For Quick Alerts
ALLOW NOTIFICATIONS  
For Daily Alerts

ಚಳಿಗಾಲ: ಅಂದದ ತ್ವಚೆಯ ಒಡತಿಯಾಗಬೇಕೆ? ರಾತ್ರಿ ಹೀಗೆ ಮಾಡಿ

|

ಚಳಿಗಾಲ ಶುರುವಾಗಿದೆ, ನಿಮ್ಮ ತ್ವಚೆಗೆ ತುಸು ಹೆಚ್ಚಗಿನ ಆರೈಕೆ ಬೇಕಾಗಿದೆ, ಅದರಲ್ಲೂ ಮಲಗುವ ಮುಂಚೆ ಮಾಡುವ ಆರೈಕೆ ಮುಖ್ಯವಾಗುತ್ತದೆ.

ಏಕೆಂದರೆ ಚಳಿಗಾಲದಲ್ಲಿ ದೂಳಿ, ಕೊರೆಯುವ ಗಾಳಿಗೆ ನಮ್ಮ ತ್ವಚೆ ಮಂಕಾಗುವುದು ಸಹಜ. ಡ್ರೈ ತ್ವಚೆಯಿದ್ದರಂತೂ ಮುಗೀತು, ಮುಖದ ಒಡೆಯಲಾರಂಭಿಸುತ್ತದೆ, ಇವೆಲ್ಲಾ ತಡೆಗಟ್ಟಲು ನೀವು ಮಲಗುವ ಮುಂಚೆ ತ್ವಚೆಗೆ ಮಾಡುವ ಆರೈಕೆ ತುಂಬಾನ ಮುಖ್ಯವಾಗುತ್ತದೆ. ಆದ್ದರಿಂದ ರಾತ್ರಿ ಹೊತ್ತು ತ್ವಚೆಯನ್ನು ಹೀಗೆ ಆರೈಕೆ ಮಾಡಿ:

Winter Season

1. ಮಲಗುವ ಮುನ್ನ ಹಾಲಿನಿಂದ ಕ್ಲೆನ್ಸ್ ಮಾಡಿ
ಹಾಲಿನಲ್ಲಿ ಲ್ಯಾಕ್ಟಿಕ್‌ ಆಮ್ಲ ಇರುವುದರಿಂದ ಇದು ಅತ್ಯುತ್ತಮವಾದ ಕ್ಲೆನ್ಸರ್ ಆಗಿದೆ. ನಿಮ್ಮ ಮೇಕಪ್ ತೆಗೆಯಲು ಇದನ್ನು ಬಳಸಿ, ಇದರಿಂದ ತ್ವಚೆ ಮೃದುವಾಗುವುದು, ಅಲ್ಲದೆ ತ್ವಚೆಯ ಮಾಯಿಶ್ಚರೈಸರ್‌ ಕಾಪಾಡುತ್ತದೆ.

2. ಎರಡರಿಂದ ಮೂರು ದಿನಕ್ಕೊಮ್ಮೆ ಎಕ್ಸ್‌ಫೋಲೆಟ್ ಮಾಡಿ

ಡೆಡ್‌ಸ್ಕಿನ್‌ ತೆಗೆಯಲು ಎಕ್ಸ್‌ಪೋಲೆಟ್‌ ಮಾಡುವುದು ತುಂಬಾನೇ ಮುಖ್ಯ. ಓಟ್ಸ್‌ ಅಥವಾ ಕಾಫಿ ಸ್ಕ್ರಬ್‌ ಬಳಸಿ ಎಕ್ಸ್‌ಫೋಲೆಟ್ ಮಾಡಿ. ಕಾಫಿ ಪುಡಿ ಸ್ವಲ್ಪ ಹಾಲು ಹಾಕಿ ಮಿಶ್ರ ಮಾಡಿ ಸ್ಕ್ರಬ್ಬರ್‌ ಆಗಿ ಬಳಸುವುದು, ಅಥವಾ ಓಟ್ಸ್‌ಗೆ ಹಾಲು ಹಾಕಿ ಮಿಶ್ರ ಮಾಡಿ ಸ್ಕ್ರಬ್ಬರ್ ಆಗಿ ಬಳಸಬಹುದು. ಇದು ಡೆಡ್‌ಸ್ಕಿನ್‌ ತೆಗೆದು ಮುಖದ ಹೊಳಪು ಹೆಚ್ಚಿಸುತ್ತದೆ.

