For Quick Alerts
ALLOW NOTIFICATIONS  
For Daily Alerts

ಮಳೆಗಾಲದಲ್ಲಿ ತ್ವಚೆಯ ಹೊಳಪಿಗಾಗಿ ಬಳಸಬೇಕಾದ ವಸ್ತುಗಳಿವು

|

ಮಳೆಗಾಲ ಶುರುವಾಗಿದೆ, ಕಾಲ ಬದಲಾದಂತೆ ತ್ವಚೆಯನ್ನು ಆರೈಕೆ ಮಾಡುವ ವಿಧಾನ ಬದಲಾಗುತ್ತದೆ. ಬೇಸಿಗೆಯಲ್ಲಿ ಸನ್‌ಟ್ಯಾನ್‌ ಸಮಸ್ಯೆ, ಬೆವರುಸಾಲೆ ಮುಂತಾದ ತ್ವಚೆ ಸಮಸ್ಯೆ ಕಾಡಿದರೆ, ಇದರಿಂದಾಗಿ ತ್ವಚೆಯಲ್ಲಿ ವ್ಯತ್ಯಾಸ ಉಂಟಾಗುವುದು.

Must-Have Monsoon Skincare Product

ಅದರಲ್ಲೂ ಎಣ್ಣೆತ್ವಚೆ ಇರುವವರಿಗೆ ಮಳೆಗಲದಲ್ಲಿ ಸ್ವಲ್ಪ ಅಧಿಕ ತ್ವಚೆ ಸಮಸ್ಯೆಗಳು ಕಂಡು ಬರುತ್ತದೆ. ತ್ವಚೆಯಲ್ಲಿ ಸೆಬಮ್‌ ಹೆಚ್ಚು ಉತ್ಪತ್ತಿಯಾಗುವುದರಿಂದ ತ್ವಚೆ ತುಂಬಾ ಎಣ್ಣೆ-ಎಣ್ಣೆಯಾಗುತ್ತದೆ, ಇದರಿಂದಾಗಿ ಮೊಡವೆ ಇರುವವರಿಗೆ ಸಮಸ್ಯೆ ಮತ್ತಷ್ಟು ಅಧಿಕವಾಗುವುದು.

ಅಲ್ಲದೆ ಮುಂಗಾರು ಸಮಯದಲ್ಲಿ ಬ್ಯಾಕ್ಟಿರಿಯಾಗಳು ಕೂಡ ಅಧಿಕ ಚಟುವಟಿಕೆಯಿಂದ ಇರುತ್ತವೆ, ಇದರಿಂದಾಗಿ ತ್ವಚೆ ಸಮಸ್ಯೆ ಉಂಟಾಗುವುದು. ಆದ್ದರಿಂದ ಮಳೆಗಾಲದಲ್ಲಿ ನಿಮ್ಮ ತ್ವಚೆ ರಕ್ಷಣೆಗಾಗಿ ಸೋಪ್‌ನಿಂದ ಹಿಡಿದು ಕ್ರೀಮ್‌ವರೆಗಿನ ಆಯ್ಕೆ ಸರಿಯಿದ್ದರೆ ನಿಮ್ಮ ತ್ವಚೆ ಸುಂದರವಾಗಿರುತ್ತದೆ.

ಬನ್ನಿ ಮಳೆಗಾಲದಲ್ಲಿ ಸೌಂದರ್ಯವರ್ಧಕಗಳ ಬಳಕೆ ಹೇಗಿರಬೇಕೆಂದು ನೋಡೋಣ.

