For Quick Alerts
ALLOW NOTIFICATIONS  
For Daily Alerts

ಲಾಕ್‌ಡೌನ್‌: ಮುಖದ ಕಾಂತಿ ಹೆಚ್ಚಿಸಲು ಕಿಚನ್‌ನಲ್ಲಿರುವ ಈ ವಸ್ತುಗಳೇ ಸಾಕು

|

ಲಾಕ್‌ಡೌನ್‌ನಿಂದಾಗಿ ಮೇಕಪ್, ಬ್ಯುಟಿ ಪಾರ್ಲರ್‌ ಇವುಗಳೆಲ್ಲಾ ಮರೆತೇ ಹೋದಂತಾಗಿದೆ. ಫೇಶಿಯಲ್, ಐಬ್ರೋ ಮಾಡಿಸಿ ಅಭ್ಯಾಸ ಇರುವವರಿಗೆ ಈಗ ಅಯ್ಯೋ ನನ್ನ ಮುಖದ ಕಳೆನೇ ಹೋಯ್ತು ಎಂದು ಅನಿಸುತ್ತಿರುತ್ತದೆ.

The Kitchen Ingredients For Glowing Skin During Lockdown

ಆದ್ರೆ ನೀವು ಮುಖದ ಕಾಂತಿ ಕಡಿಮೆಯಾಯ್ತು, ತ್ವಚೆ ಮಂಕಾಗಿದೆ ಎಂದು ಅಷ್ಟೊಂದು ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಏಕೆಂದರೆ ಮುಖದ ಕಾಂತಿಯುತವಾಗಿ ಹೊಳೆಯಲು ಬ್ಯೂಟಿ ಪಾರ್ಲರ್‌ಗಗೇ ಹೋಗಿ ಫೇಶಿಯಲ್, ಮಸಾಜ್‌ ಮಾಡಬೇಕಾಗಿಲ್ಲ. ನಮ್ಮ ಮನೆಯಲ್ಲಿಯೇ ಅದರಲ್ಲೂ ಕಿಚನ್‌ನಲ್ಲಿ ಅನೇಕ ಸೌಂದರ್ಯವರ್ಧಕ ವಸ್ತುಗಳಿರುತ್ತವೆ. ಅವುಗಳನ್ನು ಬಳಸುವುದು ಹೇಗೆ ಎಂದು ಗೊತ್ತಾದರೆ ನಿಮ್ಮ ಸೌಂದರ್ಯ ವೃದ್ಧಿಸಬಹುದು ಅಲ್ಲದೆ ಬ್ಯೂಟಿ ಪಾರ್ಲರ್‌ಗೆ ಸುರಿಯುವ ದುಡ್ಡು ಕೂಡ ಉಳಿತಾಯವಾಗುತ್ತದೆ.

ಇಲ್ಲಿ ನಾವು ಕಿಚನ್ ಸಾಮಗ್ರಿಗಳಿಂದ ತ್ವಚೆ ಅಂದ ಹೆಚ್ಚಿಸುವ ಟಿಪ್ಸ್ ನೀಡಿದ್ದೇವೆ ನೋಡಿ:

ಟೊಮೆಟೊ:

ಟೊಮೆಟೊ:

ಪಾರ್ಲರ್‌ಗೆ ಹೋಗಿ ಬ್ಲೀಚಿಂಗ್ ಮಾಡಿಸುವ ಅಭ್ಯಾಸ ಇರುವವರು ಇದೀಗ ಟೊಮೆಟೊ ಬಳಸಿ ಬ್ಲೀಚಿಂಗ್ ಮಾಡಿಸಿದಷ್ಟೇ ಅಂದವಾದ ತ್ವಚೆ ಪಡೆಯಬಹುದು. ಇನ್ನು ಟೊಮೆಟೊ ಬಳಸುವುದರಿಂದ ಮತ್ತೊಂದು ಪ್ರಯೋಜನವೆಂದರೆ ಇದರಿಂದ ಯಾವುದೇ ಅಡ್ಡಪರಿಣಾಮ ಉಂಟಾಗುವುದಿಲ್ಲ. ಅಲ್ಲದೆ ಟೊಮೆಟೊ ತ್ವಚೆಯಲ್ಲಿ ಬೇಗನೆ ನೆರಿಗೆ ಬೀಳುವುದನ್ನು ತಡೆಗಟ್ಟುತ್ತದೆ.

