For Quick Alerts
ALLOW NOTIFICATIONS  
For Daily Alerts

ಮುಖದಲ್ಲಿ ಸುಕ್ಕು ತಡೆಗಟ್ಟಲು ಬಾದಾಮಿಯಷ್ಟೇ ಸಾಕು ಎಂದಿದೆ ಅಧ್ಯಯನ

|

ಯಾರಿಗೆ ತಾನೆ ಮುಖದಲ್ಲಿ ನೆರಿಗೆ ಬೀಳುವುದು ಇಷ್ಟವಾಗುತ್ತದೆ. ಆದರೆ ವಯಸ್ಸಾದಂತೆ ನೆರಿಗೆ ಬೀಳುವುದು ಪ್ರಕೃತಿ ನಿಯಮ. ಅದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಆದರೆ ನೀವು ನಿಮ್ಮ ಸೌಂದರ್ಯದ ಕಡೆಗೆ ಸ್ವಲ್ಪ ಕಾಳಜಿ ಮಾಡಿದರೆ ನೆರಿಗೆ ಬೀಳುವುದನ್ನು ಮುಂದೂಡಬಹುದು. 30 ದಾಟುತ್ತಿದ್ದಂತೆ ಮುಖದಲ್ಲಿ ವಯಸ್ಸು ಕಾಣಿಸುವ ಬದಲು 45 ದಾಟಿದರೂ 30ರ ಸೌಂದರ್ಯವನ್ನು ಹೊಂದಬಹುದು. ಅದಕ್ಕೆ ಬಾದಾಮಿ ತುಂಬಾ ಸಹಾಯ ಮಾಡುತ್ತದೆ.

 Almonds Can Help To Avoid Wrinkles

ಪ್ರತಿ ದಿನ 3-4 ಬಾದಾಮಿ ತಿನ್ನುವುದರಿಂದ ಅನೇಕ ಆರೋಗ್ಯಕರ ಹಾಗೂ ಸೌಂದರ್ಯವರ್ಧಕ ಗುಣಗಳನ್ನು ಪಡೆಯಬಹುದು. ಇದು ಕೊಲೆಸ್ಟ್ರಾಲ್ ಹಾಗೂ ದೇಹದ ರಕ್ತದಲ್ಲಿ ಸಕ್ಕರೆಯಂಶವನ್ನು ಕಾಪಾಡುತ್ತದೆ. ಬಾದಾಮಿಯನ್ನು ಇತರ ಸ್ನ್ಯಾಕ್ಸ್ ಬದಲಿಗೆ ದಿನಾ ಸೇವಿಸುವುದರಿಂದ ತ್ವಚೆ ಸೌಂದರ್ಯಕ್ಕೆ ತುಂಬಾ ಒಳ್ಳೆಯದೆಂದು ಸಂಶೋಧನೆಯಿಂದ ದೃಢ ಪಟ್ಟಿದೆ. ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದಲ್ಲಿ ನಡೆಸಿದ ಅಧ್ಯಯನದಿಂದ ಪ್ರತಿದಿನ ಬಾದಾಮಿ ತಿನ್ನುವುದರಿಂದ ಅಕಾಲಿಕ ನೆರಿಗೆ ಬೀಳುವುದಿಲ್ಲ ಎಂಬ ಅಂಶ ದೃಢಪಟ್ಟಿದೆ. ಈ ಅಧ್ಯಯನದಲ್ಲಿ ಭಾಗವಹಿಸಿದವರಿಗೆ ಇತರ ಸ್ನ್ಯಾಕ್ಸ್ ಬದಲಿಗೆ ಬಾದಾಮಿ ತಿನ್ನುವಂತೆ ಹೇಳಲಾಯಿತು. ಅವರ ತ್ವಚೆಯಲ್ಲಿ ಆಗುತ್ತಿರುವ ಬದಲಾವಣೆಯನ್ನು ಪ್ರತಿವಾರ ಗಮನಿಸುತ್ತಿದ್ದರು. 16 ವಾರಗಳ ಬಳಿಕ ನೋಡಿದರೆ ಅವರ ತ್ವಚೆ ಕಾಂತಿ ಹೆಚ್ಚಾಗಿದ್ದು ದೃಢಪಟ್ಟಿತು.

 ನೆರಿಗೆ ಬೀಳುವುದನ್ನು ತಡೆಗಟ್ಟುತ್ತದೆ

ನೆರಿಗೆ ಬೀಳುವುದನ್ನು ತಡೆಗಟ್ಟುತ್ತದೆ

ಅಕಾಲಿಕ ನೆರಿಗೆ ತಡೆಗಟ್ಟುವಲ್ಲಿ ಬಾದಾಮಿ ತುಂಬಾ ಪ್ರಯೋಜನಕಾರಿಯಾಗಿದೆ. ಇದರಲ್ಲಿರುವನ ನಾರಿನಂಶ, ಒಮೆಗಾ 3 ಕೊಬ್ಬಿನಂಶ, ಒಮೆಗಾ 6 ಕೊಬ್ಬಿನಂಶ, ಸತು, ಕ್ಯಾಲ್ಸಿಯಂ, ಮೆಗ್ನಿಷ್ಯಿಯಂ, ವಿಟಮಿನ್ ಇ ಹಾಗೂ ಆ್ಯಂಟಿ ಆಕ್ಸಿಡೆಂಟ್ ಇದ್ದು ದೇಹದಲ್ಲಿರುವ ಬೇಡದ ಕಶ್ಮಲಗಳನ್ನು ಹೊರಹಾಕಿ ತ್ವಚೆ ಕಾಂತಿ ಹೆಚ್ಚಿಸಿ, ನೆರಿಗೆ ಬೀಳುವುದನ್ನು ತಡೆಗಟ್ಟುತ್ತದೆ.

