For Quick Alerts
ALLOW NOTIFICATIONS  
For Daily Alerts

ಸೂರ್ಯನ ನೇರಳಾತೀತ ಕಿರಣಗಳಿಂದ ಮಾವಿನಹಣ್ಣು ರಕ್ಷಣೆ ನೀಡುವುದೇ?

|

ಈಗ ಏನಿದ್ದರೂ ಮಾವಿನ ಹಣ್ಣಿನ ಕಾಲ. ಈ ಸಮಯದಲ್ಲಿ ಸಿಗುವ ಬಗೆ ಬಗೆಯ ಮಾವಿನ ಹಣ್ಣಿನ ರುಚಿ ನೋಡದಿದ್ದರೆ ಮುಂದಿನ ವರ್ಷದರೆಗೆ ಕಾಯಬೇಕಾಗುತ್ತದೆ ಅಲ್ವಾ? ಒಬ್ಬೊಬ್ಬರಿಗೆ ಒಂದೊಂದು ಬಗೆಯ ಮಾವಿನ ಹಣ್ಣು ಇಷ್ಟ... ನೀವು ಇಷ್ಟಪಟ್ಟು ತಿನ್ನುವ ಮಾವಿನ ಹಣ್ಣು ನಿಮಗೆ ಸೌಂದರ್ಯವರ್ಧಕವಾಗಿ ಕೆಲಸ ಮಾಡುತ್ತದೆ ಎಂಬುವುದು ಗೊತ್ತೇ?

Mango Protect You From Ultraviolet

ಹೌದು ಮಾವಿನ ಹಣ್ಣು ತ್ವಚೆಗೆ ತುಂಬಾ ಒಳ್ಳೆಯದು. ನಿಮ್ಮ ತ್ವಚೆ ಫಳ ಫಳ ಹೊಳೆಯಬೇಕೆಂದರೆ ಈಗ ಲಭ್ಯವಿರುವ ಮಾವಿನ ಹಣ್ಣುಗಳೇ ಸಾಕು, ಯಾವ ಫೇಶಿಯಲ್‌ ಕೂಡ ಅಗ್ಯತವಿಲ್ಲ.

ಮಾವಿನಹಣ್ಣಿನಲ್ಲಿ ಪ್ರೊಟೀನ್, ನಾರಿನಂಶ, ವಿಟಮಿನ್ ಸಿ, ವಿಟಮಿನ್ ಎ, ಫಾಲಿಕ್ ಆಮ್ಲ, ವಿಟಮಿನ್ ಬಿ 6, ವಿಟಮಿನ್ ಕೆ ಮತ್ತು ಪೊಟಾಷ್ಯಿಯಂ ಇರುವುದರಿಂದ ಇದು ಜೀವನ ಶೈಲಿ ಸಂಬಂಧಿಸಿದ ಸಮಸ್ಯೆಗಳಾದ ಒಬೆಸಿಟಿ, ಹೃದಯ ಸಮಸ್ಯೆ ಇವುಗಳನ್ನು ತಡೆಗಟ್ಟುವಲ್ಲಿಯೂ ಸಹಕಾರಿ. ಇದು ತ್ವಚೆಯ ಹೊಳಪು ಹೆಚ್ಚಿಸುತ್ತದೆ, ಕೂದಲಿನ ಆರೋಗ್ಯ ಹೆಚ್ಚುವುದು ಹಾಗೂ ಆರೋಗ್ಯಕ್ಕೂ ಒಳ್ಳೆಯದು. ಇನ್ನು ಮಾವಿನ ಹಣ್ಣು ಸೂರ್ಯನ ನೇರಳಾತೀತ ಕಿರಣಗಳಿಂದಲೂ ರಕ್ಷಣೆ ನಿಡುತ್ತದೆಎಂಬುವುದು ಗೊತ್ತೇ?

