For Quick Alerts
ALLOW NOTIFICATIONS  
For Daily Alerts

ಮೊಡವೆ ಬಂದಾಗ ಚಿವುಟಲೇಬಾರದು, ಏಕೆ?

|

ಮುಖದ ಮೇಲೆ ಮೊಡವೆಯೊಂದು ಮೂಡಿದ ಬಳಿಕ ಇದನ್ನು ಮೊದಲ ಬಾರಿ ನೋಡಿದಾಗ ನಿಮಗೆ ಏನೆನ್ನಿಸುತ್ತದೆ? ಈಗಲೇ ಇದನ್ನು ಬುಡಸಹಿತ ಕಿತ್ತು ಎಸೆಯುವ ಮನಸ್ಸಾಗುವುದಿಲ್ಲವೇ? ಹೆಚ್ಚಿನವರು ನೋಡಿದ ಮರುಕ್ಷಣವೇ ಎರಡು ಬೆರಳುಗಳನ್ನು ಮೊಡವೆಗಳ ಬುಡಕ್ಕೆ ಒತ್ತಿ ಕೀವನ್ನು ಹೊರಸೆಳೆದು ನಿವಾರಿಸಿಯೇ ಬಿಡುತ್ತಾರೆ. ಆದರೆ ಆ ಕ್ಷಣ ನೀವು ಈ ಮೊಡವೆಯ ಮೇಲೆ ವಿಜಯ ಸಾಧಿಸಿರಬಹುದು, ಆದರೆ ಚರ್ಮವೈದ್ಯರ ಪ್ರಕಾರ ನೀವು ಸರ್ವಥಾ ಎಸಗಲೇಬಾರದ ಅತಿ ದೊಡ್ಡ ತಪ್ಪನ್ನು ಈಗ ತಾನೇ ಮಾಡಿದ್ದೀರಿ!

ಮೊಡವೆ ಮೂಡಲು ಕಾರಣವೇನು ಎಂಬುದಕ್ಕೆ ಸರಳವಾಗಿ ಹೇಳಬಹುದಾದರೆ, ನಮ್ಮ ಚರ್ಮದ ಸೂಕ್ಷ್ಮರಂಧ್ರಗಳು ಮುಚ್ಚಿ ಒಳಗಿನ ಸೋಂಕು ಹೊರಹೋಗದೇ ಒಳಗೇ ಸಂಗ್ರಹಗೊಳ್ಳುತ್ತದೆ. ಸೂಕ್ಷ್ಮರಂಧ್ರಗಳು ಮುಚ್ಚಲು ಧೂಳು ಹಾಗೂ ಇತರ ಕಣಗಳು ಕಾರಣವಿರಬಹುದು. ಸೋಂಕಿನಲ್ಲಿರುವ ಬ್ಯಾಕ್ಟೀರಿಯಾಗಳು ಅಭಿವೃದ್ದಿಗೊಂಡು ಸೋಂಕು ಹೆಚ್ಚಿಸುತ್ತವೆ. ವಿಶೇಷವಾಗಿ ಚರ್ಮದ ಅಡಿಯಲ್ಲಿರುವ ಕೂದಲ ಬುಡದಲ್ಲಿ ಈ ಸೋಂಕು ಗರಿಷ್ಟವಾಗುತ್ತದೆ.

