For Quick Alerts
ALLOW NOTIFICATIONS  
For Daily Alerts

ಮಹಿಳೆಯರೇ ಮಲಗುವ ಮುನ್ನ ನಿಮ್ಮ ಮುಖಕ್ಕೆ ಈ ರೀತಿ ಮಾಡಿ

|

ಸುಂದರವಾದ ಮುಖದೊಂದಿಗೆ ಪ್ರತಿದಿನ ಏಳಬೇಕು ಎಂಬುದು ಪ್ರತಿಯೊಬ್ಬ ಮಹಿಳೆಯ ಕನಸು. ಆದರೆ ನಿಮ್ಮ ಅಸಮರ್ಪಕ ತ್ವಚೆಯ ರಕ್ಷಣೆಯ ನಿಯಮವು ಈ ಕನಸನ್ನು ಹಾಳು ಮಾಡುತ್ತಿರಬಹುದು. ಇಂದಿನ ಜೀವನಶೈಲಿ, ತಿನ್ನುವ ಆಹಾರ, ಮಾಲಿನ್ಯ ಎಲ್ಲವೂ ನಿಮ್ಮ ತ್ವಚೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.

ಆದರೆ ಈ ಎಲ್ಲದರಿಂದ ನಿಮ್ಮ ತ್ವಚೆಯನ್ನು ರಕ್ಷಿಸುವ ಜವಾಬ್ದಾರಿಯೂ ನಿಮ್ಮ ಮೇಲೆಯೇ ಇದೆ. ಹಾಗಂತ ಅದಕ್ಕಾಗಿ ದುಬಾರಿ ಪಾರ್ಲರ್ ಗಳ ಹಾಗೂ ಚರ್ಮ ಚಿಕಿತ್ಸೆಯ ಮೊರೆ ಹೋಗುವ ಅವಶ್ಯಕತೆಯಿಲ್ಲ. ನಿಮ್ಮ ಮುಖದ ಕಾಂತಿಯನ್ನು ಹೆಚ್ಚಿಸಲು ಸರಳ ಪರಿಹಾರಗಳನ್ನು ಪಾಲಿಸಿದರೆ ಸಾಕು, ಉತ್ತಮ್ಮ ತ್ವಚೆಯ ಒಡೆಯರು ನೀವಾಗುತ್ತೀರಿ.

ಹಾಗಾದ್ರೆ ಬನ್ನಿ, ಈ ಸುಲಭವಾದ, ತ್ವರಿತ ತ್ವಚೆಯ ರಕ್ಷಣೆಯ ಸಲಹೆಗಳು ಯಾವ್ಯಾವುದು ಎಂಬುದನ್ನು ನೋಡಿಕೊಂಡು ಬರೋಣ.

ಫೇಶಿಯಲ್ ಸ್ಟೀಮ್ ಅಥವಾ ಮುಖಕ್ಕೆ ಶಾಖ ನೀಡುವುದು:

ಫೇಶಿಯಲ್ ಸ್ಟೀಮ್ ಅಥವಾ ಮುಖಕ್ಕೆ ಶಾಖ ನೀಡುವುದು:

ನಿಮ್ಮ ಬ್ಯುಸಿ ಸಮಯದಲ್ಲಿ ಮುಖದ ಚರ್ಮದ ರಕ್ಷಣೆಗೆ ಸಲೂನ್ ದಾರಿ ಹಿಡಿಯುವುದು ತುಸುಕಷ್ಟವೇ ಸರಿ. ಆದರೆ ಇದನ್ನು ನೀವೇ ಮನೆಯಲ್ಲಿ ಮಾಡಿಕೊಳ್ಳಬಹುದು.ಧೂಳನ್ನು ತೊಡೆದುಹಾಕಲು ಮತ್ತು ನಿಮ್ಮ ರಂಧ್ರಗಳನ್ನು ತೆರೆಯಲು ಉತ್ತಮ ಮಾರ್ಗವೆಂದರೆ ಸ್ಟೀಮ್ ಅಥವಾ ಹಬೆ. ಇದರಿಂದ ನಿಮ್ಮ ಮುಖದ ರಂಧ್ರದಲ್ಲಿರುವ ಕಲ್ಮಶಗಳು ಹೊರಹೋಗಿ, ನಿಮ್ಮ ಮುಖ ಹೊಳೆಯುವಂತೆ ಮಾಡುತ್ತದೆ.