ಮಹಿಳೆಯರಲ್ಲಿ 40ರ ಬಳಿಕ ಮೆನೋಪಾಸ್ ಉಂಟಾಗುವುದು. ಮೆನೋಪಾಸ್ ಹಂತದ ಬಳಿಕ ಮುಖದ ಮೇಲೆ ನೆರಿಗೆಗಳು ಹೆಚ್ಚಾಗುವುದು. ಬಾದಾಮಿಯನ್ನು ತಮ್ಮ ಆಹಾರಕ್ರಮದಲ್ಲಿ ಸೇರಿಸುವುದರಿಂದ ಮುಖದ ಮೇಲೆ ಬೇಗನೆ ನೆರಿಗೆಗಳು ಬೀಳುವುದಿಲ್ಲ. ಬಾದಾಮಿ ಹಾನಿಯಾದ ತ್ವಚೆಯನ್ನು ಆಂತರಿಕವಾಗಿ ರಕ್ಷಣೆ ಮಾಡುತ್ತದೆ. ಇದರಲ್ಲಿರುವ ಒಮೆಗಾ 3 ಕೊಬ್ಬಿನಂಶ ತ್ವಚೆಯ ಆರೋಗ್ಯವನ್ನು ಹೆಚ್ಚಿಸುತ್ತದೆ.

ತ್ವಚೆಯನ್ನು ಮೃದುವಾಗಿಸುತ್ತದೆ

ತ್ವಚೆಯನ್ನು ಮೃದುವಾಗಿಸುತ್ತದೆ

ಆಹಾರಕ್ರಮ ಹಾಗೂ ಸೌಂದರ್ಯ ಆರೈಕೆಯಲ್ಲಿ ಬಾದಾಮಿಯನ್ನು ಬಳಸುತ್ತಾ ಬಂದರೆ ತುಂಬಾ ಮೃದುವಾದ ತ್ವಚೆಯನ್ನು ಪಡೆಯಬಹುದು. ಇದರಲ್ಲಿ ವಿಟಮಿನ್ ಇ ಇರುವುದರಿಂದ ಅದರ ಎಣ್ಣೆಯನ್ನು ಮೈಗೆ ಹಚ್ಚಿದಾಗ ತ್ವಚೆ ಮೃದುವಾಗುತ್ತದೆ. ಬಿಸಿಲಿನಲ್ಲಿ ಓಡಾಡಿದಾಗ ತ್ವಚೆ ಕಪ್ಪಾಗುವುದನ್ನು ತಡೆಗಟ್ಟಲು ಬಾದಾಮಿ ಎಣ್ಣೆಯನ್ನು ಬಳಸಿದರೆ ಸಾಕು. ಪ್ರತಿದಿನ ಆಹಾರಕ್ರಮದಲ್ಲಿ ಬಾದಾಮಿಯನ್ನು ಸೇರಿಸಿದರೆ ಮೊಡವೆ ಮುಕ್ತ, ಕಲೆ ಮುಕ್ತ ತ್ವಚೆ ಪಡೆಯಬಹುದು. ಮೊಡವೆ ಸಮಸ್ಯೆ ಇರುವವರು ಬಾದಾಮಿಯನ್ನು ತಿನ್ನುವ ಮೂಲಕ ತ್ವಚೆ ಹಾಳಾಗದಂತೆ ರಕ್ಷಣೆ ಮಾಡಬಹುದು.

ವಿಶ್ರಾಂತಿಯ ಅನುಭವ ನೀಡುತ್ತದೆ

ವಿಶ್ರಾಂತಿಯ ಅನುಭವ ನೀಡುತ್ತದೆ

ಬಾದಾಮಿಯಲ್ಲಿ ಆ್ಯಂಟಿಆಕ್ಸಿಡೆಂಟ್ ಹಾಗೂ ವಿಟಮಿನ್ಸ್ ಇರುವುದರಿಂದ ಇದು ತ್ವಚೆಯ ಆರೈಕೆ ಮಾಡುತ್ತದೆ. ಇದನ್ನು ತಲೆ ಹಾಗೂ ದೇಹದ ಮಸಾಜ್‌ಗೆ ಬಳಸುವುದರಿಂದ ತ್ವಚೆ ಹಾಗೂ ಕೂದಲಿನ ಆರೋಗ್ಯ ವೃದ್ಧಿಸುವುದು. ಇದರಿಂದ ಮಸಾಜ್‌ ಮಾಡಿದಾಗ ವಿಶ್ರಾಂತಿಯ ಅನುಭವ ಸಿಗುವುದು. ಇದರಿಂದ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ. ಮಾನಸಿಕ ಒತ್ತಡವಿದ್ದರೆ ಬೇಗನೆ ಮುಖದಲ್ಲಿ ನೆರಿಗೆಗಳು ಮೂಡುವುದು.

