For Quick Alerts
ALLOW NOTIFICATIONS  
For Daily Alerts

ಮಳೆಗಾಲದಲ್ಲಿ ಎಣ್ಣೆಯುಕ್ತ ಚರ್ಮದಿಂದ ಬೇಸತ್ತಿದ್ದೀರಾ? ಈ ಸಿಂಪಲ್ ಟಿಪ್ಸ್ ಪ್ರಯತ್ನಿಸಿ ನೋಡಿ

|

ಮಳೆಗಾಲ ಬಂತೆಂದರೆ ಆಗ ಕೂದಲು ಹಾಗೂ ತ್ವಚೆಯ ಸಮಸ್ಯೆಗಳು ಅದಾಗಿಯೆ ಕಾಡಲು ಆರಂಭಿಸುತ್ತದೆ. ಅದರಲ್ಲೂ ಮುಖ್ಯವಾಗಿ ಮಳೆಗಾದಲ್ಲಿ ಗಾಳಿಯಲ್ಲಿ ಹಾಗು ಸುತ್ತಲಿನ ವಾತಾವರಣದಲ್ಲಿ ಆರ್ದ್ರತೆಯು ಹೆಚ್ಚಾಗಿರುವ ಪರಿಣಾಮವಾಗಿ ತ್ವಚೆಯ ವಿವಿಧ ಸಮಸ್ಯೆಗಳು ಕಾಡುವುದು. ಸುತ್ತಲಿನ ವಾತಾವರಣದಲ್ಲಿ ಆರ್ದ್ರತೆಯು ಇರುವ ಪರಿಣಾಮವಾಗಿ ಮೊಡವೆ ಹಾಗೂ ಬೊಕ್ಕೆಗಳು ಕಾಣಿಸಿಕೊಳ್ಳುತ್ತದೆ. ಇದು ಕೇವಲ ಎಣ್ಣೆಯುಕ್ತ ಚರ್ಮದವರಿಗೆ ಮಾತ್ರವಲ್ಲದೆ ಒಣ ಚರ್ಮದವರಲ್ಲಿ ಕೂಡ ಸಮಸ್ಯೆ ಕಾಣಿಸುವುದು.

ಚರ್ಮವು ಎಣ್ಣೆಯುಕ್ತವಾಗಿದ್ದರೆ ಅದರಿಂದ ಆಗುವಂತಹ ಸಮಸ್ಯೆಗಳ ಬಗ್ಗೆ ನಿಮಗೆ ತಿಳಿದಿರಬಹುದು. ಮಳೆಗಾಲದಲ್ಲಿ ಅದು ಹೆಚ್ಚಾಗಿರುತ್ತದೆ. ಇಂತಹ ಸಮಸ್ಯೆ ನಿವಾರಣೆ ಮಾಡಲು ಹೆಚ್ಚಿನ ಆರೈಕೆ ಮತ್ತು ಗಮನ ಬೇಕಾಗುತ್ತದೆ. ವಾತಾವರಣದಲ್ಲಿ ಇರುವಂತಹ ಆರ್ದ್ರತೆಯಿಂದಾಗಿ ಚರ್ಮವು ಜಿಡ್ಡಿನಿಂದ ಕೂಡಿರುವುದು. ಇದರಿಂದಾಗಿ ಮೊಡವೆ ಹಾಗೂ ಬೊಕ್ಕೆಗಳು ಕಾಣಿಸುವುದು. ಇದರಿಂದ ಹವಾಮಾನಕ್ಕೆ ಅನುಗುಣವಾಗಿ ನೀವು ತ್ವಚೆಯ ಆರೈಕೆಯನ್ನು ಕೂಡ ಬದಲಾಯಿಸಿಕೊಳ್ಳಬೇಕು. ಮಳೆಗಾಲದಲ್ಲಿ ಚರ್ಮವು ತುಂಬಾ ಕಾಂತಿಯುತ ಹಾಗೂ ಆರೋಗ್ಯಕಾರಿ ಇರಲು ಬಳಸುವ ಕೆಲವೊಂದು ಮನೆಮದ್ದುಗಳ ಬಗ್ಗೆ ನಾವು ಇಲ್ಲಿ ತಿಳಿಸಿಕೊಡಲಿದ್ದೇವೆ.