ಇದನ್ನು ಬಳಸುವುದು ಹೇಗೆ?

  • ಟೊಮೆಟೊವನ್ನು ಕತ್ತರಿಸಿ ಅದನ್ನು ಮುಖಕ್ಕೆ ಹಚ್ಚಿ 20 ನಿಮಿಷ ಬಿಡಿ, ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ.
  • ಒಂದು ಟೊಮೆಟೊ ರಸ, 1 ಚಮಚ ಮೊಸರು, 1 ಚಮಚ ಜೇನು ಮಿಶ್ರ ಮಾಡಿ ಮುಖಕ್ಕೆ ಹಚ್ಚಿ ಅರ್ಧ ಗಂಟೆ ಬಿಟ್ಟು ಮುಖ ತೊಳೆಯಿರಿ. ಮುಖ ಫ್ರೆಶ್‌ ಆಗಿ ಕಾಣುವುದು.
  • ಹಣ್ಣುಗಳು

    ಹಣ್ಣುಗಳು

    ಹಣ್ಣುಗಳು ತ್ವಚೆಯನ್ನು ದೇಹದ ಒಳಗಿನಿಂದ ಹಾಗೂ ಹೊರಗಿನಿಂದ ಆರೈಕೆ ಮಾಡುತ್ತದೆ. ಇನ್ನು ಸನ್‌ಟ್ಯಾನ್‌, ಪಿಗ್‌ಮೆಂಟೆಷನ್ ಉಂಟಾಗಿದ್ದರೆ ಅದನ್ನು ಹೋಗಲಾಡಿಸುತ್ತದೆ.

    ಬಳಸುವುದು ಹೇಗೆ?

    ಮನೆಗೆ ತಿನ್ನಲು ತಂದ ಹಣ್ಣಿನಿಂದ ಒಂದು ಪೀಸ್‌ ತೆಗೆದು ಫ್ರಿಡ್ಜ್‌ನಲ್ಲಿಡಿ, ನಂತರ ಅದನ್ನು ಮ್ಯಾಶ್‌ ಮಾಡಿ ಮುಖಕ್ಕೆ ಹಚ್ಚಿ. ಪಪ್ಪಾಯಿ, ಸ್ಟಾಬೆರ್ರಿ, ಮಾವಿನಹಣ್ಣು ಇವೆಲ್ಲಾ ಮುಖದ ತ್ವಚೆಯ ಕಾಂತಿ ಹೆಚ್ಚಿಸುವಲ್ಲಿ ಸಹಕಾರಿ.

    ಅರಿಶಿಣ

    ಅರಿಶಿಣ

    ಅರಿಶಿಣವನ್ನು ಸೌಂದರ್ಯವರ್ಧಕವಾಗಿ ಬಳಸುವುದು ನಿಮಗೆ ಗೊತ್ತೇ ಇದೆ. ಇದು ಮೊಡವೆ ನಿಯಂತ್ರಿಸುತ್ತದೆ, ಮುಖದ ಕಲೆಗಳನ್ನು ಹೋಗಲಾಡಿಸುತ್ತದೆ. ಅಲ್ಲದೆ ತ್ವಚೆಯಲ್ಲಿ ಕೊಲೆಜಿನ್ ಉತ್ಪತ್ತಿಗೆ ಸಹಕಾರಿ. ಮುಖಕ್ಕೆ ಅರಿಶಿಣ ಹಚ್ಚಿ ಅರ್ಧ ಗಂಟೆ ಬಿಟ್ಟು ಸ್ನಾನ ಮಾಡಿದರೆ ತ್ವಚೆ ಕಾಂತಿ ಹೆಚ್ಚುವುದು.

    ಹೊಳೆಯುವ ತ್ವಚೆಗೆ ಅರಿಶಿಣ ಬಳಸುವುದು ಹೇಗೆ?

    ಅರ್ಧ ಚಮಚ ಅರಿಶಿಣ, 1 ಚಮಚ ಜೇನು, 1 ಚಮಚ ಮೊಸರು ಮಿಶ್ರ ಮಾಡಿ ಪೇಸ್ಟ್ ರೀತಿ ಮಾಡಿ ಮುಖಕ್ಕೆ ಹಚ್ಚಿ. ನಂತರ ಅರ್ಧ ಗಂಟೆಯ ಬಳಿಕ ಮುಖ ತೊಳೆಯಿರಿ. ಈ ಫೇಸ್‌ ಪ್ಯಾಕ್‌ ಮುಖಕ್ಕೆ ವಾರದಲ್ಲಿ 3-4 ಬಾರಿ ಹಚ್ಚಿದರೆ ನಿಮಗೆ ಒಳ್ಳೆಯ ಫಲಿತಾಂಶ ದೊರೆಯುವುದು.