 ಸೂರ್ಯನ ನೇರಳಾತೀತ ಕಿರಣದಿಂದ ರಕ್ಷಣೆ

ಸೂರ್ಯನ ನೇರಳಾತೀತ ಕಿರಣದಿಂದ ರಕ್ಷಣೆ

ಸೂರ್ಯನ ನೇರಳಾತೀತ ಕಿರಣಗಳು ತ್ವಚೆ ಮೇಲೆ ಬಿದ್ದರೆ ನೆರಿಗೆ ಬೀಳುವುದು, ಡಾರ್ಕ್‌ ಸ್ಪಾಟ್‌ ಮುಂತಾದ ತೊಂದರೆಗಳು ಉಂಟಾಗುತ್ತದೆ. ಇನ್ನು ಕ್ಯಾನ್ಸರ್ ಕೂಡ ಬರಬಹುದು. ಆದ್ದರಿಂದ ಬಿಸಿಲಿಗೆ ಹೋಗುವಾಗ ಸನ್‌ಸ್ಕ್ರೀನ್‌ ಲೋಷನ್‌ ಬಳಸಿ ಅಥವಾ ಕೊಡೆ ಹಿಡಿದು ಸೂರ್ಯನ ನೇರಳಾತೀತ ಕಿರಣಗಳಿಂದ ತ್ವಚೆ ರಕ್ಷಣೆ ಮಾಡಬೇಕು. ಅಧ್ಯಯನವೂ ಮಾವಿನ ಹಣ್ಣಿನಲ್ಲಿ ಕೂಡ ಸೂರ್ಯನ ನೇರಳಾತೀತ ಕಿರಣ ತಡೆಗಟ್ಟುವ ಶಕ್ತಿ ಇದೆ ಎಂದು ಹೇಳಿದೆ.

ತ್ವಚೆಯನ್ನು ಆಂತರಿಕವಾಗಿ ಪೋಷಣೆ ಮಾಡುತ್ತೆ

ತ್ವಚೆಯನ್ನು ಆಂತರಿಕವಾಗಿ ಪೋಷಣೆ ಮಾಡುತ್ತೆ

ಮಾವಿನ ಹಣ್ಣಿನಲ್ಲಿಆ್ಯಂಟಿಆಕ್ಸಿಡೆಂಟ್, ಆ್ಯಂಟಿಇನ್‌ಫ್ಲೇಮಟರಿ, ಇಮ್ಯೂನೋಮಾಡ್ಯೋಲೇಟರಿ ಅಂಶವಿದ್ದು ಇವುಗಳು ಸೂರ್ಯನ ನೇರಳಾತೀತ ಕಿರಣಗಳಿಂದ ರಕ್ಷಣೆ ನೀಡುತ್ತದೆ. ಅದೇ ರೀತಿ ವಿಟಮಿನ್ ಸಿ ತ್ವಚೆಗೆ ಉಂಟಾದ ಹಾನಿಯನ್ನು ಸರಿಪಡಿಸುತ್ತದೆ.

ಮಾವಿನ ಹಣ್ಣಿನ ಸಿಪ್ಪೆ ಕೂಡ ಒಳ್ಳೆಯದು

ಮಾವಿನ ಹಣ್ಣಿನ ಸಿಪ್ಪೆ ಕೂಡ ಒಳ್ಳೆಯದು

ಸೂರ್ಯನ ಹಾನಿಕಾರಕ ನೇರಳಾತೀತ ಕಿರಣಗಳಿಂದ ಮಾವಿನಹಣ್ಣಿನ ತಿರುಳು ಮಾತ್ರವಲ್ಲ ಸಿಪ್ಪೆ ಕೂಡ ರಕ್ಷಣೆಯನ್ನು ನೀಡುತ್ತದೆ. ಇದರ ಸಿಪ್ಪೆಯಲ್ಲಿಮ್ಯಾಂಗಿಫೆರಿನ್, ನೊರಾಥೈರಿಯೊಲ್, ರೆಸ್ವೆರಾಟ್ರೊಲ್ ಮತ್ತು ಕ್ವೆರ್ಸೆಟಿನ್ ಅಂಶವಿರುವುದರಿಂದ ಇವುಗಳನ್ನು ಬಿಸಾಡದೆ ತಿರುಳಿನ ಜೊತೆಯೇ ಸೇವಿಸುವುದು ಒಳ್ಳೆಯದು.

