For Quick Alerts
ALLOW NOTIFICATIONS  
For Daily Alerts

ಮುಖದಲ್ಲಿ ರಂಧ್ರಗಳು ಬೀಳಲು 5 ಪ್ರಮುಖ ಕಾರಣಗಳು

|

ಹದಿಹರೆಯದ ಪ್ರಾಯದಲ್ಲಿ ಮುಖದಲ್ಲಿ ಬೀಳುವ ರಂಧ್ರಗಳ ಬಗ್ಗೆ ಅಷ್ಟೇನು ತಲೆಕೆಡಿಸಿಕೊಳ್ಳುವುದಿಲ್ಲ. ಏಕೆಂದರೆ ಆ ಪ್ರಾಯದಲ್ಲಿ ಮುಖದ ರಂಧ್ರಗಳು ಎದ್ದು ಕಾಣುವುದಿಲ್ಲ, ಆದರೆ ವಯಸ್ಸು 20 ದಾಟುತ್ತಿದ್ದಂತೆ ಮುಖದಲ್ಲಿ ರಂಧ್ರಗಳು ಎದ್ದು ಕಾಣಲಾರಂಭಿಸುತ್ತದೆ. ವಯಸ್ಸು ಹೆಚ್ಚಾಗುತ್ತಿದ್ದಂತೆ ಆ ರಂಧ್ರಗಳು ಎದ್ದು ಕಾಣಲಾರಂಭಿಸುತ್ತದೆ. ತ್ವಚೆ ಆರೈಕೆ ಕಡೆಗೆ ಸರಿಯಾಗಿ ಗಮನ ನೀಡದಿದ್ದರೆ ಈ ರೀತಿ ಉಂಟಾಗುತ್ತದೆ.

reasons for pores in skin

ಈ ರೀತಿ ರಂಧ್ರಗಳು ಬಿದ್ದಾಗ ಮುಖ ನುಣಪಾಗಿ ಕಾಣುವುದಿಲ್ಲ, ರಂಧ್ರಗಳಲ್ಲಿ ಕೊಳೆ ಸೇರಿಕೊಂಡರೆ ಮುಖ ಮಂಕಾಗಿ ಕಾಣುವುದು, ಇನ್ನು ಮುಖದಲ್ಲಿರುವ ರಂಧ್ರಗಳಿಂದಾಗಿ ಮುಖ ಜಿಡ್ಡು-ಜಿಡ್ಡಾಗಿ ಕಾಣುವುದು. ಇಲ್ಲಿ ನಾವು ಮುಖದಲ್ಲಿ ರಂಧ್ರಗಳು ಬೀಳಲು ಕಾರಣವೇನು ಹಾಗೂ ಅದನ್ನು ತಡೆಗಟ್ಟುವುದು ಹೇಗೆ ಎಂಬ ಟಿಪ್ಸ್ ನೀಡಿದ್ದೇವೆ ನೋಡಿ:

1. ಎಣ್ಣೆ ತ್ವಚೆ:

1. ಎಣ್ಣೆ ತ್ವಚೆ:

ಮುಖದಲ್ಲಿ ರಂಧ್ರಗಳು ಬೀಳಲು ಪ್ರಮುಖ ಕಾರಣವೆಂದರೆ ಎಣ್ಣೆ ತ್ವಚೆ. ನಮ್ಮ ತ್ವಚೆಯು ಎಣ್ಣೆಯಂಶ ಉತ್ಪತ್ತಿ ಮಾಡುತ್ತದೆ, ಇದು ತ್ವಚೆಯ ಮಾಯಿಶ್ಚರೈಸರ್ ಕಾಪಾಡಿ, ತ್ವಚೆಯನ್ನು ಆರೋಗ್ಯವಾಗಿಡುವಂತೆ ಮಾಡುತ್ತದೆ. ಆದರೆ ಯಾವಾಗ ಅಗ್ಯತಕ್ಕಿಂತ ಹೆಚ್ಚಾಗಿ ಎಣ್ಣೆಯಂಶ ಉತ್ಪಾದನೆ ಮಾಡುತ್ತದೆಯೋ ಆಗ ಮುಖ ಜಿಡ್ಡು-ಜಿಡ್ಡಾಗುವುದು, ದೂಳು ಮುಖದಲ್ಲಿ ಕೂರುತ್ತದೆ. ದೂಳಿನ ಕಣಗಳು ತ್ವಚೆಯ ಚಿಕ್ಕ-ಚಿಕ್ಕ ರಂಧ್ರಗಳಲ್ಲಿ ಕೂರುತ್ತವೆ, ಹೀಗೆ ಕೊಳೆ ತುಂಬಿ ಕ್ರಮೇಣ ದೊಡ್ಡ-ದೊಡ್ಡ ರಂಧ್ರಗಳಾಗಿ ಎದ್ದು ಕಾಣುವಂತಾಗುವುದು.