    ನಿಂಬೆಹಣ್ಣು

    ನಿಂಬೆಹಣ್ಣು

    ನಿಂಬೆಹಣ್ಣು ತ್ವಚೆಯ ಬಿಳುಪು ಹೆಚ್ಚಿಸುವ ಗುಣ ಹೊಂದಿದೆ. ಇದು ತ್ವಚೆ ಹಾನಿ ಮಾಡುವ ಬ್ಯಾಕ್ಟಿರಿಯಾಗಳನ್ನು ಹೊರಗಿಡುತ್ತದೆ, ಅಲ್ಲದೆ ಮುಖದಲ್ಲಿ ಕಪ್ಪು ಕಲೆಗಳಿದ್ದರೆ ಅದನ್ನು ಹೋಗಲಾಡಿಸಿ.

    ನಿಂಬೆಹಣ್ಣು ಬಳಸುವುದು ಹೇಗೆ?

    ಒಂದು ಚಮಚ ನಿಂಬೆರಸಕ್ಕೆ 1 ಚಮಚ ಜೇನು ಹಾಕಿ ಇದನ್ನು ಮುಖಕ್ಕೆ ಹಚ್ಚಿ 10-20 ನಿಮಿಷ ಬಿಟ್ಟು ಉಗುರು ಬೆಚ್ಚಗಿನ ನೀರಿನಲ್ಲಿ ಮುಖ ತೊಳೆಯಿರಿ. ನಂತರ ಮೃದು ಟವಲ್‌ನಿಂದ ಮುಖ ಒರೆಸಿ. ಇದನ್ನು ವಾರದಲ್ಲಿ 1-2 ಬಾರಿ ಮಾಡಿದರೆ ಸಾಕು.

     ಜೇನು

    ಜೇನು

    ಜೇನು ಅತ್ಯುತ್ತಮವಾದ ಸೌಂದರ್ಯವರ್ಧಕವಾಗಿದೆ. ಕೂದಲು ಹಾಗೂ ತ್ವಚೆಯ ಹೊಳಪು ಹೆಚ್ಚಿಸಲು ಇದನ್ನು ಬಳಸುತ್ತೇವೆ. ಇದು ತ್ವಚೆ ಮೃದುವಾಗುವಂತೆ ಮಾಡಿ, ತ್ವಚೆಯ ಕಾಂತಿ ಹೆಚ್ಚಿಸುವುದು.

    ಜೇನು ಬಳಸುವುದು ಹೇಗೆ?

    ಮಲಗುವ ಮುನ್ನ ಜೇನನ್ನು ಮುಖಕ್ಕೆ ಹಚ್ಚಿ ಅರ್ಧ ಗಂಟೆ ಬಿಟ್ಟು ಮುಖ ತೊಳೆದು ಮಲಗಿ. ಈ ರೀತಿ ಪ್ರತಿದಿನ ಮಾಡುತ್ತಾ ಬನ್ನಿ.

    ಸೌತೆಕಾಯಿ

    ಸೌತೆಕಾಯಿ

    ಈ ಬೇಸಿಗೆಗೆ ತ್ವಚೆಯನ್ನು ತಂಪಾಗಿಸುವಲ್ಲಿ ಸೌತೆಕಾಯಿ ಸಹಕಾರಿ. ಇದು ಸನ್‌ಟ್ಯಾನ್ ಕೂಡ ಹೋಗಲಾಡಿಸುತ್ತದೆ. ಮುಖಕ್ಕೆ ಹೊಳಪು ದೊರೆಯುವುದು.

    ಸೌತೆಕಾಯಿ ಬಳಸುವುದು ಹೇಗೆ?