 ಮಾವಿನ ಹಣ್ಣಿನ ಫೇಶಿಯಲ್‌

ಮಾವಿನ ಹಣ್ಣಿನ ಫೇಶಿಯಲ್‌

* ಮಾವಿನ ಹಣ್ಣಿನ ತಿರುಳನ್ನು ಹಾಲಿನ ಜೊತೆ ಮಿಶ್ರಮಾಡಿ ಮುಖಕ್ಕೆ ಹಚ್ಚಿ 20 ನಿಮಿಷ ಬಿಟ್ಟು ಮುಖ ತೊಳೆಯಿರಿ. ಹೀಗೆ ವಾರದಲ್ಲಿ 2-3 ಬಾರಿ ಮಾಡಿ ಮುಖದ ಹೊಳಪು ಬದಲಾಗುವುದು.

* ಮಾವಿನ ಹಣ್ಣನ್ನು ಮೊಸರು ಜೊತೆ ಮಿಶ್ರ ಮಾಡಿ ಹಚ್ಚಿದರೂ ಮುಖದ ಹೊಳಪು ಹೆಚ್ಚುವುದು, ಬೇಕಿದ್ದರೆ ಸ್ವಲ್ಪ ಅರಿಶಿಣ ಪುಡಿ ಹಾಕಬಹುದು 2. ಮಾವಿನ ಹಣ್ಣು ಮತ್ತು ಫೇಸ್ ಮಾಸ್ಕ್: ವಾರಕ್ಕೆ 3 ಬಾರಿ ಮಾವಿನ ಹಣ್ಣು ಮತ್ತು ಮೊಸರನ್ನು ಮಿಶ್ರ ಮಾಡಿ ಮುಖಕ್ಕೆ ಹಚ್ಚಿ 15 ನಿಮಿಷ ಬಿಡಬೇಕು.

* ಮೊಟ್ಟೆಯ ಬಿಳಿಗೆ ಮಾವಿನ ಹಣ್ಣು ತಿರುಳು ಹಾಕಿ ಹಚ್ಚಿದರೆ ನೈಸರ್ಗಿಕ ಫೇಸ್‌ ಮಾಸ್ಕ್ ಆಗುತ್ತದೆ. ಇದು ನಿರ್ಜೀವ ತ್ವಚೆ ತೆಗೆಯುವಲ್ಲಿ ಕೂಡ ಸಹಕಾರಿ.

* ಇನ್ನು ಕ್ಲೆನ್ಸಿಂಗ್ ಮಾಡಲುಮಾವಿನ ಹಣ್ಣು 4 ಚಮಚ, 3 ಚಮಚ ಓಟ್ಸ್, 2 ಚಮಚ ಬಾದಾಮಿ ಎಣ್ಣೆ, 1 ಚಮಚ ಕೆನೆ ಹಾಕಿ ಮಿಶ್ರ ಮಾಡಿ ಮುಖಕ್ಕೆ ಹಚ್ಚಿ 20 ನಿಮಿಷ ಬಿಡಬೇಕು. ನಂತರ ತಣ್ಣೀರಿನಿಂದ ಮುಖ ತೊಳೆಯಿರಿ.

English summary

Mango May Help Protect You From Ultraviolet (UV) Radiation

The study pointed out that, with sun damage being a consequence of chronic sun exposure and ultraviolet radiation, the naturally occurring antioxidants in mangoes can help reduce the impact the UR rays will have on the skin.
Story first published: Tuesday, May 19, 2020, 9:47 [IST]
X
Desktop Bottom Promotion