ಸೋಂಕು ಎದುರಾದ ಭಾಗದಲ್ಲಿ ತ್ವಚೆ ಅತಿ ಸೂಕ್ಷ್ಮಸಂವೇದಿಯಾಗುತ್ತದೆ ಹಾಗೂ ನೋವು ಸಹಾ ಎದುರಾಗಬಹುದು. ಮೊಡವೆಯ ಅಡಿಯ ಸೋಂಕು ಹೆಚ್ಚಾದಷ್ಟೂ ಇದು ಹೊರಚರ್ಮವನ್ನು ದೂಡತೊಡಗುತ್ತದೆ. ಈಗ ಹೊರಚರ್ಮ ತೆಳುವಾಗಿ ಒಳಗಿನ ಸೋಂಕು ಅಪಾರದರ್ಶಕವಾಗಿ ಕಾಣತೊಡಗುತ್ತದೆ. ಇದೇ ಮೊಡವೆ! ಎಂದಿಗೂ ಇದನ್ನು ಒಡೆಯಲು ಹೋಗದಿರಿ. ಮೊಡವೆಯನ್ನು ನೋಡಿದಾಕ್ಷಣ ಒಡೆಯಲು ಎಷ್ಟೇ ಮನಸ್ಸಾದರೂ ಸರಿ, ಇದನ್ನು ಮುಟ್ಟಲೂ ಹೋಗದಿರಿ.

"ಬ್ಲ್ಯಾಕ್‌ಹೆಡ್‌ಗಳು, ವೈಟ್‌ಹೆಡ್‌ಗಳು, ಚಿಕ್ಕ ಗುಳ್ಳೆಗಳು, ದೊಡ್ಡ ಕೀವುಗುಳ್ಳೆಅಳು, ಕುರಗಳು, ಕೀವುಭರಿತ ದದ್ದುಗಳು ಇವೆಲ್ಲವೂ ಮೊಡವೆಯ ವಿವಿಧ ರೂಪಗಳೇ ಆಗಿವೆ ಮತ್ತು ಯಾವುದನ್ನೂ ಯಾವುದೇ ಸಂದರ್ಭದಲ್ಲಿ ಚಿವುಟಬಾರದು" ಎಂದು ಎಸ್ಥೆಟಿಕ್ಸ್ ಕ್ಲಿನಿಕ್ಸ್ ನಲ್ಲಿ ಸೌಂದರ್ಯಚಿಕಿತ್ಸಕಿ ಹಾಗೂ ಚರ್ಮರೋಗ ವೈದ್ಯೆಯಾಗಿರುವ ಡಾ. ರಿಂಕಿ ಕಪೂರ್ ಹೇಳುತ್ತಾರೆ.

ಮೊಡವೆಯನ್ನು ಏಕೆ ಚಿವುಟಬಾರದು ಎಂಬ ಪ್ರಶ್ನೆಗೆ ಉತ್ತರವಾಗಿ ಇದರಿಂದ ನಿಮ್ಮ ಚರ್ಮಕ್ಕೆ ಎದುರಾಗುವ ಅಪಾಯಗಳನ್ನು ನೋಡೋಣ:

1. ಈಗಿರುವ ಸ್ಥಿತಿಯನ್ನು ಇನ್ನಷ್ಟು ಉಲ್ಬಣಗೊಳಿಸುತ್ತದೆ

1. ಈಗಿರುವ ಸ್ಥಿತಿಯನ್ನು ಇನ್ನಷ್ಟು ಉಲ್ಬಣಗೊಳಿಸುತ್ತದೆ

ಮೊಡವೆಯ ಸುತ್ತಲ ಚರ್ಮವನ್ನು ನೀವು ಒತ್ತಿದಾಗ, ಈ ಒತ್ತಡದಿಂದ ಒಳಗಿನ ಸೋಂಕು ಇನ್ನಷ್ಟು ಒಳಸರಿಯಲು ಕಾರಣವಾಗುತ್ತದೆ. ಒಳಗಿನ ಸೋಂಕಿನಲ್ಲಿರುವ ಎಣ್ಣೆ, ಕಲ್ಮಶಗಳು ಹಾಗೂ ಬ್ಯಾಕ್ಟೀರಿಯಾಗಳು ಚರ್ಮದ ಒಳಭಾಗದಲ್ಲಿ ಇನ್ನಷ್ಟು ಆಳಕ್ಕೆ ಮತ್ತು ಅಗಲವಾಗಿ ಹರಡುತ್ತವೆ. ಅಷ್ಟೇ ಅಲ್ಲ, ಮೊಡವೆ ಒಡೆದಾಗ ಒಸರುವ ಕೀವು ಬೆರಳುಗಳ ತುದಿಗೆ ಅಂಟಿಕೊಂಡು ನೀವು ಮುಟ್ಟಿದೆಡೆಯಲ್ಲೆಲ್ಲಾ ಸೋಂಕು ಹರಡುತ್ತದೆ. ಒತ್ತಡದ ಕಾರಣ ಈ ಸೋಂಕು ಚರ್ಮದ ಪದರಗಳ ನಡುವೆ ಹರಡುತ್ತಾ ಇನ್ನಷ್ಟು ಭಾಗಗಳಲ್ಲಿ ಮೊಡವೆಗಳು ಮೂಡಲು ಕಾರಣವಾಗುತ್ತವೆ. ಇದೇ ಕಾರಣಕ್ಕೆ ಮೊಡವೆ ಒಡೆದ ಬಳಿಕ ಅಕ್ಕ ಪಕ್ಕದ ಚರ್ಮದಲ್ಲಿ ಹೊಸ ಮೊಡವೆಗಳು ಏಳುತ್ತವೆ.

2. ನೀವು ಸೋಕು ಹರಡಲು ಹೆಚ್ಚಿನ ಸ್ಥಳಾವಕಾಶವನ್ನು ಒದಗಿಸುತ್ತೀರಿ

2. ನೀವು ಸೋಕು ಹರಡಲು ಹೆಚ್ಚಿನ ಸ್ಥಳಾವಕಾಶವನ್ನು ಒದಗಿಸುತ್ತೀರಿ

"ಮೊಡವೆಯನ್ನು ಒಡೆದು ಸೋಂಕು ಹೊರಬಂದ ಬಳಿಕ, ಈ ಭಾಗ ಈಗ ಸರಿಯಾಗಿದೆ ಎಂದು ನೀವು ಭಾವಿಸಬಹುದು. ಆದರೆ ವಾಸ್ತವದಲ್ಲಿ, ನೀವು ಎಷ್ಟೇ ಒತ್ತಿ ಸೋಂಕನ್ನು ಹೊರತೆಗೆದಿದ್ದರೂ ಅತ್ಯಲ್ಪ ಪ್ರಮಾಣದಲ್ಲಿ ಕೀವು ಉಳಿದಿರಬಹುದು. ಕೊಂಚ ಹೊತ್ತಿನಲ್ಲಿಯೇ ಹೊರಹೋಗಿದ್ದ ಕೀವಿನಿಂದ ತೆರನಾಗಿದ್ದ ಖಾಲಿಭಾಗವನ್ನೆಲ್ಲಾ ಈ ಉಳಿದ ಕೀವು ಆವರಿಸಿಕೊಂಡು ಶೀಘ್ರವೇ ಇದೇ ಭಾಗದಲ್ಲಿ ಮತ್ತೆ ಮೊಡವೆ ಉಂಟಾಗಲು ಕಾರಣವಾಗುತ್ತದೆ. ಈ ಬಾರಿ ನಿಮ್ಮ ಮೇಲೆ ಸೇಡು ತೀರಿಸಿಕೊಳ್ಳುವಂತೆ ಇನ್ನಷ್ಟು ದೊಡ್ಡದಾಗಿ, ಇನ್ನಷ್ಟು ಆಳದಲ್ಲಿ ಮತ್ತು ವಿಸ್ತಾರವಾದ ಮೊಡವೆ ಏಳುತ್ತದೆ" ಎಂದು ಅವರು ವಿವರಿಸುತ್ತಾರೆ.

3. ಒಡೆದ ಮೊಡವೆ ಮಾಗಿದ ಬಳಿಕ ಕಲೆ ಮತ್ತು ಕುಳಿ ಉಳಿಯಬಹುದು.

3. ಒಡೆದ ಮೊಡವೆ ಮಾಗಿದ ಬಳಿಕ ಕಲೆ ಮತ್ತು ಕುಳಿ ಉಳಿಯಬಹುದು.