* ತ್ವಚೆಗೆ ಪ್ರತಿದಿನ ಮಸಾಜ್‌ ಮಾಡಿ
ಚಳಿಗಾಲದಲ್ಲಿ ಪ್ರತಿದಿನ ಮುಖಕ್ಕೆ ಎಣ್ಣೆ ಮಸಾಜ್‌ ಒಳ್ಳೆಯದು. ಅದರಲ್ಲೂ ವಾರದಲ್ಲಿ ಎರಡು ಬಾರಿ ಕಂಪ್ಲೀಟ್‌ ಬಾಡಿಗೆ ಎಣ್ಣೆ ಹಚ್ಚಿ ಸ್ನಾನ ಮಾಡಿ. 15 ದಿನಕ್ಕೊಮ್ಮೆ ಬಾಡಿಗೆ ಮಸಾಜ್‌ ಮಾಡಿಸಿದರೆ ತುಂಬಾನೇ ಒಳ್ಳೆಯದು. ದೇಹದ ಕಾಂತಿ ಹೆಚ್ಚುತ್ತದೆ, ರಕ್ತ ಸಂಚಾರ ಕೂಡ ಚೆನ್ನಾಗಿರುತ್ತದೆ.

ನಿಮ್ಮ ತ್ವಚೆಗೆ ತಕ್ಕ ಕ್ರೀಮ್, ಮಾಯಿಶ್ಚರೈಸರ್‌ ಬಳಸಿ
ಎಲ್ಲಾ ಕ್ರೀಮ್‌, ಮಾಯಿಶ್ಚರೈಸರ್‌ ನಿಮಗೆ ಸೂಕ್ತ ಎಂದು ಹೇಳಲು ಸಾಧ್ಯವಿಲ್ಲ. ನಿಮ್ಮ ಎಣ್ಣೆ ತ್ವಚೆಯಾಗಿದ್ದರೆ ಮಾಯಿಶ್ಚರೈಸರ್‌ ಸಾಕು, ಅದೇ ಡ್ರೈ ತ್ವಚೆಯಾಗಿದ್ದರೆ ಡೀಪ್‌ ಕಂಡೀಷನರ್ ಬೇಕಾಗುತ್ತದೆ. ಆದ್ದರಿಂದ ನೀವ ಮಾಯಿಶ್ಚರೈಸರ್‌ ಬಳಸುವುದಾದರೆ ನಿಮ್ಮ ತ್ವಚೆಗೆ ಹೊಂದುವ ಮಾಯಿಶ್ಚರೈಸರ್‌ ಬಳಸಿದರೆ ತುಂಬಾನೇ ಪರಿಣಾಮಕಾರಿಯಾಗಿರುತ್ತದೆ.

ವಾರಕ್ಕೊಮ್ಮೆ ಹೈಡ್ರೇಟಿಂಗ್ ಫೇಸ್‌ಮಾಸ್ಕ್‌ ಒಳ್ಳೆಯದು
ಫೇಸ್‌ಮಾಸ್ಕ್ ತಯಾರಿಸಿ ಮುಖಕ್ಕೆ ಹಚ್ಚಿ ಅರ್ಧ ಗಂಟೆ ಬಿಟ್ಟು ತೊಳೆಯಿರಿ. ನಿಮ್ಮ ಮುಖಕ್ಕೆ ಸೂಟ್‌ ಆಗುವ ಫೇಸ್‌ ಮಾಸ್ಕ್ ಬಳಸಿ. ನಂತರ ಹದ ಬಿಸಿ ನೀರಿನಿಂದ ತೊಳೆಯಿರಿ.
* ಬಾಳೆಹಣ್ಣು ಮ್ಯಾಶ್‌ ಮಾಡಿ ಅದಕ್ಕೆ ಜೇನು ಬೆರೆಸಿ ಮುಖಕ್ಕೆ ಹಚ್ಚಬಹುದು.

* ಜೇನು ಮುಖಕ್ಕೆ ಹಚ್ಚಬಹುದು
* ಜೇನು+ಗ್ಲಿಸರಿನ್‌ ಮಿಕ್ಸ್ ಮಾಡಿ ಹಚ್ಚಬಹುದು
* ಇತರ ಫ್ರೂಟ್ಸ್ ಫೇಸ್‌ ಮಾಸ್ಕ್ ಬಳಸಬಹುದು,.
ಬೇಕಿದ್ದರೆ ರೆಡಿಮೇಡ್‌ ಫೇಸ್‌ಮಾಸ್ಕ್‌ ಬಳಸಬಹುದು. ಈ ರೀತಿ ಮಾಡುವುದರಿಂದ ಚಳಿಗಾಲದಲ್ಲಿ ಅಂದದ ತ್ವಚೆಯ ಒಡತಿ ನೀವಾಗಬಹುದು.

English summary

Night Skincare for Winter Season in kannada

Winter Season: How to take Care Your skin at night, read on....
Story first published: Friday, November 25, 2022, 18:35 [IST]
X
Desktop Bottom Promotion