2. ಎಣ್ಣೆ ತ್ವಚೆಗೆ ಮಾಯಿಶ್ಚರೈಸರ್ ಹಚ್ಚುವುದು

2. ಎಣ್ಣೆ ತ್ವಚೆಗೆ ಮಾಯಿಶ್ಚರೈಸರ್ ಹಚ್ಚುವುದು

ಎಣ್ಣೆ ತ್ವಚೆ ಇರುವವರು ಫೇಸ್‌ವಾಶ್‌ ಹಾಗೂ ಮಾಯಿಶ್ಚರೈಸರ್ ಅನ್ನು ಎಣ್ಣೆ ತ್ವಚೆಗೆ ಸೂಕ್ತವಾಗುವುದನ್ನು ನೋಡಿಕೊಂಡುಕೊಳ್ಳಬೇಕು. ಕೆಲವೊಂದು ಮಾಯಿಶ್ಚರೈಸರ್‌ಗಳು ಡ್ರೈ ಸ್ಕಿನ್‌ ತಯಾರಿಸಲ್ಪಟ್ಟಿರುತ್ತದೆ. ಇದನ್ನು ಎಣ್ಣೆ ತ್ವಚೆಯವರು ಮುಖಕ್ಕೆ ಹಚ್ಚಿದರೆ ಮುಖದಲ್ಲಿ ಎಣ್ಣೆಯಂಶ ಅಧಿಕವಾಗಿ ರಂಧ್ರಗಳ ಸಮಸ್ಯೆ ಹೆಚ್ಚಾಗುವುದು. ಎಣ್ಣೆ ತ್ವಚೆಯವರು ಮಾಯಿಶ್ಚರೈಸರ್ ಬಳಸುವುದಕ್ಕಿಂತ ಎಣ್ಣೆ ತ್ವಚೆಗೆ ಸೂಕ್ತವಾದ ಕ್ರೀಮ್ ಬಳಸುವುದು ಒಳ್ಳೆಯದು.

3. ಬಿಸಿಲಿನಲ್ಲಿ ತುಂಬಾ ಹೊತ್ತು ಓಡಾಡುವುದು

3. ಬಿಸಿಲಿನಲ್ಲಿ ತುಂಬಾ ಹೊತ್ತು ಓಡಾಡುವುದು

ನೀವು ಬಿಸಿಲಿನಲ್ಲಿ ತುಂಬಾ ಹೊತ್ತು ಓಡಾಡುತ್ತಿದ್ದರೆ ಇದರಿಂದ ಕೂಡ ಮುಖದಲ್ಲಿರುವ ರಂಧ್ರಗಳು ಹೆಚ್ಚಾಗುವುದು. ಸೂರ್ಯನ ಕಿರಣಗಳಿಂದಾಗಿ ಸೂಕ್ಷ್ಮ ತ್ವಚೆಗೆ ಹಾನಿಯುಂಟಾಗಿ ಇದರಿಂದಾಗಿ ಕೂಡ ಮುಖದಲ್ಲಿ ರಂಧ್ರಗಳು ಹೆಚ್ಚುವುದು. ತ್ವಚೆ ತನ್ನ ತಾಜಾತನ ಕಾಪಾಡುವ ಸಾಮಾರ್ಥ್ಯ ಕೂಡ ಕಡಿಮೆಯಾಗುವುದು. ಬಿಸಿಲಿನಲ್ಲಿ ಕೆಲಸ ಮಾಡುವಾಗ ಸನ್‌ಸ್ಕ್ರೀನ್ ಲೋಷನ್ ಬಳಸಿ.