    ಸೌತೆಕಾಯಿಯ ಸಿಪ್ಪೆ ಸುಲಿದು ಅದನ್ನು ಪೇಸ್ಟ್ ಮಾಡಿ, ಅದನ್ನು ಹಾಗೇ ಹಚ್ಚಬಹುದು, ಇಲ್ಲಾ ಸ್ವಲ್ಪ ಅರಿಶಿಣ ಸೇರಿಸಿ ಮುಖಕ್ಕೆ ಹಚ್ಚಿ ಅರ್ಧ ಗಂಟೆ ಮುಖ ತೊಳೆಯಿರಿ. ಹೀಗೆ ಮಾಡುವುದರಿಂದ ತ್ವಚೆ ಕಾಂತಿಯುತವಾಗಿರುತ್ತದೆ.

    ಕಾಫಿ

    ಕಾಫಿ

    ಮುಖದ ನಿರ್ಜೀವ ತ್ವಚೆ ತೆಗೆಯುವಲ್ಲಿ, ಮುಖಕ್ಕೆ ಹೊಳಪು ನೀಡುವಲ್ಲಿ ಕಾಫಿ ಸ್ಕ್ರಬ್ ತುಂಬಾ ಸಹಕಾರಿ. ಅಲ್ಲದೆ ಕಾಫಿ ಸ್ಕ್ರಬ್ ತ್ವಚೆಯನ್ನು ಅತಿಯಾದ ಬಿಸಿಲಿನಲ್ಲಿ ತ್ವಚೆಗೆ ರಕ್ಷಣೆ ನೀಡುತ್ತದೆ.

    ಕಾಫಿ ಸ್ಕ್ರಬ್ ಮಾಡುವುದು ಹೇಗೆ?

    ಒಂದು ಚಮಚ ಕಾಫಿ ಪುಡಿ, ಒಂದು ಚಮಚ ಜೇನು ಸೇರಿಸಿ ಮಿಶ್ರ ಮಾಡಿ ಮುಖಕ್ಕೆ ಹಚ್ಚಿ ಅರ್ಧ ಗಂಟೆ ಬಿಟ್ಟು ಮುಖ ತೊಳೆಯಿರಿ. ಇದನ್ನು ವಾರಕ್ಕೊಮ್ಮೆ ಮಾಡಿದರೆ ತ್ವಚೆ ಎಕ್ಸ್‌ಪೋಲೆಟ್‌ ಮಾಡಿದಂತಾಗುವುದು ಅಂದರೆ ನಿರ್ಜೀವ ತ್ವಚೆ ಹೋಗಲಾಡಿಸಿ, ಬ್ಲ್ಯಾಕ್‌ಹೆಡ್ಸ್, ವೈಟ್ ಹೆಡ್ಸ್ ಸಮಸ್ಯೆ ಹೋಗಲಾಡಿಸಬಹುದು.

     ಗ್ರೀನ್ ಟೀ

    ಗ್ರೀನ್ ಟೀ

    ಗ್ರೀನ್ ಟೀ ಮಾಡಿ ಕುಡಿದ ಬಳಿಕ ಅದರ ಪುಡಿ ಬಿಸಾಡಬೆಡಿ. ಅದಕ್ಕೆ ಸ್ವಲ್ಪ ಜೇನು ಹಾಕಿ ಮಿಶ್ರ ಮಾಡಿ ಮುಖಕ್ಕೆ ಹಚ್ಚಿ. ಇದು ಮುಖಕ್ಕೆ ಹೊಳಪು ನೀಡುವುದು, ಕಲೆ ಹೋಗಲಾಡಿಸುವಲ್ಲಿಯೂ ಸಹಕಾರಿ.

    ಗ್ರೀನ್ ಟೀ ತ್ವಚೆ ಸೌಂದರ್ಯ ಹೆಚ್ಚಿಸಲು ಹೇಗೆಲ್ಲಾ ಬಳಸಬಹುದು?

    • ಗ್ರೀನ್ ಟೀಗೆ ನಿಂಬೆರಸ ಮಿಶ್ರ ಮಾಡಿ ಹಚ್ಚಬಹುದು.
    • ಗ್ರೀನ್ ಟೀಗೆ ಸಕ್ಕರೆ ಮಿಶ್ರ ಮಾಡಿ ಸ್ಕ್ರಬ್ ಮಾಡಬಹುದು.
English summary

The Kitchen Ingredients For Glowing Skin During Lockdown

while you are in the kitchen getting food ready, whip you these nourishing remedies on the side to add a natural glow to your skin. Let's take a look at these ingredients and how to use them.
Story first published: Tuesday, April 28, 2020, 13:24 [IST]
X
Desktop Bottom Promotion