ನಿಮ್ಮ ಮುಖವನ್ನು ತೊಳೆಯುವ ಮೊದಲು ಒಂದು ಅಥವಾ ಎರಡು ನಿಮಿಷ ಬಿಸಿ ಹಬೆ ತೆಗೆದುಕೊಳ್ಳಿ. ಇದನ್ನು ಅತಿಯಾಗಿಯೂ ಮಾಡಬೇಡಿ. ನೀವು ಬಿಸಿ ಟವೆಲ್ ಚಿಕಿತ್ಸೆಯನ್ನು ಸಹ ಬಳಸಬಹುದು. ನಿಮ್ಮ ಟವೆಲ್ ಅನ್ನು ಸುಮಾರು 2 ನಿಮಿಷಗಳ ಕಾಲ ಬಿಸಿ ಹಬೆಯ ಅಡಿಯಲ್ಲಿ ನೆನೆಸಿ, ತದನಂತರ ಹೆಚ್ಚುವರಿ ನೀರನ್ನು ಹಿಸುಕು ಹಾಕಿ. ನಂತರ ನಿಮ್ಮ ಮುಖವನ್ನು ಒರೆಸಿಕೊಳ್ಳಿ.

ನಿಮ್ಮ ಮುಖವನ್ನು ಎರಡು ಬಾರಿ ತೊಳೆಯಿರಿ:

ನಿಮ್ಮ ಮುಖವನ್ನು ಎರಡು ಬಾರಿ ತೊಳೆಯಿರಿ:

ತ್ವಚೆಯ ರಕ್ಷಣೆಯ ದಿನಚರಿಯಲ್ಲಿ ಅತ್ಯಂತ ನಿರ್ಲಕ್ಷಿಸಲ್ಪಟ್ಟ ಆದರೆ ಪ್ರಮುಖ ಹಂತವೆಂದರೆ ನಿಮ್ಮ ಮುಖವನ್ನು ತೊಳೆಯುವುದು. ನಮ್ಮ ಮುಖವು ದಿನವಿಡೀ ಬ್ಯಾಕ್ಟೀರಿಯಾ ಮತ್ತು ಮಾಲಿನ್ಯಕ್ಕೆ ಒಳಗಾಗುತ್ತದೆ. ಅದಕ್ಕಾಗಿ ಸಂಜೆ ಮುಖವನ್ನು ಸ್ವಚ್ಚಗೊಳಿಸುವ ಮೂಲಕ ಎಲ್ಲಾ ಕೊಳೆಯನ್ನು ತೊಳೆಯಿರಿ. ಸಂಜೆ ನೀವು ಮುಖವನ್ನು ತೊಳೆಯದಿರುವುದು ವಯಸ್ಸಾದ ಹಾಗೂ ಬ್ರೇಕೌಟ್ಸ್ಗಳಿಗೆ ಕಾರಣವಾಗಬಹುದು.

" ಡಬಲ್ ಕ್ಲೆನ್ಸಿಂಗ್" ಎಂಬ ವಿಧಾನವನ್ನು ಬಳಸಿಕೊಂಡು ನಿಮ್ಮ ಮುಖವನ್ನು ತೊಳೆಯಬಹುದು. ನಿಮ್ಮ ಮೇಕ್ಅಪ್ ತೆಗೆದುಹಾಕಲು ತೈಲ ಆಧಾರಿತ ಕ್ಲೆನ್ಸರ್ ಬಳಸಿ. ನಂತರ, ಉಳಿದಿರುವ ಯಾವುದೇ ಕಲ್ಮಶ ತೊಡೆದುಹಾಕಲು ನೀರು ಆಧಾರಿತ ಕ್ಲೆನ್ಸರ್ ಬಳಸಿ.

ಸ್ಯಾಲಿಸಿಲಿಕ್ ಆಮ್ಲವಿರುವ ಫೇಸ್ ವಾಶ್ ಬಳಸಿ:

ಸ್ಯಾಲಿಸಿಲಿಕ್ ಆಮ್ಲವಿರುವ ಫೇಸ್ ವಾಶ್ ಬಳಸಿ:

ಸ್ಯಾಲಿಸಿಲಿಕ್ ಆಮ್ಲವು ಬೀಟಾ ಹೈಡ್ರಾಕ್ಸಿ ಆಮ್ಲವಾಗಿದ್ದು, ಚರ್ಮದ ಮೇಲಿನ ಪದರದಿಂದ ಡೆಡ್ ಸೆಲ್ ಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಮೊಡವೆಗಳಿಗೆ ಮತ್ತು ಭವಿಷ್ಯದ ಚರ್ಮದ ಸಮಸ್ಯೆಗಳನ್ನು ತಡೆಗಟ್ಟಲು ಇದು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ನೀವು ಡಬಲ್ ಶುದ್ಧೀಕರಣ ವಿಧಾನವನ್ನು ಪ್ರಯತ್ನಿಸುತ್ತಿದ್ದರೆ, ನೀವು ಇದನ್ನು ಎರಡನೇ ಹಂತವಾಗಿ ಸೇರಿಸಿಕೊಳ್ಳಬಹುದು.

ಹೈಡ್ರೇಟಿಂಗ್ ಮಾಯಿಶ್ಚರೈಸರ್ ಬಳಸಿ:

ಹೈಡ್ರೇಟಿಂಗ್ ಮಾಯಿಶ್ಚರೈಸರ್ ಬಳಸಿ:

ರಾತ್ರಿಯ ಸಮಯವು ಚರ್ಮವನ್ನು ಸರಿಪಡಿಸುವ ಮತ್ತು ಹಿತಗೊಳಿಸಲು ಮೀಸಲಿಡಬೇಕು. ಡಬಲ್ ಶುದ್ಧೀಕರಣದ ನಂತರ, ಚರ್ಮವನ್ನು ಹೈಡ್ರೇಟಿಂಗ್ ಮಾಯಿಶ್ಚರೈಸರ್ನೊಂದಿಗೆ ಆರ್ಧ್ರಕಗೊಳಿಸುವ ಸಮಯ. ನೀವು ನಿದ್ದೆ ಮಾಡುವಾಗ ನಿಮ್ಮ ಚರ್ಮವು ರಿಪೇರಿಯಾಗುತ್ತದೆ. ಅದಕ್ಕಾಗಿಯೇ ನೀವು ಹೈಡ್ರೇಟಿಂಗ್ ಮಾಯಿಶ್ಚರೈಸರ್ ಅನ್ನು ಬಳಸಬೇಕು. ಇದು ರಕ್ತನಾಳಗಳನ್ನು ನಿರ್ಬಂಧಿಸುತ್ತದೆ ಮತ್ತು ರಂಧ್ರಗಳನ್ನು ಬಿಗಿಗೊಳಿಸುತ್ತದೆ, ಹಾಗೂ ಹೊಳೆಯುವ ತ್ವಚೆಯನ್ನು ನೀಡುತ್ತದೆ.

ಒಂದೇ ಕಡೆ ಮುಖ ಮಾಡಿ ಮಲಗಬೇಡಿ:

ಒಂದೇ ಕಡೆ ಮುಖ ಮಾಡಿ ಮಲಗಬೇಡಿ:

ಒಂದೇ ಬದಿ ಮುಖ ಮಾಡಿ ಮಲಗುವುದು ಹಾಗೂ ಉಲ್ಟಾ ಹೊಟ್ಟೆ ಮೇಲೆ ಮಲಗುವುದರಿಂದ ನಿಮ್ಮ ಮುಖದ ಮೇಲೆ ಒತ್ತಡ ಬೀಳುತ್ತದೆ. ಕೆಲವು ಅಧ್ಯಯನಗಳು ಇದು ಸುಕ್ಕುಗಳು ಮತ್ತು ವಯಸ್ಸಿಗೆ ಸಂಬಂಧಿಸಿದ ಇತರ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ತೋರಿಸಿದೆ. ಈ ಸಮಸ್ಯೆಗಳನ್ನು ತಡೆಗಟ್ಟಲು ಉತ್ತಮ ಮಾರ್ಗವೆಂದರೆ ಅಂಗಾತ ಮಲಗುವುದು. ಇದು ಕಣ್ಣುಗಳ ಡಾರ್ಕ್ ಸರ್ಕಲ್ಮತ್ತು ಪಫಿನೆಸ್ ಅನ್ನು ಅಭಿವೃದ್ಧಿಪಡಿಸುವ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ.

English summary

Things Women With Beautiful Skin Do Before Bed

If you too want a smother and radiant-looking skin, follow these tips before hitting the sack. These easy-to-do, quick skincare tips can do wonders, have a look
Story first published: Monday, January 11, 2021, 12:25 [IST]
X
Desktop Bottom Promotion