ಮೊಡವೆ ಪೂರ್ಣವಾಗಿ ಮಾಗುವ ಮುನ್ನವೇ ಒಡೆಯುವ ಮೂಲಕ ಇದು ತಾನಾಗಿ ಗುಣವಾಗುವ ಕ್ರಿಯೆಗೆ ತಡೆ ಎದುರಾಗುತ್ತದೆ. ಅಂದರೆ ಗುಣವಾಗುವ ಕ್ರಿಯೆಯೂ ನಡೆಯದೇ ಹೋಗುತ್ತದೆ. ಪರಿಣಾಮವಾಗಿ ಇಲ್ಲಿ ಬೆಳೆಯಬೇಕಾಗಿದ್ದ ಅಂಗಾಂಶ ಬೆಳೆಯದೆಯೇ ಹರಿದಿದ್ದ ಚರ್ಮ ಮುಚ್ಚಿ ಬಿಡುತ್ತದೆ. ಆಗ ಹೀಗೆ ಮುಚ್ಚಿದ ಭಾಗದಲ್ಲಿ ಸ್ಪಷ್ಟವಾದ ಗುರುತು, ಕಲೆ ಉಳಿದುಕೊಳ್ಳುತ್ತದೆ. ಅಲ್ಲದೇ ಒಳಗೆ ಅಂಗಾಂಶ ಇಲ್ಲದಿರುವ ಕಾರಣ ಕುಳಿಯೂ ಬೀಳಬಹುದು.

4. ಗಾಢ ಕೆಲೆ ಉಳಿದುಕೊಳ್ಳಲು ನೀವೇ ಕಾರಣಕರ್ತರಾಗಬಹುದು

4. ಗಾಢ ಕೆಲೆ ಉಳಿದುಕೊಳ್ಳಲು ನೀವೇ ಕಾರಣಕರ್ತರಾಗಬಹುದು

ಉರಿಯೂತದ ಸೋಂಕು ಮುಗಿದ ಬಳಿಕ ಆ ಭಾಗದಲ್ಲಿ ಗಾಢವಾದ ಕಲೆ ಉಳಿಯುವುದು ಮೊಡವೆಯನ್ನು ಒಡೆಯುವ ಬಳಿಕ ಅಡ್ಡ ಪರಿಣಾಮಗಳಲ್ಲಿ ಒಂದಾಗಿದೆ. ಈ ಕಲೆಗಳು ಎಷ್ಟು ಗಾಢವಾಗಿ ಉಳಿಯುತ್ತವೆ ಎಂದರೆ ಪೂರ್ಣವಾಗಿ ಸಹಜವರ್ಣ ಪಡೆಯಲು ವರ್ಷಗಳೇ ಬೇಕಾಗಬಹುದು ಎಂದು ಅವರು ಎಚ್ಚರಿಸುತ್ತಾರೆ.

5. ಇನ್ನಷ್ಟು ಮೊಡವೆಗಳಿಗೆ ನೀವೇ ಆಹ್ವಾನ ನೀಡುತ್ತಿದ್ದೀರಿ

5. ಇನ್ನಷ್ಟು ಮೊಡವೆಗಳಿಗೆ ನೀವೇ ಆಹ್ವಾನ ನೀಡುತ್ತಿದ್ದೀರಿ

ಹೌದು, ಯಾವಾಗ, ನೀವು ಮೊಡವೆಯನ್ನು ಚಿವುಟಿ ಒಡೆಯುತ್ತೀರೋ ಆಗ ಬ್ಯಾಕ್ಟೀರಿಯಾ, ತೈಲ ಮತ್ತು ಸಮ್ಗ್ರಹವಾಗಿದ್ದ ಕೊಳೆ ಹಾಗೂ ಇತರ ಸೋಂಕುಗಳು ಚರ್ಮದ ಅಕ್ಕಪಕ್ಕದ ಭಾಗದಲ್ಲಿರುವ ಸೂಕ್ಷ್ಮರಂಧ್ರಗಳನ್ನು ಮುಚ್ಚುವ ಜೊತೆಗೇ ಈ ಭಾಗದಲ್ಲಿಯೂ ಸೋಂಕು ಹರಡಲು ಕಾರಣವಾಗುತ್ತವೆ. ಪರಿಣಾಮವಾಗಿ ಇಲ್ಲೆಲ್ಲಾ ಹೊಸ ಹೊಸ ಮೊಡವೆಗಳು ಏಳತೊಡಗುತ್ತವೆ.