1. ಅಧಿಕ ನೊರೆ ಬರುವ ಫೇಸ್‌ವಾಶ್‌

1. ಅಧಿಕ ನೊರೆ ಬರುವ ಫೇಸ್‌ವಾಶ್‌

ಚಳಿಗಾಲದಲ್ಲಿ ಅಧಿಕ ನೊರೆ ಬರುವ ಫೇಸ್‌ವಾಶ್‌ ತ್ವಚೆಯನ್ನು ಮತ್ತಷ್ಟು ಡ್ರೈ ಮಾಡಬಹುದು, ಅದೇ ಮಳೆಗಾಲದಲ್ಲಿ ನೀವು ಅಧಿಕ ನೊರೆಬರುವ ಫೇಸ್‌ವಾಶ್‌ ಬಳಸಬೇಕು. ಇದು ನಿಮ್ಮ ತ್ವಚೆಯನ್ನು ಸ್ವಚ್ಛವಾಗಿ ಹಾಗೂ ತಾಜಾತನದ ಹೊಳಪಿನಿಂದ ಕೂಡಿರುವಂತೆ ಮಾಡುತ್ತದೆ. ಅಲ್ಲದೆ ಮಳೆಗಾಲದಲ್ಲಿ ದೂಳು ಇರದಿದ್ದರೂ ರಸ್ತೆಯಲ್ಲಿ ಓಡಾಡುವಾಗ ಕಲುಷಿತ ನೀರು ಸ್ವಲ್ಪವಾದರೂ ಮೇ ಮೇಲೆ ತಾಗುತ್ತದೆ. ಮುಖದ ತ್ವಚೆಯನ್ನು ಇತರ ಬ್ಯಾಕ್ಟಿರಿಯಾಗಳಿಂದ ರಕ್ಷಣೆ ಮಾಡಲು ಸೂಕ್ತವಾದ ಫೇಸ್‌ವಾಶ್‌ನಷ್ಟೇ ಬಳಸಿ.

2. ಮೃದುವಾದ ಸ್ಕ್ರಬ್

2. ಮೃದುವಾದ ಸ್ಕ್ರಬ್

ಮಳೆಗಾಲದಲ್ಲಿ ಅಧಿಕವಾಗುವ ಮೊಡವೆ ಸಮಸ್ಯೆ ತಡೆಗ್ಟಲು ಹಾಗೂ ಮುಖದಲ್ಲಿ ರಂಧ್ರದ ಸಮಸ್ಯೆ ಬೀಳುವುದನ್ನು ತಡೆಗಟ್ಟಲು ವಾರದಲ್ಲಿ ಎರಡು ಬಾರಿ ಮೆಲ್ಲನೆ ಸ್ಕ್ರಬ್ ಮಾಡಬೇಕು. ಇದಕ್ಕೆ ಮಾರುಕಟ್ಟೆಯಲ್ಲಿ ದೊರೆಯುವ ಸ್ಕ್ರಬ್ಬರ್ ಬಳಸಬಹುದು, ಇಲ್ಲಾಂದರೆ ಒಂದು ಚಮಚ ಆಲೀವ್ ಅಥವಾ ಕೊಬ್ಬರಿ ಎಣ್ಣೆಗೆ 1 ಚಮಚ ಸಕ್ಕರೆ ಹಾಕಿ, ಮುಖ, ತತುಟಿಯನ್ನು ಮೆಲ್ಲನೆ 5 ನಿಮಿಷ ಸ್ಕ್ರಬ್‌ ಮಾಡಿ. ಈ ವಿಧಾನ ಪಾಲಿಸಿದರೆ ತ್ವಚೆ ತುಂಬಾ ಮೃದುವಾಗುವುದು.

3.ಟೋನರ್‌

3.ಟೋನರ್‌

ನೀವು ಮುಖವನ್ನು ಫೇಸ್‌ವಾಶ್‌ ಹಾಕಿ ತೊಳೆದರೂ, ಮುಖಕ್ಕೆ ಸ್ಕ್ರಬ್ಬರ್ ಬಳಸಿದರೂ ಮುಖದ ತ್ವಚೆ ಮತ್ತಷ್ಟು ತಾಜಾತನದಹೊಳಪು ನೀಡಲು ಟೋನರ್ ಬಳಸಬೇಕು. ಇದು ಮುಖವನ್ನು ಸಂಪೂರ್ಣ ಸ್ವಚ್ಛ ಮಾಡುತ್ತದೆ. pH ಬ್ಯಾಲೆನ್ಸ್ ಇರುವ ಟೋನರ್ ಬಳಸಿ.

