೀಸಾಗಿ ಹೆಚ್ಚಿಸಲು ಸಹಾಯ ಮಾಡುತ್ತದೆ.

11. ಸ್ಯಾನಿಟೈಜರ್ ಗಳ ಹೆಚ್ಚಿನ ಬಳಕೆಯು ಕೈಗಳ ಒಣಗುವಿಕೆ ಅಥವಾ ಶುಷ್ಕತೆಗೆ ಕಾರಣವಾಗಬಹುದು. ಇದು ಎಸ್ಜಿಮಾ ಸೇರಿದಂತೆ ವಿವಿಧ ಚರ್ಮ ಸಮಸ್ಯೆಗಳಿಗೆ ಕಾರಣವಾಗಬಹುದು. ಅಂಗೈಗಳ ಮೇಲೆ ಯಾವುದೇ ತೀವ್ರವಾದ ದದ್ದುಗಳು ಉಂಟಾದರೆ, ಅದನ್ನು ಚರ್ಮರೋಗ ವೈದ್ಯರು ಚಿಕಿತ್ಸೆ ನೀಡಬೇಕು.

12. ಹೊರಗಿನ ಸಂಪರ್ಕದಲ್ಲಿದ್ದ ವಸ್ತುಗಳನ್ನು ಮುಟ್ಟುವಾಗ ಗ್ಲೌಸ್ ಧರಿಸಿ. ಇದರಿಂದ ಜಾಸ್ತಿ ಕೈ ತೊಳೆಯುವುದು ತಪ್ಪುತ್ತದೆ. ಕೈಯ ಆರೋಗ್ಯ ಸುಧಾರಿಸುತ್ತದೆ.

13. ಮಾಸ್ಕ್ ನಿರಂತರ ಬಳಕೆಯು ಮೊಡವೆ ಮತ್ತು ಮುಖದ ಮೇಲೆ ಅನೇಕ ದದ್ದುಗಳಿಗೆ ಕಾರಣವಾಗಿದೆ. ಇದನ್ನು ತಡೆಯಲು ಮಾಸ್ಕನ್ನು ಆಗಾಗ ಬದಲಾಯಿಸುತ್ತಿರಿ. ಇದರಿಂದ ಬ್ರೇಕೌಟ್ಸ್ ಗಳನ್ನು ತಡೆಯಬಹುದು.

English summary

Ways to Revive Your Skin Post Covid-19 Recovery in Kannada

Here we talking about Ways to revive your skin post Covid-19 recovery in Kannada, read on
X
Desktop Bottom Promotion