ಮೊಡವೆ ಎದ್ದ ಬಳಿಕ ಮುಂದಿನ 3-7 ದಿನಗಳವರೆಗೂ ಈ ಮೊಡವೆ ಸ್ಪಷ್ಟವಾಗಿ ಕಾಣಿಸಿಕೊಂಡು ಮತ್ತೆ ತಾನಾಗಿಯೇ ಗುಣಹೊಂದುತ್ತದೆ. ಇದನ್ನು ಮುಟ್ಟಲೂ ಹೋಗದೇ ತಾನಾಗಿ ಪೂರ್ಣವಾಗಿ ಗುಣವಾಗುವಂತೆ ನೀವು ಅವಕಾಶ ಮಾಡಿಕೊಡಬೇಕು ಹಾಗೂ ಚರ್ಮ ತನ್ನ ಸಹಜ ರೋಗ ನಿರೋಧಕ ಶಕ್ತಿಯಿಂದಲೇ ಈ ಸೋಂಕನ್ನು ಎದುರಿಸಿ ಮೊಡವೆಯನ್ನು ಹಿಮ್ಮೆಟ್ಟಿಸುವಂತಾಗಬೇಕು. ಆದರೆ ಅಗತ್ಯವಿರುವ ಸ್ವಚ್ಛತೆ ಮತ್ತು ಆರೈಕೆಯನ್ನಂತೂ ನೀಡಲೇಬೇಕು. ಉತ್ತಮ ಗುಣಮಟ್ಟದ ಬ್ಯಾಕ್ಟೀರಿಯಾ ನಿವಾರಕ ದ್ರಾವಣದಿಂದ ಈ ಭಾಗವನ್ನು ನಿಯಮಿತವಾಗಿ ಸ್ವಚ್ಛಗೊಳಿಸುತ್ತೀರಿ ಎಂದು ಖಚಿತಪಡಿಸಿಕೊಳ್ಳಿ ಮತ್ತು ಚರ್ಮರೋಗ ವೈದ್ಯರು ಶಿಫಾರಸ್ಸು ಮಾಡಿದ ಕ್ರೀಮ್ ಅಥವಾ ಇತರ ಔಷಧಿಗಳನ್ನು ಮಾತ್ರವೇ ಹಚ್ಚಿಕೊಳ್ಳಿ ಎಂದು ಅವರು ಸಲಹೆ ಮಾಡುತ್ತಾರೆ.

ಆದ್ದರಿಂದ ಮೊಡವೆ ಎದ್ದರೂ, ಇದನ್ನು ಮುಟ್ಟಲೂ ಹೋಗದೇ ಅದೇ ತಾನಾಗಿ ಗುಣಹೊಂದುವವರೆಗೂ ತಾಳ್ಮೆ ವಹಿಸುವುದು ಅಗತ್ಯವಾಗಿದೆ. ಗುಣಪಡಿಸುವ ಕ್ರಿಯೆಯನ್ನು ಶೀಘ್ರಗೊಳಿಸಲು ಸುರಕ್ಷಿತವಾದ ಮನೆಮದ್ದುಗಳನ್ನೂ ನೀವು ಆಯ್ದುಕೊಳ್ಳಬಹುದು.

English summary

Reasons Why You Should Never Pop Your Pimples

Here are reasons why you should never pop your Pimples, Read On...
Story first published: Wednesday, November 4, 2020, 13:23 [IST]
X
Desktop Bottom Promotion