4. ಆಯಿಲ್‌ ಫ್ರೀ ಮಾಯಿಶ್ಚರೈಸರ್‌

4. ಆಯಿಲ್‌ ಫ್ರೀ ಮಾಯಿಶ್ಚರೈಸರ್‌

ಮಳೆಗಾಲದಲ್ಲಿ ನೀವು ಬೇಸಿಗೆಯಲ್ಲಿ ಬಳಸಿದ ಮಾಯಿಶ್ಚರೈಸರ್‌ ಬಳಸಬೇಡಿ, ಮಳೆಗಾಲಕ್ಕೆ ಸೂಕ್ತವಾದ ಮಾಯಿಶ್ಚರೈಸರ್ ಬಳಸಿ. ಮಳೆಗಾಲದಲ್ಲಿ ಆಯಿಲ್‌ಫ್ರೀ ಮಾಯಿಶ್ಚರೈಸರ್‌ ತುಂಬಾ ಒಳ್ಳೆಯದು. ಇದು ತ್ವಚೆಯಲ್ಲಿ ನೀರಿನಂಶ ಕಾಪಾಡಿ, ಮುಖ ಕಾಂತಿಯುತವಾಗಿರುವಂತೆ ನೋಡಿಕೊಳ್ಳುತ್ತದೆ. ಮಾಯಿಶ್ಚರೈಸರ್‌ ಆಯ್ಕೆ ಮಾಡುವಾಗ ನಿಮ್ಮ ತ್ವಚೆಗೆ ಹೊಂದುವ ಅಂದರೆ ಎಣ್ಣೆ ತ್ವಚೆ ಇರುವವರು ಎಣ್ಣೆ ತ್ವಚೆಗೆ ಸೂಕ್ತವಾಗುವ, ಒಣ ತ್ವಚೆ ಇರುವವರು ಅವರ ತ್ವಚೆಗೆ ಸೂಕ್ತವಾಗುವ ಮಾಯಿಶ್ಚರೈಸರ್ ಬಳಸಬೇಕು.

5. ಫೇಸ್‌ಮಾಸ್ಕ್‌

5. ಫೇಸ್‌ಮಾಸ್ಕ್‌

ಇನ್ನು ಮಳೆಗಾಲದಲ್ಲಿ ನೀವು ಗಮನಿಸಿರಬಹುದು, ತ್ವಚೆ ಬೇಗನೆ ಮಂಕಾಗುವುದು. ಮುಖದಲ್ಲಿ ಕಳೆ ಎದ್ದು ಕಾಣಬೇಕೆಂದರೆ ನೀವು ನಿಮ್ಮ ತ್ವಚೆಗೆ ಹೊಂದುವ ಫೇಸ್‌ಮಾಸ್ಕ್‌ ಬಳಸಿ. ಮುಲ್ತಾನಿ ಮಿಟಿ ಅಥವಾ ಹಣ್ಣುಗಳಿಂದ ಮಾಡಿದ ಫೇಸ್‌ಮಾಸ್ಕ್‌ ಹೀಗೆ ನಿಮಗೆ ಸೂಕ್ತವಾದ ಫೇಸ್‌ ಮಾಸ್ಕ್‌ ಬಳಸಿ. ಫೇಸ್‌ಮಾಸ್ಕ್‌ ಅನ್ನು ವಾರದಲ್ಲಿ 1-2 ಬಾರಿ ಬಳಸುವುದರಿಂದ ಮುಖದ ತ್ವಚೆ ಯಾವುದೇ ಸಮಸ್ಯೆಯಿಲ್ಲದೆ ಫಳಫಳ ಹೊಳೆಯುವುದು.

ಇಷ್ಟೆಲ್ಲಾ ಸಿದ್ಧತೆಗಳೊಂದಿಗೆ ಹೊಳಪಿನ ಮುಖ ಹಾಗೂ ಸುಂದರವಾದ ನಗುವಿನ ಜೊತೆ ಮಳೆಗಾಲ ಸ್ವಾಗತಿಸಿ.

English summary

Must-Have Skincare Products In The Monsoon

To shield your skin from the horrors of monsoon season, you need a rock-solid skincare regime. Which is why we have come up with must-have skincare products that you absolutely need to have this monsoon season to keep your skin perky and beautiful.
X
Desktop Bottom Promotion