4. ಮುಖವನ್ನು ಜಿವುಟುವುದು

4. ಮುಖವನ್ನು ಜಿವುಟುವುದು

ತ್ವಚೆ ಆರೈಕೆ ಸರಿಯಾಗಿ ಮಾಡದೇ ಇರುವುದು ಕೂಡ ಮುಖದಲ್ಲಿ ರಂಧ್ರಗಳು ಬೀಳಲು ಕಾರಣವಾಗಿದೆ. ಮುಖದಲ್ಲಿ ಕೊಳೆ ಕೂರಲು ಬಿಡುವುದು, ಬ್ಲ್ಯಾಕ್‌ ಹೆಡ್ಸ್ ಬಳಸದೇ ಇರುವುದು, ಹೆಚ್ಚಾಗಿ ಸ್ಕ್ರಬ್ಬಿಂಗ್ ಮಾಡುವುದು ಇವೆಲ್ಲಾ ಕೂಡ ಮುಖದಲ್ಲಿ ರಂಧ್ರಗಳು ಬೀಳಲು ಕಾರಣವಾಗಿದೆ. ಮುಖದಲ್ಲಿ ವೈಟ್‌ ಹೆಡ್ಸ್, ಬ್ಲ್ಯಾಕ್ ಹೆಡ್ಸ್ ಬಿದ್ದರೆ ಅದನ್ನು ತೆಗೆಯಬೇಕು, ಇಲ್ಲದಿದ್ದರೆ ಮುಖದಲ್ಲಿ ರಂಧ್ರಗಳು ಬೀಳುವುದು. ಕ್ಲೆನ್ಸಿಂಗ್, ಎಕ್ಸ್‌ಫೋಲೆಟ್ ಮಾಡುವುದರಿಂದ ತ್ವಚೆ ಆರೋಗ್ಯ ಕಾಪಾಡಬಹುದು.

How To Effectively Work From Home | Boldsky Kannada
5.ವಂಶವಾಹಿ ಸಮಸ್ಯೆ

5.ವಂಶವಾಹಿ ಸಮಸ್ಯೆ

ಕೆಲವೊಮ್ಮೆ ಈ ಸಮಸ್ಯೆ ವಂಶವಾಹಿಯಾಗಿಯೂ ಬರುವುದು. ಮೊಡವೆ ಸಮಸ್ಯೆ ಹೆಚ್ಚಾದಾಗ ಈ ರೀತಿಯ ರಂದ್ರಗಳು ಬೀಳುವುದು ಸಹಜ. ಮೊಡವೆ ನಿಯಂತ್ರಣಕ್ಕೆ ಕ್ಲೆನ್ಸಿಂಗ್ ಮಾಡಬೇಕು, ಮುಖದಲ್ಲಿ ಎಣ್ಣೆಯಂಶ ಕೂರದಂತೆ ನೋಡಿಕೊಳ್ಳಬೇಕು. ಮೊಡವೆ ಬರುವಾಗಲೇ ತ್ವಚೆ ತಜ್ಞರನ್ನು ಕಂಡು ಸೂಕ್ತ ಚಿಕಿತ್ಸೆ ತೆಗೆದುಕೊಳ್ಳಬೇಕು.

English summary

THE MAJOR REASONS THAT YOU HAVE LARGE PORES

If you have encountered large pores yourself and are wondering the reason behind it, we have complied 5 major causes of large pores for you.
Story first published: Thursday, March 19, 2020, 13:45 [IST]
X
Desktop Bottom Promotion