ಸ್ಟ್ರೆಚ್‌ ಸಮಸ್ಯೆ ಇರುವವರು ದಿನಾ ಬಾದಾಮಿ ಎಣ್ಣೆಯಿಂದ ಮಸಾಜ್‌ ಮಾಡಿದರೆ ಒಳ್ಳೆಯದು. ಸ್ಪಾಗಳಿಗೆ ಹೋಗಿ ಹಣ ಖರ್ಚು ಮಾಡುವ ಬದಲು ಅದನ್ನು ಬಾದಾಮಿ ಕೊಳ್ಳಲು ಬಳಸಿದರೆ ಸೌಂದರ್ಯ ಹಾಗೂ ಆರೋಗ್ಯ ಎರಡೂ ವೃದ್ಧಿಯಾಗುವುದು.

ತಲೆಹೊಟ್ಟು ಕಡಿಮೆ ಮಾಡುತ್ತದೆ

ತಲೆಹೊಟ್ಟು ಕಡಿಮೆ ಮಾಡುತ್ತದೆ

ತಲೆಹೊಟ್ಟಿನ ಸಮಸ್ಯೆಯಿದ್ದರೆ ಕೂದಲು ಉದುರುವುದು ಮಾತ್ರವಲ್ಲ ಮುಖದಲ್ಲಿ ಮೊಡವೆ ಏಳುವುದು, ತುರಿಕೆ ಮುಂತಾದ ಸಮಸ್ಯೆಗಳು ಉಂಟಾಗುವುದು. ಬಾದಾಮಿಯಲ್ಲಿ ಮೋನೋಕೊಬ್ಬಿನ ಆಮ್ಲ ಮತತ್ಉ ವಿಟಮಿನ್‌ಗಳಾ ಎ, ಡಿ, ಬಿ1, ಬಿ2 ಮತ್ತು ಬಿ6 ಇದ್ದು ಇದು ತಲೆಹೊಟ್ಟು ಸಮಸ್ಯೆ ಹೋಗಲಾಡಿಸಿ ಕೂದಲಿನ ಆರೋಗ್ಯ ವೃದ್ಧಿಸುತ್ತದೆ. ಬಾದಾಮಿ ಎಣ್ಣೆಯಿಂದ ಮುಖಕ್ಕೆ ಮಸಾಜ್ ಮಾಡಿದರೆ ಮುಖ ಒಣಗುವುದು, ಮೊಡವೆ, ಕಲೆಗಳು ಮುಂತಾದ ಸಮಸ್ಯೆಗಳು ಇಲ್ಲವಾಗುವುದು.

ನೈಸರ್ಗಿಕ ಮೇಕಪ್ ರಿಮೂವರ್

ನೈಸರ್ಗಿಕ ಮೇಕಪ್ ರಿಮೂವರ್

ಮೇಕಪ್‌ ಪ್ರತಿನಿತ್ಯ ಬಳಸುತ್ತಿದ್ದರೆ ತ್ವಚೆ ಹಾಳಾಗುತ್ತದೆ. ಮೇಕಪ್‌ನಿಂದ ತ್ವಚೆ ಹಾಳಾಗದಿರಲು ಮೇಕಪ್ ರಿಮೂವರ್ ಆಗಿ ಬಾದಾಮಿ ಎಣ್ಣೆಯನ್ನು ಬಲಸಬಹುದು. ಇದನ್ನು ಬಳಸುವುದರಿಂದ ಮೇಕಪ್ ಸುಲಭದಲ್ಲಿ ತೆಗೆಯಬಹುದು ಹಾಗೂ ಈ ಎಣ್ಣೆ ಮೇಕಪ್‌ನಿಂದ ತ್ವಚೆ ಹಾಳಾಗದಂತೆ ರಕ್ಷಣೆ ಮಾಡುತ್ತದೆ.

ರಾಸಾಯನಿಕಗಳಿರುವ ಮೇಕಪ್‌ ರಿಮೂವರ್ ಬಳಸುವ ಬದಲು ನೈಸರ್ಗಿಕವಾದ ಮೇಕಪ್ ರಿಮೂವರ್ ತ್ವಚೆಗೆ ತುಂಬಾ ಒಳ್ಳೆಯದು.

English summary

Study Says Almonds Can Help To Avoid Wrinkles

Almond has so much of health and beauty benefits. If you include almond in your diet can avoid wrinkles in the early age and it also increase glow of your skin. Here are how almond can help you to protect the skin, Take a look.
Story first published: Monday, December 2, 2019, 12:04 [IST]
X
Desktop Bottom Promotion