Just In
Don't Miss
- Automobiles
ಗಣರಾಜ್ಯೋತ್ಸವದ ಸಂಭ್ರಮಕ್ಕಾಗಿ ಮ್ಯಾಗ್ನೈಟ್ ಕಾರಿನೊಂದಿಗೆ ನಿಸ್ಸಾನ್ ಹೊಸ ಅಭಿಯಾನ ಘೋಷಣೆ
- Movies
ದಿಗ್ಗಜ ಗಾಯಕ ಎಸ್ಪಿ ಬಾಲಸುಬ್ರಹ್ಮಣ್ಯಂಗೆ ಪದ್ಮವಿಭೂಷಣ ಪ್ರಶಸ್ತಿ
- News
ಭಾರತದಲ್ಲಿ 19.5 ಲಕ್ಷ ಜನರಿಗೆ ಕೊರೊನಾವೈರಸ್ ಲಸಿಕೆ
- Sports
ಐಎಸ್ಎಲ್: ಬಾಗನ್ ಸೋಲಿಸುವ ಆತ್ಮವಿಶ್ವಾಸದಲ್ಲಿ ನಾರ್ಥ್ ಈಸ್ಟ್
- Finance
ಎಲ್&ಟಿ ತ್ರೈಮಾಸಿಕ ಆದಾಯ 5% ಏರಿಕೆ: ದಾಖಲೆಯ 2,467 ಕೋಟಿ ರೂಪಾಯಿ
- Education
Indian Air Force Recruitment 2021: ಏರ್ಮೆನ್ ಗ್ರೂಪ್ X & Y ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ತ್ವಚೆ ಸೌಂದರ್ಯಕ್ಕಾಗಿ ಕೊತ್ತಂಬರಿ ಸೊಪ್ಪಿನ ಜ್ಯೂಸ್ ಹೀಗೆ ಮಾಡಿ ಕುಡಿಯಿರಿ
ನಮ್ಮ ತ್ವಚೆ ಚೆನ್ನಾಗಿ ಕಾಣಲು ಸಾವಿರಾರು ರುಪಾಯಿ ಕ್ರೀಮ್, ಮಾಯಿಶ್ಚರೈಸರ್‌ಗಳಿಗೆ ಖರ್ಚು ಮಾಡುತ್ತೇವೆ. ಇವುಗಳು ನಿಮ್ಮ ತ್ವಚೆಯನ್ನು ಬಾಹ್ಯವಾಗಿ ರಕ್ಷಣೆ ಮಾಡುತ್ತವೆ. ಆದರೆ ನಿಮ್ಮ ತ್ವಚೆ ತುಂಬಾ ಕಳೆಯಿಂದ ಕೂಡಿರಬೇಕು, ಬೇಗನೆ ನೆರಿಗೆ ಬೀಳಬಾರದು, ವಯಸ್ಸು 40ರ ಪ್ರಾಯದಲ್ಲಿ 25-30 ಹರೆಯದವರಂತೆ ಕಾಣಬೇಕೆಂದು ನೀವು ಕೆಲವೊಂದು ಸೀಕ್ರೆಟ್ ರೆಸಿಪಿ ಅನುಸರಿಸಲೇಬೇಕು.
ತುಂಬಾ ಕಡಿಮೆ ಖರ್ಚಿನಲ್ಲಿ ನಿಮ್ಮ ತ್ವಚೆಯನ್ನು ಅದ್ಭುತವಾಗಿ ರಕ್ಷಣೆ ಮಾಡಬಹುದಾಗಿದೆ. ಅದರಲ್ಲಿ ಒಬ್ಬೊಬ್ಬರು ಒಂದೊಂದು ವಿಧಾನ ಅನುಸರಿಸುತ್ತಾರೆ. ಕೆಲವರು ಅರಿಶಿಣ ಹಾಕಿದ ನೀರು ಕುಡಿದರೆ ಇನ್ನು ಕೆಲವರು ಕೊತ್ತಂಬರಿ ಸೇವಿಸುತ್ತಾರೆ.
ಕೊತ್ತಂಬರಿ ತ್ವಚೆಯ ಸೌಂದರ್ಯ ಹೆಚ್ಚಿಸಲು ಎಷ್ಟೊಂದು ಪರಿಣಾಮಕಾರಿ ಎಂಬುವುದು ಬಹುಶಃ ನೀವೂ ಊಹಿಸಿರಕ್ಕಿಲ್ಲ, ಹೌದು ಕೊತ್ತಂಬರಿ ಸೊಪ್ಪು ಯೌವನದ ಕಳೆಯ ರಕ್ಷಣೆ ಮಾಡುತ್ತದೆ, ತ್ವಚೆಯಲ್ಲಿ ಬೇಗ ನೆರಿಗೆ ಬೀಳುವುದಿಲ್ಲ.
ನೀವು ನಿಮ್ಮ ತ್ವಚೆ ಸೌಂದರ್ಯದ ರಕ್ಷಣೆ ಮಾಡಲು ಬಯಸುವುದಾದರೆ ಹೀಗೆ ಮಾಡಿ ಸಾಕು:

ಕೊತ್ತಂಬರಿ ಸೊಪ್ಪು, ನಿಂಬೆ ರಸದ ಮ್ಯಾಜಿಕ್
ಈ ಹಸಿರು ಜ್ಯೂಸ್ ನಿಮ್ಮ ದೇಹಕ್ಕೆ ತುಂಬಾನೇ ಪ್ರಯೋಜನಕಾರಿ. ಕೊತ್ತಂಬರಿ ಸೊಪ್ಪು ಹಾಗೂ ನಿಂಬೆರಸದಲ್ಲಿ ವಿಟಮಿನ್ ಸಿ ಇದ್ದು ಇದು ದೇಹದಲ್ಲಿರುವ ಕಶ್ಮಲಗಳನ್ನು ಹೊರ ಹಾಕುತ್ತದೆ ಹಾಗೂ ತ್ವಚೆಯನ್ನು ಆಂತರಿಕವಾಗಿ ರಕ್ಷಣೆ ಮಾಡುತ್ತದೆ.

ಈ ಜ್ಯೂಸ್‌ನಿಂದ ತೂಕ ಇಳಿಕೆಯೂ ಉಂಟಾಗುವುದು
ಈ ಗ್ರೀನ್ ಜ್ಯೂಸ್ ತೂಕ ಇಳಿಕೆಗೂ ಸಹಕಾರಿ. ಈ ಜ್ಯೂಸ್ ನಿಮ್ಮ ದೇಹವನ್ನು ಒಳಗಿನಿಂದ ಶುದ್ಧ ಮಾಡುತ್ತೆ. ನಾವು ದಿನ ನಿತ್ಯ ವಾಯು ಮಾಲಿನ್ಯವಿರುವ ವಾತಾವರಣದಲ್ಲಿ ಓಡಾಡುತ್ತೇವೆ, ಇವು ನಮ್ಮ ತ್ವಚೆಯ ಮೇಲೆ ಪರಿಣಾಮ ಬೀರುತ್ತದೆ. ಈ ಜ್ಯೂಸ್ ತ್ವಚೆಗ ಹಾನಿಯುಂಟಾಗುವುದನ್ನು ತಡೆಗಟ್ಟುವಲ್ಲಿ ಸಹಕಾರಿಯಾಗಿದೆ.

ಕೊತ್ತಂಬರಿ ಸೊಪ್ಪು ಮತ್ತು ನಿಂಬೆ ರಸ
1 ಕಪ್ ಕೊತ್ತಂಬರಿ ಸೊಪ್ಪು
1 ಚಮಚ ನಿಂಬೆರ ಸ
ನೀರು

ಮಾಡುವ ವಿಧಾನ
ಜ್ಯೂಸ್ ಬ್ಲೆಂಡರ್‌ನಲ್ಲಿ ಮೊದಲು ಸೊಪ್ಪು ಹಾಕಿ ಸ್ವಲ್ಪ ನೀರು ಹಾಕಿ ಬ್ಲೆಂಡ್ ಮಾಡಿ, ನಂತರ ನಿಮಗೆ ಬೇಕಾದಷ್ಟು ನೀರು ಹಾಕಿ ಜ್ಯೂಸ್ ಮಾಡಿ.
* ರೆಡಿಯಾದ ಜ್ಯೂಸ್‌ಗೆ ನಿಂಬೆರಸ ಹಾಕಿ ಬೆಳಗ್ಗೆ ಕುಡಿಯಿರಿ.
ಪ್ರತಿದಿನ ಇದನ್ನು ಕುಡಿಯುತ್ತಿದ್ದರೆ ಕೆಲವೇ ದಿನಗಳಲ್ಲಿ ಬದಲಾವಣೆ ನಿಮಗೇ ಗೋಚರವಾಗುವುದು.