Tired Of Oily Skin This Monsoon?Try this Simple tips

ಲಘವಾದ ಫೇಸ್ ವಾಶ್ ನಿಂದ ಬೆಳಗ್ಗೆ ಮುಖ ತೊಳೆಯಿರಿ

ಲಘುವಾದ ಫೇಸ್ ವಾಶ್ ಮತ್ತು ಉಗುರುಬೆಚ್ಚಗಿನ ನೀರಿನಿಂದ ಮುಖ ತೊಳೆದರೆ ಆಗ ಚರ್ಮದಲ್ಲಿ ಅದ್ಭುತವು ಉಂಟಾಗುವುದು. ಉಗುರುಬೆಚ್ಚಗಿನ ನೀರು ಮತ್ತು ಪೇಸ್ ವಾಶ್ ಮುಖದಲ್ಲಿರುವಂತಹ ಅನಗತ್ಯ ಎಣ್ಣೆ ತೆಗೆಯುವುದು ಮತ್ತು ಚರ್ಮವು ಶುದ್ಧ ಮತ್ತು ಒಣಗುವಂತೆ ಮಾಡುವುದು.

ಸ್ವಲ್ಪ ಮೊಶ್ಚಿರೈಸರ್ ಹಚ್ಚಿ

ಮಳೆಗಾಲದಲ್ಲಿ ಎಣ್ಣೆಯುಕ್ತ ಚರ್ಮವು ಸಾಮಾನ್ಯವಾಗಿರುವುದು. ಆದರೆ ಈ ಸಂದರ್ಭದಲ್ಲಿ ಕೂಡ ಮುಖಕ್ಕೆ ಮೊಶ್ಚಿರೈಸರ್ ಹಚ್ಚಿಕೊಳ್ಳಬೇಕು. ನೀವು ಈ ಸಂದರ್ಭದಲ್ಲಿ ತುಂಬಾ ಲಘುವಾಗಿರುವ ಮೊಶ್ಚಿರೈಸರ್ ಹಚ್ಚಿಕೊಳ್ಳಿ. ನೀವು ಈ ವೇಳೆ ಎಸ್ ಪಿಎಫ್ ಮ್ಯಾಟ್ ಮೊಶ್ಚಿರೈಸರ್ ಅಥವಾ ಮ್ಯಾಟ್ ಫೌಂಡೇಶನ್ ಬಲಸಿಕೊಳ್ಳಿ. ಮ್ಯಾಟ್ ಫೌಂಡೇಶನ್ ನಿಂದಾಗಿ ಕಾಂತಿಯು ಕಡಿಮೆ ಆಗುವುದು ಮತ್ತು ಒಣ ಚರ್ಮಕ್ಕೆ ಇದು ಬೇಕಿರುವಂತಹ ತೇವಾಂಶ ನೀಡುವುದು ಮತ್ತು ಅದನ್ನು ಶುದ್ಧೀಕರಿಸುವುದು. ಬಿಸಿಲಿಗೆ ನೀವು ಹೊರಗಡೆ ಹೋಗಿ ಬಂದ ಬಳಿಕ ಸಂಜೆ ವೇಳೆಗೆ ನೀವು ಮುಖವನ್ನು ಕ್ಲೆನ್ಸಿಂಗ್ ಟೋನರ್ ಬಳಸಿಕೊಂಡು ತೊಳೆಯಿರಿ ಮತ್ತು ಇದರ ಬಳಿಕ ರಾತ್ರಿ ವೇಳೆ ಚರ್ಮಕ್ಕೆ ತೇವಾಂಶ ನೀಡಲು ಮೊಶ್ಚಿರೈಸರ್ ಹಚ್ಚಿಕೊಳ್ಳಿ.

ಮೇಕಪ್ ನಡಿಗೆ ಸನ್ ಸ್ಕ್ರೀನ್ ಹಾಕಿಕೊಳ್ಳಿ

ನೀವು ಹೊರಗಡೆ ಬಿಸಿಲಿಗೆ ಹೋದರೆ ಆಗ ಬಿಸಿಲಿಗೆ ಚರ್ಮಕ್ಕೆ ಹಾನಿಯಾಗುವುದು ಖಚಿತವಾಗಿದೆ. ಚರ್ಮಕ್ಕೆ ಅತಿಯಾಗಿ ಮೈಯೊಡ್ಡಿದರೆ ಆಗ ನೆರಿಗೆ, ಕಲೆ, ಬಿಸಿಲಿನ ಕಲೆ, ಚರ್ಮಕ್ಕೆ ವಯಸ್ಸಾಗುವುದು ಮತ್ತು ಚರ್ಮದ ಕ್ಯಾನ್ಸರ್ ಕೂಡ ಬರಬಹುದು. ಅದಾಗ್ಯೂ, ಇದನ್ನು ತಡೆಯಲು ಮೇಕಪ್ ಹಚ್ಚಿಕೊಳ್ಳುವ ಮೊದಲು ನೀವು ಸ್ವಲ್ಪ ಸನ್ ಸ್ಕ್ರೀನ್ ಹಚ್ಚಿಕೊಳ್ಳಿ. ಇದು ಚರ್ಮವನ್ನು ರಕ್ಷಿಸುವುದು ಮತ್ತು ಕಾಂತಿಯುತ ಹಾಗೂ ಸುಂದರವಾಗಿ ಕಾಣಿಸುವುದು. ಪ್ರತಿನಿತ್ಯ 15-20 ಎಸ್ ಪಿಎಫ್ ಸಾಕಾಗುತ್ತದೆ. ಬಿಸಿಲಿಗೆ ನೀವು ಹೊರಹೋಗುತ್ತಲಿದ್ದರೆ ಆಗ ನೀವು ಎಸ್ ಪಿಎಫ್ 30-50 ಬಳಸಿಕೊಳ್ಳಿ.

ಆದಷ್ಟು ನೀರು ಕುಡಿಯಿರಿ

ಸರಿಯಾದ ಪ್ರಮಾಣದಲ್ಲಿ ನೀರು ಸೇವಿಸಿದರೆ ಆಗ ಚರ್ಮದ ವಿನ್ಯಾಸವು ಉತ್ತಮವಾಗುವುದು ಮತ್ತು ಚರ್ಮದ ಕಾಂತಿ ಕೂಡ ಸುಧಾರಣೆ ಆಗುವುದು. ಮಳೆಗಾಲದಲ್ಲೂ ನೀವು ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯಿರಿ. ಇದು ಚರ್ಮಕ್ಕೆ ಒಳ್ಳೆಯದು. ನೀರು ಚರ್ಮಕ್ಕೆ ಕಾಂತಿ ನೀಡುವುದು ಮಾತ್ರವಲ್ಲದೆ, ಚರ್ಮವು ಕಾಂತಿಯುತ ಹಾಗೂ ಯೌವನಯುತವಾಗಿ ಕಾಣಿಸುವುದು. ಸಾಕಷ್ಟು ನೀರು ಕುಡಿದರೆ ಅದರಿಂದ ಚರ್ಮದ ಆರೋಗ್ಯವು ಸುಧಾರಣೆ ಆಗುವುದು ಮತ್ತು ಕಾಂತಿ ಬರುವುದು.

English summary

Tired Of Oily Skin This Monsoon?Try this Simple tips

Humidity in the air and surroundings brings in with a lot of skin-related problems for all skin types. Those with oily skin face issues of acne and pimples due to extra moisture in the surroundings. For dry skin, even a tad bit of moisturisation in the night might give you pimples and acne. In short, don’t also get us started on with the skin problems that monsoon season bring with it in a package deal. If you suffer from oily skin, then you surely might know the difficulties faced. You are aware of the difficulty in preventing those many skin-related problems that you face.
X
Desktop Bottom Promotion